'ಮರಳಿ ಮನಸಾಗಿದೆ' & 'ಬೆಟ್ಟದ ಹೂ' ಮಹಾಸಂಚಿಕೆಯಲ್ಲಿ ಒಂದಾಗುತ್ತಾರಾ ಈ ಜೋಡಿಗಳು!
ರಾಹುಲ್ ಮತ್ತು ವಿಕ್ರಾಂತ್ ಸಂಸಾರದಲ್ಲಿ ಗೊಂದಲ ಎದ್ದಿದೆ. ಅವರವರ ಹೆಂಡತಿಯರು ಮನೆ ಬಿಟ್ಟು ಪಿಜಿ ಸೇರಿದ್ದಾರೆ. ಇನ್ಸ್ಪೆಕ್ಟರ್ ವಿಕ್ರಾಂತ್ ಮತ್ತು ಸ್ಪಂದನಾ ನಡುವಿನ ಸಮಸ್ಯೆ ಬೇರೆ ರೀತಿಯದ್ದೇ ಆಗಿದೆ. ಇದೀಗ ಮಹಾಸಂಗಮ ಏರ್ಪಟ್ಟಿದೆ.
'ಮರಳಿ ಮನಸಾಗಿದೆ' ಹಾಗೂ 'ಬೆಟ್ಟದ ಹೂ' ಧಾರಾವಾಹಿಯಲ್ಲಿ ಒಂದು ಗಂಟೆಯ ಸಂಚಿಕೆ ಬರಲಿದೆ. ಅದು ಎರಡು ವಾರಗಳ ಕಥೆಯಾಗಲಿದೆ. ಈ ಮಹಾಸಂಗಮದಲ್ಲಿ ಶತ್ರುಗಳು ಹೆಂಡತಿಯರನ್ನು ಟಾರ್ಗೆಟ್ ಮಾಡಿದ್ದಾರೆ. ಈ ದಾಳಿ ವೇಳೆಯೇ ಇಬ್ಬರ ಸಂಸಾರ ಸರಿಯಾಗಲಿದೆಯಾ ಎಂಬ ಕುತೂಹಲವಿದೆ.
ಸ್ಪಂದನಾ ಸ್ವಾಭಿಮಾನದ ಹುಡುಗಿ. ಹೂವಿ ಕೂಡ ಸ್ವಾಭಿಮಾನ ಅಡವಿಟ್ಟು ಬದುಕುವವಳಲ್ಲ. ಇಬ್ಬರದ್ದು ಒಂದೊಂದು ರೀತಿಯ ಸಮಸ್ಯೆ. ಈ ಸಮಸ್ಯೆಯಿಂದಾಗಿ ಇಬ್ಬರು ಒಂದೇ ಪಿಜಿಯಲ್ಲಿ ಜೊತೆಯಾಗಿದ್ದಾರೆ. ಯಾವುದೇ ಕಾರಣವಿಲ್ಲದೆ ಯಾರೊಬ್ಬರ ಪರಿಚಯವೂ ಆಗಲ್ಲ. ಮುಂದೊಂದು ದಿನ ಇಬ್ಬರ ಸಂಸಾರ ಸರಿಯಾಗುವ ಕಾರಣಕ್ಕಾಗಿಯೇ ಹೂವಿ ಮತ್ತು ಸ್ಪಂದನಾ ಒಂದಾಗಿದ್ದಾರೆ. ಆದರೆ ಇಬ್ಬರ ನಡುವೆ ಬರುವ ಆ ಶತ್ರು ಯಾರೆಂದು ತಿಳಿಯುವ ಕುತೂಹಲ ಪ್ರೇಕ್ಷಕರದ್ದಾಗಿದೆ.

ಸ್ಪಂದನಾ-ವಿಕ್ರಾಂತ್ ದೂರಾಗಿದ್ದು ಯಾಕೆ?
ಮನೆಯವರಿಗೆ ಒಳ್ಳೆಯದಾಗಲಿ, ನಿಜವಾದ ಪ್ರೀತಿ ಒಂದಾಗಲಿ ಎಂಬ ಕಾರಣಕ್ಕೆ ಸ್ಪಂದನಾ ಸಾಕಷ್ಟು ಶ್ರಮ ವಹಿಸಿ ಅಜಯ್ ಮತ್ತು ಸಾಹಿತ್ಯಳನ್ನು ಒಂದು ಮಾಡಿದಳು. ಆದರೆ ಇದನ್ನೇ ದೊಡ್ಡದು ಮಾಡಿ, ಮನೆಯವರೆಲ್ಲಾ ಸ್ಪಂದನಾಳನ್ನು ನಿಂದಿಸಿದ್ದರು. ಅಷ್ಟೇ ಅಲ್ಲ ವಿಕ್ರಾಂತ್ ಕೂಡ ಸ್ಪಂದನಾಳ ಮೇಲೆಯೇ ಕೋಪಗೊಂಡಿದ್ದ. ಮನೆ ಬಿಟ್ಟು ಹೋಗು ಎಂದಾಗ ಸ್ಪಂದನಾಗೆ ಏನು ಮಾಡಬೇಕೆಂಬುದು ತೋಚದೆ ದುಃಖದಲ್ಲಿಯೇ ದೂರಾದಳು. ಮನಸ್ಸು ನಂತರದಲ್ಲಿ ಕಲ್ಲಾಗಿತ್ತು. ಆದರೆ ಬಳಿಕ ವಿಕ್ರಾಂತ್‌ಗೆ ಆಕ್ಸಿಡೆಂಟ್ ಆದ ಮೇಲೆಯೇ ಸ್ಪಂದನಾಳ ಮನಸ್ಸು ತಿಳಿಯಾಗಿದ್ದು. ಆದರೂ ವಿಕ್ರಾಂತ್ ಜೊತೆ ಸೇರದೆ ಪಿಜಿಯಲ್ಲಿ ಉಳಿದುಕೊಂಡಿದ್ದಾಳೆ. ಆದರೆ ಇವರ ಮೇಲೆ ಶತ್ರುಗಳ ಕಣ್ಣು ಬಿದ್ದಿದೆ.

ನೋವಾದಾಗ ಹೊರ ಬಂದ ಹೂವಿ
ಹೂವಿ ಮತ್ತು ರಾಹುಲ್ ಪರಿಸ್ಥಿತಿಯ ಕೈಗೊಂಬೆಯಾಗಿ ಮದುವೆಯಾದವರು. ಬಳಿಕ ತವರು ಮನೆ ಮತ್ತು ಗಂಡನ ಮನೆಯವರಿಗೆ ಸತ್ಯಾಂಶ ತಿಳಿಯಬಾರದು ಎಂದು ಹೂವಿ ಕೆಲಸದವಳಾಗಿಯೇ ರಾಹುಲ್ ಮನೆಯಲ್ಲಿ ಮುಂದುವರೆದಳು. ಆದರೆ ಹಳ್ಳಿಗೆ ವಾಪಾಸ್ಸಾದಾಗ ಇಬ್ಬರ ನಡುವೆ ಪ್ರೀತಿ ಬೆರೆತಿತ್ತು. ಮತ್ತೆ ಬೆಂಗಳೂರಿಗೆ ವಾಪಾಸ್ಸಾದವಳು ಪಿಜಿಯಲ್ಲಿ ಉಳಿದುಕೊಂಡಿದ್ದಾಳೆ. ಮನೆಗೆ ಹೂವಿಯನ್ನು ವಾಪಾಸ್ಸು ಕರೆತರಬೇಕೆಂದು ರಾಹುಲ್ ಪ್ರಯತ್ನ ಮಾಡುತ್ತಿದ್ದಾನೆ. ಈ ನಡುವೆ ಹೂವಿಯ ಮೇಲೂ ಶತ್ರುಗಳ ಕಣ್ಣು ಬಿದ್ದಿದೆ.

ಆ ಶತ್ರು ಹುಡುಕಾಟದಲ್ಲಿ ಪ್ರೇಕ್ಷಕರು
ಯಾವುದೇ ಧಾರಾವಾಹಿಯಾದರೂ ಸ್ಪೆಷಲ್ ಎಂಟ್ರಿಗೆ ಸ್ಪೆಷಲ್ ಕ್ಯೂರಿಯಾಸಿಟಿಯನ್ನೇ ಹುಟ್ಟಿಸುತ್ತದೆ. ಸ್ಪೆಷಲ್ ಪ್ರೋಮೋ ಒಂದನ್ನು ಬಿಡುತ್ತದೆ. ಅದರಂತೆ ಹೂವಿ ಮತ್ತು ಸ್ಪಂದನಾ ಮೇಲೆ ಅಟ್ಯಾಕ್ ಮಾಡುವ ಶತ್ರುವಿನ ಬಗ್ಗೆಯೂ ಸ್ಟಾರ್ ಸುವರ್ಣ ಸಣ್ಣ ಕ್ಲೂ ಬಿಟ್ಟುಕೊಟ್ಟಿದೆ. ಪ್ರೋಮೋದಲ್ಲಿ ರಾಣಿಯಂತಿರುವ ವಿಡಿಯೋ ಹರಿಬಿಟ್ಟಿದೆ. ಇದು ನೋಡುಗರ ತಲೆಗೆ ಹುಳ ಬಿಟ್ಟಂತಾಗಿದೆ.

ಕೃಷಿ ತಾಪಂಡ ಎಂಟ್ರಿ ಎಲ್ಲವನ್ನು ಸರಿ ಮಾಡುತ್ತಾ?
ಸ್ಟಾರ್ ಸುವರ್ಣ ತನ್ನ ಅಧಿಕೃತ ಖಾತೆಯಲ್ಲಿ ಮಹಾಸಂಗಮಕ್ಕೆ ಸಂಬಂಧಿಸಿದಂತೆ ಎರಡು ಪ್ರೋಮೋಗಳನ್ನು ಬಿಟ್ಟಿದೆ. ಒಂದರಲ್ಲಿ ಫಾಸ್ಟ್ ಆಗಿ ಮೂವ್ ಆಗುವ ರಾಣಿ ಮತ್ತು ಅದರ ಹಿಂದೆ ರಿಯಲ್ ಫೋಟೋ ಇದೆ. ಅದನ್ನು ಸೂಕ್ಷ್ಮವಾಗಿ ಗಮನಿಸಿರುವ ಪ್ರೇಕ್ಷಕರು ಇದು ಕೃಷಿ ತಾಪಂಡ ಎಂದೇ ಉಲ್ಲೇಖಿಸುತ್ತಿದ್ದಾರೆ. ಇನ್ನೊಂದು ವಿಡಿಯೋದಲ್ಲಿ ವಾಯ್ಸ್ ಮಾತ್ರ ಬಿಡಲಾಗಿದೆ. ಒಳ್ಳೆ ಗಂಡಂದಿರ ವೀಕ್ನೆಸ್ ಯಾವತ್ತು ಮುದ್ದಿನ ಹೆಂಡತಿಯರೇ ಆಗಿರುತ್ತಾರೆ. ಎಲ್ಲಿ ಸ್ವಿಚ್ ಹೊತ್ತಿದರೆ ಎಲ್ಲಿ ಬಲ್ಪ್ ಆನ್ ಆಗುತ್ತೆ ಅನ್ನೋದು ಗೊತ್ತಿದೆ ಎಂಬ ಆ ಶತ್ರುವಿನ ಧ್ವನಿ ಕೂಡ ಎಲ್ಲರ ತಲೆಕೆಡಿಸಿದೆ.


Click it and Unblock the Notifications











