ಕಲೆಯನ್ನೇ ಉಸಿರಾಗಿಸಿಕೊಂಡ ಬೆಳವಾಡಿ ಕುಟುಂಬದ ಬಗ್ಗೆ ನಿಮಗೆಷ್ಟು ಗೊತ್ತು?

By ಅನಿತಾ ಬನಾರಿ

ಬೆಳವಾಡಿ ಎಂಬ ಪದ ಕೇಳಿದಾಕ್ಷಣ ಹಲವರಿಗೆ ಸುಧಾ ಬೆಳವಾಡಿ ಹಾಗೂ ಪ್ರಕಾಶ್ ಬೆಳವಾಡಿ ಎಂದು ನೆನಪಾಗುತ್ತದೆ. ಕಾರಣ ಇಬ್ಬರೂ ಬಹಳಷ್ಟು ವರ್ಷಗಳಿಂದ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಗುರುತಿಸಿಕೊಂಡವರು. ಆದರೆ ಇವರ ಮೂಲ ನಂಟಿದ್ದದ್ದು ರಂಗಭೂಮಿಯಲ್ಲಿ.

ಮೇಕಪ್ ನಾಣಿ ಎಂದೇ ಫೇಮಸ್ ಆಗಿದ್ದ ಬೆಳವಾಡಿ ನಂಜುಂಡಯ್ಯ ನಾರಾಯಣ್ ಎಂಬುವವರ ಮಕ್ಕಳಾದ ಸುಧಾ ಬೆಳವಾಡಿ ಹಾಗೂ ಪ್ರಕಾಶ ಬೆಳವಾಡಿ ಚಿಕ್ಕಂದಿನಿಂದಲೂ ರಂಗಭೂಮಿ ಕಲಾವಿದರೊಂದಿಗೆ ಒಡನಾಡಿ ಬೆಳೆದವರು. ಇವರ ತಾಯಿ ಅಂದರೆ ನಾರಾಯಣ ಬೆಳವಾಡಿ ಅವರ ಪತ್ನಿ ಭಾರ್ಗವಿ ನಾರಾಯಣ್. ಇವರು ಸಹ ರಂಗಭೂಮಿ ಅಷ್ಟೇ ಅಲ್ಲದೆ ಸಿನಿಮಾ ಹಾಗೂ ಧಾರಾವಾಹಿಗಳಲ್ಲೂ ಹಲವು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಭಾರ್ಗವಿ ಅಜ್ಜಿ ಎಂದೇ ಫೇಮಸ್ ಆಗಿದ್ದ ಇವರು 2022 ರಲ್ಲಿ ದೈವಾಧೀನರಾದರು.

Belawadi family all members recognized in the world of acting

ದಿವಂಗತ ನಟಿ ಭಾರ್ಗವಿ ನಾರಾಯಣ್ ಸಿನಿಮಾಗಳಾದ ಪಲ್ಲವಿ, ಜಂಬೂ ಸವಾರಿ, ಸ್ಟೆಂಬಲ್, ಮುಯ್ಯಿ, ಅಂತಿಮ ಘಟ್ಟ ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಧಾರಾವಾಹಿಗಳಾದ 'ಚಿಟ್ಟೆ ಹೆಜ್ಜೆ', 'ಮುಕ್ತ', 'ಮುಕ್ತ ಮುಕ್ತ', 'ಮಂಥನ' ಇತ್ಯಾದಿಗಳಲ್ಲಿ ಬಹಳ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ.

ಇನ್ನು ಪ್ರಕಾಶ್ ಬೆಳವಾಡಿಯವರ ಸಿನಿ ಸಾಧನೆಗಳ ಬಗ್ಗೆ ಮಾತನಾಡುವುದಾದರೆ ಪತ್ರಕರ್ತ ನಟ ನಿರ್ದೇಶಕ ಪ್ರಕಾಶ್ ಬೆಳವಾಡಿಯವರು 2002ರಲ್ಲಿ ನಿರ್ದೇಶಸಿದ 'ಸ್ಟೆಂಬಲ್' ಎಂಬ ಇಂಗ್ಲಿಷ್ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್ ಪಡೆದುಕೊಂಡಿದ್ದಾರೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿ ಕೆಲವು ವರ್ಷಗಳ ಕಾಲ ಪತ್ರಕರ್ತರಾಗಿದ್ದ ಇವರು ನಂತರ ಪೂರ್ಣ ಪ್ರಮಾಣದಲ್ಲಿ ನಟನೆ ಹಾಗೂ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ.

'ಮದ್ರಾಸ್ ಕೆಫೆ', 'ಏರ್ ಲಿಫ್ಟ್', 'ಕಾಶ್ಮೀರ್ ಫೈಲ್ಸ್', 'ಟಾಷ್ಕಾಂಟ್ ಫೈಲ್ಸ್', 'ಕೆಂಡಸಂಪಿಗೆ' ಮುಂತಾಗಿ ಕನ್ನಡ ಸೇರಿದಂತೆ ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿರುವ ಇವರು ಬಹುಭಾಷಾ ನಟ. ಎಸ್ ಎಲ್ ಭೈರಪ್ಪನವರ ಪರ್ವ ಕಾದಂಬರಿಯನ್ನು ಬರೋಬ್ಬರಿ ಎಂಟು ಗಂಟೆಗಳ ಕಾಲ ನಡೆಯುವ ಇಂಗ್ಲಿಷ್ ನಾಟಕ ರೂಪಕ್ಕೆ ಬರೆದು ನಿರ್ದೇಶಿಸಿರುವ ಹೆಗ್ಗಳಿಕೆ ಇವರಿಗಿದೆ.

Belawadi family all members recognized in the world of acting

ಇವರ ಸಾಂಸ್ಕೃತಿಕ ಹಾಗೂ ಕಲಾ ಕೊಡುಗೆಗೆ 'ವರ್ಷದ ಕನ್ನಡಿಗ', 'ಪ್ರೈಡ್ ಆಫ್ ಕರ್ನಾಟಕ', 'ಪ್ರತಿಭಾ ಭೂಷಣ' ಮುಂತಾದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರ ಮಗಳು ತೇಜು ಬೆಳವಾಡಿ ಕೂಡ ಗಾಯಕಿ ಯೋಗಪಟು, ಹಾಗೂ ರಂಗಭೂಮಿ ಕಲಾವಿದೆಯಾಗಿದ್ದು ಇತ್ತೀಚೆಗೆ 'ಗಂಟು ಮೂಟೆ', 'ಲಾಫಿಂಗ್ ಬುದ್ಧ', 'ಮರ್ಯಾದಿ ಪ್ರಶ್ನೆ' ಮುಂತಾದ ಸಿನಿಮಾಗಳಲ್ಲಿ ಪ್ರಮುಖ ಹಾಗೂ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ.

ಅವರ ತಂಗಿ ಸುಧಾ ಬೆಳವಾಡಿ ಕೂಡ ರಂಗಭೂಮಿ ಸಿನಿಮಾ ಧಾರಾವಾಹಿ ಹೀಗೆ ನಾನಾ ರೀತಿಯ ಪ್ರಕಾರಗಳಲ್ಲಿ ಹಲವಾರು ವರ್ಷಗಳಿಂದ ಅಭಿನಯಿಸುತ್ತ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 'ಮತದಾನ', 'ಮುಂಗಾರು ಮಳೆ', 'ಮೊಗ್ಗಿನ ಮನಸ್ಸು', 'ಕಾಡು', 'ಗಾಳಿಪಟ', 'ಆಚಾರ್ ಅಂಡ್ ಕೊ', 'ಕಾಸಿನ ಸರ' ಹೀಗೆ ಇವರ ಸಿನಿಮಾಗಳ ಪಟ್ಟಿ ಬಹಳ ಉದ್ದವಿದೆ. ಸಿನಿಮಾಗಳಷ್ಟೇ ಅಲ್ಲದೆ ಪ್ರಮುಖ ಧಾರಾವಾಹಿಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿರುವ ಈ ನಟಿ 'ಮಂಥನ', 'ಮನ್ವಂತರ', 'ಮಹಾಪರ್ವ', 'ಮಗಳು ಜಾನಕಿ', ಇತ್ತೀಚೆಗೆ 'ಲಕ್ಷಣ' ಧಾರಾವಾಹಿಯಲ್ಲಿಯೂ ಎಲ್ಲೂ ನಟಿಸಿದ್ದಾರೆ. ಸತ್ಯ ರಾವ್ ಎನ್ನುವವರನ್ನು ಮದುವೆಯಾಗಿರುವ ಇವರಿಗೆ ಸಂಯುಕ್ತ ಹಾಗೂ ಶಂತನು ಎಂಬ ಇಬ್ಬರು ಮಕ್ಕಳಿದ್ದಾರೆ. ಇವರ ಮಗಳು ಸಂಯುಕ್ತ ಹೊರನಾಡು ಕೂಡ ಸಿನಿಮಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

More from Filmibeat

English summary
Belawadi family all members recognized in the world of acting;
Read more about: actress anitha banari sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X