ಬೆಟ್ಟದ ಹೂ: ಜಲ್ಲಿ ಕೈನಲ್ಲಿ ಭವಿಷ್ಯ : ಬ್ಲ್ಯಾಕ್‌ಮೇಲ್‌ಗೆ ಹೆದರಿದ ರಾಹುಲ್!
ಸತ್ಯ ತಿಳಿಯುವ ಕಾರಣದಿಂದ ಮಾಲಿನಿಯೇನೋ ಎಲ್ಲರನ್ನು ಕರೆದುಕೊಂಡು ಚನ್ನವಲ್ಸೆಗೆ ಹೋಗಿದ್ದಾಳೆ. ಆದರೆ ಬಂದವರೆಲ್ಲ ಹೂವಿ ನೀನು ಚೆನ್ನಾಗಿರ್ರಪ್ಪ ಎಂದು ಹರಸುವಾಗ ಅಲ್ಲಿ ಹೂವಿಗೂ ಆತಂಕ. ಇಲ್ಲಿ ರಾಹುಲ್‌ಗೂ ಭಯ. ಮಾಲಿನಿಗೆ ಗೊಂದಲ. ಈ ಎಲ್ಲದರ ನಡುವೆ ಇದೀಗ ಹೊಸ ಸಂಕಷ್ಟಕ್ಕೆ ಸಿಲುಕಿದ್ದಾನೆ ರಾಹುಲ್.
ಹುಲಿಯನಿಗೆ ರಾಹುಲ್ ಮತ್ತು ಮಾಲಿನಿ ಮದುವೆಯಾಗಿರುವುದು ಗೊತ್ತಿಲ್ಲ. ಗೌರನಿಗೆ ಗೊತ್ತಿದ್ದರು ಏನನ್ನು ಹೇಳದ ಸ್ಥಿತಿಯಲ್ಲಿದ್ದಾಳೆ. ಮಾಲಿನಿ ಯಾರು ಎಂದು ಕೇಳುವ ಸಂದರ್ಭ ಬಂದಾಗೆಲ್ಲಾ ಏನನ್ನೋ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಇನ್ನು ಕಾಳವ್ವನಿಗೆ ಎಲ್ಲಾ ಗೊತ್ತಿದ್ದರೂ ಮಾಲಿನಿಯನ್ನು ಹುಚ್ಚಿ ಎಂದು ನಂಬಿದ್ದಾಳೆ. ಇಬ್ಬರು ಗಂಡ ಹೆಂಡತಿಯೆಂಬುದನ್ನು ಸೀರಿಯಸ್ ಆಗಿ ತೆಗೆದುಕೊಂಡಿಲ್ಲ.

ಚನ್ನವಲ್ಸೆಯಲ್ಲಿ ರಾಹುಲ್ ಎದುರಾದ ಜಲ್ಲಿ
ಜಲ್ಲಿ ತಾನು ಒಬ್ಬ ರಿಪೋರ್ಟರ್ ಆಗಬೇಕು ಅಂತ ಬೆಂಗಳೂರಿಗೆ ಬಂದಿದ್ದಾನೆ. ಆದರೆ ಪತ್ರಕರ್ತನಾಗಲೂ ಒಳ್ಳೆಯ ದಾರಿಯಲ್ಲೇ ಹೋಗಬೇಕು ಎಂಬ ಆಸೆ ಅವನಲ್ಲೇನು ಇಲ್ಲ. ಖ್ಯಾತಿ ಪಡೆಯಬೇಕು ಎಂಬುದಷ್ಟೇ ಅವನಲ್ಲಿರುವುದು. ಹೀಗಾಗಿ ಹೂವಿ, ರಾಹುಲ್ ಮದುವೆ ಮೊದಲೇ ಗೊತ್ತಿದ್ದ ಜಲ್ಲಿಗೆ ಮಾಲಿನಿ ವಿಚಾರ ಗೊತ್ತಾಗಿದ್ದೆ ದೊಡ್ಡ ಬಂಡವಾಳ ಮಾಡಿಕೊಂಡು ಹೊರಟಿದ್ದಾನೆ. ಈ ಮೊದಲೇ ಹೂವಿ ಮತ್ತು ರಾಹುಲ್‌ಗೆ ಮದುವೆ ವಿಚಾರದಲ್ಲಿ ಧಮ್ಕಿ ಹಾಕಿದ್ದ. ಈಗ ಅವನ ಧಮ್ಕಿ ಅತಿರೇಕಕ್ಕೆ ಹೋಗಿದೆ.

ಪಂಚಾಯತಿ ಕರೆಸಿದ ಜಲ್ಲಿ
ಜಲ್ಲಿ ಹೇಳಿ ಕೇಳಿ ಚನ್ನವಲ್ಸೆಯವನೇ. ಹೀಗಾಗಿ ಚನ್ನವಲ್ಸೆಯ ರೀತಿ ನೀತಿ ಎಲ್ಲವೂ ಅವನಿಗೆ ಗೊತ್ತಿದೆ. ಯಾರಿಗೆ ಜನ ಹೆದರುತ್ತಾರೆ, ಯಾವುದಕ್ಕೆ ಹೆದರುತ್ತಾರೆ ಎಂಬುದು ತಿಳಿದಿದೆ. ರಾಹುಲ್ ಇಡೀ ಕುಟುಂಬ ಚನ್ನವಲ್ಸೆಗೆ ಬಂದಿದೆ ಎಂದು ಗೊತ್ತಾಗಿದ್ದೆ ತಡ. ಜಲ್ಲಿ ಕೂಡ ಹಾಜರಾಗಿದ್ದಾನೆ. ಚನ್ನವಲ್ಸೆಯಲ್ಲಿ ಪಂಚಾಯತಿಯನ್ನು ಕರೆದಿದ್ದಾನೆ. ಅದು ರಾಹುಲ್ ಮತ್ತು ಹೂವಿ ವಿಚಾರಕ್ಕೆ ಅನ್ನೋದು ಗೊತ್ತಾಗಿದೆ.

ರಾಹುಲ್ ಬಳಿ ಪ್ರಾಜೆಕ್ಟ್‌ಗೆ ಡಿಮ್ಯಾಂಡ್
ಮಿನಿಸ್ಟರ್ ಒಬ್ಬರ ಮಗನ ಬಗ್ಗೆ ರಾಹುಲ್ ಒಂದು ಸ್ಕ್ಯಾಮ್ ಮಾಡಿದ್ದ. ಆ ಸ್ಕ್ಯಾಮ್ ಅನ್ನು ಇನ್ನು ಪ್ರಸಾರ ಕೂಡ ಮಾಡಿರಲಿಲ್ಲ. ಆ ಪ್ರಾಜೆಕ್ಟ್‌ನಿಂದ ಹೆಸರು ಬರುವಂತೆ ಇತ್ತು. ಅದನ್ನು ತಿಳಿದುಕೊಂಡ ಜಲ್ಲಿ ಆ ಪ್ರಾಜೆಕ್ಟ್ ಅನ್ನು ನನಗೆ ಕಳುಹಿಸು ಎಂದು ಡಿಮ್ಯಾಂಡ್ ಇಟ್ಟಿದ್ದ. ಆದರೆ ಇದು ನ್ಯಾಯ ಅಲ್ಲ ಎಂದು ರಾಹುಲ್ ಮೊಂಡುವಾದ ಮಾಡಿದಾಗ, ಪಂಚಾಯತಿಯಲ್ಲಿ ಎಲ್ಲರ ಮುಂದೆ ಹೇಳುವ ನಾಟಕವಾಡಿದ್ದ. ಬಳಿಕ ರಾಹುಲ್ ಅಲ್ಲಿಂದ ದೂರ ಹೋಗಿ ಜಲ್ಲಿಗೆ ಕರೆ ಮಾಡಿ, ಪ್ರಾಜೆಕ್ಟ್ ಕೊಡುವಂತೆ ಒಪ್ಪಿಕೊಂಡ. ಹೂವಿಗೆ ಇದು ಇಷ್ಟವಾಗಲಿಲ್ಲ. ಆದರೂ ಪರಿಸ್ಥಿತಿ ಇಬ್ಬರ ಪರವಾಗಿಯೂ ಇರಲಿಲ್ಲ.

ಜಲ್ಲಿ ಕೈನಲ್ಲಿ ರಾಹುಲ್ ಭವಿಷ್ಯ
ರಾಹುಲ್ ಪ್ರಾಜೆಕ್ಟ್ ಕೊಟ್ಟ ಬಳಿಕ ಜಲ್ಲಿ ಫುಲ್ ಖುಷಿಯಾಗಿ ಬಿಟ್ಟ. ರಾಹುಲ್ ಸರ್ ಬಗ್ಗೆನೇ ಇಲ್ಲಿ ಇವತ್ತು ಪಂಚಾಯತಿ ಕರೆದಿರುವುದು ಅಂತ ಹೇಳಿ ಮತ್ತೆ ಹೂವಿ & ರಾಹುಲ್ ಮನಸ್ಸಲ್ಲಿ ದಿಗಿಲು ಬರಿಸಿದ್ದ. ತಪ್ಪು ಮಾಡಿದ್ದವರನ್ನೇ ಪಂಚಾಯತಿ ಸೇರಿಸಬೇಕು ಅಂತಿಲ್ಲ. ಅವರು ದೊಡ್ಡ ಪತ್ರಕರ್ತಕರಾಗಿದ್ದಾರೆ. ಅವರಿಗೊಂದು ಸನ್ಮಾನ ಮಾಡಬೇಕು ಎಂದು ಹುಲಿಯಪ್ಪನ ಕೈಯ್ಯಾರೆ ಸನ್ಮಾನ ಮಾಡಿಸಿದ. ಆಗ ಜಲ್ಲಿ ತನ್ನ ಮನಸ್ಸಲ್ಲಿ ರಾಹುಲ್ ಸರ್ ಚಿನ್ನದ ಮೊಟ್ಟೆ ಇಡುವ ಕೋಳಿ ಎಂದು ಮುಂದಿನ ಸ್ಕೆಚ್ ಹಾಕಿದ್ದಾನೆ.


Click it and Unblock the Notifications











