BBK9 Grand Finale: ಸಾನ್ಯಾ ಮನೆಯಿಂದ ಹೊರ ಹೋದ ಮೇಲೆ ರೂಪೇಶ್ ಶೆಟ್ಟಿ ರಿಯಲ್ ಆಟ!

By ಎಸ್ ಸುಮಂತ್

ಈ ಬಾರಿ ಬಿಗ್ ಬಾಸ್‌ನಲ್ಲಿ ಹೊಸ ಪ್ರಯೋಗಗಳನ್ನು ಮಾಡಲಾಗಿತ್ತು. ಅದುವೇ ಓಟಿಟಿ ಸೀಸನ್ ಜೊತೆಗೆ ಟಿವಿ ಸೀಸನ್‌ನಲ್ಲಿ ನವೀನರು ಮತ್ತು ಪ್ರವೀಣರು ಎಂಬ ಟೀಂ ರೆಡಿ ಮಾಡಲಾಗಿತ್ತು. ಅದರಲ್ಲಿ ರೂಪೇಶ್ ಶೆಟ್ಟಿ ಕೂಡ ಪ್ರವೀಣರ ಲಿಸ್ಟ್‌ಗೆ ಸೇರ್ಪಡೆಯಾಗಲಿದ್ದಾರೆ. ಓಟಿಟಿಯಿಂದ ಟಿವಿ ಸೀಸನ್‌ಗೆ ಬಂದವರು.

ಸದ್ಯ ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಶೆಟ್ಟಿ, ರಾಜಣ್ಣ, ರಾಕೇಶ್, ದಿವ್ಯಾ, ದೀಪಿಕಾ ಉಳಿದುಕೊಂಡಿದ್ದಾರೆ. ರಾಕೇಶ್ ಹಾಗೂ ರೂಪೇಶ್ ಶೆಟ್ಟಿಗೆ ಇದು ನೂರ ಐವತ್ತಕ್ಕೂ ಹೆಚ್ಚು ದಿನಗಳನ್ನು ಬಿಗ್ ಬಾಸ್ ಮನೆಯಲ್ಲಿ ಕಳೆದಿದ್ದಾರೆ. ಬಿಗ್ ಬಾಸ್ ನ ವಿನ್ನರ್ ಅಂಡ್ ರನ್ನರ್ ಸ್ಥಾನದಲ್ಲಿಯೂ ಇವರೇ ನಿಂತುಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.

ತುಳು ಚಿತ್ರದ ನಟ ರೂಪೇಶ್ ಶೆಟ್ಟಿ

ತುಳು ಚಿತ್ರದ ನಟ ರೂಪೇಶ್ ಶೆಟ್ಟಿ

ರೂಪೇಶ್ ಶೆಟ್ಟಿ ತುಳು ಭಾಷೆಯ ನಟ. ಬಿಗ್ ಬಾಸ್ ಮನೆಗೆ ಮೊದಲು ಎಂಟ್ರಿ ಕೊಟ್ಟಿದ್ದು ಓಟಿಟಿ ಮೂಲಕ. ಅಲ್ಲಿ ನಂದಿನಿ, ಜಶ್ವಂತ್ ಹಾಗೂ ಸಾನ್ಯಾ ಜೊತೆಗೆ ಒಳ್ಳೆ ಬಾಂಧವ್ಯ ಬೆಳೆದಿತ್ತು. ತುಳು ನಾಡಿನಲ್ಲಿ ಖ್ಯಾತಿ ಪಡೆದಿದ್ದ ರೂಪೇಶ್ ಶೆಟ್ಟಿಗೆ ಒಳ್ಳೆ ಬೆಂಬಲಿಗರಿದ್ದರು. ಸೋಶಿಯಲ್ ಮೀಡಿಯಾದಲ್ಲಂತು ತುಂಬಾನೇ ಸಪೋರ್ಟ್ ಮಾಡುತ್ತಿದ್ದರು.

ಸಾನ್ಯಾರಿಂದ ಹಲವು ತೊಡಕುಗಳು

ಸಾನ್ಯಾರಿಂದ ಹಲವು ತೊಡಕುಗಳು

ಓಟಿಟಿಗೆ ಎಂಟ್ರಿ ಕೊಟ್ಟಿದ್ದ ರೂಪೇಶ್ ಅಲ್ಲಿ ಸಾನ್ಯಾಳ ಜೊತೆಗೆ ಸಲುಗೆ ಇದ್ದರೂ ಅಷ್ಟೇನು ಇರಲಿಲ್ಲ. ಆದರೆ ಓಟಿಟಿ ಮುಗಿಯುವ ಹಂತಕ್ಕೆ ಬಂದಾಗ ಇಬ್ಬರು ಕ್ಲೋಸ್ ಆಗಿ ಬಿಟ್ಟಿದ್ದರು. ಸಾನ್ಯಾ ಜೊತೆಗಿನ ಅತಿಯಾದ ಸಲುಗೆ ಬಗ್ಗೆ ಸೋಮಣ್ಣ ಸಾಕಷ್ಟು ಸಲ ಪ್ರಶ್ನೆ ಮಾಡಿದ್ದರು. ಅದು ಸುದೀಪ್ ವೇದಿಕೆಯಲ್ಲೂ ಚರ್ಚೆಗೆ ಸಬ್ಜೆಕ್ಟ್ ಆಗಿತ್ತು. ಇನ್ನು ಟಿವಿ ಸೀಸನ್‌ಗೆ ಬಂದಾಗಲೂ ಇಬ್ಬರ ದೋಸ್ತಿ ಮುಂದುವರೆದಿತ್ತು. ಬರೀ ಫ್ರೆಂಡ್‌ಶಿಪ್ ಅನ್ನೋದಲ್ಲ. ಲವ್ ಬರ್ಡ್ಸ್ ಅನ್ನೋ ಲೆವೆಲ್‌ಗೆ ಇಬ್ಬರ ಒಡನಾಟ ಆರಂಭವಾಗಿತ್ತು.

ಸಾನ್ಯಾ ಹೆಸರೇಳುವುದಕ್ಕೂ ರೂಪೇಶ್‌ಗೆ ಭಯ

ಸಾನ್ಯಾ ಹೆಸರೇಳುವುದಕ್ಕೂ ರೂಪೇಶ್‌ಗೆ ಭಯ

ಸಾನ್ಯಾ ಜೊತೆಗೆ ಒಮ್ಮೆ ಕ್ಯಾಪ್ಟನ್ ರೂಮಿನಲ್ಲಿ ಬೆಡ್ ಮೇಲೆ ಮಲಗಿದ್ದ ರೀತಿ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಆ ಒಂದು ವಿಚಾರಕ್ಕೆ ಸುದೀಪ್ ಎಚ್ಚರಿಕೆಯನ್ನು ನೀಡಿದ್ದರು. ಬಳಿಕ ಸಾನ್ಯಾ ಮನೆಯಿಂದ ಹೊರಗೆ ಹೋದ ಮೇಲೆ ಟೀ ಶರ್ಟ್ ವಿಚಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಹಾಕಿದ್ದರು. ಆ ಎಲ್ಲಾ ವಿಚಾರಗಳು ವೇದಿಕೆ ಮೇಲೆಯೇ ಚರ್ಚೆಗೆ ಕಾರಣವಾಗಿತ್ತು. ಈ ಎಲ್ಲಾ ಬೆಳವಣಿಗೆ ರೂಪೇಶ್‌ಗೆ ಸಾನ್ಯಾ ಹೆಸರನ್ನು ಎತ್ತುವುದಕ್ಕೂ ಹಿಂದೇಟು ಹಾಕುತ್ತಿದೆ. ಇತ್ತೀಚೆಗೆ ಮೀನಿನ ವಿಚಾರದಲ್ಲಿ ದೀಪಿಕಾ ದಾಸ್ ಕೇಳಿದಾಗಲೂ ಹೆಸರೇಳಬೇಕೋ ಬೇಡವೋ ಎಂಬಂತೆ ನಡೆದುಕೊಂಡರು. ಸದ್ಯಕ್ಕೆ ಸಾನ್ಯಾ ಹೆಸರನ್ನು ಪಕ್ಕಕ್ಕಿಟ್ಟು ಆಟದ ಕಡೆಗೆ ಗಮನ ಕೊಡುತ್ತಿದ್ದಾರೆ.

ರೂಪೇಶ್ ನಡವಳಿಕೆಗೆ ಎಲ್ಲರೂ ಶಾಕ್

ರೂಪೇಶ್ ನಡವಳಿಕೆಗೆ ಎಲ್ಲರೂ ಶಾಕ್

ಸಾನ್ಯಾ ಮನೆಯಲ್ಲಿದ್ದಾಗ ರೂಪೇಶ್ ಅಷ್ಟಕಷ್ಟ. ಪ್ರತಿಯೊಂದು ನಿಮಿಷವನ್ನು ಬರೀ ಸಾನ್ಯಾಗಾಗಿಯೇ ಮೀಸಲಿಡುತ್ತಿದ್ದರು. ಸಾನ್ಯಾ ಅದ್ಯಾವಾಗ ಮನೆಯಿಂದ ಹೊರ ನಡೆದರೋ ಅಂದಿನಿಂದ ರೂಪೇಶ್ ಎಲ್ಲರೊಟ್ಟಿಗೂ ಬೆರೆಯುತ್ತಿದ್ದಾರೆ. ಒಂದಲ್ಲ ಒಂದು ಕಾಮಿಡಿ ಮಾಡುತ್ತಿರುತ್ತಾರೆ, ಎಲ್ಲರನ್ನು ಸಂತೋಷವಾಗಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ.

ಆರ್ಯವರ್ಧನ್‌ಗೆ ಪ್ರೀತಿಯ ಮಗ

ಆರ್ಯವರ್ಧನ್‌ಗೆ ಪ್ರೀತಿಯ ಮಗ

ಆರ್ಯವರ್ಧನ್ ಹಾಗೂ ರೂಪೇಶ್ ಶೆಟ್ಟಿಯ ಬಾಂಧವ್ಯ ಶುರುವಾಗಿದ್ದು ಒಟಿಟಿಯಿಂದ. ಗುರೂಜಿ ಬುದ್ಧಿವಂತರೆ ಆದರೆ ಕೆಲವೊಂದು ವಿಚಾರಗಳನ್ನು ಬೇಗ ಗ್ರಹಿಸಿಕೊಳ್ಳುವುದಿಲ್ಲ. ಆದರೆ ರೂಪೇಶ್ ಶೆಟ್ಟಿ ಕೆಲವೊಮ್ಮೆ ತಿದ್ದಿ ಹೇಳುತ್ತಾ ಇದ್ದರು. ಅವರು ಅರ್ಥವಾಗಿಯೋ ಅರ್ಥವಾಗದೆಯೋ ಮಾಡಿದ ಕೆಲಸಕ್ಕೆ ಬುದ್ದಿ ಹೇಳುತ್ತಾ ಇದ್ದರು. ಗುರೂಜಿಗೂ ಕೂಡ ರೂಪೇಶ್ ಗೆಲ್ಲಬೇಕೆಂಬ ಆಸೆ ಇತ್ತು. ರೂಪೇಶ್ ಶೆಟ್ಟಿ ಕೂಡ ಗುರೂಜಿ ಜೊತೆಗೆ ಜೆನ್ಯೂನ್ ಆಗಿ ಕನೆಕ್ಟ್ ಆಗಿದ್ದರು.

ಕ್ಯಾಪ್ಟನ್ಸಿಯಲ್ಲಿ ಎಲ್ಲರ ಮನಗೆದ್ದಿದ್ದ ರೂಪೇಶ್

ಕ್ಯಾಪ್ಟನ್ಸಿಯಲ್ಲಿ ಎಲ್ಲರ ಮನಗೆದ್ದಿದ್ದ ರೂಪೇಶ್

ಬಿಗ್ ಬಾಸ್ ಮನೆಯಲ್ಲಿ ಇಲ್ಲಿಯ ತನಕ ಬಹಳಷ್ಟು ಮಂದಿ ಕ್ಯಾಪ್ಟನ್ ಆಗಿದ್ದಾರೆ. ಆದರೆ ರೂಪೇಶ್ ಶೆಟ್ಟಿ ಕ್ಯಾಪ್ಟನ್ ಆದಾಗ ಎಲ್ಲರೂ ಖುಷಿ ಪಟ್ಟಿದ್ದರು. ಎಲ್ಲಿಯೂ ತಾನು ಕ್ಯಾಪ್ಟನ್, ತಾನೇಳಿದ ಮಾತುಗಳನ್ನು ಕೇಳಬೇಕು ಎಂಬ ವಾದವನ್ನು ಹೇಳಿರಲಿಲ್ಲ. ತಾನೂ ಕೂಡ ಎಲ್ಲರಲ್ಲೂ ಒಬ್ಬ ಕಂಟೆಸ್ಟೆಂಟ್ ಆಗಿ, ನಿಯಮಗಳನ್ನು ಹೇಳುವುದಕ್ಕೆ ಒಬ್ಬರು ಬೇಕು ಎಂಬ ಸ್ಥಾನವನ್ನಷ್ಟೇ ಅಲಂಕರಿಸಿದ್ದರು. ಅವರ ಕ್ಯಾಪ್ಟನ್ಸಿಯಲ್ಲಿ ಎಲ್ಲಿಯೂ ಅತಿಯಾದ ಜಗಳಗಳಾಗಲಿ, ಇನ್ನೇನೋ ಸಮಸ್ಯೆಯಾಗಲಿ ಕಾಣಲೇ ಇಲ್ಲ.

ರೂಪೇಶ್‌ಗೆ ಎಲ್ಲರಿಂದ ಮೆಚ್ಚುಗೆ

ರೂಪೇಶ್‌ಗೆ ಎಲ್ಲರಿಂದ ಮೆಚ್ಚುಗೆ

ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಉತ್ತಮ ಎನಿಸಿಕೊಂಡವರು, ಕಿಚ್ಚನ ಚಪ್ಪಾಳೆಯನ್ನು ಪಡೆದವರು ರೂಪೇಶ್ ಶೆಟ್ಟಿ. ಎಲ್ಲೋ ಒಂದು ಸಮಸ್ಯೆಯಾಗಿದೆ ಎಂದರೆ ಅದನ್ನು ಸರಿಪಡಿಸುವ ಲೆಕ್ಕಚಾರ ಮಾಡುತ್ತಿದ್ದರು. ಬಿಗ್ ಬಾಸ್ ಎಂದರೆ ಬರೀ ಟಾಸ್ಕ್ ಅಲ್ಲ ಮನಸ್ಸಾರೆ ಕೂಡ ಒಂದು ನಂಬಿಕೆ ಇರಬೇಕು ಎಂದು ಬಯಸಿದವರು. ಒಬ್ಬರನ್ನು ಒಮ್ಮೆ ಫ್ರೆಂಡ್ ಅಂತ ನಂಬಿದರೆ ಅವರನ್ನು ಎಲ್ಲಿಯೂ ಬಿಟ್ಟುಕೊಡದಂತೆ ನಡೆದುಕೊಂಡವರು. ಸೋಶಿಯಲ್ ಮೀಡಿಯಾದಲ್ಲಂತೂ ಇವರ ಬಗ್ಗೆ ಬರೀ ಪಾಸಿಟಿವ್ ಮಾತುಗಳೇ ಕೇಳಿ ಬರುತ್ತಿದೆ. ಜೊತೆಗೆ ಮನೆಯ ಮಂದಿಗೂ ರೂಪೇಶ್ ಗೆಲ್ಲಲೇಬೇಕೆಂಬ ಬಯಕೆ ಇದೆ.

More from Filmibeat

English summary
BBK9 Grand Finale: Read on to know the quick look at Finalist Roopesh Shetty journey inside the Bigg Boss house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X