ಬಿಗ್ ಬಾಸ್ ಶೋನಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು: ಡ್ರೋನ್ ಪ್ರತಾಪ್‌ಗೆ ಡಾ. ಪ್ರಯಾಗ್ ನೋಟಿಸ್!
ಈ ಬಾರಿಯ ಬಿಗ್ ಬಾಸ್ ರಿಯಾಲಿಟಿ ಶೋ ವಿವಾದಗಳಿಂದಲೇ ತುಂಬುತ್ತಿದೆ. ಒಂದಲ್ಲ ಒಂದು ಕಾರಣಕ್ಕೆ ಸ್ಪರ್ಧಿಗಳ ಮೇಲೆ ಪ್ರಕರಣಗಳು, ಲೀಗಲ್ ನೋಟಿಸ್‌ಗಳು ರವಾನೆಯಾಗುತ್ತಲೇ ಇವೆ. ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್ ಮೇಲಿನ ಹುಲಿ ಉಗುರು ಪ್ರಕರಣ, ತನಿಶಾ ಮೇಲಿನ ಎಫ್‌ಐಆರ್, ಈಗ ಡ್ರೋನ್ ಪ್ರತಾಪ್‌ಗೆ ಲೀಗಲ್ ನೋಟಿಸ್!.
ಎಸ್... ತಮ್ಮ ಫ್ಯಾನ್ ಫಾಲೋಯಿಂಗ್ ಇಂದಾಗಿ ಬಿಗ್ ಬಾಸ್ ಮನೆಯಲ್ಲಿ ಸಕತ್ ಫೈಟ್ ನೀಡುತ್ತಿರುವ ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಈಗ ಸಂಷ್ಟಕ್ಕೆ ಒಳಗಾಗಿದ್ದಾರೆ. ಈ ಹಿಂದೆ ದೊಡ್ಮನೆಯಲ್ಲಿ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುವಾಗ ನೀಡಿದ್ದ ಹೇಳಿಕೆಗಳೇ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮಾಡುತ್ತಿದೆ.

ಡ್ರೋನ್ ಪ್ರತಾಪ್‌ಗೆ ಲೀಗಲ್ ನೋಟಿಸ್!
ತಮ್ಮ ಬಗ್ಗೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿರುವ ಬಿಬಿಎಂಪಿ ಅಧಿಕಾರಿಯಾಗಿರುವ ಡಾ. ಪ್ರಯಾಗ್ ಎಚ್ ಎಸ್ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಡ್ರೋನ್ ಪ್ರತಾಪ್‌ಗೆ ತಮ್ಮ ವಕೀಲರ ಮೂಲಕ ನೋಟಿಸ್ ಕಳುಹಿಸಿದ್ದಾರೆ. ಈ ನೋಟಿಸ್ ತಲುಪಿದ ಒಂದು ತಿಂಗಳ ಒಳಗೆ ಡ್ರೋನ್ ಪ್ರತಾಪ್ ಬಹಿರಂಗವಾಗಿ ಹಾಗೂ ಲಿಖಿತ ಕ್ಷಮೆ ಕೋರಬೇಕು ಎಂದು ಹೇಳಲಾಗಿದೆ.
ತಿಂಗಳ ಒಳಗೆ ಕ್ಷಮೆ ಕೇಳದೇ ಹೋದರೆ ಡ್ರೋನ್ ಪ್ರತಾಪ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡುವುದಾಗಿ ಡಾ. ಪ್ರಯಾಗ್ ವಕೀಲರ ಮೂಲಕ ನೋಟಿಸ್ ಕಳುಹಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮಾತನಾಡುತ್ತಿದ್ದ ವೇಳೆ ಕೊರೊನಾ ಕಾಲದಲ್ಲಿ ನೋಡಲ್ ಅಧಿಕಾರಿಯೊಬ್ಬರು ಕೊರೊನಾ ಕಾಲದಲ್ಲಿ ನನ್ನನ್ನು ಮಾನಸಿಕ ರೋಗಿ ಎಂದು ಬಿಂಬಿಸುವ ಹುನ್ನಾರ ನಡೆಯಿತು. ನನ್ನ ತಲೆಗೆ ಹೊಡೆದಿದ್ದರು ಎಂದು ಹೇಳಿಕೊಂಡಿರು.

ಲೀಗಲ್ ನೋಟಿಸ್‌ನಲ್ಲಿ ಏನಿದೆ...?
ಕೊರೊನಾ ಮಾರ್ಗಸೂಚಿಗಳನ್ನು ಹಿಂತೆಗೆದುಕೊಂಡ ಮೂರು ವರ್ಷಗಳ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಬಿಗ್ ಬಾಸ್ ಎಂಬ ವಿವಾದಾತ್ಮಕ ಟಿವಿ ಶೋನಲ್ಲಿ ನಮ್ಮ ಕಕ್ಷಿದಾರರ ಮೇಲೆ ಅನಗತ್ಯ ಆರೋಪ ಮಾಡಲಾಗಿದೆ. ಈ ಟಿವಿ ಶೋ ಒಂದರಲ್ಲಿ ಕೋವಿಡ್ - 19 ಸಾಂಕ್ರಾಮಿಕ ಸಮಯದಲ್ಲಿ ನನ್ನ ಕ್ಲೈಂಟ್ ಮತ್ತು ಅವರ ತಂಡದ ಮೇಲೆ ನೀವು ಅನುಕಂಪ ಗಳಿಸುವ ಹಾಗೂ ಪ್ರಚಾರ ಪಡೆಯುವ ಉದ್ದೇಶದಿಂದ ಆಧಾರರಹಿತ ಆರೋಪಗಳನ್ನು ಮಾಡಿದ್ದೀರಿ. ನಿಮ್ಮ ಆರೋಪಗಳು ಕೀಳಾಗಿರುವುದಲ್ಲದೆ, ನನ್ನ ಕಕ್ಷಿದಾರರ ವಿರುದ್ಧ ಆಧಾರರಹಿತ ಮತ್ತು ಕಾಲ್ಪನಿಕ ಆರೋಪಗಳನ್ನು ಮಾಡಿದ್ದೀರಿ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
ಹೀಗಾಗಿ ಬಿಗ್ ಬಾಸ್ ಟಿವಿ ಶೋನಲ್ಲಿ ಬಹಿರಂಗ ಕ್ಷಮೆಯಾಚಿಸಲು ನಿಮಗೆ ಈ ಮೂಲಕ ತಿಳಿಸಲಾಗಿದೆ. ನೀವು ಮಾಡಿದ ಆಧಾರರಹಿತ ಹೇಳಿಕೆಗಳು, ಆರೋಪಗಳು ನಿಜವಲ್ಲ ಎಂದು ತಿಳಿಸಬೇಕು. ಇಲ್ಲದಿದ್ದರೇ, ಸಿವಿಲ್ ಮತ್ತು ಕ್ರಿಮಿನಲ್ ಕಾನೂನಿನಡಿಯಲ್ಲಿ ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲು ನನ್ನ ಕಕ್ಷಿದಾರರು ಹೇಳಿದ್ದಾರೆ. ಈ ನೋಟಿಸ್ ಸ್ವೀಕರಿಸಿದ ದಿನಾಂಕದಿಂದ ಒಂದು ತಿಂಗಳೊಳಗೆ ನೀವು ನನ್ನ ಕ್ಲೈಂಟ್‌ಗೆ ಲಿಖಿತವಾಗಿ ಕ್ಷಮೆಯಾಚಿಸಬೇಕು ಎಂದು ತಿಳಿಸಲಾಗಿದೆ.
ಡ್ರೋನ್ ಪ್ರತಾಪ್ ಹೇಳಿದ್ದೇನು..?
ಬಿಗ್ ಬಾಸ್ ಮನೆಯಲ್ಲಿ ಮಾತನಾಡಿದ್ದ ಪ್ರತಾಪ್, "ನನಗೆ ಕೊರೊನಾ ಸೋಂಕು ತಗುಲಿತ್ತು. ಕ್ವಾರಂಟೈನ್ ಮುಗಿಸಿ ಚಿಕ್ಕಮಗಳೂರಿಗೆ ಹೋದೆ. ನಾನು ಕ್ವಾರಂಟೈನ್ ಆಗಿಲ್ಲ ಎಂದು ಠಾಣೆಗೆ ಕರೆದುಕೊಂಡು ಹೋಗಿದ್ದರು. ನನ್ನನ್ನು ಜೈಲಿನಲ್ಲಿ ಇರಿಸಿದರು. ಪ್ರತಾಪ್ ವಿರುದ್ಧ ಕಂಡಲ್ಲಿ ಗುಂಡು ಆದೇಶ ಇದೆ ಎಂದು ಸುದ್ದಿ ಹಬ್ಬಿಸಲಾಯಿತು. ನನಗೆ ಎಲ್ಲರೂ ಸಾಕಷ್ಟು ಹಿಂಸೆ ಕೊಟ್ಟರು. ನನ್ನ ತಾಯಿ, ತಂಗಿ ಬಗ್ಗೆ ಮಾತನಾಡಿದ್ದರು. ನನ್ನ ತಲೆಗೆ ಹೊಡೆದರು" ಎಂದಿದ್ದರು.


Click it and Unblock the Notifications











