For Quick Alerts
  ALLOW NOTIFICATIONS  
  For Daily Alerts

  ಬೆಟ್ಟದ ಹೂ: ರಾಹುಲ್- ಹೂವಿ ವಿಚಾರ ಮಾಲಿನಿಗೆ ತಿಳಿದೇ ಹೋಯ್ತು ಮುಂದೇನು?

  By ಎಸ್ ಸುಮಂತ್
  |

  ರಾಹುಲ್ ಮತ್ತು ಹೂವಿಯ ಮದುವೆಯ ವಿಚಾರ ಮನೆಯವರಿಗೆ ಮತ್ತು ಮಾಲಿನಿಗೆ ತಿಳಿಯಬಾರದು ಅಂತ ಸಾಕಷ್ಟು ಪ್ರಯತ್ನ ಮಾಡಲಾಗಿತ್ತು. ಹೂವಿಗೆ ಮತ್ತು ರಾಹುಲ್‌ಗೆ ಮಾತ್ರ ಗೊತ್ತಿದ್ದ ಸತ್ಯಾಂಶ ದಿನ ಕಳೆದಂತೆ ದೀಪ್ತಿ, ನಿಶಾಂತ್‌ಗೆ ಕೂಡ ಗೊತ್ತಾಗುತ್ತಾ ಹೋಯಿತು. ಹೂವಿಯನ್ನು ಮನೆಯಲ್ಲಿರುವ ಇಬ್ಬರೇ ಬಚಾವ್ ಮಾಡುತ್ತಾ ಸಾಗಿದ್ದರು. ಚನ್ನವಲ್ಸೆಯಿಂದಾನು ಏನೋ ಸತ್ಯಾಂಶವಿದೆ ಎಂದೇ ಮಾಲಿನಿಗೆ ಅನುಮಾನದ ಹೊಗೆಯಾಡುತ್ತಿತ್ತು. ಇದೀಗ ಅದಕ್ಕೆಲ್ಲಾ ಮುಕ್ತಿ ಸಿಕ್ಕಿದೆ.

  ಮಾಲಿನಿಗೆ ಯಾವ ಸತ್ಯನೂ ತಿಳಿಯಬಾರದು ಎಂದು ಹೂವಿ, ರಾಹುಲ್, ದೀಪ್ತಿ, ನಿಶಾಂತ್ ಟ್ರೈ ಮಾಡಿದ್ದರು. ಆದರೂ ಇನ್ಯಾವುದೋ ಒಂದು ಮೂಲದಿಂದ ಆ ಸತ್ಯ ಬಯಲಾಗಿ ಹೋಗಿದೆ. ಆದರೆ ಮಾಲಿನಿ ಸತ್ಯ ತಿಳಿದ ಮೇಲೂ ರಾದ್ಧಾಂತ ಮಾಡದೆ ಸುಮ್ಮನೆ ಆಗಿದ್ದಾಳೆ. ಅದಕ್ಕೆಲ್ಲಾ ಕಾರಣ ತಾನು ಮಾಡಬೇಕಾದ ಕೆಲಸವನ್ನು ಮಾಡಲೇಬೇಕೆಂದು ಹಠ ತೊಟ್ಟಿದ್ದಾಳೆ.

  ಇಷ್ಟು ದಿನದ ಸಾಹಸಕ್ಕೆ ಸಿಕ್ತು ಜಯ

  ಇಷ್ಟು ದಿನದ ಸಾಹಸಕ್ಕೆ ಸಿಕ್ತು ಜಯ

  ಚನ್ನವಲ್ಸೆಯಿಂದ ಬಂದಾಗಿನಿಂದ ಹೂವಿ, ರಾಹುಲ್, ದೀಪ್ತಿ ಮತ್ತು ನಿಶಾಂತ್ ಯಾವುದೋ ಒಂದು ಸತ್ಯವನ್ನು ಮುಚ್ಚಿಡುತ್ತಿದ್ದಾರೆ ಎಂಬುದಂತು ಮಾಲಿನಿಗೆ ಅರಿವಾಗಿತ್ತು. ಅದನ್ನು ತಿಳಿದುಕೊಳ್ಳಲೆಂದು ಆ ನಾಲ್ವರು ಹಿಂದೆ ಬಿದ್ದಾಗ ದೇವಸ್ಥಾನ ಒಂದರಲ್ಲಿ ಮದುವೆಯಾಗುತ್ತಿದ್ದಾರೆ ಎಂಬುದು ತಿಳಿಯಿತು. ಆದರೂ ಮಾಲಿನಿಗೆ ಯಾವುದು ಸ್ಪಷ್ಟವಾಗಿರಲಿಲ್ಲ. ಅದೇ ಗೊಂದಲದಲ್ಲಿದ್ದಳು. ಕಡೆಗೆ ಮನೆಯಲ್ಲಿ ಅದಕ್ಕೆ ಉತ್ತರ ಸಿಕ್ಕಾಗಿದೆ. ರಾಹುಲ್ ಹೂವಿಗೆ ಕುಂಕುಮ ಇಟ್ಟು ಮಾತಾಡಿದ್ದನ್ನು ಮಾಲಿನಿ ಕೇಳಿಸಿಕೊಂಡಿದ್ದಾಳೆ.

  ಪ್ರೀತಿಯಲ್ಲಿ ಬಿದ್ದಿರುವ ಹೂವಿ-ರಾಹುಲ್

  ಪ್ರೀತಿಯಲ್ಲಿ ಬಿದ್ದಿರುವ ಹೂವಿ-ರಾಹುಲ್

  ಹೂವಿ ಪ್ರತಿದಿನ, ಪ್ರತಿಕ್ಷಣ ರಾಹುಲ್ ಮತ್ತು ಮಾಲಿನಿ ಬಗ್ಗೆಯೇ ಯೋಚಿಸುತ್ತಿರುತ್ತಾಳೆ. ಮೊದಲು ಅವರಿಬ್ಬರ ಸಂಸಾರ ಸರಿಯಾಗಲಿ ಎಂದು, ತನ್ನ ಪ್ರೀತಿಯನ್ನೇ ತ್ಯಾಗ ಮಾಡುತ್ತಿದ್ದಾಳೆ. ರಾಹುಲ್ ಪ್ರೀತಿ ತೋರಿಸಲು ಬಂದಾಗಲೂ ಆ ಪ್ರೀತಿಗೂ ತಿರಸ್ಕಾರ ಮೂಡುವಂತೆ ನಡೆದುಕೊಳ್ಳುತ್ತಿದ್ದಾಳೆ. ಇದರಿಂದ ರಾಹುಲ್‌ಗೆ ಕೊಂಚ ನೋವಾದರೂ ಮನಸ್ಸು ಮಾತ್ರ ಹೂವಿಯನ್ನೇ ಬಯಸುತ್ತಿದೆ. ಅಮ್ಮ ಕೊಟ್ಟ ಕುಂಕುಮವನ್ನು ಮಾಲಿನಿ ಬಿಟ್ಟು ಹೂವಿಗೆ ಇಟ್ಟಿದ್ದಾನೆ.

  ಹೂವಿಗಾಗಿ ರಾಹುಲ್ ತ್ಯಾಗಕ್ಕೆ ಸೈ

  ಹೂವಿಗಾಗಿ ರಾಹುಲ್ ತ್ಯಾಗಕ್ಕೆ ಸೈ

  ಮಾಲಿನಿಯನ್ನು ರಾಹುಲ್ ಪ್ರೀತಿಸಿಯೇ ಮದುವೆಯಾಗಿದ್ದಾನೆ. ಆದರೆ ಹೂವಿಯ ನಡವಳಿಕೆ, ಅವಳ ಒಳ್ಳೆಯತನಕ್ಕೆ ರಾಹುಲ್ ಸಂಪೂರ್ಣ ಮನಸೋತಿದ್ದಾನೆ. ಮಾಲಿನಿಯ ಒರಟುತನ, ಕಿರುಚಾಟದಿಂದ ಅವಳ ಮೇಲೆ ಎಲ್ಲಾ ಭಾವನೆಯನ್ನು ಕಳೆದುಕೊಂಡಿದ್ದಾನೆ. ಹೀಗೆ ರಾಹುಲ್ ಸಂಸಾರ ಸರಿಯಾಗಲಿ ಎಂದು, ರಾಹುಲ್ ತಾಯಿ ದೇವಸ್ಥಾನಕ್ಕೆ ಹೊರಟಿದ್ದರು. ಆದರೆ ರಾಹುಲ್ ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಆದರೆ, ಹೂವಿ ಹೇಳಿದ ಒಂದೇ ಒಂದು ಮಾತಿಗೆ ಇಲ್ಲ ಎನ್ನಲಾಗದೆ ಒಪ್ಪಿಕೊಂಡು ಬಿಟ್ಟಿದ್ದಾನೆ.

  ನನಗಿಂತ ಕಿಲಾಡಿ ಎಂದುಕೊಂಡ ಮಾಲಿನಿ

  ನನಗಿಂತ ಕಿಲಾಡಿ ಎಂದುಕೊಂಡ ಮಾಲಿನಿ

  ಮಾಲಿನಿ, ರಾಹುಲ್‌ನನ್ನು ಪ್ರೀತಿಸಿದ ನಾಟಕವಾಡಿದ್ದು ಅಖಿಲ್ ಗೋಸ್ಕರ. ಅಖಿಲ್ ನೆಮ್ಮದಿ ಹಾಳು ಮಾಡಿದ ರಾಹುಲ್ ಮನೆಯವರು ನೆಮ್ಮದಿಯಾಗಿರಬಾರದು ಎಂದೇ ಮದುವೆಯಾಗಿ ಬಂದಳು. ಆದರೆ ಈಗ ರಾಹುಲ್ ತನಗೆ ಮೋಸ ಮಾಡಿರೋದು ಸ್ಪಷ್ಟವಾಗಿದೆ. ಹೂವಿಯನ್ನು ಮದುವೆಯಾಗಿದ್ದಾನೆ ಎಂಬುದು ತಿಳಿದ ಮೇಲೆ, ಬಾತ್ ರೂಮಿನಲ್ಲಿ ನಿಂತು ಎಲ್ಲವನ್ನು ಅರ್ಥ ಮಾಡಿಕೊಳ್ಳುತ್ತಿದ್ದಾಳೆ. ನಾನೇ ಕ್ರಿಮಿನಲ್ ಎಂದುಕೊಂಡರೆ ನನಗೆ ಚಳ್ಳೆ ಹಣ್ಣು ತಿನ್ನಿಸಿದೆ. ಹೌದು, ನಾನು ಬಂದಿದ್ದು ಕೆಟ್ಟ ಉದ್ದೇಶಕ್ಕೆ. ನಾನು ಮೋಸಗಾರ್ತಿ ಆದರೆ ನೀನು ಅದರಲ್ಲಿ ನನ್ನ ತಂದೆ. ಇನ್ನು ಮುಂದೆ ನನ್ನ ದ್ವೇಷ ತೀರಿಸಿಕೊಳ್ಳದೆ ಬಿಡುವುದಿಲ್ಲ ಎಂದಿದ್ದಾಳೆ.

  English summary
  Bettada Hoo Serial November 11th Episode Written Update. Here Is The Details About Malini Got Hoovi And Rahul Marriage Matter, Know More.
  Friday, November 11, 2022, 21:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X