ಬೆಟ್ಟದ ಹೂ: ಕ್ಷಮೆ ಬಯಸಿ ಬಂದಿದ್ದ ಗೌತಮ್‌ಗೆ ನಿರಾಸೆ.. ಹುಲಿಯನ ಕಡೆ ವಾಲಿತು ಗೌರನ ಮನಸ್ಸು!
ಹುಲಿಯ ಬಗ್ಗೆ ಹೊಸದಾಗಿ ಹೇಳುವಂತದ್ದೇನು ಇಲ್ಲ. ತನ್ನದಲ್ಲದೇ ಇದ್ದ ಸಂಬಂಧಗಳನ್ನು ಹೆಗಲ ಮೇಲೆ ಹೊತ್ತು ತನ್ನದೇ ಎಂಬಂತೆ ನೋಡಿಕೊಂಡವರು ಹುಲಿಯಪ್ಪ. ಗೌರ ಅಷ್ಟೇ ಗೌರವ ಕೊಡುತ್ತಾಳೆ, ಹೂವಿ ನಮ್ಮ ಹುಲಿಯಪ್ಪ ಎಂದೇ ಹೇಳುತ್ತಾಳೆ. ಇಷ್ಟೆಲ್ಲಾ ನಿಸ್ವಾರ್ಥ ಸೇವೆ ಮಾಡಿದ ಹುಲಿಯಪ್ಪನನ್ನು ಗೌರ ಇಷ್ಟು ದಿನ ಅರ್ಥವೇ ಮಾಡಿಕೊಂಡಿರಲಿಲ್ಲ. ಆದರೆ ಗೌತಮ್‌ನಿಂದ ಎಲ್ಲವೂ ಬದಲಾಗಿದೆ. ಗೌರನ ಮನಸ್ಸು ಕೂಡ.
ಗೌತಮ್ ತನ್ನ ತಪ್ಪಿಗೆ ಕ್ಷಮೆಯಾಚಿಸಲು ಕಾದಿದ್ದು ಹತ್ತೊಂಬತ್ತು ವರ್ಷ. ಆದರೆ ಎಲ್ಲವೂ ಕೈ ಮೀರಿ ಹೋಗಿದೆ. ಅಪ್ಪನನ್ನು ನೋಡಲೇಬೇಕೆಂದು ಕಾತುರದಿಂದ ಕಾಯುತ್ತಿದ್ದ ಹೂವಿಗೆ, ಅಪ್ಪ ಗೌತಮ್ ಎಂದು ಗೊತ್ತಾದರೆ ಮನಸ್ಸು ಒಡೆದು ಹೋಗದೆ ಇರುವುದಿಲ್ಲ. ಅಪ್ಪನನ್ನು ನೋಡುವ ಕಾತುರ ಉಳಿಯುವುದು ಇಲ್ಲ. ಪ್ರೀತಿಯ ಮಾತುಗಳು ಬರುವುದು ಇಲ್ಲ ಅನಿಸುತ್ತದೆ.

ಗೌರನಿಗೆ ಇಷ್ಟು ದಿನ ಏನು ಗೊತ್ತಿರಲಿಲ್ಲವಾ?
ಹತ್ತೊಂಬತ್ತು ವರ್ಷದ ಹಿಂದಿನ ಹಲವು ಸತ್ಯ ಈಗ ಬಟಾಬಯಲಾಗಿದೆ. ಆ ಸತ್ಯವನ್ನು ಅರಗಿಸಿಕೊಳ್ಳಲಾಗದೆ ಗೌರನ ಮನಸ್ಸು ಕಲ್ಲಾಗಿದೆ. ಗೌರ, ಗೌತಮ್‌ನನ್ನು ನೋಡುವ ತನಕ ತನ್ನ ಮನಸ್ಸಲ್ಲಿ ಪ್ರೀತಿಯನ್ನೇ ಬಚ್ಚಿಟ್ಟುಕೊಂಡಿದ್ದಳು. ಆದರೆ ನಂಬುವುದಕ್ಕೆ ಆಗದಂತಹ ಸತ್ಯ ಕೇಳಿದಾಗ ಪ್ರೀತಿ ಬೇಸರವಾಗಿ ಬದಲಾಗಿತ್ತು. ಇಷ್ಟು ದಿನ ಯಾವುದೋ ಸಮಸ್ಯೆಯ ಸುಳಿಯಲ್ಲಿ ಗೌತಮ್ ಸಿಲುಕಿರಬೇಕೆಂದು ಗೌರ ಬಯಸಿದ್ದಳು. ಆದರೆ ಗೌತಮ್‌ಗೆ ತನ್ನ ಜೊತೆ ಪ್ರೀತಿ ಹುಟ್ಟುವ ಸಮಯದಲ್ಲಿ ಮದುವೆಯಾಗಿತ್ತು. ಮಗಳೊಬ್ಬಳು ಇದ್ದಳು ಎಂಬ ಕಹಿ ಸತ್ಯ ಗೌತಮ್‌ಗೆ ತಿಳಿದಿರಲಿಲ್ಲ. ಅದನ್ನು ಕೇಳಿ ಗೌರನ ಮನಸ್ಸು ಕಲ್ಲಾಗಿದೆ.

ಹೂವಿಯ ಅಪ್ಪನೆಂದು ತಿಳಿಯದಿರಲಿ ಎಂದ ಗೌರ
ಹೂವಿಗೆ ತನ್ನ ಅಪ್ಪನನ್ನು ನೋಡಬೇಕೆಂಬ ಬಯಕೆ ಎಷ್ಟಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆಗಾಗ ಅಪ್ಪನ ಪ್ರೀತಿ ಬಗ್ಗೆ ಹೂವಿ ಮಾತಾಡುತ್ತಲೇ ಇರುತ್ತಾಳೆ. ಆದರೆ ಈಗ ನಿಜವಾದ ಅಪ್ಪ ಎದುರು ಬಂದರು ಆ ಸತ್ಯ ತಿಳಿಸಲು ಗೌರ ಬಿಡುತ್ತಿಲ್ಲ. ಹೂವಿ ತನ್ನ ಅಪ್ಪನ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದಾಳೆ. ಆದರೆ ಅಪ್ಪ ಒಬ್ಬ ಸುಳ್ಳುಗಾರ, ಮೋಸಗಾರ ಎಂಬುದು ತಿಳಿಯುವುದು ಬೇಡ. ಹೂವಿಗೆ ನೀವೇ ನಿಜವಾದ ಅಪ್ಪ ಎಂದು ತಿಳಿಯಲು ನಾನು ಬಿಡುವುದಿಲ್ಲ ಎಂದಿದ್ದಾಳೆ.

ಹೂವಿಗೆ ನ್ಯಾಯ ಕೊಡಲು ರಾಹುಕ್ ಪ್ರಯತ್ನ
ಮಾವನ ಸತ್ಯ ತಿಳಿದ ರಾಹುಲ್ ನಾನು ಕೂಡ ಈ ತಪ್ಪು ಮಾಡಬಾರದು ಎಂಬ ನಿರ್ಧಾರಕ್ಕೆ ಬಂದಿದ್ದಾನೆ. ಅದಕ್ಕೆಂದೆ ಹೂವಿಯನ್ನು ಮತ್ತೆ ಬೆಂಗಳೂರಿಗೆ ಹೋಗೋಣಾ ಎಂದು ಕರೆಯುತ್ತಿದ್ದಾನೆ. ಆದರೆ ಹೂವಿ ಕೇಳುತ್ತಿರುವ ಗುರುತು ಕೊಡಲು ರೆಡಿಯಿಲ್ಲ. ರಾಹುಲ್ ಅತಂತ್ರ ಸ್ಥಿತಿಯಲ್ಲಿದ್ದಾನೆ. ಮಾವ ಮಾಡಿದ ತಪ್ಪನ್ನು ಮಾಡಬಾರದು ಎಂದರು ಪರಿಸ್ಥಿತಿಯ ಕೈಗೊಂಬೆಯಾಗಿದ್ದಾನೆ.
ಹುಲಿಯನತ್ತ ಹೊರಟ ಗೌರ
ಗೌರ ಮತ್ತು ಹೂವಿಯನ್ನು ತುಂಬಾ ಜವಾಬ್ದಾರಿಯಿಂದ ಸಾಕಿದ್ದು ಹುಲಿಯಾ. ಅವರ ಎಲ್ಲಾ ಬೇಕು ಬೇಡಗಳನ್ನು ಪೂರೈಸಿದ್ದು ಹುಲಿಯಾ. ತಂದೆಯಿಲ್ಲದ ಹೂವಿಗೆ ತಂದೆ ಸ್ಥಾನ ಕೊಟ್ಟ. ಗಂಡನಿಲ್ಲದೆ ಹೋದರು ಗೌರನಿಗೆ ಹೆಗಲಾಗಿ ನಿಂತ. ಇದೆಲ್ಲವೂ ಇಷ್ಟು ದಿನ ಗೌರನಿಗೆ ಅರ್ಥವೇ ಆಗಿರಲಿಲ್ಲ. ಅದ್ಯಾವಾಗ ಹುಲಿಯಾ ಕಣ್ಣೀರು ಹಾಕಿದನೋ ಆಗ ಎಲ್ಲವೂ ಅರ್ಥ ಆಯ್ತು. ಗೌತಮ್‌ಗೆ ನೀವೂ ಮಾಡಿದ ತಪ್ಪು ನಾನು ಮಾಡಲ್ಲ ಎಂದು ಹುಲಿಯನನ್ನು ಹುಡುಕಿ ಗೌರ ಹೊರಟಿದ್ದಾಳೆ.


Click it and Unblock the Notifications











