ಯುಗಾದಿ ಸಂಭ್ರಮದಲ್ಲಿ ಮಿಂದೆದ್ದ ಕಿರುತೆರೆ ನಟಿಯರು ಇವರೇ ನೋಡಿ
ನಿನ್ನೆ (ಏಪ್ರಿಲ್ 9) ರಾಜ್ಯಾದ್ಯಂತ ಯುಗಾದಿ ಸಂಭ್ರಮ ಮನೆ ಮಾಡಿತ್ತು. ಬೆಲ್ಲ ಬೆಲ್ಲ ತಿಂದವರು ಇಂದು (ಏಪ್ರಿಲ್ 10) ಹೊಸ ತೊಡಕು ಮೂಡಿನಲ್ಲಿದ್ದಾರೆ. ಈ ಹೊಸ ವರ್ಷದಂದು ಕಿರುತೆರೆಯ ಪ್ರತಿ ವಾಹಿನಿ ಅದರದೇ ರೀತಿಯಲ್ಲಿ ಸಂಭ್ರಮಿಸಿದೆ.
ಹಾಗೆ ಹಲವಾರು ಕಿರುತೆರೆ ನಟಿಯರು ತಮ್ಮ ಪ್ರೇಕ್ಷಕರಿಗೆ ಹಾಗೂ ಪ್ರೀತಿಯ ಅಭಿಮಾನಿಗಳಿಗೆ, ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ.

ಕೃತಿಕಾ ರವೀಂದ್ರ
'ರಾಧಾ ಕಲ್ಯಾಣ' ಖ್ಯಾತಿಯ ನಟಿ, ಪ್ರಸ್ತುತ ಜೀ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಭೂಮಿಗೆ ಬಂದ ಭಗವಂತ' ಧಾರವಾಹಿಯ ಪ್ರಮುಖ ಪಾತ್ರಧಾರಿ ನಟಿ ಕೃತಿಕಾ ರವೀಂದ್ರ ಅವರು ಬೇವು ಬೆಲ್ಲದ ತಟ್ಟೆಯನ್ನು ಹಿಡಿದುಕೊಂಡು ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಯುಗಾದಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ನಮ್ರತಾ ಗೌಡ
'ನಾಗಿಣಿ' ಹಾಗೂ 'ಬಿಗ್ ಬಾಸ್ ಸೀಸನ್ 10' ಸ್ಪರ್ಧಿ ನಟಿ ನಮೃತಾ ಗೌಡ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫಾಲೋವರ್ಸ್‌ಗೆ ಯುಗಾದಿ ಹಬ್ಬದ ಶುಭ ಹಾರೈಸಿದ್ದಾರೆ. "ಯುಗಾದಿಯ ಶುಭ ಸಂದರ್ಭದಲ್ಲಿ ನಿಮ್ಮ ಜೀವನವು ಸುಖ ಸಂತೋಷ, ಸಮೃದ್ಧಿ ಹಾಗೂ ಯಶಸ್ಸಿನಿಂದ ತುಂಬಲಿ ಎಂದು ಹಾರೈಸುತ್ತೇನೆ. ಯುಗಾದಿ ಹಬ್ಬದ ಶುಭಾಶಯಗಳು!" ಎಂದು ಬರೆದುಕೊಂಡಿರುವ ಈಕೆ ಸಾಂಪ್ರದಾಯಿಕ ಉಡುಗೆ ಸೀರೆಯಲ್ಲಿನ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

ನೇಹಾ ಗೌಡ
'ಲಕ್ಷ್ಮೀ ಬಾರಮ್ಮ' ಹಾಗೂ ಇತ್ತೀಚೆಗೆ ಮುಕ್ತಾಯಗೊಂಡ 'ನಮ್ಮ ಲಚ್ಚಿ' ಧಾರಾವಾಹಿ ಖ್ಯಾತಿಯ ನಟಿ ನೇಹಾ ಗೌಡ ಯುಗಾದಿ ಹಬ್ಬಕ್ಕೆ ಶುಭ ಹಾರೈಸಿದ್ದಾರೆ. ಕನ್ನಡ ಕಿರುತೆರೆ ಗೊಂಬೆ ಎಂದು ಹೆಸರು ಮಾಡಿರುವ ನಟಿ ನೇಹಾ ಗೌಡ ಅವರು ಬಿಳಿ ಬಣ್ಣದ ಚೂಡಿದಾರ್ ಧರಿಸಿ, ನೃತ್ಯಗಾರ್ತಿಯಂತೆ ಪೋಸ್ ಕೊಡುತ್ತಾ ಇರುವ ಫೋಟೋ ಒಂದನ್ನು ಶೇರ್ ಮಾಡಿ ಎಲ್ಲರಿಗೂ ಯುಗಾದಿ ಹಬ್ಬದ ಶುಭ ಹಾರೈಸಿದ್ದಾರೆ.

ಶಾಸ್ತ್ರಿ, ದಿಶಾ ಮದನ್, ದೀಪಕ್
ಸದ್ಯಕ್ಕೆ ಬಹಳ ಪಾಪ್ಯುಲಾರಿಟಿ ಪಡೆದಿರುವ 'ಲಕ್ಷ್ಮಿ ನಿವಾಸ' ಧಾರಾವಾಹಿಯ ನಟರಾದ ಶಾಸ್ತ್ರಿ ದಿಶಾ ಮದನ್, ಹಾಗೂ ದೀಪಕ್ ಅವರು ಹಸಿರು ಬಣ್ಣದ ಹುಡುಗಿ ತೊಟ್ಟು ಜೊತೆಯಾಗಿ ನಿಂತು ಯುಗಾದಿ ಹಬ್ಬಕ್ಕೆ ಶುಭ ಹಾರೈಸಿದ್ದಾರೆ. ಈ ವಿಶೇಷ ಫೋಟೋವನ್ನು ಶೇರ್ ಮಾಡಿಕೊಂಡಿರುವ ಅವರು " ಎಲ್ಲೆಡೆ ಹಸಿರಾಗಲಿ, ಭೂಮಿ ತಂಪಾಗಲಿ, ಸಕಲ ಜೀವಿಯೂ ಸಂತೃಪ್ತಿಯಿಂದಿರುವಂತಾಲಿ, ಆಗಾಗ ಕಹಿಯು ಬರಲಿ, (ಹೆಚ್ಚು ಬೇಡ) ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು." ಎಂದು ಹಾರೈಸಿ ಬರೆದುಕೊಂಡಿದ್ದಾರೆ.

ಇಶಾನಿ
ಕನ್ನಡ ಬಿಗ್ ಬಾಸ್ ಸೀಸನ್ 10 ಖ್ಯಾತಿಯ ರಾಪರ್ ಇಶಾನಿ, ಸೀರೆಯಲ್ಲಿರುವ ಒಂದು ಫೋಟೋ ಶೇರ್ ಮಾಡಿಕೊಂಡು ಯುಗಾದಿ ಹಬ್ಬಕ್ಕೆ ಶುಭ ಹಾರೈಸಿದ್ದಾರೆ. "ಯುಗಾದಿಯ ಹೊಸ ಬೆಳಕು ನಿಮ್ಮ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ ಯುಗಾದಿ ಹಬ್ಬದ ಶುಭಾಶಯಗಳು. " ಎಂದಿದ್ದಾರೆ.

ಅನುಪಮಾ ಗೌಡ
ಹಲವು ಧಾರವಾಹಿಗಳು ಹಾಗೂ ಇತ್ತೀಚಿನ ಕೆಲವು ರಿಯಾಲಿಟಿ ಶೋಗಳ ನಟಿ ನಿರೂಪಕಿ ಅನುಪಮಾ ಗೌಡ ಅವರು ಯುಗಾದಿ ಹಬ್ಬಕ್ಕೆ ಶುಭ ಹಾರೈಸಿದ್ದಾರೆ. ನಗುನಗುತ್ತಾ ನಿಂತಿರುವ ತಮ್ಮ ಫೋಟೋ ಒಂದನ್ನು ಶೇರ್ ಮಾಡಿಕೊಂಡಿರುವ ಅವರು, ಸೀರೆಯಲ್ಲಿ ಬಹಳ ಮುದ್ದಾಗಿ ಕಾಣುತ್ತಿದ್ದಾರೆ. "ಈ ಯುಗಾದಿ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಬದುಕಲ್ಲಿ ಸಂತೋಷ ಹಾಗೂ ನೆಮ್ಮದಿಯನ್ನು ತರಲಿ" ಎಂದು ತಮ್ಮ ಅಭಿಮಾನಿಗಳಿಗೆ ಹಾಗೂ ಪ್ರೇಕ್ಷಕರಿಗೆ ಹಾರೈಸಿದ್ದಾರೆ.

ಕಾವ್ಯಶ್ರೀ ಗೌಡ
'ಮಂಗಳ ಗೌರಿ' ಧಾರಾವಾಹಿ ಖ್ಯಾತಿಯ ಕಾವ್ಯಶ್ರೀ ಗೌಡ ಅವರು ಕೂಡಾ ಯುಗಾದಿಯ ಶುಭಾಶಯಗಳನ್ನು ತಿಳಿಸಿದ್ದಾರೆ. ಗುಲಾಬಿ ಬಣ್ಣದ ಸೀರೆ ತೊಟ್ಟಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡು ನಾಡಿನ ಸಮಸ್ತ ಕನ್ನಡಿಗರಿಗೆ ಯುಗಾದಿ ಹಬ್ಬದ ಶುಭಾಶಯಗಳು" ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











