ಬೆಟ್ಟದ ಹೂ: ಗೌರ-ಹುಲಿಯನ ಮದುವೆ ದಿನವೇ ಸತ್ಯ ಬಯಲಾಗುತ್ತಾ?

By ಎಸ್ ಸುಮಂತ್

ಹೂವಿ ಮತ್ತು ರಾಹುಲ್‌ಗೆ ಮನಸ್ಸಲ್ಲಿ ಎಷ್ಟು ದುಗುಡ ಇದೆಯೋ ಅಷ್ಟೇ ಆತಂಕ ನೋಡುಗರಿಗೂ ಆಗುತ್ತಿದೆ. ಯಾವಾಗ ಏನಾಗುತ್ತೋ..? ಹೂವಿ-ರಾಹುಲ್ ವಿಚಾರವನ್ನೆಲ್ಲಿ ಮಾಲಿನಿಗೆ ತಿಳಿದು ಬಿಡುತ್ತದೋ ಎಂಬ ಭಯ ಆಗಾಗ ನೋಡುಗರನ್ನು ಕಾಡುತ್ತಿದೆ. ಇದರ ಮಧ್ಯೆ ಊರಿನ ಜನರು ಆಗಾಗ ಬಂದು ಸಿಡಿಲು ಬಡಿದಂತೆ ಮಾತುಗಳನ್ನು ಆಡಿ ಹೋಗುತ್ತಿದ್ದಾರೆ.

ಊರಿಗೆ ಮಗಳು-ಅಳಿಯ ಬಂದಿರುವುದು ಊರವರಿಗೆಲ್ಲಾ ಖುಷಿಯನ್ನೇ ತಂದಿದೆ. ಹೂವಿ ಮದುವೆ ಹೇಗೆ ಆಗಿದೆ ಎಂಬುದು ಎಲ್ಲರಿಗೂ ಗೊತ್ತು. ಭಯದಿಂದ, ಬಂದೂಕಿನ ನಡುವೆ ತಾಳಿ ಕಟ್ಟಿದ್ದ ರಾಹುಲ್. ಆದರೆ ಇದೀಗ ಇಡೀ ಮನೆಯವರು ಹೂವಿ ಮನೆಗೆ ಬಂದಿರುವುದು, ಹೂವಿ ಬದುಕು ನಗರದಲ್ಲಿ ಹೇಗೆಲ್ಲಾ ಇದೆ ಎಂಬುದನ್ನು ಸಾರಿ ಹೇಳುತ್ತಿದೆ. ಆದರೆ ಹೂವಿ ಮತ್ತು ರಾಹುಲ್‌ಗೆ ಇದೇ ಸಂಕಟವಾಗಿದೆ.

ಗೌರಿ ಮತ್ತು ಹುಲಿಯನ ಪ್ರೀತಿ ಕಂಡು ಹೂವಿಗೆ ಖುಷಿ

ಗೌರಿ ಮತ್ತು ಹುಲಿಯನ ಪ್ರೀತಿ ಕಂಡು ಹೂವಿಗೆ ಖುಷಿ

ಹಳ್ಳಿಗೆ ಯಾವುದೋ ಕೆಲಸದ ಮೇಲೆ ಬಂದ ಗೌತಮ್, ಗೌರನನ್ನು ನೋಡಿ ಪ್ರೀತಿಯಲ್ಲಿ ಬಿದ್ದಿದ್ದ. ಆ ಪ್ರೀತಿಯ ಕಾಣಿಕೆಯಾಗಿ ಹೂವಿ ಹುಟ್ಟಿದಳು. ಆದರೆ ಹೂವಿಗೆ ತನ್ನ ತಂದೆ ಯಾರು ಎಂಬುದು ಗೊತ್ತಿಲ್ಲ. ಮಗು ಇದ್ದಾಗಿನಿಂದ ಹುಲಿಯಪ್ಪನೇ ತಂದೆಯ ಸ್ಥಾನದಲ್ಲಿ ನಿಂತು ನೋಡಿಕೊಳ್ಳುತ್ತಿದ್ದಾನೆ. ಗೌರನ ಮೇಲೂ ಅಷ್ಟೆ ಪ್ರೀತಿ ಇಟ್ಟುಕೊಂಡಿದ್ದಾನೆ. ಇದು ಮತ್ತೆ ಮತ್ತೆ ಅನಾವರಣವಾಗಿದೆ. ಗೌರನ ಮನೆಗೆ ಬೇಕಾದ್ದೆಲ್ಲವನ್ನು ತಂದುಕೊಟ್ಟು, ಬೇರೆ ಏನಾದರೂ ಬೇಕೆನಾ ಅಂತ ಕೇಳುತ್ತಾ ಮಾತನಾಡುತ್ತಿದ್ದನ್ನು ಹೂವಿ ಸ್ವಲ್ಪ ದೂರದಿಂದಲೇ ನೋಡಿ ಆನಂದ ಪಡುತ್ತಿದ್ದಾಳೆ.

ಹೂವಿ ಆಸೆಯಂತೆ ಅಮ್ಮು ಮದುವೆ

ಹೂವಿ ಆಸೆಯಂತೆ ಅಮ್ಮು ಮದುವೆ

ಹೂವಿ ತನ್ನ ಅಮ್ಮು ಖುಷಿಯನ್ನು ನೋಡುತ್ತಾ, ಒಬ್ಬೊಬ್ಬಳೇ ಮಾತನಾಡುತ್ತಾ ನಿಂತಿದ್ದಳು. ಇದನ್ನು ನೋಡಿದ ರಾಹುಲ್, ಹೂವಿ ಬಳಿ ಕೇಳಿದ್ದಾನೆ. ಆಗ ಹುಲಿಯಪ್ಪ, ಅಮ್ಮು ಒಂದಾದರೆ ಹೇಗಿರುತ್ತೆ ಅಲ್ವಾ ಎಂದಿದ್ದಾಳೆ. ಅವರಿಬ್ಬರು ಮದುವೆಯಾಗಬೇಕು ಎಂಬುದೇ ನನ್ನ ಆಸೆ. ಹುಲಿಯಪ್ಪನ ಪ್ರೀತಿ ಇಡೀ ಊರಿಗೆ ಗೊತ್ತು. ಅಮ್ಮುನನ್ನು ಎಷ್ಟು ಪ್ರೀತಿ ಮಾಡ್ತಾನೆ ಎಂಬುದನ್ನು ಹೂವಿ ಖುಷಿಯಲ್ಲಿ ಹೇಳಿದ್ದಾಳೆ.

ಗೌರನನ್ನು ಮದುವೆಗ ಒಪ್ಪಿಸಿದ ರಾಹುಲ್

ಗೌರನನ್ನು ಮದುವೆಗ ಒಪ್ಪಿಸಿದ ರಾಹುಲ್

ರಾಹುಲ್ ಗೆ ಕೂಡ ಹುಲಿಯಾ ಮತ್ತು ಅತ್ತೆ ಒಂದಾಗುವುದು ಉತ್ತಮ ಎನಿಸಿದೆ. ಅದೇ ಕಾರಣಕ್ಕೆ ಹೂವಿಯ ಆಸೆಯನ್ನು ಈಡೇರಿಸಲು ಹೊರಟಿದ್ದಾನೆ. ಹುಲಿಯನ ಬಳಿ ಬಂದು ಅತ್ತೆಯನ್ನು ಇನ್ನು ಪ್ರೀತಿಸುತ್ತಿದ್ದೀರಾ ಎಂದು ಕೇಳಿದ್ದಾನೆ. ಅದಕ್ಕೆ ಹುಲಿಯಾ ಹೌದು ಎಂದಾಗ. ಹಾಗಾದ್ರೆ ಅತ್ತೆಯನ್ನು ಮದುವೆಯಾಗಿ ಎಂದಿದ್ದಾನೆ. ಮೊದ ಮೊದಲಿಗೆ ಗೌರ ವಿರೋಧಿಸಿದ್ದಾಳೆ. ಹುಲಿಯಾ ನನಗೆ ಈ ಮದುವೆ ಇಷ್ಟವಿದೆ ಎಂದಾಗ ರಾಹುಲ್ ಅತ್ತೆಯನ್ನು ಒಪ್ಪಿಸಿದ್ದಾನೆ. ಗೌರ ನಾಚಿಕೆಯಿಂದಾನೇ ಒಪ್ಪಿಕೊಂಡಿದ್ದಾಳೆ.

ಮಾವನ ಮಾತಿಗೆ ಬೆಲೆ ಕೊಟ್ಟ ರಾಹುಲ್

ಮಾವನ ಮಾತಿಗೆ ಬೆಲೆ ಕೊಟ್ಟ ರಾಹುಲ್

ರಾಹುಲ್‌ಗೂ ಸಾಕಾಗಿ ಹೋಗಿದೆ ಸತ್ಯವನ್ನು ಮುಚ್ಚಿಟ್ಟು. ಯಾವತ್ತಾದರೂ ಒಂದು ದಿನ ಗೊತ್ತಾಗಲೇ ಬೇಕು. ಜೊತೆಗೆ ಹಲವು ಬಾರಿ ಸತ್ಯ ಹೇಳಲು ಹೋದಾಗಲೂ ರಾಹುಲ್‌ಗೆ ಮತ್ತೇನೋ ತಡೆಯಾಗಿದೆ. ಆದರೆ ಈ ಬಾರಿ ಧೈರ್ಯ ಮಾಡಿದ್ದಾನೆ. ಹುಲಿಯನಿಗೆ ನಾಳೆಯೇ ಮದುವೆಯಾಗಿ ಎಂದಿದ್ದಾನೆ. ಜೊತೆಗೆ ಹುಲಿಯಾ ಕೂಡ ಒಂದು ಮನವಿ ಮಾಡಿದ್ದಾನೆ. ನಮ್ಮಿಬ್ಬರ ಮದುವೆ ದಿನ ಮತ್ತೊಮ್ಮೆ ಹೂವಿಗೆ ನೀವೂ ತಾಳಿ ಕಟ್ಟಬೇಕು ಎಂದಿದ್ದಾನೆ. ಅದಕ್ಕೆ ತುಂಬಾ ಯೋಚಿಸಿ ಒಪ್ಪಿಗೆ ನೀಡಿರುವ ರಾಹುಲ್, ತುದಿಯಲ್ಲಿ ನಿಂತಿದ್ದೀನಿ ಆಳ ಎಷ್ಟಿದೆ ಅನ್ನೋದು ಗೊತ್ತಾಗಿಯೇ ಹೋಗಲಿ ಎಂದು ದೃಢ ನಿರ್ಧಾರ ಮಾಡಿದ್ದಾನೆ.

More from Filmibeat

English summary
Bettada Hoo Serial October 14th Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X