'ದಿವಾಕರ್'ಗೆ ಅವಾರ್ಡ್, ಜೆ.ಕೆಗೆ 'ಕಳಪೆ' ಬೋರ್ಡ್.!
ಬಿಗ್ ಬಾಸ್ ಮನೆಯಲ್ಲಿ ಪ್ರತಿವಾರ ಲಕ್ಷುರಿ ಬಜೆಟ್ ಟಾಸ್ಕ್ ಮುಗಿದ ಮೇಲೆ ದೊಡ್ಡ ತಲೆ ನೋವಾಗುವುದು ಯಾರು ಬೆಸ್ಟ್ ಪರ್ಫಾಮರ್ ಮತ್ತು ಯಾರು ಕಳಪೆ ಪರ್ಫಾಮರ್ ಎನ್ನುವುದು.
ಈ ವಾರವೂ ಆ ಗೊಂದಲ, ಕುತೂಹಲ ಪ್ರೇಕ್ಷಕರನ್ನ ಕಾಡಿತ್ತು. ಮನೆಯ ಕ್ಯಾಪ್ಟನ್ ಆಗಿದ್ದ ಚಂದನ್ ಶೆಟ್ಟಿ ಈ ವಾರ ಯಾರಿಗೆ ಕಳಪೆ ಬೋರ್ಡ್ ಹಾಕಲಿದ್ದಾರೆ ಎಂಬುದು ಶುಕ್ರವಾರ ಮನೆಯ ಸದಸ್ಯರ ತಲೆಯಲ್ಲಿ ಪ್ರಶ್ನೆಯಾಗಿತ್ತು.

ಬಿಗ್ ಬಾಸ್ ಕೊಟ್ಟಿದ್ದ ಸೀಕ್ರೆಟ್ ಟಾಸ್ಕ್ ನಲ್ಲಿ ಸೋತ ಕಾರಣಕ್ಕೆ ಕಾರ್ತಿಕ್ ಜಯರಾಂಗೆ ಚಂದನ್ ಶೆಟ್ಟಿ ಕಳಪೆ ಬೋರ್ಡ್ ಹಾಕಿದರು. ಅದಕ್ಕೆ ಸೂಕ್ತ ಕಾರಣವನ್ನ ಕೂಡ ಕೊಟ್ಟರು.

ಇನ್ನು ಈ ವಾರದ ಬೆಸ್ಟ್ ಪರ್ಫಾಮರ್ ಎಂದು ದಿವಾಕರ್ ಅವರನ್ನ ಚಂದನ್ ಶೆಟ್ಟಿ ಆಯ್ಕೆ ಮಾಡಿದರು. ಈ ನಿರ್ಧಾರವನ್ನ ಮನೆಯ ಸದಸ್ಯರು ಕೂಡ ಖುಷಿ ಖುಷಿಯಿಂದಲೇ ಒಪ್ಪಿಕೊಂಡರು.
More from Filmibeat
English summary
Bigg Boss kannada 5: Captain Chandan Shetty Gives Best Performer to Diwakar and Wrost Performer to Jk.
bigg boss kannada 5 karthik jayram bigg boss kannada news bigg boss tv colors channel ಬಿಗ್ ಬಾಸ್ ಕನ್ನಡ 5 ಕಾರ್ತಿಕ್ ಜಯರಾಂ ಬಿಗ್ ಬಾಸ್ ಟಿವಿ ಕಲರ್ಸ್ ವಾಹಿನಿ


Click it and Unblock the Notifications











