ಧಾರಾವಾಹಿ ಚಿತ್ರೀಕರಣ ವೇಳೆ ದುರಂತ ; ಸಮುದ್ರದಲ್ಲಿ ಮುಳುಗಿ ಖ್ಯಾತ ನಟ ರಾಹುಲ್ ನಿಧನ

ಮನುಷ್ಯನ ಬದುಕು ನೀರಿನ ಮೇಲಿನ ಗುಳ್ಳೆಯಂತೆ .. ಹಗ್ಗದ ಮೇಲಿನ ನಡಿಗೆಯಂತೆ .. ಯಾವಾಗ ಇಲ್ಲಿ ಏನಾಗುತ್ತೆ ಎಂದು ಹೇಳುವುದು ಕಷ್ಟ. ಇವತ್ತು ಇದ್ದಂಗೆ ನಾಳೆ ಇರಲ್ಲ. ಈಗಿದ್ದಂಗೆ.. ಇನ್ನೆರಡು ಸೆಕೆಂಡ್‌ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ ಬದುಕು. ಮನುಷ್ಯ ಯಾವಾಗ ಜನ್ಮ ಪಡೆಯಬಹುದು ಎಂದು ಹೇಳಬಹುದು. ಆದರೆ ಮನುಷ್ಯನ ಅಂತ್ಯ ಹೇಗೆ ಆಗುತ್ತೆ ಎಂದು ಹೇಳುವುದು ಅಸಾಧ್ಯ.

ಸಾವು ಯಾರನ್ನು ಹೇಳಿ ಕೇಳಿ ಬರುವುದಿಲ್ಲ. ಈ ಸಾವಿಗೆ ಲಿಂಗ, ಜಾತಿ, ಧರ್ಮದ ಭೇದ ಭಾವ ಕೂಡ ಇಲ್ಲ. ಸಾವು ಯಾವಾಗ ಬೇಕಾದರೂ ಯಾರನ್ನ ಬೇಕಾದರು ಕರೆಯಬಹುದು. ಇದಕ್ಕೆ ರಾಹುಲ್ ಬ್ಯಾನರ್ಜಿ ಅವರ ದುರಂತ ಅಂತ್ಯ ಮತ್ತೊಂದು ಉದಾಹರಣೆ.

Bengali Superstar Rahul Arunoday Banerjee Drowns During Serial Shoot

ಹೌದು, ರಾಹುಲ್ ಬ್ಯಾನರ್ಜಿ... ಬೆಂಗಾಲಿ ಕಿರುತೆರೆ ಮತ್ತು ಬೆಳ್ಳಿತೆರೆಯ ಖ್ಯಾತ ಹೆಸರು. 2008ರಲ್ಲಿ ಬಿಡುಗಡೆಯಾದ ''ಚಿರೋದಿನಿ ತುಮಿ ಜೆ ಅಮರ್'' ಚಿತ್ರದ ಮೂಲಕ ಖ್ಯಾತಿಯ ಶಿಖರಕ್ಕೇರಿದ ರಾಹುಲ್ ಬ್ಯಾನರ್ಜಿ ''ದೇಶೇರ್ ಮಾತಿ'' .. ''ಲಾಲ್ ಕುಠಿ''.. ''ಹೋರೋಗೌರಿ ಪೈಸ್ ಹೋಟೆಲ್''.. ''ಅರ್ಧಾಂಗಿನಿ''.. ''ಖೇಲಾ''.. ಹೀಗೆ ಹಲವು ಧಾರಾವಾಹಿಯಲ್ಲಿ ಅಭಿನಯಿಸಿದ್ದರು.

''ತುಮಿ ಆಸ್ಬೆ ಬೋಲೆ'' ಧಾರಾವಾಹಿ ಇವರಿಗೆ ಅಪಾರವಾದ ಹೆಸರು ನೀಡಿತ್ತು. ಈ ಧಾರಾವಾಹಿಯ ಮೂಲಕ ಕೋಲ್ಕತ್ತಾದೆಲ್ಲೆಡೆ ರಾಹುಲ್ ದೇವ್ ರಾಯ್ ಎಂದೇ ಜನಜನಿತರಾಗಿದ್ದರು ರಾಹುಲ್ ಬ್ಯಾನರ್ಜಿ.

ಇಂಥಾ ರಾಹುಲ್ ಬ್ಯಾನರ್ಜಿ ಸದ್ಯ ''ಭೋಲೆ ಬಾಬಾ ಪಾರ್ ಕರೆಗಾ'' ಧಾರಾವಾಹಿಯನ್ನು ಮಾಡುತ್ತಿದ್ದರು. ಇದೇ ಧಾರಾವಾಹಿಯ ಚಿತ್ರೀಕರಣದ ಸಮಯದಲ್ಲಿ ಆಯತಪ್ಪಿ ಸಮುದ್ರಕ್ಕೆ ಬಿದ್ದು ರಾಹುಲ್ ನಿಧನರಾಗಿದ್ಧಾರೆ.

ಹೌದು.. ಚಿತ್ರ ಮತ್ತು ಧಾರಾವಾಹಿಯ ಚಿತ್ರೀಕರಣ ನಡೆಯುವಾಗ ಎಷ್ಟೇ ಮುಂಜಾಗೃತೆ ವಹಿಸಿದರು ಕೂಡ ಕೆಲ ಒಮ್ಮೆ ನಡೆಯಬಾರದ ದುರಂತ ನಡೆದು ಹೋಗುತ್ತೆ. ಇದಕ್ಕೆಕನ್ನಡದ ''ಲಾಕಪ್ ಡೆತ್'' ಚಿತ್ರದಿಂದ ಹಿಡಿದು ''ಮಾಸ್ತಿಗುಡಿ''ಯವರೆಗೆ ''ಕೂಲಿ'' ಚಿತ್ರದಿಂದ ಹಿಡಿದು ಶಂಕರ್ ನಿರ್ದೇಶನದ ''ಇಂಡಿಯನ್ 2'' ವರೆಗೆ ಹಲವು ಉದಾಹರಣೆಗಳು ಸಿಗುತ್ತವೆ.

Bengali Superstar Rahul Arunoday Banerjee Drowns During Serial Shoot

ದುರಂತ ಅಂದರೆ ತಂತ್ರಜ್ಞಾನ ಎಷ್ಟೇ ಬದಲಾದರೂ ಕೂಡ ಈ ಸಾವು- ನೋವನ್ನು ತಪ್ಪಿಸಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಇದಕ್ಕೆ ಮತ್ತೊಂದು ಉದಾಹರಣೆಯೇ ನಡೆದ ಈ ಅವಘಡ.

ಹೌದು, ಒಡಿಶಾದ ತಲ್ಸರಿ ಬೀಚ್‌ನಲ್ಲಿ ಈ ಧಾರವಾಹಿಯ ಚಿತ್ರೀಕರಣ ನಡೆಯುತ್ತಿತ್ತು. ಈ ಸಮಯದಲ್ಲಿ ಚಿತ್ರೀಕರಣದ ನಡುವೆ ಬ್ರೇಕ್ ನೀಡಿದ ಸಮಯದಲ್ಲಿ ಬೋಟ್‌ನಲ್ಲಿದ್ದ ರಾಹುಲ್ ಬ್ಯಾನರ್ಜಿ ತಮ್ಮ ಮುಂದಿನ ದೃಶ್ಯದ ತಯಾರಿಯನ್ನು ನಡೆಸಿದ್ದರು. ಇದೇ ಸಮಯದಲ್ಲಿ ಆಯ ತಪ್ಪಿ ಸಮುದ್ರಕ್ಕೆ ಬಿದ್ದರು.

ದುರಂತ ಅಂದರೆ ಅಲ್ಲಿದ್ದ ಯಾವೊಬ್ಬ ಸಿಬ್ಬಂದಿಯಾಗಲಿ, ಕ್ಯಾಮರಾ ಮ್ಯಾನ್ ಆಗಲಿ ರಾಹುಲ್ ಬ್ಯಾನರ್ಜಿ ನೀರು ಪಾಲಾಗಿದ್ದು ಗಮನಿಸಿಯೇ ಇಲ್ಲ. ಬ್ರೇಕ್‌ನ ನಂತರ ಚಿತ್ರೀಕರಣಕ್ಕೆ ಎಲ್ಲರೂ ಅಣಿಯಾದಾಗಲೇ ರಾಹುಲ್ ಬ್ಯಾನರ್ಜಿ ಆಯತಪ್ಪಿ ಸಮುದ್ರದ ಪಾಲಾಗಿರುವ ವಿಚಾರ ಅಲ್ಲಿದ್ದ ಎಲ್ಲರಿಗೆ ಗೊತ್ತಾಗಿದೆ.
ರಕ್ಷಣಾ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೂ ಕೂಡ ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ರಕ್ಷಣಾ ತಂಡದ ಸಿಬ್ಬಂದಿಗಳು ಸಮುದ್ರಕ್ಕೆ ಹಾರಿ ರಾಹುಲ್ ಬ್ಯಾನರ್ಜಿಯನ್ನು ಮೇಲಕ್ಕೆ ಎಳೆದು ತಂದು ಸಿಪಿಆರ್ ಮಾಡಿದರಾದರೂ ರಾಹುಲ್ ಬ್ಯಾನರ್ಜಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ರಾಹುಲ್ ಬ್ಯಾನರ್ಜಿ ಅವರ ಈ ಅಕಾಲಿಕ ಮತ್ತು ದುರಂತ ಅಂತ್ಯದಿಂದ ಬೆಂಗಾಲ್ ಬೆಳ್ಳಿತೆರೆ ಮತ್ತು ಕಿರುತೆರೆಗೆ ಸದ್ಯ ಬರಸಿಡಿಲು ಬಡಿದಂತಾಗಿದ್ದು, ಹಲವರು ರಾಹುಲ್ ಬ್ಯಾನರ್ಜಿ ಅವರ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸುತ್ತಿದ್ದಾರೆ. ರಾಹುಲ್ ಬ್ಯಾನರ್ಜಿ ಮೃತದೇಹ ದಿಗಾ ಆಸ್ಪತ್ರೆಯಲ್ಲಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಸದ್ಯ ವರದಿಯಾಗಿದೆ.

More from Filmibeat

English summary
What happened at Talsari? Get the real story behind Bengali actor Rahul Arunoday Banerjee’s tragic death. From the shooting of 'Bhole Baba Par Karega' to the fatal accident in the sea, we cover the full timeline and official reports from Digha.
Read more about: death tragedy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X