For Quick Alerts
  ALLOW NOTIFICATIONS  
  For Daily Alerts

  ಕಪ್ಪು ಬಣ್ಣ ಎಂದು ಟ್ರೋಲ್: ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ನಟಿ

  |

  ಚರ್ಮದ ಬಣ್ಣ ಕಪ್ಪು ಎಂದು ಟ್ರೋಲ್ ಮಾಡಿದವರ ವಿರುದ್ಧ ಬೆಂಗಾಲಿ ನಟಿ ಶ್ರುತಿ ದಾಸ್ ಪೊಲೀಸರ ಮೊರೆ ಹೋಗಿದ್ದಾರೆ. ಕಪ್ಪು ಬಣ್ಣ ಎಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡುವವರ ವಿರುದ್ಧ ನಟಿ ಶ್ರುತಿ ದಾಸ್ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

  2019ರಲ್ಲಿ ಬೆಂಗಾಲಿ ಧಾರಾವಾಹಿ 'ತ್ರಿನಯನಿ' ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ರುತಿ ಕಪ್ಪು ಬಣ್ಣದ ಕಾರಣ ತುಂಬಾ ನಿಂದನೆಗೆ ಒಳಗಾಗಿರುವುದಾಗಿ ಹೇಳಿದ್ದಾರೆ. ತನ್ನ ವಿರುದ್ಧದ ದಾಳಿಗಳು ತೀರ ವೈಯಕ್ತಿಕವಾಗಿರುವ ಕಾರಣ ಇದನ್ನು ನಿಭಾಯಿಸಲು ಸಾಧ್ಯವಾಗದೆ ಮುಂದಿನ ಹಂತಕ್ಕೆ ತಲುಪಬೇಕಾಯಿತು ಎಂದಿದ್ದಾರೆ.

  "ಪ್ರಾರಂಭದಲ್ಲಿ ಎಲ್ಲರೂ ಟ್ರೋಲ್ ಗಳನ್ನು ನಿರ್ಲಕ್ಷ್ಯ ಮಾಡುವಂತೆ ಹೇಳಿದರು. ನಾನು ಕೂಡ ಹಾಗೆ ಮಾಡಿದೆ. ಆದರೆ ತುಂಬಾ ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ. ನನ್ನ ಪ್ರತಿಭೆ ಮತ್ತು ಪಾತ್ರದ ಬಗ್ಗೆ ಅಸಹ್ಯಕರ ಹೇಳಿಕೆಯನ್ನು ನೀಡುತ್ತಿದ್ದಾರೆ" ಎಂದು ದೂರಿದ್ದಾರೆ.

  ಶ್ರುತಿ ದಾಸ್ ಸದ್ಯ 'ದೇಶರ್ ಮಾತಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಸದ್ಯ ಆನ್ ಲೈನ್ ಮೂಲಕ ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ಕೆಟ್ಟದಾಗಿ ಬಂದ ಕಾಮೆಂಟ್, ಟ್ರೋಲ್ ಗಳನ್ನು ಸ್ಕ್ರೀನ್ ಶಾಟ್ ತೆಗೆದು ಸೈಬರ್ ಪೊಲೀಸರಿಗೆ ಕಳುಹಿಸಿದ್ದಾರೆ.

  ಇನ್ನು ಧಾರಾವಾಹಿ ನಿರ್ದೇಶಕ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಅನೇಕರು ಟ್ರೋಲ್ ಮಾಡುತ್ತಿದ್ದರು ಎನ್ನುವ ಬಗ್ಗೆಯೂ ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಸ್ವರ್ನೆಂದು ಸಮದ್ದಾರ್, "ಟ್ರೋಲ್ ಗಳ ಬಾಯಿ ಮುಚ್ಚಿಸಲು ಎಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ" ಎಂದಿದ್ದಾರೆ.

  English summary
  Trolled for skin colour, Bengali Actress Shruti Das files a cyber police complaint in kolkata.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X