For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಜಗನ್ ಮದುವೆ ದಿನಾಂಕ ನಿಶ್ಚಯ

  |

  Recommended Video

  ಬಿಗ್ ಬಾಸ್ ಕನ್ನಡ ಸೀಸನ್ 5 ಸ್ಪರ್ಧಿ, ನಟ ಜಗನ್ ಹಾಗು ರಕ್ಷಿತಾ ಮುನಿಯಪ್ಪ ಮಾಡುವೆ ದಿನಾಂಕ ಫಿಕ್ಸ್

  ಕಿರುತೆರೆ ನಟ ಹಾಗೂ 'ಬಿಗ್ ಬಾಸ್ ಸೀಸನ್ 5'ರ ಸ್ಪರ್ಧಿಯಾಗಿದ್ದ ಜಗನ್ನಾಥ್ ಚಂದ್ರಶೇಖರ್ ಈಗ ಮದುವೆ ಆಗುತ್ತಿದ್ದಾರೆ. ಅವರ ವಿವಾಹದ ದಿನಾಂಕ ನಿಗದಿಯಾಗಿದ್ದು, ಖುಷಿಯನ್ನು ಅವರೇ ಹಂಚಿಕೊಡಿದ್ದಾರೆ.

  ರಕ್ಷಿತಾ ಮುನಿಯಪ್ಪ ಜೊತೆಗೆ ಜಗನ್ನಾಥ್ ವಿವಾಹ ನಡೆಯಲಿದೆ. ಮೂರು ವರ್ಷಗಳಿಂದ ಒಬ್ಬರನ್ನಾದರೂ ಪ್ರೀತಿಸುತ್ತಿದ್ದ ಈ ಜೋಡಿ ಈಗ ಮದುವೆಯ ಹಂತಕ್ಕೆ ಬಂದಿದೆ. ಜನವರಿ 28ಕ್ಕೆ ಈ ಜೋಡಿಯ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿತ್ತು. ಇನ್ನು ಇಬ್ಬರ ಮದುವೆ ಮುಂದಿನ ತಿಂಗಳು ನಡೆಯಲಿದೆ.

  'ಬಿಗ್ ಬಾಸ್' ಸ್ಪರ್ಧಿ ಜಗನ್ ಗೆ ನಿಶ್ಚಿತಾರ್ಥ: ಹುಡುಗಿ ಯಾರು ಗೊತ್ತಾ.? 'ಬಿಗ್ ಬಾಸ್' ಸ್ಪರ್ಧಿ ಜಗನ್ ಗೆ ನಿಶ್ಚಿತಾರ್ಥ: ಹುಡುಗಿ ಯಾರು ಗೊತ್ತಾ.?

  ಅಂದಹಾಗೆ, ಜಗನ್ನಾಥ್ ಚಂದ್ರಶೇಖರ್ ಹಾಗೂ ರಕ್ಷಿತಾ ಮುನಿಯಪ್ಪ ಅವರ ಮದುವೆ ಕೆಲವು ವಿವರಗಳು ಮುಂದಿವೆ...

  ಮೇ 23 ರಂದು ವಿವಾಹ

  ಮೇ 23 ರಂದು ವಿವಾಹ

  'ಗಾಂಧಾರಿ' ಧಾರಾವಾಹಿಯ ನಟ ಜಗನ್ನಾಥ್ ಚಂದ್ರಶೇಖರ್ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ತಮ್ಮ ಗೆಳತಿ ರಕ್ಷಿತಾ ಮುನಿಯಪ್ಪ ಜೊತೆಗೆ ಮದುವೆ ಆಗುತ್ತಿದ್ದು, ಮೇ 23 ರಂದು ವಿವಾಹ ಕಾರ್ಯಕ್ರಮಗಳು ನಡೆಯಲಿದೆ. ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿರುವ ಕಾನ್ವೆಂಷನಲ್ ಹಾಲ್ ನಲ್ಲಿ ನಡೆಯಲಿದೆ.

  ಮೇ26 ರಂದು ಆರತಕ್ಷತೆ

  ಮೇ26 ರಂದು ಆರತಕ್ಷತೆ

  ಮದುವೆಯ ಹಿಂದಿನ ದಿನ ಮೇ 22 ರಂದು ಸಂಗೀತ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಮದುವೆಯ ಮೂರು ದಿನಗಳ ಬಳಿಕ ಮೇ26 ರಂದು ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಸ್ನೇಹಿತರು, ಸಂಬಂಧಿಗಳು, ಕಿರುತೆರೆ ಹಾಗೂ ಚಿತ್ರರಂಗದ ಗಣ್ಯರು ಭಾಗಿಯಾಗಲಿದ್ದಾರೆ.

  ಬೆಳ್ಳಿಪರದೆ ಮೇಲೆ ಮಿನುಗಲಿದ್ದಾರೆ 'ಬಿಗ್ ಬಾಸ್' ಆಂಗ್ರಿ ಯಂಗ್ ಮ್ಯಾನ್ ಜಗನ್.! ಬೆಳ್ಳಿಪರದೆ ಮೇಲೆ ಮಿನುಗಲಿದ್ದಾರೆ 'ಬಿಗ್ ಬಾಸ್' ಆಂಗ್ರಿ ಯಂಗ್ ಮ್ಯಾನ್ ಜಗನ್.!

  ಮದುಮಗಳು ರಕ್ಷಿತಾ ಬಗ್ಗೆ

  ಮದುಮಗಳು ರಕ್ಷಿತಾ ಬಗ್ಗೆ

  ಮದುಮಗಳು ರಕ್ಷಿತಾ ಮುನಿಯಪ್ಪ ದುಬೈನ ಕಾಲೇಜೊಂದರಲ್ಲಿ ವ್ಯಾಸಂಗ ಮುಗಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಜಗನ್ ಮತ್ತು ರಕ್ಷಿತಾ ಪ್ರೀತಿಸುತ್ತಿದ್ದಾರೆ. ಇಬ್ಬರ ಪ್ರೀತಿಗೆ ಕುಟುಂಬ ಸಮ್ಮತಿ ನೀಡಿದೆ.

  ಜಗನ್ ಹೊಸ ಸಿನಿಮಾ

  ಜಗನ್ ಹೊಸ ಸಿನಿಮಾ

  ಜಗನ್ ಈ ಹಿಂದೆ 'ಜೋಶ್' ಸಿನಿಮಾದಲ್ಲಿ ನಟಿಸಿದ್ದರು. ಆ ಚಿತ್ರದ ಬಳಿಕ ಕಿರುತೆರೆಯ ಧಾರಾವಾಹಿಗಳಲ್ಲಿ ಬ್ಯುಸಿ ಆದರು. ಇದರ ಮಧ್ಯೆ ಬಿಗ್ ಬಾಸ್ ಮನೆಗೆ ಹೋಗಿ ಬಂದು ಸ್ವಲ್ಪ ಮಟ್ಟಿಗೆ ಫೇಮ್ ಪಡೆದರು. ಇದೀಗ ಮತ್ತೆ ಅವರು ಹೊಸ ಸಿನಿಮಾ ಶುರು ಮಾಡುತ್ತಿದ್ದಾರೆ.

  English summary
  Bigg Boss Kannada 5 Contestant Jagan gets and his girl friend Rakshitha Muniyappa marriage will be held on may 23th.
  Tuesday, April 23, 2019, 10:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X