ಬೆಟ್ಟದ ಹೂ: ರಾಹುಲ್ ಮತ್ತು ಹೂವಿಗೆ ವಯಸ್ಸಾದರೆ ಹೇಗೆ ಕಾಣುತ್ತಾರೆ..?

By ಎಸ್ ಸುಮಂತ್

ಬೆಟ್ಟದ ಹೂ ಧಾರಾವಾಹಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದೆ. ಧಾರಾವಾಹಿಯಲ್ಲಿ ಬರುವ ಎರಡು ಪಾತ್ರಗಳು ತುಂಬಾನೇ ಪ್ರಾಮುಖ್ಯತೆ ವಹಿಸಿದೆ. ಅದುವೇ ಹೂವಿ ಮತ್ತು ರಾಹುಲ್. ಧಾರಾವಾಹಿ ನೋಡುವಾಗ ಅದೆಷ್ಟು ಮನಸ್ಸುಗಳು ಇಬ್ಬರ ಬಾಂಧವ್ಯಕ್ಕಾಗಿ ಬಯಸಿದರೋ ಏನೋ. ಆಶೀರ್ವಾದ ಫಲ ಕೊಟ್ಟಿದೆ, ಇದೇ ರಾಹುಲ್ ಮತ್ತು ಹೂವಿ ಒಂದಾಗಿದ್ದಾರೆ. ಆದರೆ ಇತ್ತೀಚೆಗೆ ಬೇಸರವನ್ನು ಮೂಡಿಸಿದೆ.

ಈಗೇನೋ ರಾಹುಲ್ ಮತ್ತು ಹೂವಿ ಯುವಕರು. ಜೋಡಿ ಊರವರ ಕಣ್ಣಿಗೆಲ್ಲಾ ಮುದ್ದು ಮುದ್ದಾಗಿ ಕಾಣುತ್ತಿದ್ದಾರೆ. ಅದರ ಜೊತೆಗೆ ಹೂವಿಯ ಮುಖದಲ್ಲೂ ಹೊಸ ಕಳೆದ ಎದ್ದು ಕಾಣುತ್ತಿದೆ. ಆದರೆ ಇದರ ನಡುವೆ ಇಬ್ಬರಿಗೂ ವಯಸ್ಸಾದರೆ ಇನ್ಯಾವ ರೀತಿ ಕಾಣಬಹುದು ಎಂಬ ಕ್ಯೂರಿಯಾಸಿಟಿಯನ್ನು ರಾಹುಲ್ ಮತ್ತು ಹೂವಿ ತಣಿಸಿದ್ದಾರೆ. ಆ ಬಗ್ಗೆ ಹೊಸ ಫೋಟೊ ಒಂದನ್ನು ಹಂಚಿಕೊಂಡಿದ್ದಾರೆ.

ರಾಹುಲ್ ಮನಸ್ಸು ಹೂವಿಯ ಕಡೆ

ರಾಹುಲ್ ಮನಸ್ಸು ಹೂವಿಯ ಕಡೆ

ಪ್ರೀತಿ ಹುಟ್ಟುವುದಕ್ಕೆ ಕಾರಣ ಬೇಕಿಲ್ಲ. ಮನಸ್ಸಿಗೆ ಇಷ್ಟವಾಗುವ ಯಾವುದೋ ಒಂದು ಗುಣವಿದ್ದರು ಸಾಕು ಅವರ ಮೇಲೆ ಪ್ರೀತಿಯಾಗುವ ಸಾಧ್ಯತೆ ಹೆಚ್ಚಾಗಿಯೇ ಇರುತ್ತೆ. ಅದರಂತೆ ಹೂವಿಯ ಒಂದಷ್ಟು ಒಳ್ಳೆಯ ಗುಣ, ಮುಗ್ದತೆ ರಾಹುಲ್‌ಗೆ ತುಂಬಾ ಹಿಡಿಸಿದೆ. ಹೀಗಾಗಿಯೇ ರಾಹುಲ್ ಹೂವಿಯನ್ನು ತುಂಬಾನೇ ಪ್ರೀತಿಸಲು ಶುರು ಮಾಡಿದ್ದಾನೆ. ಕಾಳಜಿ ತೋರಿಸುತ್ತಾನೆ. ಅವಳೆಲ್ಲಾ ಸಮಯದಲ್ಲೂ ನಿಂತುಕೊಳ್ಳಲು ಆರಂಭಿಸಿದ್ದಾನೆ. ಹೂವಿ ಬೇಡವೆಂದರೂ ರಾಹುಲ್ ನಿನ್ನನ್ನೇ ಪ್ರೀತಿಸುತ್ತೇನೆ ಎಂದು ಹಿಂದೆ ಬಿದ್ದಿದ್ದಾನೆ.

ಹೂವಿಯ ಭವಿಷ್ಯ ಕಟ್ಟಲು ರಾಹುಲ್ ಸಾಥ್

ಹೂವಿಯ ಭವಿಷ್ಯ ಕಟ್ಟಲು ರಾಹುಲ್ ಸಾಥ್

ಮನೆಯಲ್ಲಿದ್ದಾಗಂತು ಹೂವಿಯನ್ನು ರಾಹುಲ್ ಯಾವತ್ತಿಗೂ ಹೆಂಡತಿ ಎಂದು ನೋಡಿಕೊಳ್ಳಲೇ ಇಲ್ಲ. ಆದರೆ ಹೂವಿ ಬೆಂಗಳೂರು ಬಿಟ್ಟು ಚನ್ನವಲ್ಸೆಗೆ ಬಂದಾದ ಮೇಲೆ ರಾಹುಲ್ ಮನಸ್ಸು ಹೂವಿಯೆಡೆಗೆ ತುಂಬಾನೇ ವಾಲುತ್ತಿದೆ. ಅದಕ್ಕಾಗಿಯೇ ರಾಹುಲ್ ಕೂಡ ಹೂವಿ ಇರುವಲ್ಲಿಯೇ ಬಂದಿದ್ದಾನೆ. ಹೂವಿ ಭವಿಷ್ಯ ಚೆನ್ನಾಗಿರಬೇಕೆಂದು ಅವಳ ಓದಿಗೆ ಸಾಥ್ ನೀಡುತ್ತಿದ್ದಾನೆ. ಅವಳ ಕಷ್ಟಕ್ಕೆ ಬೆಂಗಲಾವಗಿ ನಿಂತಿದ್ದಾನೆ. ಗಂಡನಾಗಿ‌ ಒಂದಷ್ಟು ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾನೆ. ಆದರೆ ಹೂವಿಗೆ ಕೊನೆವರೆಗೂ ರಾಹುಲ್ ಮಾತ್ರ ಗಂಡನಾಗಿರಬೇಕೆಂಬ ಆಸೆ ಇದೆ. ಆ ಸ್ಥಾನದಲ್ಲಿ ಬೇರೆ ಯಾರನ್ನು ಊಹಿಸಿಕೊಳ್ಳಲು ಅವಳಿಂದ ಸಾಧ್ಯವಿಲ್ಲ. ಹೀಗಾಗಿಯೇ ರಾಹುಲ್ ಮತ್ತು ಹೂವಿ ನಡುವೆ ಬೇಸರದ ಹೊಗೆಯಾಡುತ್ತಿದೆ.

ದಂಪತಿಯ ಫೋಟೊಗೆ ಬಹುಪರಾಕ್

ದಂಪತಿಯ ಫೋಟೊಗೆ ಬಹುಪರಾಕ್

ರಾಹುಲ್ ತನಗೆ ಅರಿವಿಲ್ಲದೆ ಹೂವಿಯನ್ನು ಪ್ರೀತಿಸುತ್ತಿದ್ದಾನೆ. ಅದನ್ನು ಆಗಾಗ ಮನದಲ್ಲಿ ನೆನೆಯುತ್ತಲಿರುತ್ತಾನೆ. ನಾನ್ಯಾಕೆ ಹೂವಿ ಮೇಲೆ ಇಷ್ಟೊಂದು ಒಲವು ತೋರಿಸುತ್ತಾ ಇದ್ದೇನೆ ಎಂದು ಪ್ರಶ್ನಿಸಿಕೊಳ್ಳುತ್ತಿರುತ್ತಾನೆ. ಆದರೆ ರಾಹುಲ್ ಅಲಿಯಾಸ್ ದರ್ಶಕ್‌ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹೊಸದಾಗಿ ಫೋಟೊ ಒಂದನ್ನು ಹಂಚಿಕೊಂಡಿದ್ದಾರೆ. ಆ ಫೋಟೊದಲ್ಲಿ ಹೂವಿ ಮತ್ತು ರಾಹುಲ್ ಆದರ್ಶ ದಂಪತಿಗಳಂತೆ ಕಾಣುತ್ತಿದ್ದಾರೆ. ಸ್ವಲ್ಪ ವಯಸ್ಸಾದ ಮೇಲೆ ಹೇಗೆಲ್ಲಾ ಇರುತ್ತಾರೆ ಎಂಬುದು ಕಾಣಿಸುತ್ತಿದೆ. ಅದರ ಜೊತೆಗೆ ಹೂವಿಗೆ ರಾಹುಲ್ ಪ್ರೀತಿಯಿಂದ ಹೂ ಮುಡಿಸುತ್ತಿದ್ದಾನೆ. ಈ ಫೋಟೊ ಪಕ್ಕಾ ಆದರ್ಶ ದಂಪತಿಯಂತೆ ಕಾಣಿಸುತ್ತಿದ್ದಾರೆ.

ರಾಹುಲ್ ಮತ್ತು ಹೂವಿ ಜೋಡಿಗೆ ಮೆಚ್ಚುಗೆ

ಹೂವಿ ಮತ್ತು ರಾಹುಲ್ ಈ ರೀತಿಯ ಫೋಟೊ ಹಾಕಿರುವುದು ಮುಂದಿನ ಎಪಿಸೋಡ್‌ನಲ್ಲಿ ಬರುವ ದೃಶ್ಯದ ಸೂಚನೆ ನೀಡಿದೆ. ಯಾವುದೋ ಹಾಡಿನಲ್ಲೋ, ಕನಸು ಕಾಣುವ ರೂಪದಲ್ಲಿಯೋ ಈ ಒಂದು ದೃಶ್ಯ ಅನಾವರಣವಾಗಬಹುದು. ಅಭಿಮಾನಿಗಳು ಕೂಡ ಈ ಫೋಟೊಗಳನ್ನು ನೋಡು ಖುಷಿ ಪಟ್ಟಿದ್ದಾರೆ. ಸಿಕ್ಕಾಪಟ್ಟೆ ಲೈಕ್ಸ್ ಕೊಡುವುದರ ಜೊತೆಗೆ ಈ ಜೋಡಿ ನೋಡಲು ಖುಷಿಯಾಗುತ್ತೆ ಎಂದಿದ್ದಾರೆ. ಅಷ್ಟೇ ಅಲ್ಲ ಈ ದೃಶ್ಯ ನೋಡಲು ಕಾಯುತ್ತಿದ್ದೇವೆ ಎಂದಿದ್ದಾರೆ.

More from Filmibeat

English summary
Bettada Hoo Serial Actors Darshak And Srividya Photoshoot Goes Viral. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X