For Quick Alerts
  ALLOW NOTIFICATIONS  
  For Daily Alerts

  ಬೆಣ್ಣೆ ದೋಸೆ ತಿಂದು ಗಳಗಳನೆ ಅತ್ತ 'ಬುಲ್ ಬುಲ್' ರಚಿತಾ

  By Harshitha
  |

  ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಕಾರ್ಯಕ್ರಮ 'ಬೆಂಗಳೂರು ಬೆಣ್ಣೆ ದೋಸೆ'ಗೆ ವೀಕ್ಷಕರ ಪ್ರೀತಿಯ ಬೆಲೆ ವಾರವಾರವಾದಂತೆ ಏರುತ್ತಲೇ ಇದೆ.

  ಪ್ರತಿವಾರವೂ ಸ್ಯಾಂಡಲ್ ವುಡ್ ನ ಖ್ಯಾತ ನಟ-ನಟಿಯರು ಬೆಂಗಳೂರು ಬೆಣ್ಣೆ ದೋಸೆ ಹೋಟೆಲ್ ಗೆ ಆಗಮಿಸಿ ಕಾರ್ಯಕ್ರಮಕ್ಕೆ ಸಾಥ್ ನೀಡುತ್ತಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್, ಆಕ್ಷನ್ ಕ್ವೀನ್ ಮಾಲಾಶ್ರೀ ಈಗಾಗಲೇ ಬೆಣ್ಣೆ ದೋಸೆ ರುಚಿ ಸವಿದಿದ್ದಾರೆ. ['ಬೆಣ್ಣೆ ದೋಸೆ' ಹೋಟೆಲ್ ನಲ್ಲಿ ಮಾಲಾಶ್ರೀ ಆಟೋ ಸವಾರಿ]

  ಈ ವಾರ ಬೆಣ್ಣೆ ದೋಸೆ ಹೋಟೆಲ್ ಗೆ ಬರುತ್ತಿರುವವರು 'ಬುಲ್ ಬುಲ್' ಬೆಡಗಿ ರಚಿತಾ ರಾಮ್.

  ಎಂದಿನಂತೆ ಅರುಣ್ ಸಾಗರ್, ನರ್ಸ್ ಜಯಲಕ್ಷ್ಮಿ ಕಾರ್ಯಕ್ರಮದಲ್ಲಿ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಆದ್ರೆ, 'ಬೆಂಗಳೂರು ಬೆಣ್ಣೆ ದೋಸೆ' ಹೋಟೆಲ್ ಗೆ ಬಂದಿದ್ದ ರಚಿತಾ ರಾಮ್ ಕಣ್ಣೀರು ಹಾಕಿದ್ದಾರೆ.

  ನಗುವುದನ್ನು ಬಿಟ್ಟು ರಚಿತಾ ರಾಮ್ ಕಣ್ಣೀರಿಟ್ಟಿದ್ದು ಯಾಕೆ? ಅಂತ ತಿಳಿದುಕೊಳ್ಳಲು ಸುವರ್ಣ ವಾಹಿನಿಯ 'ಬೆಂಗಳೂರು ಬೆಣ್ಣೆ ದೋಸೆ' ಕಾರ್ಯಕ್ರಮದ ನಾಳಿನ (ಅಕ್ಟೋಬರ್ 25) ಸಂಚಿಕೆ (ರಾತ್ರಿ 9)ಕ್ಕೆ ವೀಕ್ಷಿಸಿ.

  English summary
  Kannada Actress Rachita Ram has taken part in Suvarna Channel's comedy show 'Bengaluru Benne Dose'. Watch the episode on October 25th 9pm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X