»   » ಜನಸಾಮಾನ್ಯರಿಗೆ ಅವಮಾನ ಮಾಡಿದ್ರಾ ಸುದೀಪ್? ವೀಕ್ಷಕರಿಗೆ ಯಾಕೆ ಅಷ್ಟೊಂದು ಬೇಸರ?

ಜನಸಾಮಾನ್ಯರಿಗೆ ಅವಮಾನ ಮಾಡಿದ್ರಾ ಸುದೀಪ್? ವೀಕ್ಷಕರಿಗೆ ಯಾಕೆ ಅಷ್ಟೊಂದು ಬೇಸರ?

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಸುದೀಪ್ ಕಾಮನ್ ಮ್ಯಾನ್ ಗೆ ಅವಮಾನ ಮಾಡಿದ್ರಾ?

'ಬಿಗ್ ಬಾಸ್' ಮನೆಯೊಳಗೆ ಜನಸಾಮಾನ್ಯರು ಮೂಲೆಗುಂಪಾಗುತ್ತಿರುವ ಬಗ್ಗೆ ಇಷ್ಟು ದಿನ ಸೆಲೆಬ್ರಿಟಿ ಸ್ಪರ್ಧಿಗಳ ವಿರುದ್ಧ ಕಣ್ಣು ಕೆಂಪಗೆ ಮಾಡಿಕೊಂಡಿದ್ದ ವೀಕ್ಷಕರು ಇದೀಗ ಸುದೀಪ್ ಮೇಲೆ ಬೇಸರಗೊಂಡಿದ್ದಾರೆ.

'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಜೊತೆ ಪಂಚಾಯತಿ ನಡೆಸುವಾಗ, ಮಾತಿನ ಮಧ್ಯದಲ್ಲಿ Insects (ಕೀಟಗಳು) ಎಂಬ ಪದ ಸುದೀಪ್ ಬಾಯಿಂದ ಬಂತು.

ಅಷ್ಟಕ್ಕೂ, ಗಾರ್ಡನ್ ಏರಿಯಾದಲ್ಲಿ ತುಂಬಾ Insects (ಕೀಟಗಳು) ಇವೆ ಅಂತ ಹೇಳಿದ್ದು ನಿವೇದಿತಾ ಗೌಡ. ಅದೇ ಮಾತನ್ನ ಇಟ್ಟುಕೊಂಡು 'YES/NO' ರೌಂಡ್ ನಲ್ಲಿ ''ಎಲ್ಲ ಸಮಸ್ಯೆಗಳಿಗೆ ಗಾರ್ಡನ್ ನಲ್ಲಿ ಇರುವ Insects ಕಾರಣ'' ಎಂಬ ಹೇಳಿಕೆಯನ್ನ ಸುದೀಪ್ ನೀಡಿದರು. ಅದಕ್ಕೆ ಸಿಹಿ ಕಹಿ ಚಂದ್ರು ನಕ್ಕುಬಿಟ್ಟು, ''Insects ಅನ್ನೋ ಪದವನ್ನು ನೀವು ಬಹಳ ಚೆನ್ನಾಗಿ ಬಳಸುತ್ತಿದ್ದೀರಾ. ಥ್ಯಾಂಕ್ಸ್ ಟು ನಿವೇದಿತಾ'' ಎಂದರು.

ಇದನ್ನೆಲ್ಲ ಗಮನಿಸಿರುವ ವೀಕ್ಷಕರು ಸುದೀಪ್ ಮೇಲೆ ಮುನಿಸಿಕೊಂಡಿದ್ದಾರೆ. ಜನಸಾಮಾನ್ಯ ಸ್ಪರ್ಧಿಗಳನ್ನು Insects ಗೆ ಹೋಲಿಸಿ ಸುದೀಪ್ ಅವಮಾನ ಮಾಡಿದ್ದಾರೆ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಅದು ಕಲರ್ಸ್ ಸೂಪರ್ ವಾಹಿನಿಯ ಆಫೀಶಿಯಲ್ ಫೇಸ್ ಬುಕ್ ಪುಟದಲ್ಲಿಯೇ.! ಮುಂದೆ ಓದಿರಿ....

ಬಹಿರಂಗ ಅವಮಾನ ಆಗಿದೆ.!

''ಗಾರ್ಡನ್ ಏರಿಯಾದಲ್ಲಿ ಕೂತು ಅಲ್ಲೇ ಎಲ್ಲಾ ರೀತಿಯ ಚರ್ಚೆ ಮಾಡುವ ನಮ್ಮ ಜನಸಾಮಾನ್ಯರನ್ನ Insects (ಕೀಟಗಳು) ಅಂತ ಹೇಳಿ, ಅದಕ್ಕೆ ಸಿಹಿ ಕಹಿ ಚಂದ್ರು ಕೇಕೆ ಹಾಕಿ ನಕ್ಕಿದ್ದು ನಮ್ಮ ಜನಸಾಮಾನ್ಯರಿಗೆ ಮಾಡಿದ ಬಹಿರಂಗ ಅವಮಾನ'' ಎಂದು ವೀಕ್ಷಕರು ಕಲರ್ಸ್ ಸೂಪರ್ ವಾಹಿನಿಯ ಫೇಸ್ ಬುಕ್ ಪುಟದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

'ಕಳಪೆ' ಕಿತ್ತಾಟ: ಶ್ರುತಿ ಪ್ರಕಾಶ್ ಮಾಡಿದ್ದು ತಪ್ಪು ಎಂದ ಕಿಚ್ಚ ಸುದೀಪ್.!

ಸುದೀಪ್ ಮೇಲೆ ವೀಕ್ಷಕರಿಗೆ ಬೇಸರ

''ನಿಮ್ಮ ಅಭಿಮಾನಿಯಾಗಿ ನನಗೆ ಬೇಸರ ಆಗಿದೆ. ಸಾಮಾನ್ಯ ಜನಕ್ಕೆ ಕೊನೆಯಲ್ಲಿ ನೀವು Insects ಅಂತ ಹೇಳಿದ್ದು ಬೇಸರ ತಂದಿದೆ. ದಯವಿಟ್ಟು ಮುಂದಿನ ದಿನದಲ್ಲಾದರೂ, ಸಾಮಾನ್ಯ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಿರಿ'' ಎಂದು ಸುದೀಪ್ ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.

ರಿಯಾಝ್ ಹೇಳಿದ ಹಾಗೆ ದಯಾಳ್ 'ಅಹಂ' ಬಿಡಲಿಲ್ಲ: ಕ್ಷಮೆ ಕೇಳಲೇ ಇಲ್ಲ.!

ಸುದೀಪ್ ಕ್ಷಮೆ ಕೇಳಬೇಕು

''ಜನಸಾಮಾನ್ಯರನ್ನು Insects ಗೆ ಹೋಲಿಸಿದ್ದು ತುಂಬಾ ತಪ್ಪು. ಹೀಗಾಗಿ ಸುದೀಪ್ ಅವರು ಜನಸಾಮಾನ್ಯರ ಬಳಿ ಕ್ಷಮೆ ಕೇಳಬೇಕು'' ಎಂದು ವೀಕ್ಷಕರು ಒತ್ತಾಯಿಸಿದ್ದಾರೆ.

'ಮ್ಯಾಚ್ ಫಿಕ್ಸಿಂಗ್' ಮಾಡಿಕೊಂಡು ಆಡಿದವರಿಗೆ ಮಾತಲ್ಲೇ ಪೆಟ್ಟು ಕೊಟ್ಟ ಸುದೀಪ್.!

ಜನಸಾಮಾನ್ಯ ಸ್ಪರ್ಧಿಗಳಿಗೆ ಕೊಡುವ ಗೌರವ ಇದೇನಾ.?

''ಜನಸಾಮಾನ್ಯರಿಗೆ ಗೌರವ ಕೊಡಿ. ಗಾರ್ಡನ್ ಏರಿಯಾದಲ್ಲಿ ಕೂತು ಮಾತನಾಡುವವರಿಗೆ Insects ಎಂಬ ಪದ ಬಳಸಲಾಗಿದೆ. ಜನಸಾಮಾನ್ಯ ಸ್ಪರ್ಧಿಗಳಿಗೆ ನೀವು ಕೊಟ್ಟ ಅತಿ ಕೆಟ್ಟ ಉಡುಗೊರೆ ಅಂದ್ರೆ ಇದೇ'' ಎಂದು ವೀಕ್ಷಕರೊಬ್ಬರು ಸಿಕ್ಕಾಪಟ್ಟೆ ಗರಂ ಆಗಿ ಕಾಮೆಂಟ್ ಮಾಡಿದ್ದಾರೆ.

ಅಂತೂ ದಿವಾಕರ್ ಬಳಿ ಕ್ಷಮೆ ಕೇಳಿದ ಸೆಲೆಬ್ರಿಟಿ ಸ್ಪರ್ಧಿಗಳು.!

'ಬಿಗ್ ಬಾಸ್' ಕ್ಷಮೆ ಕೇಳಬೇಕು

''Insects ಎಂದು ಕರೆದ ಕಾರಣ ಸಮೀರಾಚಾರ್ಯ, ರಿಯಾಝ್ ಹಾಗೂ ದಿವಾಕರ್ ರವರಿಗೆ 'ಬಿಗ್ ಬಾಸ್' ಕ್ಷಮೆ ಕೇಳಲೇಬೇಕು'' ಅಂತಿದ್ದಾರೆ ವೀಕ್ಷಕರು.

'ಬಿಗ್ ಬಾಸ್' ಇದಕ್ಕೆ ಉತ್ತರ ಕೊಡಿ

''ಕಳೆದ ವಾರ ಚಂದನ್ ಶೆಟ್ಟಿಗೆ ವಾರ್ನಿಂಗ್ ಕೊಟ್ಟ ಕಿಚ್ಚ ಸುದೀಪ್, ಈ ವಾರ ದಯಾಳ್ ಪದ್ಮನಾಭನ್ ಬಳಸಿದ ಪದದ ಬಗ್ಗೆ ಯಾಕೆ ಏನೂ ಮಾತನಾಡಲಿಲ್ಲ.? ರಿಯಾಝ್ ಒತ್ತಿ ಒತ್ತಿ ಹೇಳುತ್ತಿದ್ದರೂ, ಸುದೀಪ್ ಸೈಲೆಂಟ್ ಆಗಿ ಇದ್ದದ್ದು ಯಾಕೆ.?'' ಎಂದು 'ಬಿಗ್ ಬಾಸ್'ಗೆ ಪ್ರಶ್ನೆ ಕೇಳುತ್ತಿದ್ದಾರೆ ವೀಕ್ಷಕರು.

ಅವರೆಲ್ಲ ಹನಿಮೂನ್ ಟ್ರಿಪ್ ಗೆ ಬಂದಿದ್ದಾರಾ.?

''ಜಗನ್ನಾಥ್, ಆಶಿತಾ, ಕೃಷಿ, ತೇಜಸ್ವಿನಿ ಮತ್ತು ಶ್ರುತಿ ಪ್ರಕಾಶ್ 'ಬಿಗ್ ಬಾಸ್' ಮನೆಯೊಳಗೆ ಹನಿಮೂನ್ ಟ್ರಿಪ್ ಗಾಗಿ ಬಂದಿಲ್ಲ. ಅವರಿಗೆ ಸುದೀಪ್ ಹುರಿದುಂಬಿಸದೆ, ಆಟದ ಬಗ್ಗೆ ಸ್ವಲ್ಪ ಸೀರಿಯಸ್ ನೆಸ್ ಹೇಳಿಕೊಡಲಿ'' ಎನ್ನುವುದು ವೀಕ್ಷಕರ ಆಶಯ.

ಜಗನ್, ಆಶಿತಾಗೆ ಬುದ್ಧಿ ಹೇಳಬೇಕಿತ್ತು

ದಿವಾಕರ್ ವರ್ತನೆಯಲ್ಲಿ ಬದಲಾಗಬೇಕು ಎಂದು ಹೇಳಿದ ಸುದೀಪ್ ಜಗನ್ನಾಥ್, ಆಶಿತಾ ಗೆ ಮಾತ್ರ ಯಾಕೆ ಬುದ್ಧಿ ಹೇಳಲಿಲ್ಲ ಎಂಬ ಪ್ರಶ್ನೆ ವೀಕ್ಷಕರಲ್ಲಿ ಕಾಡುತ್ತಿದೆ.

ವೀಕ್ಷಕರಲ್ಲಿ ಕಾಡುತ್ತಿರುವ ದೊಡ್ಡ ಪ್ರಶ್ನೆ

''ದಯಾಳ್ ಅವರಿಗೆ ಯಾರು ವೋಟ್ ಮಾಡಿದ್ದಾರೆ ಅನ್ನೋದೇ ದೊಡ್ಡ ಪ್ರಶ್ನೆ. ನಿಮ್ಮ ಟಿ.ಆರ್.ಪಿಗಾಗಿ ಜನಸಾಮಾನ್ಯರನ್ನೇ ಮನೆಗೆ ಕಳುಹಿಸುವುದು ಎಷ್ಟು ಸರಿ?'' ಅನ್ನೋದು ವೀಕ್ಷಕರ ಪ್ರಶ್ನೆ.

English summary
Bigg Boss Kannada 5: Week 2: Viewers have taken Colors Super Official Facebook page to express their anger towards Sudeep for using the word 'Insects' for Common Man.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X