For Quick Alerts
  ALLOW NOTIFICATIONS  
  For Daily Alerts

  BBK9: ಬಿಗ್‌ಬಾಸ್‌ ಮೇಲೆ ಮತ್ತೆ ಅಸಮಾಧಾನ: ಅರ್ಹತೆ ಏನು?

  By ಫಿಲ್ಮಿಬೀಟ್ ಡೆಸ್ಕ್
  |

  ಬಿಗ್‌ಬಾಸ್ ಕನ್ನಡ ಸಿಸನ್ 09 ಮುಗಿದಿದೆ. ಅರುಣ್ ಸಾಗರ್, ದೀಪಿಕಾ ದಾಸ್, ಪ್ರಶಾಂತ್ ಸಂಬರ್ಗಿ, ಅನುಪಮಾ ಅಂಥಹಾ ಘಟಾನುಘಟಿಗಳು ಭಾಗವಹಿಸಿದ್ದ ಈ ಬಾರಿಯ ಶೋನಲ್ಲಿ ರೂಪೇಶ್ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ.

  ಪ್ರತಿ ಬಾರಿಯಂತೆ ಈ ಬಾರಿಯೂ ಬಿಗ್‌ಬಾಸ್ ವಿಜೇತರ ಆಯ್ಕೆ ಬಗ್ಗೆ ಪರ-ವಿರೋಧ ಚರ್ಚೆ ಸಾಮಾನ್ಯ. ಇದೀಗ ಬಿಗ್‌ಬಾಸ್ ಸೀಸನ್ 09 ರ ವಿನ್ನರ್‌ ಆಗಿ ರೂಪೇಶ್ ಶೆಟ್ಟಿಯನ್ನು ಆಯ್ಕೆ ಮಾಡಿರುವ ಬಗ್ಗೆಯೂ ಚರ್ಚೆ ಪ್ರಾರಂಭವಾಗಿದೆ.

  BBK9 Grand Finale: ಬಿಗ್‌ಬಾಸ್ ಮನೆಯಿಂದ ದೀಪಿಕಾ ದಾಸ್ ಔಟ್: ಆಕೆಗೆ ಸಿಕ್ಕ ಬಹುಮಾನ ಎಷ್ಟು?BBK9 Grand Finale: ಬಿಗ್‌ಬಾಸ್ ಮನೆಯಿಂದ ದೀಪಿಕಾ ದಾಸ್ ಔಟ್: ಆಕೆಗೆ ಸಿಕ್ಕ ಬಹುಮಾನ ಎಷ್ಟು?

  ಟಿವಿ ಸೀಸನ್‌ಗೆ ಮುನ್ನ ನಡೆದಿದ್ದ ಒಟಿಟಿ ಸೀಸನ್‌ನಲ್ಲಿಯೂ ರೂಪೇಶ್ ಶೆಟ್ಟಿ ಚಾಂಪಿಯನ್ ಆಗಿದ್ದರು. ಆಗಲೂ ಸಹ ರೂಪೇಶ್ ಶೆಟ್ಟಿಯ ಗೆಲುವಿನ ಬಗ್ಗೆ ಪ್ರಶ್ನೆಗಳು ಎದ್ದಿದ್ದವು ಈಗ ಮತ್ತೆ ಟಿವಿ ಸೀಸನ್‌ ಸಹ ರೂಪೇಶ್ ಶೆಟ್ಟಿಯವರೇ ಗೆದ್ದಿದ್ದು ಮತ್ತೊಮ್ಮೆ ಅವರ ಆಯ್ಕೆಯ ಬಗ್ಗೆ ಪ್ರಶ್ನೆಗಳೆದ್ದಿವೆ.

  ನಿನ್ನೆ ನಡೆದ ಫಿನಾಲೆಯಲ್ಲಿ ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಫೈನಲಿಸ್ಟ್ ಆಗಿದ್ದರು. ವಿನ್ನರ್ ಎನಿಸಿಕೊಂಡಿದ್ದು ರೂಪೇಶ್ ಶೆಟ್ಟಿ. ಆದರೆ ಬಿಗ್‌ಬಾಸ್ ಮನೆಯ ಬಹುತೇಕ ಸದಸ್ಯರಿಗೆ ರಾಕೇಶ್ ಅಡಿಗ ಅವರೇ ವಿನ್ನರ್ ಆಗಬೇಕು ಎಂದಿತ್ತು. ಆದರೆ ಅಂತಿಮವಾಗಿ ಗೆದ್ದಿದ್ದು ಮಾತ್ರ ರೂಪೇಶ್ ಶೆಟ್ಟಿ.

  ಚೆನ್ನಾಗಿ ಆಡಿದ್ದ ರಾಕೇಶ್

  ಚೆನ್ನಾಗಿ ಆಡಿದ್ದ ರಾಕೇಶ್

  ಅಸಲಿಗೆ ಬಿಗ್‌ಬಾಸ್ ಮನೆಯಲ್ಲಿ ರಾಕೇಶ್ ಅಡಿಗ ಬಹಳ ಚೆನ್ನಾಗಿ ಆಡಿದ್ದರು. ತಮ್ಮ ತನವನ್ನು ಪ್ರದರ್ಶಿಸಿದ್ದರು. ಬಿಗ್‌ಬಾಸ್ ಮನೆಯೊಳಗಿದ್ದೀನಿ ಎಂಬ ಕಾರಣಕ್ಕೆ ಮುಖವಾಡಗಳನ್ನು ಹಾಕಿಕೊಳ್ಳದೆ ತಮ್ಮ ತನ ಪ್ರದರ್ಶಿಸಿದ್ದರು. ಯಾವ ಸಂದರ್ಭದಲ್ಲಿಯೂ ಹಿಗ್ಗದೆ, ಕುಗ್ಗದೆ, ಸ್ವಾರ್ಥಿಯಾಗದೆ ಸಮಚಿತ್ತದಿಂದ ಆಡಿಕೊಂಡು ಫೈನಲ್ ವರೆಗೆ ಬಂದಿದ್ದರು. ಹಾಗಿದ್ದರೂ ಸಹ ಫೈನಲ್‌ನಲ್ಲಿ ರೂಪೇಶ್ ಶೆಟ್ಟಿ ವಿಜೇತರಾದರು.

  ಒಮ್ಮೆ ಮಾತ್ರ ನಾಮಿನೇಟ್ ಆಗಿದ್ದ ರಾಕೇಶ್ ಅಡಿಗ

  ಒಮ್ಮೆ ಮಾತ್ರ ನಾಮಿನೇಟ್ ಆಗಿದ್ದ ರಾಕೇಶ್ ಅಡಿಗ

  100 ದಿನಗಳಲ್ಲಿ ರಾಕೇಶ್ ಅಡಿಗ ಕೇವಲ ಒಮ್ಮೆ ಮಾತ್ರವೇ ನಾಮಿನೇಟ್ ಆಗಿದ್ದರು ಎಂದರೆ ಅವರು ಆಡಿದ ರೀತಿ, ಮನೆಯಲ್ಲಿ ಅವರು ನಡೆದುಕೊಳ್ಳುತ್ತಿದ್ದ ರೀತಿ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ. ರೂಪೇಶ್ ಶೆಟ್ಟಿ ಉತ್ತಮ ವ್ಯಕ್ತಿಯೇ ಆಗಿದ್ದರಾದರೂ ಇತರ ಸ್ಪರ್ಧಿಗಳಿಗಿಂತ ಹೆಚ್ಚು ಭಿನ್ನವೇನೂ ಆಗಿರಲಿಲ್ಲ. ರಾಕೇಶ್‌ರಂತೆ ಉದಾತ್ತ ವ್ಯಕ್ತಿತ್ವ ರೂಪೇಶ್ ಅವರದ್ದಾಗಿರಲಿಲ್ಲ. ಸ್ವಚ್ಛ ಮನಸ್ಸಿನವರಾಗಿದ್ದರೂ ಸಹ ಶೋ ಒಂದನ್ನು ಗೆಲ್ಲಲು ಬೇಕಾದ ಭಿನ್ನತೆ, ವ್ಯಕ್ತಿತ್ವದಲ್ಲಿ ವಿಶಾಲತೆ ರೂಪೇಶ್‌ ಅವರಿಗಿರಲಿಲ್ಲ ಎಂದೇ ಹೇಳಬೇಕು.

  ಹಾಡುಗಳನ್ನು ಬಳಸಿಕೊಂಡ ರೂಪೇಶ್ ಶೆಟ್ಟಿ

  ಹಾಡುಗಳನ್ನು ಬಳಸಿಕೊಂಡ ರೂಪೇಶ್ ಶೆಟ್ಟಿ

  ಆದರೆ ರೂಪೇಶ್ ರಾಕೇಶ್ ಗಿಂತಲೂ ಹಾಡುಗಳನ್ನು ಬಿಗ್‌ಬಾಸ್‌ ಮನೆಯಲ್ಲಿ ಚೆನ್ನಾಗಿ ಬಳಸಿದರು. ರಾಕೇಶ್ ಅಡಿಗ ಸ್ವತಃ ರ್ಯಾಪರ್‌ ಆಗಿದ್ದರೂ ಸಹ, ರೂಪೇಶ್ ಶೆಟ್ಟಿ ತಮ್ಮ ಹಾಡುಗಳಿಂದ ಹೆಚ್ಚು ಗಮನ ಸೆಳೆದರು. ಸಂಗೀತಗಾರರಿಗೆ ಬಿಗ್‌ಬಾಸ್‌ ಮನೆಯಲ್ಲಿ ಮೊದಲಿನಿಂದ ಪ್ರಾಶಸ್ತ್ಯ ಹೆಚ್ಚು ಇದನ್ನು ತಿಳಿದಿದ್ದ ರೂಪೇಶ್ ಶೆಟ್ಟಿ ಚೆನ್ನಾಗಿ ಬಳಿಸಿಕೊಂಡರು. ರಾಕೇಶ್ ಅಡಿಗ ಸಹ ಹಾಡುಗಳಿಂದ ಗಮನ ಸೆಳೆದರಾದರೂ, ರೂಪೇಶ್ ಅಷ್ಟು 'ಲೌಡ್' ಆಗಿ ತಮ್ಮ ಇರುವಿಕೆಯನ್ನು ಪ್ರದರ್ಶಿಸುವಲ್ಲಿ ತುಸು ಹಿಂದುಳಿದರು. ಸಮಾಜದಲ್ಲಿ ವಿಷಯಕ್ಕಿಂತಲೂ ಶಬ್ದಕ್ಕೆ ಹೆಚ್ಚು ಗೌರವವಾದ್ದರಿಂದ ಇಲ್ಲಿಯೂ ಸಹ ರಾಕೇಶ್ ಬದಲು ರೂಪೇಶ್ ಗೆದ್ದಿದ್ದಾರೆ ಎನ್ನಬಹುದೇನೋ.

  English summary
  BBK9: Some people unhappy with Roopesh Shetty's selection as Bigg Boss winner. Why Rakesh Adiga is not the winner.
  Sunday, January 1, 2023, 13:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X