ಮಾಲಿನಿ ಬೆಂಬಲಕ್ಕೆ ಬಂದ ಪ್ರಿಯಾಂಕಾ ಶಿವಣ್ಣ: ಹೂವಿಗೆ ಎದುರಾಗುತ್ತಾ ಮತ್ತಷ್ಟು ಸಂಕಷ್ಟ..?

By ಎಸ್ ಸುಮಂತ್

ಚನ್ನವಲ್ಸೆಗೆ ಹೋಗಿ ಬಂದಾಗಿನಿಂದ ಯಾವುದೋ ಒಂದು ಸತ್ಯವನ್ನು ಮುಚ್ಚಿಡುತ್ತಿದ್ದಾರೆ ಎಂಬುದಂತು ಮಾಲಿನಿಯ ಅರಿವಿಗೆ ಬಂದಿತ್ತು. ಅದಕ್ಕೆ ತಕ್ಕಂತೆ ಮನೆ ಮಂದಿ ನಡೆದುಕೊಳ್ಳುತ್ತಿದ್ದರು. ಅದರ ಹಿಂದೆ ಬಿದ್ದ ಮಾಲಿನಿಗೆ ರಾಹುಲ್ ಅಂಡ್ ಹೂವಿ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ಇರುವುದು ಪಕ್ಕಾ ಆಗಿದೆ.

ಅದನ್ನು ಹುಡುಕಲು ಹೊರಟ ಮಾಲಿನಿಗೆ ಅರ್ಥವಾಗದಂತ ಸತ್ಯಗಳು ಬಯಲಾಗುತ್ತಾ ಹೋಗಿದೆ. ಆದ್ರೆ ಏನೆಂಬುದನ್ನು ಅರಿತುಕೊಳ್ಳುವುದಕ್ಕೆ ಮಾಲಿನಿಗೆ ತುಂಬಾನೇ ಸಮಯ ಬೇಕಾಗುತ್ತೆ ಎನ್ನುವಾಗಲೇ ರಾಹುಲ್ ನಡವಳಿಕೆ ಮಾಲಿನಿಗೆ ಅಸಲಿ ಸತ್ಯ ಗೊತ್ತಾಗಿತ್ತು. ಅಮ್ಮ ತಂದುಕೊಟ್ಟ ಕುಂಕುಮವನ್ನು ಹೂವಿ ಹಣೆಗೆ ಇಟ್ಟು ತಾನೇ ಆಕೆಯ ಗಂಡ ಎಂಬುದನ್ನು ಮಾಲಿನಿ ಮುಂದೆಯೇ ಸಾಬೀತುಪಡಿಸಿದ್ದ ರಾಹುಲ್.

ಹೂವಿಯನ್ನು ಕೊಲ್ಲಲು ಹೊರಟ ಮಾಲಿನಿ

ಹೂವಿಯನ್ನು ಕೊಲ್ಲಲು ಹೊರಟ ಮಾಲಿನಿ

ಮಾಲಿನಿ ತನ್ನ ತಾಯಿ ಮಂದ್ರಾ ಬಳಿ ಮಾತನಾಡುತ್ತಿರುವಾಗ, ಮಂದ್ರಾ ಬಾಯಿ ತಪ್ಪಿ ಹೂವಿ ಸತ್ತರೆ ನಿನ್ನೆಲ್ಲಾ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದಿದ್ದಳು. ಇದನ್ನೇ ಸೀರಿಯಸ್ ಆಗಿ ತೆಗೆದುಕೊಂಡ ಮಾಲಿನಿ, ಹೂವಿಯನ್ನು ಕೊಲ್ಲುವುದಕ್ಕೆ ಸಿದ್ಧಳಾಗಿದ್ದಾಳೆ. ಇಲಿಗೆ ಹಾಕುವುದಕ್ಕೆ ವಿಷ ತಂದುಕೊಟ್ಟದ್ದನ್ನು ಎತ್ತಿಟ್ಟುಕೊಂಡಿದ್ದ ಮಾಲಿನಿ, ಹೂವಿ ಊಟ ಮಾಡುವ ಅನ್ನಕ್ಕೆ ಬೆರೆಸಿದ್ದಾಳೆ. ತುಂಬಾ ಸಾಫ್ಟ್ ಆಗಿ ಮಾತನಾಡಿ, ಹೂವಿ ಆ ಅನ್ನವನ್ನು ತಿನ್ನುವಂತೆ ಮಾಡಿ ಅಲ್ಲಿಂದ ಹೊರ ನಡೆದಿದ್ದಾಳೆ. ಈ ಹಿಂದೆ ಕೂಡ ಹೂವಿಯನ್ನು ಕೊಲ್ಲಲು ದೇವಿಯ ತ್ರಿಶೂಲವನ್ನೇ ಎತ್ತಿಕೊಂಡು ಹೋಗಿದ್ದಳು ಮಾಲಿನಿ. ಆ ಕ್ಷಣಕ್ಕೆ ರಾಹುಲ್ ಕಾಪಾಡಿದ್ದ.

ಗಂಡಾಂತರವನ್ನು ಮಾಲಿನಿಯೇ ತಡೆದಿದ್ದಳು

ಗಂಡಾಂತರವನ್ನು ಮಾಲಿನಿಯೇ ತಡೆದಿದ್ದಳು

ಹೂವಿ ಸಾಯಲೇಬೇಕು ಎಂದುಕೊಂಡು ಅನ್ನಕ್ಕೆ ಮಾಲಿನಿ ವಿಷ ಬೆರೆಸಿ, ರೂಮಿಗೆ ಹೋಗಿ ಕುಳಿತಿದ್ದಳು. ಆದರೆ ಇಲ್ಲಿ ಮಕ್ಕಳು ಹಸಿವು ಎಂದು ಅಡುಗೆ ಮನೆಗೆ ಬಂದಾಗ ತಟ್ಟೆಯಲ್ಲಿದ್ದ ಅನ್ನವನ್ನು ಮಕ್ಕಳಿಗೆ ಕಲಸಿ ತಿನ್ನಿಸುವುದಕ್ಕೆ ಹೊರಟಿದ್ದಳು. ಅಷ್ಟರಲ್ಲಿ ಹೂವಿ ಯಾಕೆ ಇನ್ನು ಎಚ್ಚರ ತಪ್ಪಿಲ್ಲ ಎಂದು ಬಂದು ನೋಡುವಾಗ ಮಾಲಿನಿಗೆ ಶಾಕ್ ಆಗಿತ್ತು. ತಕ್ಷಣ ಆ ಅನ್ನವನ್ನು ಕಿತ್ತು ಎಸೆದು ಏನೋ ಒಂದು ನೆಪವನ್ನು ಹೇಳಿದಳು. ಮನೆಯವರೆಲ್ಲಾ ಮಾಲಿನಿ ಮೇಲೆ ಕೆಂಡಕಾರಿದರು. ಹಾಗೋ ಹೀಗೋ ಎಲ್ಲವೂ ಬಗೆಹರಿದಿತ್ತು.

ಹೂವಿಗೆ ಕಷ್ಟ ಕೊಡಲು ಬಂದ ಪ್ರಿಯಾಂಕ ಶಿವಣ್ಣ

ಹೂವಿಗೆ ಕಷ್ಟ ಕೊಡಲು ಬಂದ ಪ್ರಿಯಾಂಕ ಶಿವಣ್ಣ

ಹೂವಿಗೆ ಒಬ್ಬರಲ್ಲ ಇಬ್ಬರಲ್ಲ ದುಷ್ಮನ್‌ಗಳು ಸಿಕ್ಕಾಪಟ್ಟೆ ಮಂದಿ ಇದ್ದಾರೆ. ರಾಹುಲ್ ಮನೆಯವರೆಲ್ಲಾ ಪ್ರೀತಿ ಮಾಡುತ್ತಿದ್ದರೆ, ಮಾಲಿನಿ, ಮಂದ್ರಾ ದ್ವೇಷದ ಕೆಂಡಕಾರುತ್ತಿದ್ದಾರೆ. ಈಗ ದುಷ್ಮನ್ ಜಾಗಕ್ಕೆ ಮತ್ತೊಬ್ಬರ ಎಂಟ್ರಿಯಾಗುತ್ತಿದ್ದಾರೆ ಅದುವೇ ಪ್ರಿಯಾಂಕ ಶಿವಣ್ಣ. ಬಿಗ್ ಬಾಸ್ ಮೂಲಕ ಖ್ಯಾತಿ ಪಡೆದಿದ್ದ ಪ್ರಿಯಾಂಕಾ ಸತ್ಯ ಧಾರಾವಾಹಿಯಲ್ಲೂ ವಿಲನ್ ಆಗಿ ಮಿಂಚುತ್ತಿದ್ದಾರೆ. ಇದೀಗ 'ಬೆಟ್ಟದ ಹೂ' ಧಾರಾವಾಹಿಗೂ ಖಳನಾಯಕಿಯಾಗಿ ಬರುತ್ತಿದ್ದಾರೆ.

ಮಾಲಿನಿಗೆ ಬೆಂಬಲವಾಗಿ ಬಂದ ಪ್ರಿಯಾಂಕಾ?

ಮಾಲಿನಿಗೆ ಬೆಂಬಲವಾಗಿ ಬಂದ ಪ್ರಿಯಾಂಕಾ?

ಹೂವಿ ತುಂಬಾ ಮುಗ್ಧತೆ ಇರುವ, ಯಾರಿಗೂ ಕೆಟ್ಟದ್ದನ್ನು ಬಯಸದ ಹುಡುಗಿ. ಸಾಧ್ಯವಾದರೆ ಎಲ್ಲರನ್ನು ನಗುಮುಖದಲ್ಲಿಯೇ ಇರಿಸಿಕೊಳ್ಳಲು ಯತ್ನಿಸುತ್ತಾಳೆ. ಇಂಥ ಹೂವಿಯ ಮುಗ್ಧತೆಯಿಂದಾನೆ ಇಷ್ಟೆಲ್ಲಾ ಸಮಸ್ಯೆ ಆಗುತ್ತಿರುವುದು ಎಂದು ಭಾವಿಸಿರುವ ಪ್ರಿಯಾಂಕಾ ಇದೀಗ ಮಾಲಿನಿಗೆ ಬೆಂಬಲವಾಗಿ ಬರುತ್ತಿದ್ದಾರೆ. ಹೂವಿ ಜೀವನವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಲಿದ್ದಾರೆ. ಮತ್ತಷ್ಟು ಚಾಲೆಂಜ್‌ಗಳನ್ನು ನೀಡಲಿದ್ದಾರೆ. ಪ್ರಿಯಾಂಕಾ ಶಿವಣ್ಣ ಎಂಟ್ರಿಯಿಂದ ಮತ್ತಷ್ಟು ಟ್ವಿಸ್ಟ್ ಅಂಡ್ ಟರ್ನಿಂಗ್ ಪಾಯಿಂಟ್ ನತ್ತ ಬೆಟ್ಟದ ಹೂ ಉರುಳಲಿದೆ.

More from Filmibeat

English summary
Bettada Hoo Serial November 14th Episode Written Update. Here is the details About Priyanka Shivanna Entry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X