For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್ ಕುಮಾರ್, ಅಂಬರೀಶ್ ಬಗ್ಗೆ ಏನ್ ಹೇಳಿದ್ರು ಗೊತ್ತಾ?

  By Harshitha
  |

  ಅಂತೂ ರೆಬೆಲ್ ಸ್ಟಾರ್ ಅಂಬರೀಶ್ ಕಿರುತೆರೆಗೆ ಕಾಲಿಟ್ಟಿದ್ದಾರೆ. ಕಿರುತೆರೆಯ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಅಂಬರೀಶ್ ಮನರಂಜನಾ ವಾಹಿನಿಯಲ್ಲಿ ಕಾಣಿಸಿಕೊಂಡಿದ್ದಾರೆ.

  ಸುವರ್ಣ ವಾಹಿನಿಯ 'ಬೆಂಗಳೂರು ಬೆಣ್ಣೆ ದೋಸೆ' ಕಾರ್ಯಕ್ರಮದ ಚೊಚ್ಚಲ ಸಂಚಿಕೆಯಲ್ಲಿ ಭಾಗವಹಿಸಿ ಅಂಬರೀಶ್ ಬೆಣ್ಣೆ ದೋಸೆಯ ರುಚಿ ಸವಿಯುತ್ತಾ ಹಳೆ ನೆನಪುಗಳನ್ನು ಮೆಲುಕು ಹಾಕಿದ್ದಾರೆ. [ಅಬ್ಬಬ್ಬಾ ನೀವು ನೋಡದ ಅಂಬಿ.. ಖಂಡಿತ ಮಿಸ್ ಮಾಡ್ಕೋಬೇಡಿ]

  ''ಬುಲ್ ಬುಲ್ ಮಾತಾಡಕ್ಕಿಲ್ವಾ..'' ಮತ್ತು ''ಕುತ್ತೇ ಕನ್ವರ್ ನಹೀ..ಕನ್ವರ್ ಲಾಲ್ ಬೋಲೋ..'' ಈ ಎರಡು ಡೈಲಾಗ್ಸ್ ನ ಹೇಳಿ, 'ಬೆಂಗಳೂರು ಬೆಣ್ಣೆ ದೋಸೆ' ಕಾರ್ಯಕ್ರಮದಲ್ಲಿ ಡಾ.ರಾಜ್ ಕುಮಾರ್ ಜೊತೆಗಿನ ಅವರ ಒಡನಾಟ ಹೇಗಿತ್ತು ಅನ್ನೋದನ್ನ ಹಂಚಿಕೊಂಡಿದ್ದಾರೆ. ಮುಂದೆ ಓದಿ....

  ಅಂಬಿ ಬಗ್ಗೆ ಡಾ.ರಾಜ್ ಹೇಳಿದ್ದೇನು?

  ಅಂಬಿ ಬಗ್ಗೆ ಡಾ.ರಾಜ್ ಹೇಳಿದ್ದೇನು?

  ''ನನ್ನನ್ನು ಕಂಡರೆ ಜನ ನಮಸ್ಕರಿಸುತ್ತಿದ್ದರು. ಆಗ ನನಗೆ ಒಂದು ತರಹದ ಮುಜುಗರವಾಗುತ್ತಿತ್ತು. ಆದ್ರೆ ಅಂಬರೀಶ್ ಮಾತ್ರ ನನ್ನನ್ನು ಗೆಳೆಯನಂತೆ ನೋಡುತ್ತಿದ್ದರು. ಅದಕ್ಕಾಗಿಯೇ ನಾನು ಅವರನ್ನು ಮೇಲಿಂದ ಮೇಲೆ ಭೇಟಿಯಾಗುತ್ತಿದ್ದೆ'' ಎಂದು ಡಾ.ರಾಜ್ ಕುಮಾರ್ ಹೇಳಿದ್ದನ್ನ ಅಂಬರೀಶ್ 'ಬೆಂಗಳೂರು ಬೆಣ್ಣೆ ದೋಸೆ' ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.

  ವಿಷ್ಣುವರ್ಧನ್ ನೆನೆದು ಭಾವೋದ್ವೇಗ

  ವಿಷ್ಣುವರ್ಧನ್ ನೆನೆದು ಭಾವೋದ್ವೇಗ

  ಕುಚಿಕು ಗೆಳೆಯ ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೆನೆಯುತ್ತಾ ಅಂಬರೀಶ್ ಭಾವೋದ್ವೇಗರಾದರು.

  Bengaluru Benne Dose | Episode 1 | Promo 2

  ಬೆಂಗ್ಳೂರ್ ಬೆಣ್ಣೆ ದೋಸೆ ಕ್ಯಾಂಪ್ನಲ್ಲಿ ಮಂಡ್ಯದ ಗಂಡು..ಚಳಿ ಚಳಿ ಹಾಡಿಗೆ ಅಂಬಿ ಡಾನ್ಸ್....ಇದೇ ಭಾನುವಾರ ರಾತ್ರಿ 9ಕ್ಕೆ#Suvarna #BengaluruBenneDose #staytuned #ultimatefun

  Posted by Suvarna TV on Wednesday, October 7, 2015

  ಜಾಲಿ ಮಾಡಿದ ಅಂಬರೀಶ್

  ಸಂಚಿಕೆ ತುಂಬೆಲ್ಲಾ ಜಾಲಿಯಾಗಿ ಕಾಣಿಸಿಕೊಂಡ ಅಂಬರೀಶ್ ''ಚಳಿ ಚಳಿ ತಾಳೆನು ಈ ಚಳಿಯ'' ಎಂಬ ಹಾಡಿಗೆ ಸ್ಟೆಪ್ ಹಾಕಿದರು. ಜೊತೆಗೆ, ತಮ್ಮ ಫೇಮಸ್ ಡೈಲಾಗ್ ಗಳನ್ನು ಹೇಳಿದರು. ಅಲ್ಲದೆ, ಅಂಬಿಕಾ ಮತ್ತು ಜಯಮಾಲ ಜೊತೆ ನಟಿಸಿದ ಕ್ಷಣಗಳನ್ನು ಹೇಳಿ ರಂಜಿಸಿದ್ದಾರೆ.

  Bengaluru Benne Dose | Promo 6

  Get ready for a heavy dose of comedy!!Coming up on #Suvarna very soon.Stay tuned for more info. :-)#Suvarna #BengaluruBenneDose #Ultimatefun

  Posted by Suvarna TV on Thursday, September 10, 2015

  ಸಖತ್ ಬೆಣ್ಣೆ, ಸ್ವಲ್ಪ ಎಣ್ಣೆ - ಬೆಂಗಳೂರು ಬೆಣ್ಣೆ ದೋಸೆ

  ನಿರೂಪಕ, ನಟ ಅರುಣ್ ಸಾಗರ್ ಈ ಶೋನ ಸಾರಥಿ. ನಟಿ ನೀತು ಈ ಶೋನಲ್ಲಿ ಅರುಣ್ ಸಾಗರ್ ಅವರ ಪತ್ನಿಯಾಗಿ ನಟಿಸುತ್ತಿದ್ದಾರೆ. ಈ ಹೋಟೆಲ್ ನ ಮ್ಯಾನೇಜರ್ ಕೈಲಾಶ್, ಸುಂದರ ಹುಡುಗಿಯಾಗಿ ದೀಪಿಕಾ ದಾಸ್ ನಟಿಸುತ್ತಿದ್ದಾರೆ. ನರ್ಸ್ ಜಯಲಕ್ಷ್ಮೀ, ಅರುಣ್ ಸಾಗರ್ ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಂಟೋನಿ ಕಮಲ್ ಈ ಹೋಟೆಲ್ ನ ಶೆಫ್. ಪ್ರತಿನಿತ್ಯ ಈ ಹೋಟೆಲ್ ನಲ್ಲಿ ನಡೆಯುವ ಮಾತುಕತೆಗಳು ಹಾಸ್ಯರೀತಿಯಲ್ಲಿ ಬಿಂಬಿಸಿ ವೀಕ್ಷಕರಿಗೆ ಮನರಂಜನೆ ನೀಡುವುದು ಈ ಕಾರ್ಯಕ್ರಮದ ಉದ್ದೇಶ.

  Get ready for a heavy dose of comedy!!Coming up on #Suvarna very soon.#Suvarna #BengaluruBenneDose #Superfun #staytuned

  Posted by Suvarna TV on Tuesday, August 4, 2015

  ಆಕ್ಟೋಬರ್ 11 ರಿಂದ ಶುರು

  ರೆಬೆಲ್ ಸ್ಟಾರ್ ಅಂಬರೀಶ್ ಜೊತೆ 'ಬೆಂಗಳೂರು ಬೆಣ್ಣೆ ದೋಸೆ' ಇದೇ ಅಕ್ಟೋಬರ್ 11 ರಿಂದ ಪ್ರತಿ ಭಾನುವಾರ ರಾತ್ರಿ 9ಕ್ಕೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತದೆ.

  English summary
  New comedy show 'Bengaluru Benne Dose' is all set to go on air from October 11th. Kannada Actor Ambareesh has taken part in the First episode and has shared his memorable moments with Dr.Rajkumar and Dr.Vishnuvardhan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X