Prakruti K Prasad:'ಬೆಟ್ಟದ ಹೂ'ನಲ್ಲಿ ಮಾಲಿನಿ ಧರಿಸಿದ್ದ ಸೀರೆಗಳು ಹರಾಜು.. ಬೇಕಿದ್ರೆ ಹೀಗೆ ಸಂಪರ್ಕಿಸಿ!
ಧಾರಾವಾಹಿ ಅಂದ್ರೆ ಪ್ರತಿದಿನದ ಎಪಿಸೋಡ್. ವಾರಕ್ಕೆ ಎರಡು ದಿನ ಫ್ರೀ. ಕೆಲವೊಂದು ಧಾರಾವಾಹಿ ಶನಿವಾರ ಕೂಡ ಪ್ಲೇ ಆಗುತ್ವೆ. ಅದರಲ್ಲಿ ಸ್ಟಾರ್ ಸುವರ್ಣದಲ್ಲಿ ಬರುವ 'ಬೆಟ್ಟದ ಹೂ' ಧಾರಾವಾಹಿ ಕೂಡ ಸೋಮವಾರದಿಂದ ಶನಿವಾರದ ತನಕ ಪ್ರಸಾರ ಆಗುತ್ತೆ.
ಧಾರಾವಾಹಿ ಬರೋದು ಎಲ್ಲರಿಗೂ ಗೊತ್ತು. ಯಾಕೆ ವಾರದ ಕಥೆಯನ್ನೆಲ್ಲಾ ಹೇಳ್ತಾ ಇದ್ದಾರೆ ಅಂದುಕೊಳ್ಳಬೇಡಿ. ನಾವೂ ಇವತ್ತು ಹೇಳುವುದಕ್ಕೆ ಹೊರಟಂತ ವಿಚಾರ ಧಾರಾವಾಹಿಯಲ್ಲಿ ಹಾಕುವ ಸೀರೆಗಳ ಬಗ್ಗೆ. ವೆರೈಟಿ ವೆರೈಟಿ ಸೀರೆ ಎಲ್ಲಿಂದ ಬರುತ್ತೆ..? ಆ ಸೀರೆಗಳನ್ನು ಹಾಕಿಕೊಂಡ ಮೇಲೆ ಏನಾಡ್ತಾರೆ..? ಅದು ಸ್ವಂತದ್ದ..? ಬಾಡಿಗೆಯದ್ದಾ..? ಈ ಡಿಟೈಲ್ ಇಲ್ಲಿದೆ ನೋಡಿ.

ನಟಿ ಹಾಕಿದ್ದ ಸೀರೆ ಬೇಕಾ..?
ಹಿಂದೆ ಒಂದು ಕಾಲ ಇತ್ತು. ಕೆಲವೊಂದು ಪ್ರದೇಶಗಳಲ್ಲಿ ಈಗಲೂ ಆ ಸಂಪ್ರದಾಯವಿದೆ. ಅದೇನಂದ್ರೆ, ದೇವರಿಗೆಂದು ಹರಕೆಗೆ ಕೊಟ್ಟ ಸೀರೆಯನ್ನು ಹರಾಜು ಹಾಕುತ್ತಾರೆ. ಭಕ್ತರು ಆ ಸೀರೆಗಳನ್ನು ಪ್ರಸಾದದಂತೆ ಸ್ವೀಕರಿಸುತ್ತಾರೆ. ಆ ಸಂಪ್ರದಾಯ ಇದೀಗ ಧಾರಾವಾಹಿಗೂ ಬಂದು ಬಿಟ್ಟಿದೆ. 'ಬೆಟ್ಟದ ಹೂ' ಧಾರಾವಾಹಿಯ ನಟಿ ತಾನು ಉಟ್ಟಿದ ಸೀರೆಗಳನ್ನು ಹರಾಜು ಹಾಕಿದ್ದಾರೆ. ಈಗ ತೆಗೆದುಕೊಳ್ಳುವವರು ಮುಂದೆ ಬರಬೇಕಷ್ಟೇ.

ಮಾಲಿನಿ ಸೀರೆಗಳು ಹರಾಜು
ಕೆಲವೊಂದು ಬಟ್ಟೆಗಳನ್ನು ಕ್ಯಾಟ್ ಲಾಕ್ ನೋಡಿಯೋ ಅಥವಾ ಗೊಂಬೆಗೆ ಹಾಕಿದ್ದನ್ನು ನೋಡಿಯೋ ತೆಗೆದುಕೊಳ್ಳುವುದು ಹೆಚ್ಚು. ಆದರೆ ಇತ್ತೀಚೆಗೆ ಸಿನಿಮಾ ಮತ್ತು ಸೀರಿಯಲ್‌ನಲ್ಲಿ ನಟಿ ಮಣಿಯರು ಧರಿಸಿದ ಸೀರೆಗಳನ್ನು ನೋಡಿ ಇಂತದ್ದೆ ಬೇಕು ಅಂತ ಇಡೀ ಮಾರ್ಕೆಟ್ ಹುಡುಕುವವರು ಇದ್ದಾರೆ. ಆದರೆ ಎಷ್ಟೋ ಜನಕ್ಕೆ ತಾವೂ ಹುಡುಕಿದ ಸೀರೆಗಳು ಸಿಗುವುದಿಲ್ಲ. ನಿರಾಸೆಯಿಂದ ಬರುತ್ತಾರೆ. ಮತ್ತೆ ಆ ಸೀರಿಯಲ್ ನಲ್ಲಿ ನೋಡಿ ಮತ್ತೆ ಬೇಸರ ಮಾಡಿಕೊಳ್ಳುತ್ತಾರೆ. ಅಂತ ಮಹಿಳಾ ಮಣಿಯರಿಗಾಗಿ ತಾವಿಷ್ಟಪಟ್ಟ ಸೀರೆಯನ್ನು ನಟಿ ಮಣಿಯೇ ಮಾರಾಟ ಮಾಡುತ್ತಿದ್ದಾರೆ. ಯಾವುದಿಷ್ಟ ಅಂತ ಹೇಳಿದರೆ ಸಾಕು.

ಮಾಲಿನಿ ಉಟ್ಟಿದ್ದ ಸೀರೆ ಎಲ್ಲಿ ಸಿಗುತ್ತೆ..?
'ಬೆಟ್ಟದ ಹೂ' ಧಾರಾವಾಹಿಯಲ್ಲಿ ಮದುವೆಯಾದ ಮೇಲೆ ಮಾಲಿನಿ ಹೆಚ್ಚು ಹಾಕಿದ್ದು ಸೀರೆಗಳನ್ನೇ. ಆದರೆ ಒಂದೊಂದು ಸೀರೆಯೂ ತುಂಬಾ ಅದ್ಭುತವಾಗಿದ್ದವು. ಪ್ರತಿದಿನ ಮಾಲಿನಿ ಸೀರೆ ವಿಭಿನ್ನವಾಗಿ, ಸ್ಟೈಲಿಶ್ ಆಗಿ ಇರುತ್ತಾ ಇತ್ತು. ಆ ಸೀರೆಗಳನ್ನು ನೋಡಿ ಹೆಣ್ಣು ಮಕ್ಕಳು ಅದೆಷ್ಟು ಇಷ್ಟಪಟ್ಟಿದ್ದರೋ ಏನೋ..? ಅಷ್ಟೇ ಯಾಕೆ ನೇರವಾಗಿ ಸೋಶಿಯಲ್ ಮೀಡಿಯಾದಲ್ಲಿ ಮಾಲಿನಿಗೆ ಮೆಸೇಜ್ ಕೂಡ ಹಾಕುತ್ತಾ ಇದ್ರು. ನೀವು ಹಾಕಿರುವ ಸೀರೆ ಅದ್ಭುತವಾಗಿದೆ ಎಂದು ಹೇಳುತ್ತಾ ಇದ್ರು. ಇದೀಗ ಮಾಲಿನಿಯೇ ಹೇಳಿದ್ದಾರೆ. "ನಾನು ಬೆಟ್ಟದ ಹೂ ಧಾರಾವಾಹಿಯಲ್ಲಿ ಒಂದು ಅಥವಾ ಎರಡು ಸೀನ್ ಗಳಿಗೆ ಹಾಕಿದ ಸೀರೆಗಳನ್ನು ಕೂಗೆಟಕುವ ಬೆಲೆಗೆ ಮಾರಾಟ ಮಾಡುತ್ತಿದ್ದೇನೆ. ಯಾವ ಸೀರೆ ಬೇಕು ಮೆಸೇಜ್ ಹಾಕಿ" ಎಂದಿದ್ದಾರೆ.
ನಂಗೆ.. ನಂಗೆ ಅನ್ನುವಷ್ಟು ಮೆಸೇಜ್..!
ಮಾಲಿನಿ ಅಲಿಯಾಸ್ ಪ್ರಕೃತಿ ಪ್ರಸಾದ್ ಸೀರೆಗಳ ಬಗ್ಗೆ ವಿಡಿಯೋ ಮಾಡಿ ಬಿಟ್ಟಿದ್ದೆ ತಡ. "ಸೀರೆ ನನಗೆ ಬೇಕು, ಆ ಸೀನ್‌ಗೆ ಹಾಕಿದ ಸೀರೆ ಎಷ್ಟು? ಪಿಂಕ್ ಸೀರೆ ಇದೆಯಾ..?" ಹೀಗೆ ಅನೇಕ ಮೆಸೇಜ್ ಗಳಯ ಪ್ರಕೃತಿಗೆ ಬರುತ್ತಿವೆ. ಎಲ್ಲರಿಗೂ ತಾಳ್ಮೆಯಿಂದ ಉತ್ತರಿಸುತ್ತಾ ಇರುವ ಪ್ರಕೃತಿ ಸರಿಯಾದ ಅಡ್ರೆಸ್ ನೀಡುತ್ತಿದ್ದಾರೆ. ನಿಮಗೂ ಅವರು ಹಾಕಿದ್ದ ಸೀರೆ ಬೇಕೆಂದರೆ ಈ ಲಿಂಕ್ ಫಾಲೋ ಮಾಡಿ.


Click it and Unblock the Notifications











