ವೈಶು ಕುತಂತ್ರದಿಂದ ರಾಹುಲ್ ಮತ್ತು‌ ಹೂವಿ ನಡುವಿನ ಸತ್ಯ ಮಾಲಿನಿಗೆ ತಿಳಿಯುತ್ತಾ..?

By ಎಸ್ ಸುಮಂತ್

ಸತ್ಯ ಎಂಬುದು ಸೆರಗಿನಲ್ಲಿ ಕಟ್ಟಿಕೊಂಡ ಕೆಂಡದಂತೆ ಎಂಬ ಮಾತನ್ನು ಹಿರಿಯರು ಆಗಾಗ ಹೇಳುತ್ತಾ ಇರುತ್ತಾರೆ. ಒಮ್ಮೆ ಸತ್ಯ ಮುಚ್ಚಿಡುವುದಕ್ಕೆ ಸುಳ್ಳೊಂದನ್ನು ಹೇಳಿದರೆ ಮುಗೀತು, ಅಲ್ಲಿಂದ ಆ ಸತ್ಯವನ್ನು ಮುಚ್ಚಿಡುವುದಕ್ಕೆ ಸಿಕ್ಕ ಸಿಕ್ಕ ಸುಳ್ಳುಗಳನ್ನೇ ಹೇಳುತ್ತಾ ಬರಬೇಕಾಗುತ್ತದೆ. ಹೂವಿ ಮತ್ತು ರಾಹುಲ್ ವಿಚಾರದಲ್ಲೂ ಆಗಿದ್ದು ಅದೆ. ಮದುವೆಯಾಗಿದ್ದನ್ನೇ ಮುಚ್ಚಿಟ್ಟ ರಾಹುಲ್, ಸುಳ್ಳು ಹೇಳಿ ಮತ್ತೊಂದು ಮದುವೆಯಾದ. ಆದರೆ ಈಗ ಹೂವಿ ಮೇಲೆ ಪ್ರೀತಿ ಹುಟ್ಟಿದೆ, ಮನೆಯವರನ್ನು ನಂಬಿಸಲು ಒಂದರ ಮೇಲೊಂದು ಸುಳ್ಳು ಹೇಳುತ್ತಾ ಬರುತ್ತಿದ್ದಾನೆ.

ಕಳೆದ ಎರಡು ವಾರದಿಂದಲೂ ಎರಡು ವಾರದಿಂದಲೂ 'ಬೆಟ್ಟದ ಹೂ' ಮತ್ತು 'ಮರಳಿ ಮನಸಾಗಿದೆ' ಧಾರಾವಾಹಿಯ ಮಹಾಸಂಗಮ ನಡೆಯುತ್ತಿದೆ. ಈ ಮಹಾಸಂಗಮದಲ್ಲಿಯೇ ಎಲ್ಲಾ ಸತ್ಯ ಬಯಲಾಗುವ ಸಾಧ್ಯತೆ ಇದೆ. ರಾಹುಲ್ ಹೇಳದೆ ಹೋದರೂ, ಹೂವಿ ಹೇಳದೆ ಹೋದರು, ಮಾಲಿನಿ ಅಂತೂ ಸತ್ಯ ಗೊತ್ತಾಗುವಂತೆ ಮಾಡುತ್ತಿದ್ದಾಳೆ.

ಹೂವಿ ಜೊತೆ ಹೊರಟ ರಾಹುಲ್

ಹೂವಿ ಜೊತೆ ಹೊರಟ ರಾಹುಲ್

ನಾಯಕ್ ಕುಟುಂಬದವರು ಮತ್ತು ಚಕ್ರವರ್ತಿ ಕುಟುಂಬದವರು ಸೇರಿಕೊಂಡು ದೇವರ ಸನ್ನಿಧಾನಕ್ಕೆ ಹೋಗಿದ್ದಾರೆ. ವಿಶೇಷ ಪೂಜೆ ಮಾಡಿಸುವುದಕ್ಕಾಗಿಯೇ ಹೋಗಿದ್ದಾರೆ. ಆದರೆ ಇಲ್ಲಿ ರಾಹುಲ್ ಮಾಲಿನಿಯನ್ನು ಬಿಟ್ಟು ಹೂವಿ ಹಿಂದೆ ಹೋಗಿದ್ದಾನೆ. ಇದು ಮಾಲಿನಿಗೆ ಗೊತ್ತಿಲ್ಲ. ಮಾಲಿನಿಗೆ ಗೊತ್ತಿಲ್ಲದ ಕೆಲವೊಂದು ಸತ್ಯವನ್ನು ವೈಶು ತಿಳಿಸಿಕೊಡಲು ಯತ್ನಿಸುತ್ತಿದ್ದಾಳೆ. ದೇವರ ಸನ್ನಿಧಾನದಲ್ಲಿ ಎಲ್ಲಾ ಸತ್ಯ ವೈಶು ಇಂದಾನೇ ಬಯಲಾಗುವ ಸಾಧ್ಯತೆ ಇದೆ.

ಸತ್ಯವನ್ನು ಎಲ್ಲರ ಬಳಿ ಹೇಳ್ತಾಳಾ?

ಸತ್ಯವನ್ನು ಎಲ್ಲರ ಬಳಿ ಹೇಳ್ತಾಳಾ?

ವೈಷ್ಣವಿ ಹೇಗಾದರೂ ಮಾಡಿ, ವಿಕ್ರಾಂತ್‌ನಿಂದ ಸ್ಪಂದನಾಳನ್ನು ದೂರ ಮಾಡಬೇಕು ಎಂದೇ ಕಾಯುತ್ತಿದ್ದಾಳೆ. ಅದಕ್ಕೆಂದೇ ಕಿತಾಪತಿ ಮಾಡಿದ್ದಳು. ಇತ್ತೀಚೆಗೂ ಅಂಥದ್ದೊಂದು ಕಿತಾಪತಿ ಮಾಡಿದ್ದಳು. ಅದರಿಂದ ಮುಚ್ಚಿಟ್ಟ ಸತ್ಯವೊಂದು ಗೊತ್ತಾಗಿದೆ. ಸ್ಪಂದನಾಳಿಗೆ ಕುಡಿಸಲು ಹೋಗಿ, ಮದ್ಯ ಹಾಕಿದ್ದ ಜ್ಯೂಸ್ ಅನ್ನು ಹೂವಿ ಕೂಡ ಕುಡಿದಿದ್ದಳು. ನಶೆಯಲ್ಲಿ ಸ್ಪಂದನಾ ಬಳಿ ಎಲ್ಲಾ ಸತ್ಯವನ್ನು ಹೇಳಿದ್ದಳು. ಇದನ್ನು ವೈಶು ಕೇಳಿಸಿಕೊಂಡಿದ್ದಾಳೆ. ಈ ಸತ್ಯವನ್ನು ಹೇಗಾದರೂ ಮಾಡಿ, ಮಾಲಿನಿಗೆ ಗೊತ್ತಾಗುವಂತೆ ಮಾಡಲು ಹಠ ತೊಟ್ಟಿದ್ದಾಳೆ.

ಮಾಲಿನಿ ಮನಸ್ಸು ಹಾಳು ಮಾಡುತ್ತಿರುವ ವೈಶು

ಮಾಲಿನಿ ಮನಸ್ಸು ಹಾಳು ಮಾಡುತ್ತಿರುವ ವೈಶು

ಮಾಲಿನಿ ಮನಸ್ಸು ಈಗಾಗಲೇ ಹಾಳಾಗಿದೆ. ಅನುಮಾನದ ಬೀಜ ತಲೆಯಲ್ಲಿ ಸೇರಿಕೊಂಡಿದೆ. ಅದರ ಜೊತೆಗೆ ರಾಹುಲ್ ಬೇರೆ ಇತ್ತೀಚೆಗೆ ನೆಗ್ಲೆಕ್ಟ್ ಮಾಡುತ್ತಿದ್ದಾನೆ. ಮೊದಲಿನ ಥರ ಪ್ರೀತಿ ಮಾಡುತ್ತಿಲ್ಲ, ಕಾಳಜಿ ತೋರಿಸುತ್ತಿಲ್ಲ, ಸಮಯ ನೀಡುತ್ತಿಲ್ಲ ಎಂಬ ಅಸಹನೆ ಇದೆ. ಇದರ ನಡುವೆ ವೈಷ್ಣವಿ ಆಗಾಗ ರಾಹುಲ್ ಬಗ್ಗೆ ಅನುಮಾನ ಬರುವಂತಹ ಮಾತುಗಳನ್ನು ಆಡುತ್ತಿದ್ದಾಳೆ.

ದೇವಸ್ಥಾನದಲ್ಲಿ ಮಾಲಿನಿಗೆ ಸತ್ಯ ತಿಳಿಯುತ್ತಾ?

ದೇವಸ್ಥಾನದಲ್ಲಿ ಮಾಲಿನಿಗೆ ಸತ್ಯ ತಿಳಿಯುತ್ತಾ?

ಸ್ಪಂದನಾ ಅಂತು ಹೂವಿಗೆ ಫುಲ್ ಸಪೋರ್ಟ್. ಹೂವಿ ಸಂಸಾರ ಸರಿ ಆಗಬೇಕು ಎಂದೇ ಬಯಸುತ್ತಿದ್ದಾಳೆ. ರಾಹುಲ್ ಕೂಡ ಈಗ ಹೂವಿ ಕಡೆಗೆ ಇದ್ದಾನೆ. ಹೀಗಾಗಿ ವಿಕ್ರಾಂತ್ ಮತ್ತು ಸ್ಪಂದನಾ ಹಾಗೂ ಹೂವಿ ಮತ್ತು ರಾಹುಲ್ ಸುತ್ತಾಟ ಜಾಸ್ತಿಯಾಗಿದೆ. ದೇವಸ್ಥಾನದಲ್ಲಿಯೂ ಸ್ಪೆಷಲ್ ಪೂಜೆ ಇದೆ. ಆ ಪೂಜೆಗೆ ರಾಹುಲ್, ಹೂವಿಯನ್ನು ಎತ್ತುಕೊಂಡು ಹೋಗಿದ್ದಾನೆ. ಇದು ವೈಷ್ಣವಿಗೆ ಅನುಮಾನ ಬಂದಿದೆ. ಅದಕ್ಕೆಂದೇ ಮಾಲಿನಿಯನ್ನು ಬೆಟ್ಟದ ಮೇಲಕ್ಕೆ ಜೋರಾಗಿ ಕರೆದುಕೊಂಡು ಬಂದಿದ್ದಾಳೆ. ರಾಹುಲ್ ಕೂಡ ಯಾರನ್ನೋ ಎತ್ತಿಕೊಂಡು ಹೋಗುತ್ತಿದ್ದಾನೆ ನೋಡು ಎಂದಿದ್ದಾಳೆ. ಇದನ್ನು ಮಾಲಿನಿ ಕೂಡ ಗಮನಿಸಿದ್ದು ಸತ್ಯ ಇವತ್ತೇ ಹೊರ ಬರುವ ಸಾಧ್ಯತೆ ಇದೆ.

More from Filmibeat

English summary
Bettada Hoo And Marali Manasagide Serial August 21st Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X