For Quick Alerts
  ALLOW NOTIFICATIONS  
  For Daily Alerts

  'ಬೆಟ್ಟದ ಹೂ' & 'ಮರಳಿ ಮನಸಾಗಿದೆ' ಧಾರಾವಾಹಿಯಲ್ಲಿ ಮೋನಿಕಾ ಮೇನಿಯಾ..!

  By ಎಸ್ ಸುಮಂತ್
  |

  ಸ್ಟಾರ್ ಸುವರ್ಣದಲ್ಲೀಗ ಮೋನಿಕಾ ಮೇನಿಯಾ ಶುರುವಾಗಿದೆ. 'ಬೆಟ್ಟದ ಹೂ' ಮತ್ತು 'ಮರಳಿ ಮನಸ್ಸಾಗಿದೆ' ಧಾರಾವಾಹಿ ಮಹಾಸಂಗಮ ಏರ್ಪಟ್ಟಿದೆ. ಈ ಸಂಗಮದಲ್ಲಿ ಎರಡು ಜೋಡಿಗಳು ಒಂದಾಗಲಿದೆ. ಅದು ವಿಕ್ರಾಂತ್ ಮತ್ತು ಸ್ಪಂದನಾ, ಹೂವಿ ಮತ್ತು ರಾಹುಲ್. ಸದ್ಯ ಯಾವುದೋ ಸಮಸ್ಯೆಯಿಂದ ಎರಡು ಜೋಡಿಗಳು ದೂರವಾಗಿದ್ದಾರೆ. ಆದರೆ ಮಹಾಸಂಗಮದಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದ ಎರಡು ಜೋಡಿಗಳು ಒಂದಾಗಲಿವೆ.

  ವಿಕ್ರಾಂತ್ ಮನೆಗೆ ಚಕ್ರವರ್ತಿ ಕುಟುಂಬದವರು ಬಂದಿದ್ದಾರೆ. ಸ್ಪಂದನಾ ಮತ್ತು ಹೂವಿ ಈ ಮೊದಲೇ ಪಿಜಿಯಲ್ಲಿ ಫ್ರೆಂಡ್ಸ್ ಆಗಿದ್ದರಿಂದ ಮಾರ್ಕೆಟ್‌ಗೆ ಜೊತೆಗೆ ಹೋಗಿದ್ದಾರೆ. ಆದರೆ ಅವರನ್ನೇ ಹಿಂಬಾಲಿಸಿದ್ದು, ರೌಡಿಗಳು ಅಟ್ಯಾಕ್ ಮಾಡಿದ್ದಾರೆ. ಇಬ್ಬರನ್ನು ಕಿಡ್ನ್ಯಾಪ್ ಮಾಡಿ ಅಜ್ಞಾತ ಸ್ಥಳದಲ್ಲಿರಿಸಿದ್ದಾರೆ. ಆ ಕಡೆ ವಿಕ್ರಾಂತ್ & ರಾಹುಲ್ ಟೆನ್ಶನ್ ಆಗಿದ್ದಾರೆ.

  ಟ್ರಿಪ್‌ನಲ್ಲಿ ಪುಟ್ಟಕ್ಕನ ಮಕ್ಕಳು & ಬಾವಿ ಅಳಿಯಂದಿರ ಮೋಜು, ಮಸ್ತಿ..!ಟ್ರಿಪ್‌ನಲ್ಲಿ ಪುಟ್ಟಕ್ಕನ ಮಕ್ಕಳು & ಬಾವಿ ಅಳಿಯಂದಿರ ಮೋಜು, ಮಸ್ತಿ..!

  ಡ್ರಗ್ಸ್ ವಿಚಾರದಲ್ಲಿ ಕಿಡ್ನ್ಯಾಪ್ ಮಾಡಿದರಾ?

  ಡ್ರಗ್ಸ್ ವಿಚಾರದಲ್ಲಿ ಕಿಡ್ನ್ಯಾಪ್ ಮಾಡಿದರಾ?

  ಸದ್ಯ ಇನ್ಸ್‌ಪೆಕ್ಟರ್ ವಿಕ್ರಾಂತ್ ಮೇಲೆ ಮೋನಿಕಾ ಕೆಂಗಣ್ಣು ಬಿದ್ದಿದೆ.‌ ಮೊದಲೇ ಸೀನಿಯರ್ ಆಫೀಸರ್. ಮೋನಿಕಾಳಿಗೆ ಸಂಬಂಧಿಸಿದ ದೊಡ್ಡ ಡ್ರಗ್ಸ್ ಮಾಫಿಯಾವನ್ನೇ ಸೀಜ್ಹ್ ಮಾಡಿದ್ದಾನೆ. ಇದು ಮೋನಿಕಾಗೆ ನುಂಗಲಾರದ ತುತ್ತಾಗಿದೆ. ಆ ಡ್ರಗ್ಸ್ ಹೇಗಾದರೂ ವಾಪಾಸ್ ಪಡೆಯಬೇಕೆಂದು ಹಠ ತೊಟ್ಟ ಮೋನಿಕಾ, ನೇರ ಟಾರ್ಗೆಟ್ ಮಾಡಿದ್ದು ವಿಕ್ರಾಂತ್ ಹೆಂಡತಿಯನ್ನು. ಅದೆ ವೇಳೆ ಸಿಕ್ಕಿಬಿದ್ದಿದ್ದು ಹೂವಿ. ಈಗ ಇಬ್ಬರು ಜೀವಂತವಾವಿ ಉಳಿಯಬೇಕೆಂದರೆ ಡ್ರಗ್ಸ್ ವಾಪಾಸ್ ಕೊಡು ಎಂದು ಕೇಳುತ್ತಿದ್ದಾಳೆ.

  ವಿಕ್ರಾಂತ್ & ರಾಹುಲ್‌ಗೆ ಟೆನ್ಶನ್

  ವಿಕ್ರಾಂತ್ & ರಾಹುಲ್‌ಗೆ ಟೆನ್ಶನ್

  ಮೋನಿಕಾ ಕರೆಯನ್ನೇನೊ ಮಾಡಿ ಷರತ್ತುಗಳನ್ನು ಹಾಕಿದ್ದಾಳೆ. ಅದೇ ಸಮಯಕ್ಕೆ ರಾಹುಲ್ ಜೋರು ಧ್ವನಿಯಲ್ಲಿ ಮಾತಾಡಿದಾಗ ಒಬ್ಬರ ಹೆಣ ಅಲ್ಲ ಇಬ್ಬರ ಹೆಣ ಎಂದು ಹೂವಿ ಪ್ರಾಣ ತೆಗೆಯುವ ಬೆದರಿಕೆಯನ್ನು ಹಾಕಿದ್ದಾಳೆ. ಈಗ ಡ್ರಗ್ಸ್ ಕೊಟ್ಟು ಹೆಂಡತಿಯರನ್ನು ಕರೆತರಬೇಕಾ ಅಥವಾ ಅವರನ್ನು ಹುಡುಕುವುದಾ ಎಂಬ ಟೆನ್ಶನ್ ಇಬ್ಬರಲ್ಲಿಯೂ ಆರಂಭವಾಗಿದೆ. ಹುಡುಕಾಟ ಶುರು ಮಾಡಬೇಕು ಎಂದರೆ ಅವರು ಎಲ್ಲಿದ್ದಾರೆ ಎಂಬುದೇ ಇಬ್ಬರಿಗೂ ಗೊತ್ತಿಲ್ಲ. ಹೀಗಿರುವಾಗ ಹೇಗೆ ಹೆಂಡತಿಯರಿರುವ ಜಾಗ ಪತ್ತೆ ಹಚ್ಚುತ್ತಾರೆ ಎಂಬುದೇ ಪ್ರಶ್ನೆ.

  ರಾಹುಲ್‌ಗೆ ಅಜ್ಞಾತ ಸ್ಥಳದಿಂದ ಕರೆ

  ರಾಹುಲ್‌ಗೆ ಅಜ್ಞಾತ ಸ್ಥಳದಿಂದ ಕರೆ

  ಹೂವಿ ಇಂಥ ವಿಚಾರದಲ್ಲಿ ಸ್ವಲ್ಪ ಅಲ್ಲ ಹೆಚ್ಚು ಧೈರ್ಯವಂತೆ ಎಂದು ಹೇಳಬಹುದು. ಕಿಡ್ನ್ಯಾಪ್ ಮಾಡಿಕೊಂಡು, ಗನ್ ತೋರಿಸಿ ಕರೆ ತರುವಾಗಲೇ ಧೈರ್ಯವಾಗಿ ಹೆದರಿಸಿದವಳು. ಈಗ ಒಂದು ಕತ್ತಲೆ ಕೋಣೆಯಲ್ಲಿ ಕೈ ಕಟ್ಟಿ ಕೂಡಿ ಹಾಕಿದ್ದಾಳೆ. ಕಾವಲಿಗಾಗಿ ಒಬ್ಬ ವ್ಯಕ್ತಿಯನ್ನು ಬಿಟ್ಟಿದ್ದಾರೆ. ಹಾಗೋ ಹೀಗೋ ಮೊಬೈಲ್ ಒಂದು ಸಿಕ್ಕಿದ್ದು, ಆ ಮೂಲಕ ಸ್ಪಂದನಾ, ವಿಕ್ಕಿಗೆ ಕರೆ ಮಾಡಿದ್ದಾಳೆ. ಇನ್ನೇನು ವಿಷಯ ಹೇಳುವಾಗ ಅಲ್ಲೆ ಮಲಗಿದ್ದ ರೌಡಿ ಎದ್ದಿದ್ದಾನೆ. ಇಬ್ಬರು ಬುದ್ಧಿವಂತಿಕೆ ಉಪಯೋಗಿಸಿದ್ದು, ಫೋನ್ ಕಟ್ ಮಾಡದೆ, ಹೆದರದೆ ಇಬ್ಬರೇ ಮಾತನಾಡುವ ರೀತಿಯಲ್ಲಿ ತಾವಿರುವ ಲೊಕೇಷನ್ ಹೇಳಿದ್ದಾರೆ‌. ಇದನ್ನು ಹುಡುಕಿ ಬರುತ್ತಾರಾ ಎಂಬುದನ್ನು ನೋಡಬೇಕಿದೆ.

  ಮೊದಲೇ ಊಹಿಸಿದ್ದ ಪ್ರೇಕ್ಷಕರು

  ಮೊದಲೇ ಊಹಿಸಿದ್ದ ಪ್ರೇಕ್ಷಕರು

  ಎರಡು ಧಾರಾವಾಹಿಗಳ ಮಹಾಮಿಲನಕ್ಕೆ ದೊಡ್ಡ ತಿರುವು ಕೊಡಲು ಬಂದಿದ್ದು ಸ್ಪೆಷಲ್ ಗೆಸ್ಟ್. ಈ ಮೊದಲೇ ಒಂದು ಪ್ರೋಮೋ ಬಿಟ್ಟು ನೋಡುಗರ ತಲೆಯಲ್ಲಿ ಹುಳ ಬಿಟ್ಟಿದ್ದರು. ಆದರೂ ಸೂಕ್ಷ್ಮವಾಗಿ ಗಮನಿಸಿದ್ದ, ನೋಡುಗರು ಇದು ಕೃಷಿ ತಾಪಂಡನೇ ಎಂದಿದ್ದರು. ಅದರಂತೆ ಗೆಸ್ ಮಾಡಿದವರ ನಾಲೆಡ್ಜ್ ಸರಿಯಾಗಿದೆ ಎಂಬುದು ಪ್ರೂವ್ ಆಗಿದೆ. ಮೋನಿಕಾ ಪಾತ್ರದಲ್ಲಿ, ಮಹಾ ವಿಲನ್ ಆಗಿ ಕೃಷಿ ತಾಪಂಡ ಎಂಟ್ರಿಯಾಗಿದೆ.

  English summary
  Bettada Hoo And Marali Manasagide Serial August 11th Episode Written Update. Here is the details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X