ನಟನೆಯ ಜೊತೆಗೆ ಡಾನ್ಸ್‌ನಲ್ಲೂ ಪಂಟರು ಈ ನಟಿಯರು!

By ಪ್ರಿಯಾ ದೊರೆ

ಕಿರುತೆರೆಯಲ್ಲಿ ಅಭಿನಯಿಸುವ ನಟ-ನಟಿಯರು ಸಖತ್ ಟ್ಯಾಲೆಂಟೆಡ್. ಕೇವಲ ನಟನೆಯಲ್ಲದೇ, ಅದರ ಜೊತೆಗೆ ಒಂದಲ್ಲಾ ಒಂದು ಕಲೆಯನ್ನು ಕರಗತ ಮಾಡಿಕೊಂಡಿರುತ್ತಾರೆ. ಧಾರಾವಾಹಿಗಳಲ್ಲಿ ನಟಿಸುತ್ತಾ ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿ ಕೆಲ ನಟಿಯರು ತಮ್ಮ ಕಲೆಯನ್ನು ಪಕ್ಕಕ್ಕಿಡಬೇಕಾಗುತ್ತದೆ. ಆದರೆ, ಕೆಲ ಕಲಾವಿದರು ನಟನೆಯ ಜೊತೆಗೂ ಕಲೆಯನ್ನು ಉಳಿಸಿಕೊಂಡಿರುತ್ತಾರೆ.

ಸಿನಿರಂಗಕ್ಕೂ ನೃತ್ಯಕ್ಕೂ ತುಂಬಾ ಹತ್ತಿರದ ನಂಟು ಇದ್ದೇ ಇದೆ. ಈ ಹಿಂದೆ ಸಿನಿಮಾಗಳಲ್ಲಿ ಡ್ಯಾನ್ಸ್ ನಟನೆಯ ಜೊತೆಗೆ ಭಾಗವಾಗಿತ್ತು. ಆದರೆ ಈಗ ಬದಲಾಗಿದೆ. ಕಿರುತೆರೆಯಲ್ಲಿ, ಧಾರಾವಾಹಿಗಳಲ್ಲೂ ಈಗ ಡ್ಯಾನ್ಸ್ ಅವಶ್ಯಕತೆಯಾಗಿದೆ.

ಇನ್ನು, ನಟ-ನಟಿಯರಿಗೆ ಡ್ಯಾನ್ಸ್ ಸಹಜವೂ ಹೌದು. ಬನ್ನಿ ನಾವೀಗ ಕನ್ನಡ ಕಿರುತೆರೆಯಲ್ಲಿ ನಟನೆಯ ಜೊತೆಗೆ ಡ್ಯಾನ್ಸ್ ಅನ್ನು ಕೂಡ ಕರಗತ ಮಾಡಿಕೊಂಡಿರುವ ನಟಿಯರ ಬಗ್ಗೆ ತಿಳಿಯೋಣ. ಹಾಗೆಯೇ ಯಾವ ನಟಿಯರು, ಯಾವ್ಯಾವ ನೃತ್ಯ ಪ್ರಕಾರಗಳಲ್ಲಿ ಪರಿಣಿತರು ಎಂಬುದನ್ನೂ ತಿಳಿಯೋಣ.

ಕಥಕ್ ಡ್ಯಾನ್ಸರ್ ಮಾನಸ ಜೋಶಿ!

ಕಥಕ್ ಡ್ಯಾನ್ಸರ್ ಮಾನಸ ಜೋಶಿ!

ಬಹುಪರಾಕ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ನಟಿ ಮಾನಸ ಜೋಶಿ ಅದ್ಭುತ ನೃತ್ಯಗಾರ್ತಿಯೂ ಹೌದು. ಮಾನಸ ಜೋಶಿ ಅವರು ಕಥಕ್ ನೃತ್ಯವನ್ನು ಕಲಿತಿದ್ದು, ಬೆಂಗಳೂರಿನಲ್ಲಿ ತಮ್ಮದೇ ಆದ ಒಂದು ಡ್ಯಾನ್ಸ್ ಕ್ಲಾಸ್ ಅನ್ನು ಕೂಡ ನಡೆಸುತ್ತಿದ್ದಾರೆ. ಬಾಲ್ಯದಿಂದಲೂ ನೃತ್ಯದತ್ತ ವಿಶೇಷ ಒಲವಿದ್ದ ಮಾನಸ ಜೋಶಿ, ತಾವು ಕಲಿತ ಕಲಯನ್ನು ಇನ್ನೊಬ್ಬರಿಗೆ ಕಲಿಸುತ್ತಿದ್ದಾರೆ. ಕೆಲ ಧಾರಾವಾಹಿಗಳಲ್ಲಿ ಅಭಿನಯಿಸಿದ್ದು, ಲಾಸ್ಟ್ ಬಸ್', ಕಿರಗೂರಿನ ಗಯ್ಯಾಳಿಗಳು', ಹಜ್ಜ್', ಕೌದಿ' ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

ನೃತ್ಯಗಾರ್ತಿ ಪ್ರಥಮಾ ಪ್ರಸಾದ್!

ನೃತ್ಯಗಾರ್ತಿ ಪ್ರಥಮಾ ಪ್ರಸಾದ್!

ಹಿರಿಯ ನಟಿ ವಿನಯಾ ಪ್ರಸಾದ್ ಅವರ ಪುತ್ರಿ ಪ್ರಥಮಾ ಪ್ರಸಾದ್ ಕೂಡ ನಟಿ. ಕಿರುತೆರೆಯಲ್ಲಿ ಕೆಲ ಧಾರಾವಾಹಿಗಳಲ್ಲಿ ಮಿಂಚಿದ್ದು, ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ. ಪ್ರಥಮಾ ಪ್ರಸಾದ್ ಅವರು ಕಥಕ್ ಕಲಾವಿದೆಯಾಗಿದ್ದಾರೆ. ಹಲವು ವೇದಿಕೆಗಳಲ್ಲಿ ಪ್ರಥಮಾ ಪ್ರಸಾದ್ ಅವರು ನೃತ್ಯ ಪ್ರದರ್ಶನವನ್ನು ನೀಡಿದ್ದಾರೆ. ಇವರ ಪತಿಯೂ ಕೂಡ ಡ್ಯಾನ್ಸರ್ ಆಗಿದ್ದು, ಇಬ್ಬರು ಶೋಗಳನ್ನು ನೀಡುತ್ತಿರುತ್ತಾರೆ. 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಪ್ರಥಮಾ ಪ್ರಸಾದ್ ನಟಿಸಿದ್ದರು.

ನಟಿ, ನಿರೂಪಕಿ ಈ ಡ್ಯಾನ್ಸರ್ ಸುಷ್ಮಾ ರಾವ್!

ನಟಿ, ನಿರೂಪಕಿ ಈ ಡ್ಯಾನ್ಸರ್ ಸುಷ್ಮಾ ರಾವ್!

'ಗುಪ್ತಗಾಮಿನಿ' ಧಾರಾವಾಹಿ ಮೂಲಕ ಇಂದಿಗೂ ಭಾವನಾ ಎಂದೇ ಖ್ಯಾತರಾಗಿರುವ ಸುಷ್ಮಾ ರಾವ್ ನಟನೆಗಿಂತಲೂ ನಿರೂಪಣೆ ಮಾಡಿದ್ದೇ ಹೆಚ್ಚು. ಯಾರಿಗುಂಟು ಯಾರಿಗಿಲ್ಲ. ಮನೆ ಮನೆ ಮೀನಾಕ್ಷಿ, ಜೀನ್ಸ್ ರಿಯಾಲಿಟಿ ಶೋ ಸೇರಿದಂತೆ ಸೀರಿಯಲ್ ಸಂತೆಗಳನ್ನೂ ನಿರೂಪಣೆಯನ್ನು ಮಾಡಿಕೊಂಡು ಬಂದಿರುವ ಸುಷ್ಮಾ ರಾವ್ ಡ್ಯಾನ್ಸರ್ ಕೂಡಾ ಹೌದು. ಸುಷ್ಪಾ ರಾವ್ ಅವರು ಭರತನಾಟ್ಯ ನೃತ್ಯಗಾರ್ತಿ. ಆದರೆ ಸುಷ್ಮಾ ರಾವ್ ಡ್ಯಾನ್ಸರ್ ಎಂಬ ವಿಚಾರ ಹಲವರಿಗ ತಿಳಿದಿಲ್ಲ.

ಬೆಲ್ಲಿ ಡಾನ್ಸ್ ಪ್ರವೀಣೆ ವೈಷ್ಣವಿ ಗೌಡ!

ಬೆಲ್ಲಿ ಡಾನ್ಸ್ ಪ್ರವೀಣೆ ವೈಷ್ಣವಿ ಗೌಡ!

ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ಡ್ಯಾನ್ಸರ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ವೈಷ್ಣವಿ ಗೌಡ ಅವರು ಬೆಲ್ಲಿ ಡ್ಯಾನ್ಸ್ ಕಲಿತಿದ್ದಾರೆ. ಇವರಿಗೆ ಡ್ಯಾನ್ಸ್ ಎಂದರೆ ತುಂಬಾ ಇಷ್ಟ. ಭರತನಾಟ್ಯವನ್ನೂ ಸಹ ಮಾಡುವ ವೈಷ್ಣವಿ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿದ್ದಾಗಲೂ ಡ್ಯಾನ್ಸ್ ಮಾಡುತ್ತಿದ್ದರು. ಇನ್ನು ಆಗಾಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿವಿಧ ಪ್ರಾಕಾರಗಳಲ್ಲಿ ಡ್ಯಾನ್ಸ್ ಮಾಡಿ ಅಪ್ ಲೋಡ್ ಮಾಡುತ್ತಿದ್ದಾರೆ.

More from Filmibeat

English summary
Kannada Serial Actress the Best dancers,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X