ಮರಳಿ ಮನಸಾಗಿದೆ & ಬೆಟ್ಟದ ಹೂ: ವೈಶು ಕುತಂತ್ರದಿಂದ ಸ್ಪಂದನಾ, ಹೂವಿಯ ಜೀವನವೂ ಹಾಳಾಗುತ್ತಾ?

By ಎಸ್ ಸುಮಂತ್

ಮೊದಲಿನಿಂದಲೂ ವೈಷ್ಣವಿಗೆ ಸ್ಪಂದನಾ ಕಂಡರೆ ಆಗುವುದಿಲ್ಲ. ಸ್ಪಂದನಾ ಅಕ್ಕ ಅಕ್ಕ ಎಂದು ಎಷ್ಟೇ ಪ್ರೀತಿ ಮಾಡಿದರೂ ಆ ಪ್ರೀತಿಯನ್ನು ಗುರುತಿಸುವಲ್ಲಿ ವೈಷ್ಣವಿ ಹಿಂದೆಯೇ ಉಳಿದಿದ್ದಾಳೆ. ಪ್ರೀತಿಗೆ ಪ್ರೀತಿ ವಾಪಾಸ್ ಕೊಡುವ ಬದಲಿಗೆ ದ್ವೇಷವನ್ನೇ ಕಾರಿದ್ದಾಳೆ. ಮೊದಲಿನಿಂದಲೂ ಸ್ಪಂದನಾ ಮತ್ತು ವಿಕ್ಕಿ ನಡುವಿನ ಸಂಬಂಧ ಹಾಳು ಮಾಡಲು ಯತ್ನಿಸುತ್ತಿದ್ದಾಳೆ. ಅವರ ಕುತಂತ್ರಕ್ಕೆ ಈಗಾಗಲೇ ವಿಕ್ಕಿ ಮತ್ತು ಸ್ಪಂದನಾ ಜೀವನ ಸಾಕಷ್ಟು ಸಲ ಬಲಿಯಾಗಿದೆ. ಆದರೆ ಇದೀಗ ಹೂವಿಯೂ ಸಂಕಷ್ಟಕ್ಕೆ ಸಿಲುಕುವ ಸಮಯ ಬಂದಿದೆ.

ಸ್ಪಂದನಾ ಮತ್ತು ಹೂವಿ ಈಗ ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ. ಹೂವಿಯ ನಡವಳಿಕೆಯೇ ಅಂಥದ್ದು. ಎಲ್ಲರಿಗೂ ಬೇಗ ಹತ್ತಿರವಾಗಿ ಬಿಡುತ್ತಾಳೆ. ಅದಕ್ಕೆ ಅಲ್ಲವಾ ರಾಹುಲ್ ಮನೆಗೆ ಹೇಳಿಕೊಳ್ಳಲು ಕೆಲಸದವಳಾಗಿ ಬಂದರು, ಬಲುಬೇಗ ಮನೆಯವರ ಮನಸ್ಸನ್ನು ಗೆದ್ದಿದ್ದಾಳೆ. ಅವರೆಲ್ಲಾ ಮನೆಯ ಮಗಳಂತೆಯೇ ಕಾಣುತ್ತಾರೆ. ಹೂವಿ ಇಲ್ಲದೆ ಹೋದಾಗ ಮನೆಯವರೆಲ್ಲಾ ದುಃಖ ಪಟ್ಟಿದ್ದರು. ಅಂಥ ಗುಣದವಳು ಹೂವಿ.

ಹೂವಿಯ ಸ್ಥಿತಿ ಅರ್ಥ ಮಾಡಿಕೊಂಡ ಸ್ಪಂದನಾ

ಹೂವಿಯ ಸ್ಥಿತಿ ಅರ್ಥ ಮಾಡಿಕೊಂಡ ಸ್ಪಂದನಾ

ಹೂವಿ ಮತ್ತು ಸ್ಪಂದನಾ ಒಂದೇ ಪಿಜಿಯಲ್ಲಿದ್ದರು. ಆಗ ಹೂವಿ ನೋಡಲು ರಾಹುಲ್ ಬಂದಾಗ, ಸ್ಪಂದನಾ ಕೊಂಚ ಅಪಾರ್ಥ ಮಾಡಿಕೊಂಡವಳಂತೆ ಕಂಡಳು. ತಕ್ಷಣ ರಾಹುಲ್ ಆ ಅಪಾರ್ಥ ಸರಿ ಮಾಡಿದ್ದನು. ನಾನು ಹೂವಿಯ ಗಂಡ ಎಂದು ಸತ್ಯ ಹೇಳಿದ್ದ. ಆದರೆ ರಾಹುಲ್ ಮನೆಗೆ ಹೋದಾಗ ಅಲ್ಲಿ‌ನ ವಾತಾವರಣವೇ ಬೇರೆಯಾಗಿತ್ತು. ಜೊತೆಗೆ ಹೂವಿ ಕಷ್ಟದಲ್ಲಿದ್ದಾಗ, ಯಾರಿಗೆ ಏನಾದರೇನು ಎಂದು ಮಾಲಿನಿ ಜೋರಾಗಿ ಹೇಳಿದ್ದನ್ನು ಕೇಳಿ ಸ್ಪಂದನಾಗೆ ಕೋಪ ಬಂದಿತ್ತು‌. ಇದೆಲ್ಲವನ್ನೂ ಹೂವಿ ಬಳಿ ಕೇಳಿದಾಗ, ಅವತ್ತು ಹಳ್ಳಿಯಲ್ಲಿ ಆಗಿದ್ದನ್ನು ವಿವರಿಸಿದ್ದಾಳೆ.

ವೈಷ್ಣವಿ ಕೆಡುಕುತನಕ್ಕೆ ಇಬ್ಬರು ಬಲಿಯಾಗ್ತಾರಾ?

ವೈಷ್ಣವಿ ಕೆಡುಕುತನಕ್ಕೆ ಇಬ್ಬರು ಬಲಿಯಾಗ್ತಾರಾ?

ವೈಶು ಈ ಜನುಮದಲ್ಲಿ ಬುದ್ಧಿ ಕಲಿಯಲ್ಲ ಎನಿಸುತ್ತದೆ. ಹಲವು ಭಾರೀ ಅವಮಾನಕ್ಕೊಳಗಾದರೂ ಮತ್ತೆ ಮತ್ತೆ ಅದೇ ಕೆಟ್ಟ ಬುದ್ಧಿಯನ್ನೇ ಪ್ರದರ್ಶಿಸುತ್ತಿದ್ದಾಳೆ. ಇದೀಗ ಅವಳ ಕುತಂತ್ರದಿಂದ ಹೂವಿ ಕೂಡ ಕಷ್ಟ ಅನುಭವಿಸುವ ಸ್ಥಿತಿ ತಲುಪಿದ್ದಾಳೆ. ಜ್ಯೂಸ್‌ನಲ್ಲಿ ಡ್ರಿಂಕ್ಸ್ ಮಿಕ್ಸ್ ಮಾಡಿರುವ ವೈಷ್ಣವಿ, ಸ್ಪಂದನಾಗೆ ಮಾತ್ರ ಕೊಡಲು ಹೇಳುತ್ತಾಳೆ. ಆದರೆ ಸರ್ವ್ ಮಾಡುವ ವ್ಯಕ್ತಿ ಸ್ಪಂದನಾ ಮತ್ತು ಹೂವಿ ಇಬ್ಬರಿಗೂ ಕೊಟ್ಟಿದ್ದಾನೆ. ಇದರ ಪರಿಣಾಮ ಹೂವಿ ಹೇಗೇಗೋ ಆಡುತ್ತಿದ್ದಾಳೆ. ಇದರಿಂದ ಹೂವಿಯ ವೈಯಕ್ತಿಕ ಜೀವನಕ್ಕೂ ಸಮಸ್ಯೆ ಆಗುವ ಸಾಧ್ಯತೆ ಇದೆ.

ಮತ್ತಿನಲ್ಲಿರುವ ಹೂವಿ

ಮತ್ತಿನಲ್ಲಿರುವ ಹೂವಿ

ವೈಷ್ಣವಿ ಕೊಟ್ಟ ಮತ್ತಿನ ಜ್ಯೂಸ್ ನಿಂದ ಹೂವಿ ನಿಲ್ಲುತ್ತಲೇ ಇಲ್ಲ. ಆಕಾಶದಲ್ಲಿ ತೇಲಾಡಿದಂತೆ ಆಡುತ್ತಿದ್ದಾಳೆ. ಅದೇ ಗುಂಗಿನಲ್ಲಿ, ಕುಡಿದ ಮತ್ತಿನಲ್ಲಿರುವ ಹೂವಿ, ರಾಹುಲ್ ಸರ್ ನನಗೆ ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿದ್ದಾರೆ. ಅದನ್ನ ನಾನು ಎಲ್ಲರಿಗೂ ಹೇಳಬೇಕು ಎನ್ನುತ್ತಿದ್ದಾಳೆ. ಇದೇ ಗುಂಗಲ್ಲಿ ಎಲ್ಲರ ಎದುರಿಗೂ ಹೋದರೆ, ಅಲ್ಲಿಗೇ ಸಮಾಪ್ತಿ. ವೈಶು ಅಲ್ಲಿಯೇ ನಿಂತುಬೆಲ್ಲವನ್ನು ನೋಡುತ್ತಿದ್ದಾಳೆ. ಈ ಸತ್ಯ ಸ್ಪಂದನಾಗೆ ಮಾತ್ರ ಗೊತ್ತಿತ್ತು. ಇದೀಗ ವೈಶು ಇದನ್ನು ಇಟ್ಟುಕೊಂಡು ಆಟವಾಡುತ್ತಾಳಾ ನೋಡಬೇಕಿದೆ.

ಹೂವಿಗೆ ಸದಾ ಸಪೋರ್ಟ್ ಸ್ಪಂದನಾ

ಹೂವಿಗೆ ಸದಾ ಸಪೋರ್ಟ್ ಸ್ಪಂದನಾ

ಹೂವಿಯ ಜೀವನ ಸರಿ ಹೋಗುತ್ತೆ ಎಂದಾದರೇ ಸ್ಪಂದಾನ ಯಾವ ರಿಸ್ಕ್ ತೆಗೆದುಕೊಳ್ಳುವುದಕ್ಕೂ ಸಿದ್ಧವಿರುತ್ತಾಳೆ‌. ಇಲ್ಲಿಯವರೆಗೂ ಸತ್ಯ ಗೊತ್ತಿರಲಿಲ್ಲ. ಇದೀಗ ಸತ್ಯ ಬೇರೆ ತಿಳಿದಿದ್ದಿಯಾ, ಹೂವಿಗೆ ಸಹಾಯ ಮಾಡಲು ಸಿದ್ಧವಾಗಿದ್ದಾಳೆ. ಸದ್ಯಕ್ಕೆ ಮಾಲಿನಿ ಮಾತಿಗೆ ಮುಂಚೆ ಅವಮಾನ ಮಾಡುತ್ತಿದ್ದಾಳೆ. ಆ ಅವಮಾನವನ್ನು ನಿಲ್ಲಿಸಲು ಸ್ಪಂದನಾ ಮುಂದೆ ಬರಬಹುದು.

More from Filmibeat

English summary
Bettada Hoo And Marali Manasagide Serial August 11th Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X