For Quick Alerts
  ALLOW NOTIFICATIONS  
  For Daily Alerts

  BBK9:ಅದೃಷ್ಟದಿಂದ ಫಿನಾಲೆಗೆ ಬಂದಿದ್ದಾರೆ ಎಂದ ಪ್ರಶಾಂತ್ ಸಂಬರ್ಗಿ ವಿರುದ್ಧ ಗರಂ ಆದ ದಿವ್ಯಾ..!

  By ಎಸ್ ಸುಮಂತ್
  |

  ದಿವ್ಯಾ ಉರುಡುಗ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ತಮ್ಮ 99 ದಿನಗಳ ಜರ್ನಿ ಮುಗಿಸಿ, ಭಾರವಾದ ಮನಸ್ಸಿನಿಂದಾನೇ ಹೊರಗೆ ಬಂದಿದ್ದಾರೆ. ಇಷ್ಟು ದಿನದವರೆಗೂ ಬಂದಿದ್ದ ದಿವ್ಯಾ, ಫೈನಲ್ ರೌಂಡ್ ನಲ್ಲಿಯೂ ಇರುತ್ತೇನೆ ಅಂತಾನೇ ಅಂದುಕೊಂಡಿದ್ದರು. ಆದರೆ ಅದೃಷ್ಟ ಕೈಕೊಟ್ಟಿದೆ.

  ಮನೆಯೊಳಗೆ ಇದ್ದಾಗ ಕಿಚ್ಚ ಸುದೀಪ್ ಪ್ರಶ್ನೆಗೂ ಬಹಳ ನಂಬಿಕೆಯಿಂದಾನೇ ಉತ್ತರ ಕೊಟ್ಟಿದ್ದರು. ಕಳೆದ ಸೀಸನ್‌ನಲ್ಲಿಯೂ ಇದೇ ಪ್ಲೇಸ್‌ನಲ್ಲಿ ಕೂತು ವಾಪಾಸ್ಸಾಗಿದ್ದೀನಿ. ಈ ಬಾರಿಯೂ ಅದೇ ರೀತಿ ವಾಪಾಸ್ಸಾಗುವುದು ನನಗೆ ಇಷ್ಟವಿಲ್ಲ. ತುಂಬಾ ಬೇಸರ ಆಗುತ್ತೆ ಎಂದಿದ್ದರು. ಆದರೆ ಬ್ಯಾಡ್ ಲಕ್, ದಿವ್ಯಾ ಹೊರಗೆ ಹೊರ ಬಂದಿದ್ದಾರೆ.

  ಎಲಿಮಿನೇಟ್ ಆದರೂ ಕೂಡ ವಿಶೇಷ ದಾಖಲೆ ಬರೆದ ದಿವ್ಯಾ ಉರುಡುಗಎಲಿಮಿನೇಟ್ ಆದರೂ ಕೂಡ ವಿಶೇಷ ದಾಖಲೆ ಬರೆದ ದಿವ್ಯಾ ಉರುಡುಗ

  ದಿವ್ಯಾ ಬಗ್ಗೆ ಸಂಬರ್ಗಿ ಅಭಿಪ್ರಾಯ

  ದಿವ್ಯಾ ಬಗ್ಗೆ ಸಂಬರ್ಗಿ ಅಭಿಪ್ರಾಯ

  ಮನೆಯಿಂದ ಯಾರು ಹೊರಬರಬೇಕು, ಬರುತ್ತಾರೆ ಎಂದು ಕಿಚ್ಚ ಸುದೀಪ್ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಪ್ರಶಾಂತ್ ಸಂಬರ್ಗಿ "ದಿವ್ಯಾ ಉರುಡುಗ ಹೋಗಬೇಕು. ಹೋಗುತ್ತಾರೆ ಅನಿಸುತ್ತೆ ಎಂದಿದ್ದರು. ಅವರ ನೂರು ದಿನಗಳ ಪುಟದಲ್ಲಿ ಅದೃಷ್ಟದ ಚಿಹ್ನೆಯೇ ಹೆಚ್ಚಿದೆ. ಹೆಜ್ಜೆ ಗುರುತು ಕಮ್ಮಿ ಇದೆ. ಖಾಲಿ ಪುಟ ಜಾಸ್ತಿ ಇರುವುದರಿಂದ, ಕೊನೆಯಲ್ಲಿ ಮಾತ್ರ ಹೆಚ್ಚು ಕಾಣಿಸಿಕೊಂಡಿದ್ದಾರೆ. ಅವರೇ ನೆನಪು ಮಾಡಿಕೊಂಡರೆ, ಅವರೇ ಆತ್ಮಸಾಕ್ಷಿಯಾಗಿ ಅರ್ಥ ಮಾಡಿಕೊಂಡರೆ ಅರ್ಥವಾಗುತ್ತೆ. ಅದೃಷ್ಟದ ರೇಖೆಯಂತೆ ಬಂದಿದ್ದಾರೆ." ಎಂದು ಪ್ರಶಾಂತ್ ಸಂಬರ್ಗಿ ಹೇಳಿದ್ದರು.

  "ಏನ್ರೀ ಮನಸಾಕ್ಷಿ ಕೇಳಿಕೊಳ್ಳೋದು"

  ಪ್ರಶಾಂತ್ ಅವರ ಹೆಸರನ್ನು ದಿವ್ಯಾ ಸ್ಟೇಜ್ ಮೇಲೆ ತೆಗೆದುಕೊಂಡಿದ್ದಕ್ಕೆ ಕಿಚ್ಚ ಸುದೀಪ್ ನೇರವಾಗಿ, ಪ್ರಶಾಂತ್ ಸಂಬರ್ಗಿಯನ್ನು ಮಾತನಾಡಿಸಿದರು. ಆಗ ದಿವ್ಯಾ, "ಪ್ರಶಾಂತ್ ಸಂಬರ್ಗಿ ನನ್ನ ಹೆಸರು ಹೇಳಿದರೇನೆ ಒಂದಷ್ಟು ದೂರು ಹೇಳುತ್ತಾರೆ. ಈಗ ಹತ್ತಿರ ಇದ್ದಿದ್ದರೆ ಅದೇನು ಮಾಡ್ತಾ ಇದ್ದೆ ಗೊತ್ತಿಲ್ಲ. ಅವರಿಗೆ ಒಂದು ಮಾತು ಹೇಳ್ತೀನಿ. ನಾನು ಆಟ ಆಡಿದ್ದಕ್ಕೆ ಇಷ್ಟು ದೂರ ಬಂದಿದ್ದು. ಅದೃಷ್ಟ ಅಂತೆಲ್ಲಾ ದಯವಿಟ್ಟು ಹೇಳಬೇಡಿ. ಸುಮ್ಮ ಸುಮ್ಮನೆ ಇಷ್ಟುದ್ದ ಹೇಳುತ್ತಾರೆ ಸರ್. ಅವರ ಮನಸಾಕ್ಷಿಯನ್ನು ಕೇಳಿಕೊಳ್ಳುವುದಕ್ಕೆ ಹೇಳಿ. ಏನ್ರಿ ಮನಸಾಕ್ಷಿ ಕೇಳಿಕೊಳ್ಳುವುದು. ಅದೆಂಥ ಮನುಷ್ಯ ಅಂತ ಗೊತ್ತಿಲ್ಲ" ಎಂದು ಗರಂ ಆಗಿದ್ದಾರೆ.

  ಇಬ್ಬರನ್ನು ಕಿಚಾಯಿಸಿದ ಕಿಚ್ಚ

  ಇಬ್ಬರನ್ನು ಕಿಚಾಯಿಸಿದ ಕಿಚ್ಚ

  ಹೀಗೆ ದಿವ್ಯಾ ಕೋಪಗೊಂಡಿದ್ದನ್ನು ಕಂಡ ಸುದೀಪ್ "ಚೆನ್ನಾಗಿದೆ.. ಮಾತಾಡಿ, ಮಾತಾಡಿ.. ಇದು ಏನಾದರೂ ಮನೆಯೊಳಗೆ ನಡೆದಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು. ಸರಿ ಈಗ ತೀರಿಸಿಕೊಂಡು ಬಿಡಿ. ದಿವ್ಯಾ ಹೇಳಿ ಆಯ್ತಲ್ಲ ಮುಂದೆ ಹೋಗಿ. ಪಾಪ ಪ್ರಶಾಂತ್ ಸಂಬರ್ಗಿ ಏನು ಅಂದುಕೊಂಡರು ಅಂದ್ರೆ, ಇಲ್ಲಿ ಮಾತನಾಡುವುದು ಒಳಗೆ ಮ್ಯೂಟ್ ಆಗಿದೆ ಅಂದುಕೊಂಡ್ರು ಕೇಳಿಸಿಬಿಡ್ತಾ? ಈಗ ಹೇಳಿ ಎಷ್ಟು ಹೊಗಳಿದ್ರಿ ಅಂತ" ಎಂದು ತಮಾಷೆ ಮಾಡಿದ್ದಾರೆ.

  ಕ್ಲಾರಿಟಿ ಕೊಟ್ಟ ಸಂಬರ್ಗಿ

  ಕ್ಲಾರಿಟಿ ಕೊಟ್ಟ ಸಂಬರ್ಗಿ

  ಹೀಗೆ ಮಾತನಾಡುತ್ತಾ "ಪ್ರತಿ ವಾರವೂ ಎಲಿಮಿನೇಷನ್ ಅಂತ ಬಂದಾಗ ದಿವ್ಯಾ ನನ್ನ ಹಿಂದೆ ಮುಂದೆ ಇರುತ್ತಿದ್ದರು. ಅವರನ್ನು ನಾನು ಕಾಂಪಿಟೇಟರ್ ಥರ ತೆಗೆದುಕೊಂಡಿದ್ದೀನಿ. ಅದೃಷ್ಟವೂ ಜೊತೆಗೆ ಸೇರಿದೆ ಎನಿವೇ ಕಂಗ್ರಾಟ್ಸ್. 99 ದಿನ ಇದ್ದದ್ದು ಖುಷಿ ಆಯ್ತು" ಎಂದು ಸಂಬರ್ಗಿ ಹೇಳುತ್ತಿದ್ದಂತೆ "ಓ ನಾನು ಎಲ್ಲವನ್ನು ಕೇಳಿಸಿಕೊಂಡಿದ್ದೀನಿ ಸುಮ್ಮನೆ ಇರಿ" ಎಂದು ದಿವ್ಯಾ ಉರುಡುಗ ಹೇಳಿದ್ದಾರೆ.

  English summary
  BBK9 Grand Finale:Divya Uruduga Angry On Prashanth Sambargi,Know More.
  Saturday, December 31, 2022, 16:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X