»   » ಹಾಲಿಗಾಗಿ ಕೋಲಾಹಲ: ಹಾಲು ಮುಚ್ಚಿಟ್ಟ ಮಹಾನುಭಾವರಿಗೆ ಸುದೀಪ್ ಚಾಟಿಯೇಟು.!

ಹಾಲಿಗಾಗಿ ಕೋಲಾಹಲ: ಹಾಲು ಮುಚ್ಚಿಟ್ಟ ಮಹಾನುಭಾವರಿಗೆ ಸುದೀಪ್ ಚಾಟಿಯೇಟು.!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಬಿಗ್ ಮನೆಯಲ್ಲಿ ಹಾಲಿಗಾಗಿ ಕೋಲಾಹಲ | FIlmibeat Kannada

ಯಾವ ವಿಷಯಕ್ಕೆ ಭಿನ್ನಾಭಿಪ್ರಾಯ ಆಗುತ್ತೋ, ಇಲ್ವೋ... ಗದ್ದಲ-ಗಲಾಟೆ ನಡೆಯುತ್ತೋ, ಇಲ್ವೋ... ಆದ್ರೆ, ಊಟದ ವಿಚಾರಕ್ಕೆ ಮಾತ್ರ 'ಬಿಗ್ ಬಾಸ್' ಮನೆಯಲ್ಲಿ ಮಾತಿನ ಚಕಮಕಿ ನಡೆಯುತ್ತಲೇ ಇರುತ್ತೆ.

ಮೇಘ ಒಂದು ಆಪಲ್ ತೆಗೆದುಕೊಂಡಿದ್ದಕ್ಕೆ, ತೇಜಸ್ವಿನಿ ಗರಂ ಆಗಿದ್ದರು. ತಮ್ಮ ಪಾಲಿನ ಹಣ್ಣನ್ನ ಜಯಶ್ರೀನಿವಾಸನ್ ತೆಗೆದುಕೊಂಡು ಹೊರಟಾಗ ಕೃಷಿ ಕೂಗಾಡಿದ್ದರು.

ಈಗ 'ಹಾಲಿ'ನ ವಿಚಾರಕ್ಕೆ 'ಬಿಗ್ ಬಾಸ್' ಮನೆಯಲ್ಲಿ ಕೋಲಾಹಲ ನಡೆದಿದೆ. ಸಮೀರಾಚಾರ್ಯ ಅವರು ಒಂದು ಲೋಟ ಹಾಲು ಕೇಳಿದ್ದಕ್ಕೆ, 'ಬಿಗ್ ಬಾಸ್' ಮನೆಯಲ್ಲಿ ದೊಡ್ಡ ಪಂಚಾಯತಿಯೇ ನಡೆದು ಹೋಗಿದೆ.

ಇದೇ ವಿಚಾರಕ್ಕೆ ಜಗನ್, ಆಶಿತಾ, ದಯಾಳ್ ಸೇರಿದಂತೆ ಕೆಲವರು ವಾಗ್ವಾದ ನಡೆಸಿದರು. ''ಹಾಲು ಇರೋದೇ ಕಮ್ಮಿ. ಅದರಲ್ಲಿ ಒಬ್ಬರೇ ಒಂದು ಲೋಟ ಹಾಲು ಕುಡಿದರೆ ಹೇಗೆ'' ಎಂಬುದೇ ಪಂಚಾಯತಿಯ ವಿಷಯ ಆಗಿತ್ತು. ಆದ್ರೆ, ನಾಲ್ಕು ಪ್ಯಾಕೆಟ್ ಹಾಲನ್ನು ಬಚ್ಚಿಟ್ಟು (ಎತ್ತಿಟ್ಟು) ಹಾಲಿನ ವಿಚಾರಕ್ಕೆ ಪಂಚಾಯತಿ ನಡೆಸಿದ ಸೆಲೆಬ್ರಿಟಿ ಸ್ಪರ್ಧಿಗಳನ್ನ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ತರಾಟೆಗೆ ತೆಗೆದುಕೊಂಡರು. ಮುಂದೆ ಓದಿರಿ....

ಹಾಲನ್ನು ಬಚ್ಚಿಟ್ಟ (ಎತ್ತಿಟ್ಟ) ಅನುಪಮಾ, ದಯಾಳ್

ಪ್ಯಾಕೆಟ್ ಹಾಲನ್ನ ಅನುಪಮಾ ಗೌಡ ಹಾಗೂ ದಯಾಳ್ ಬಚ್ಚಿಟ್ಟಿದ್ದರು (ಎತ್ತಿಟ್ಟಿದ್ದರು). ಈ ವಿಚಾರ ಸಿಹಿ ಕಹಿ ಚಂದ್ರು ರವರಿಗೆ ಗೊತ್ತಾದಾಗ, ''ಈ ಬಗ್ಗೆ ಸುದೀಪ್ ಖಂಡಿತವಾಗಲೂ ಪ್ರಶ್ನೆ ಮಾಡುತ್ತಾರೆ. ಅಷ್ಟೆಲ್ಲ ಮಾತನಾಡಿ ನೀವೇ ಯಾಕೆ ಬಚ್ಚಿಟ್ರಿ.?'' ಎಂದು ಪ್ರಶ್ನೆ ಮಾಡಿದರು.

ಮಹಾಭಾರತ/ರಾಮಾಯಣದ ಯಾವ ಪಾತ್ರಗಳು 'ಬಿಗ್ ಬಾಸ್' ಸ್ಪರ್ಧಿಗಳಿಗೆ ಸೂಕ್ತ.?

ಸಿಹಿ ಕಹಿ ಚಂದ್ರು-ದಯಾಳ್ ಸಂಭಾಷಣೆ

ದಯಾಳ್ - ''ಬಿಚ್ಚಿಟ್ಟಿದ್ದು ಅಲ್ಲ, ಎತ್ತಿಟ್ಟಿದ್ದು. ಈ ಬಗ್ಗೆ ಕೇಳಿದರೆ ನಾನು ಉತ್ತರ ಕೊಡುತ್ತೇನೆ''
ಸಿಹಿ ಕಹಿ ಚಂದ್ರು - ''ಹಾಲು ಬಚ್ಚಿಡುವ ನಿರ್ಧಾರ ಯಾರದ್ದು.?''
ದಯಾಳ್ - ''ಎಲ್ಲರ ಮನಸ್ಸಿನಲ್ಲೂ ಬಂದಿತ್ತು. ಕೃಷಿ ಹೇಳಿದ್ದು''
ಸಿಹಿ ಕಹಿ ಚಂದ್ರು - ''ಹಾಗಾದ್ರೆ, ನಿನ್ನೆ ಹಾಗೆಲ್ಲ ಮಾತನಾಡಬಾರದಿತ್ತು''
ದಯಾಳ್ - ''ಹಾಲು ಅಲ್ಲಿ ಇದ್ದರೆ, ಜಾಸ್ತಿ ಬಳಸುತ್ತಾರೆ ಅಂತ ಎತ್ತಿಟ್ಟಿದ್ದು''
ಸಿಹಿ ಕಹಿ ಚಂದ್ರು - ''ಒಬ್ಬರ ಹೊಟ್ಟೆ ಮೇಲೆ ಹೊಡೆದು ಎತ್ತಿಟ್ಟಿದ್ದೇವೆ ಎಂಬ ಮಾತು ಬರುತ್ತೆ. ಅದು ನಿಮಗೆ ಗೊತ್ತಾಗುತ್ತಿಲ್ಲ''
ದಯಾಳ್ - ''ಹ್ಯಾಂಡಲ್ ಮಾಡೋಣ ಬಿಡಿ. ಅವರಿಗೆ ಕೊಡಬಾರದು ಎಂಬ ಉದ್ದೇಶದಿಂದ ಎತ್ತಿಟ್ಟಿಲ್ಲ''
ಸಿಹಿ ಕಹಿ ಚಂದ್ರು - ''ದೊಡ್ಡ ತಪ್ಪು ಮಾಡಿದ್ದೇವೆ''

''ಹಾಲು ಕುಡಿದ ಮಕ್ಳೇ ಬದುಕಲ್ಲ, ಇನ್ನೂ ಹಾಲು ಕದ್ದವು ಬದುಕ್ತಾವಾ.?!''

ಎತ್ತಿಟ್ಟಿದ್ದು ಹೊರಗೆ ಬಂತಲ್ಲ.!

ಬಚ್ಚಿಟ್ಟಿದ್ದ (ಎತ್ತಿಟ್ಟಿದ್ದ) ಹಾಲನ್ನ ಜಾಣ್ಮೆಯಿಂದ ಕಿಚ್ಚ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಹೊರಗೆ ತರಿಸಿದರು.

ಜಗನ್, ಆಶಿತಾ ಕಂಡ್ರೆ ಉರಿದು ಬೀಳ್ತಿದ್ದಾರೆ 'ಬಿಗ್ ಬಾಸ್' ವೀಕ್ಷಕರು.!

ಮಾತು ಆರಂಭಿಸಿದ ದಯಾಳ್

ಹಾಲನ್ನ ಹೊರಗೆ ತಂದಾಗ, ಅದರ ಬಗ್ಗೆ ದಯಾಳ್ ಪದ್ಮನಾಭನ್ ಸ್ಪಷ್ಟನೆ ಕೊಟ್ಟಿದ್ದು ಹೀಗೆ - ''ಮನೆಗೆ ರೇಷನ್ ಬಂದಾಗ, ಹಾಲು ಜಾಸ್ತಿ ಇದ್ದರೆ, ಬಳಸುವುದರಲ್ಲಿ ಕಂಟ್ರೋಲ್ ಸಿಗಲ್ಲ ಎಂಬ ಕಾರಣಕ್ಕೆ ಎತ್ತಿಟ್ವಿ. ಈ ನಿರ್ಧಾರ ಯಾರು ಮಾಡಿದ್ದು ಅನ್ನೋದು ಗೊತ್ತಿಲ್ಲ. ಆದ್ರೆ, ಹಾಲು ಬಂದಾಗ ಕೆಲ ಪ್ಯಾಕೇಟ್ ಗಳನ್ನು ಎತ್ತಿಡಬೇಕು ಅಂತ ಎತ್ತಿಟ್ಟಿದ್ದು. ಬಚ್ಚಿಟ್ಟಿದ್ದು ಅಲ್ಲ''

ಸುದೀಪ್ - ''ಬಚ್ಚಿಡುವುದಕ್ಕೂ, ಎತ್ತಿಡುವುದಕ್ಕೂ ವ್ಯತ್ಯಾಸ ಇದೆ ಅಲ್ವಾ.? ಇದು ಯಾರ ತೀರ್ಮಾನ.?''

ದಯಾಳ್ - ಗೊತ್ತಿಲ್ಲ. ನನಗೆ ಕೃಷಿ ಹೇಳಿದ್ದು.

ಹಾಲನ್ನ ಎತ್ತಿಟ್ಟವರು ಯಾರು.?

ಹಾಲನ್ನ ಎತ್ತಿಟ್ಟವರು - ಅನುಪಮಾ ಗೌಡ, ಕೃಷಿ, ದಯಾಳ್

ವಿಷಯ ಯಾರ್ಯಾರಿಗೆ ಗೊತ್ತಿತ್ತು.?

ಹಾಲನ್ನ ಎತ್ತಿಟ್ಟ ವಿಷಯ ದಯಾಳ್, ಕೃಷಿ, ಅನುಪಮ ಗೌಡ ಗೆ ಬಿಟ್ಟರೆ ನಂತರ ಗೊತ್ತಾಗಿದ್ದು ಶ್ರುತಿ ಪ್ರಕಾಶ್, ಸಿಹಿ ಕಹಿ ಚಂದ್ರು ಹಾಗೂ ಆಶಿತಾಗೆ.

ಸುದೀಪ್ ಹಾಕಿದ ಪ್ರಶ್ನೆ ಏನು.?

''ಒಂದು ಗ್ಲಾಸ್ ಹಾಲಿಗೆ ಒಂದು ಗಂಟೆ ಚರ್ಚೆ ಆಗುತ್ತೆ. ಅದನ್ನ ತಾವು ಹಾಗೂ ಜಗನ್ ಲೀಡ್ ಮಾಡುತ್ತೀರಿ. ಇನ್ನೂ ನಾಲ್ಕು ಲೀಟರ್ ಹಾಲು ಇದೆ. ಇಂದು ಶನಿವಾರ. ನಾಳೆಗೆ ಹೊಸ ರೇಷನ್ ಬರುತ್ತೆ. ಈ ನಾಲ್ಕು ಲೀಟರ್ ಇಟ್ಟುಕೊಂಡು ಏನು ಮಾಡುತ್ತೀರಿ.? ಅಂತ ಸುದೀಪ್ ಕೇಳಿದಕ್ಕೆ, ''ಸಕ್ಕರೆ ಖಾಲಿ ಆಗುತ್ತೆ ಅಂತ ಒಂದು ಪ್ಯಾಕೆಟ್ ನ ಸಿಹಿ ಕಹಿ ಚಂದ್ರು ಎತ್ತಿಟ್ಟಿದ್ದರು. ವಾರ ಪೂರ್ತಿ ಬರಬೇಕು ಅಂತ ಹಾಲನ್ನ ಎತ್ತಿಟ್ವಿ ಅಷ್ಟೆ. ಇನ್ನೊಬ್ಬರಿಗೆ ಕೊಡಬಾರದು ಅಂತ ಏನೂ ಇಲ್ಲ. ಬಳಸುವುದರಲ್ಲಿ ಯಾರಿಗೂ ಕಂಟ್ರೋಲ್ ಇಲ್ಲ'' ಅಂತ ದಯಾಳ್ ಸ್ಪಷ್ಟನೆ ನೀಡಿದರು.

ಆಗ ಯಾಕೆ ಹೊರಗೆ ಬರಲಿಲ್ಲ.?

''ಒಂದು ಕಪ್ ಹಾಲಿಗೆ ಅಷ್ಟು ಗಲಾಟೆ ನಡೆಯುತ್ತಿರುವಾಗ, ನಾಲ್ಕು ಪ್ಯಾಕೆಟ್ ಹಾಲಿದೆ ಅನ್ನೋದು ನಿಮಗೆ ಗೊತ್ತು. ಆಗ ಅದನ್ನ ತೆಗೆದು ಇಡಬಹುದಿತ್ತಲ್ವಾ.?'' ಅಂತ ಸುದೀಪ್ ಕೇಳಿದಾಗ, ''ಆ ಟಾಪಿಕ್ ಬಂದಾಗ ಭೇದಭಾವ ಮಾಡ್ತೀವಿ ಅಂತ ಯಾಕೆ ಹೇಳ್ತಿದ್ದಾರೆ ಅನ್ನೋದು ಮಾತ್ರ ತಲೆಯಲ್ಲಿ ಇತ್ತು. ಅದನ್ನ ಕ್ಲಿಯರ್ ಮಾಡಬೇಕು ಅಂತ ಅನಿಸ್ತು. ಹಾಲಿನ ಪ್ಯಾಕೆಟ್ ಎತ್ತಿಟ್ಟಿದ್ದೀವಿ ಅಂತ ತಲೆಯಲ್ಲಿ ಇರಲಿಲ್ಲ'' ಅಂತ ದಯಾಳ್ ಉತ್ತರ ಕೊಟ್ಟರು.

ಸೇಫ್ ಆಗಿ ಮಾತನಾಡಿದ ಸೆಲೆಬ್ರಿಟಿ ಸ್ಪರ್ಧಿಗಳು

''ಹಾಲನ್ನ ಎತ್ತಿಟ್ಟ ಉದ್ದೇಶ ಸರಿ ಇತ್ತು'' ಎಂದು ಜೆಕೆ, ಆಶಿತಾ, ಜಗನ್ನಾಥ್ ಸೇಫ್ ಆಗಿ ಉತ್ತರಿಸಿದರು.

ತಗಲಾಕೊಂಡ ಅನುಪಮಾ.!

''ಹಾಲು ಎತ್ತಿಡುವ ಐಡಿಯಾ ಯಾರದ್ದು ಅಂತ ನನಗೆ ಗೊತ್ತಿಲ್ಲ. ಆದ್ರೆ ಹೇಳಿದ್ದನ್ನ ಮಾಡಿದೆ. ಬರುವ ಹಾಲಿನಲ್ಲಿ ಸೆಪರೇಟ್ ಆಗಿ ಅವರಿಗೆ ಎತ್ತಿಟ್ಟು ಬಿಡೋಣ, ಅವರಿಗೆ ಇಡೀ ವಾರ ಆಗುತ್ತೆ. ಮಿಕ್ಕಿದ್ದನ್ನ ನಾವು ಬಳಸೋಣ ಅಂತ ಉದ್ದೇಶ ಇದ್ದದ್ದು'' ಎಂದು ಅನುಪಮಾ ಹೇಳುವಷ್ಟರಲ್ಲಿ, ''ಹಾಲು ಉಪಯೋಗಿಸಲು ಅವರಿಗೆ ಅಂತ ಒಂದು ಪ್ಯಾಕ್ ಎತ್ತಿಡಬೇಕು ಎಂಬುದೇ ಉದ್ದೇಶ ಅಂತ ಹೇಳಿದ್ರಿ. ಒಂದು ಕಪ್ ಹಾಲು ಅವರು ಕೇಳಿದಾಗ, ಅದೇ ಪ್ಯಾಕೆಟ್ ನಿಂದ ಹೊರಗೆ ಬರಬಹುದಿತ್ತು'' ಎಂದು ಸುದೀಪ್ ಪ್ರಶ್ನೆ ಮಾಡಿದರು. ಸುದೀಪ್ ಮಾತಿಗೆ, ಅನುಪಮಾ ತಗಲಾಕೊಂಡಿದ್ದಕ್ಕೆ ವೀಕ್ಷಕರಿಂದ ಚಪ್ಪಾಳೆ-ಶಿಳ್ಳೆ ಕೂಡ ಸಿಕ್ತು.

ಅನುಪಮಾ-ಸುದೀಪ್ ಸಂಭಾಷಣೆ

ಅನುಪಮಾ ಗೌಡ - ''ಹಾಲು ತಗೊಳ್ಳಿ ಅಂತ ಸಿಹಿ ಕಹಿ ಚಂದ್ರು ಹೇಳಿದ್ದಾರೆ. ಆದ್ರೆ ಅವರು ತೆಗೆದುಕೊಳ್ಳಲಿಲ್ಲ''

ಸುದೀಪ್ - ''ವಾದ, ವಿವಾದ ಎಲ್ಲ ಆಗಿ ಆಮೇಲೆ ತಗೊಳ್ಳಿ ಅಂತ ಬರೋದಲ್ಲ''

ತರಾಟೆಗೆ ತೆಗೆದುಕೊಂಡ ಸುದೀಪ್

''ಒಂದು ಕಪ್ ಹಾಲಿಗೆ ಇಷ್ಟೊಂದು ಗಲಾಟೆ ನಡೆಯುವಾಗ, ತಾವು ಪ್ಯಾಕೆಟ್ ನ ಒಳಗೆ ಇಟ್ಟವರು, ಹೊರಗಿನ ಪ್ರಪಂಚಕ್ಕೆ ಹೇಗೆ ಕಾಣಿಸುತ್ತಿದ್ದೀರಾ ಅಂತ ಒಂಚೂರು ಅರ್ಥ ಮಾಡಿಕೊಳ್ಳಿ. ಇದು ಸರಿ, ತಪ್ಪು ಅಂತಲೂ ಈ ಬಗ್ಗೆ ಚರ್ಚೆ ನಡೆಯುತ್ತದೆ. ಅಲ್ಲಿ ನೀವು ಹೇಗೆ ಕಾಣಿಸುತ್ತಿದ್ದೀರಾ ಅಂತ ಸ್ವಲ್ಪ ಅರ್ಥ ಮಾಡಿಕೊಳ್ಳಿ'' ಎಂದು ಸ್ಪಷ್ಟನೆ ನೀಡಲು ಬಂದವರನ್ನ ಸುದೀಪ್ ಸರಿಯಾಗಿ ತರಾಟೆಗೆ ತೆಗೆದುಕೊಂಡರು.

English summary
Bigg Boss Kannada 5: Week 3: Kiccha Sudeep spoke about the issue related to Milk Packets hidden by Dayal Padmanabhan and Anupama Gowda.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X