For Quick Alerts
  ALLOW NOTIFICATIONS  
  For Daily Alerts

  ಬೆಟ್ಟದ ಹೂ: ಎಲ್ಲಾ ಸಮಸ್ಯೆಗಳನ್ನು ದಾಟಿ ಮತ್ತೆ ಮದುವೆಯಾದ ಹೂವಿ-ರಾಹುಲ್!

  By ಎಸ್ ಸುಮಂತ್
  |

  ಚನ್ನವಲ್ಸೆಗೆ ಬಂದಾಗಿನಿಂದ ಹೂವಿ ಮತ್ತು ರಾಹುಲ್ ನೆಮ್ಮದಿಯಾಗಿ ಇದ್ದದ್ದು ಇಲ್ಲವೇ ಇಲ್ಲ. ಮಾತಿಗೆ ಮುಂಚೆ ಯಾರೋ ಬರುತ್ತಿದ್ದರು. ಹೂವಿ-ರಾಹುಲ್ ಚೆನ್ನಾಗಿರಿ ಎನ್ನುತ್ತಿದ್ದರು. ಇದನ್ನು ಮಾಲಿನಿಗೆ ತಿಳಿಯದಂತೆ ಸಂಭಾಳಿಸುವುದರಲ್ಲಿ ಹೂವಿ ಮತ್ತು ರಾಹುಲ್ ಸುಸ್ತಾಗಿ ಹೋಗಿದ್ದಾರೆ. ಆದರೆ ಕಡೆಗೂ ಪ್ರೀತಿ ಗೆದ್ದಿದೆ. ಗೌರ ಮತ್ತು ಹುಲಿಯನ ಜೊತೆಗೆ ರಾಹುಲ್ ಮತ್ತು ಹೂವಿ ಮತ್ತೆ ಮದುವೆಯಾಗಿದ್ದಾರೆ.

  ಹುಲಿಯಾ ಮೊದಲಿನಿಂದಲೂ ಗೌರನನ್ನು ತುಂಬಾ ಪ್ರೀತಿಸುತ್ತಿದ್ದ. ಆದರೆ ಗೌರನಿಗೆ ತನ್ನ ಮನಸ್ಸಲ್ಲಿ ಪ್ರೀತಿ ಇದ್ದರೂ, ಅದನ್ನು ಹೇಳಿಕೊಳ್ಳುವುದಕ್ಕೆ ಆಗುತ್ತಿರಲಿಲ್ಲ. ಈಗ ಹೇಳಿಕೊಂಡರೆ ಅದು ಅಪಾರ್ಥವಾಗಬಹುದು ಎಂದುಕೊಂಡಿದ್ದಳು. ಇದೇ ವೇಳೆ ಗೌತಮ್ ಕೂಡ ಹಳ್ಳಿಗೆ ಬಂದು ಹೋಗಿದ್ದ. ಈ ಎಲ್ಲಾ ವಿಚಾರಗಳು ಗೌರನನ್ನು ಕಾಡುತ್ತಿತ್ತು. ಹೀಗಾಗಿ ಗೌರ ಹಿಂದೇಟು ಹಾಕುತ್ತಿದ್ದಳು. ಈಗ ಅಳಿಯನ ಮಾತಿಗೆ ಬೆಲೆ ಕೊಟ್ಟು ಹೊಸ ಜೀವನಕ್ಕೆ ಕಾಳಿಟ್ಟಿದ್ದಾಳೆ.

  Ashwini: 'ಕಾಂತಾರ' ಲೀಲಾಳ ಮೂಗುತಿ ಫುಲ್ ಟ್ರೆಂಡ್: ಎರಡೂ ಕಡೆ ಬೊಟ್ಟು ಇಟ್ಟ ಕಿರುತೆರೆ ನಟಿ!Ashwini: 'ಕಾಂತಾರ' ಲೀಲಾಳ ಮೂಗುತಿ ಫುಲ್ ಟ್ರೆಂಡ್: ಎರಡೂ ಕಡೆ ಬೊಟ್ಟು ಇಟ್ಟ ಕಿರುತೆರೆ ನಟಿ!

  ಒಬ್ಬರಿಗೊಬ್ಬರಿಂದ ಸಮಾಧಾನದ ನುಡಿ

  ಒಬ್ಬರಿಗೊಬ್ಬರಿಂದ ಸಮಾಧಾನದ ನುಡಿ

  ಗೌರ ಮತ್ತು ಹುಲಿಯನಿಗೆ ಮದುವೆ ಮಾಡುವುದು ಹೂವಿಯ ಆಸೆ ಕೂಡ. ಅದಕ್ಕೆ ರಾಹುಲ್ ಕೂಡ ಕೈಜೋಡಿಸಿದ್ದಾನೆ. ಆದರೆ ಹುಲಿಯನಿಗೆ ಕೊಟ್ಟ ಮಾತಿನಿಂದ ಇಬ್ಬರು ಆತಂಕದಲ್ಲಿದ್ದಾರೆ. ಊರಿನ ಜನಕ್ಕೆಲ್ಲಾ ರಾಹುಲ್ ಹಾಗೂ ಹೂವಿ ಗಂಡ ಹೆಂಡತಿ ಎಂಬುದು ಗೊತ್ತು. ಆದರೆ ಮಾಲಿನಿಗೆ ಇನ್ನೇನು ಸತ್ಯ ಗೊತ್ತಾಗುವಷ್ಟರಲ್ಲಿ ಒಂದಷ್ಟು ಗೊಂದಲಗಳಾಗುತ್ತಿವೆ. ಹೀಗಾಗಿ ರಾಹುಲ್ ತನ್ನ ಸಂಕಟವನ್ನು ಹೂವಿ ಬಳಿ ಹೇಳಿಕೊಳ್ಳುತ್ತಿದ್ದಾನೆ. ನಿಂಗೆ ಮೊದಲ ಬಾರಿ ತಾಳಿ ಕಟ್ಟಿದ್ದಾಗಲೂ ಇಷ್ಟೊಂದು ಆತಂಕವಾಗಿರಲಿಲ್ಲ. ಆದರೆ ಇವತ್ತು ತುಂಬಾ ಭಯ ಆಗುತ್ತಾ ಇದೆ. ಜ್ವಾಲಾಮುಖಿಯ ಮೇಲೆ ನಿಂತಂತೆ ಆಗುತ್ತಿದೆ ಎಂದಿದ್ದಾನೆ. ಅದಕ್ಕೆ ಹೂವಿ ರಾಹುಲ್‌ನನ್ನು ಸಮಾಧಾನ ಮಾಡಿದ್ದಾಳೆ. ಪ್ರಾಣ ಹೋಗುವ ಸಂದರ್ಭ ಬಂದರೂ ನಾನು ನಿಮ್ಮ ಜೊತೆಗೆ ಇರುತ್ತೀನಿ ಎಂದಿದ್ದಾಳೆ.

  ದೀಪ್ತಿ ಮಾಡಿದ ಐಡಿಯಾ ವರ್ಕೌಟ್ ಆಗುತ್ತಾ?

  ದೀಪ್ತಿ ಮಾಡಿದ ಐಡಿಯಾ ವರ್ಕೌಟ್ ಆಗುತ್ತಾ?

  ರಾಹುಲ್ ಮತ್ತು ಹೂವಿ ವಿಚಾರ ಮನೆಯಲ್ಲಿ ದೀಪ್ತಿಗೆ ಗೊತ್ತು. ಆದರೆ ಯಾರಿಗೂ ಹೇಳದೆ ಅದನ್ನು ಸಂಭಾಳಿಸಿಕೊಂಡು ಹೋಗುತ್ತಿದ್ದಾಳೆ. ಈಗ ಮದುವೆ ಮನೆಯಲ್ಲಿಯೂ ಅದೇ ಸ್ಥಿತಿ. ಮಾಲಿನಿ ಮತ್ತು ನಿಶಾಂತ್‌ಗೆ ತಿಳಿಯದಂತೆ ದೀಪ್ತಿ ಎಲ್ಲದನ್ನು ಕಾಪಾಡುತ್ತಿದ್ದಾಳೆ. ಹುಲಿಯನಿಗೆ ರಾಹುಲ್ ಮಾತು ಕೊಟ್ಟಿದ್ದಾನೆ. ನಿಮ್ಮ ಜೊತೆಗೆ ನಮ್ಮ ಮದುವೆ ಕೂಡ ನಡೆಯುತ್ತೆ ಎಂದು. ಹೀಗಾಗಿ ಮಾಲಿನಿ ಮತ್ತು ನಿಶಾಂತ್‌ಗೆ ನಿದ್ದೆ ಬರುವ ಮಾತ್ರೆ ಹಾಕಿಕೊಡಲು ದೀಪ್ತಿ ನಿರ್ಧರಿಸಿದ್ದಾಳೆ. ಅದಕ್ಕೆಂದೇ ಜ್ಯೂಸ್ ಕೂಡ ರೆಡಿ ಮಾಡಿದ್ದಾಳೆ. ಆದರೆ ಅಷ್ಟು ಸುಲಭವಾಗಿ ಆ ಪ್ಲ್ಯಾನ್ ಯಶಸ್ಸು ಕಾಣಲಿಲ್ಲ.

  ನಿಶಾಂತ್‌ಗೆ ಸತ್ಯ ಹೇಳುತ್ತಾನಾ ರಾಹುಲ್?

  ನಿಶಾಂತ್‌ಗೆ ಸತ್ಯ ಹೇಳುತ್ತಾನಾ ರಾಹುಲ್?

  ನಿಶಾಂತ್ ಗೆ ಯಾವ ಸತ್ಯ ತಿಳಿಯಬಾರದು ಅಂತ ದೀಪ್ತಿ ಕಷ್ಟಪಟ್ಟು ಜ್ಯೂಸ್‌ಗೆ ನಿದ್ದೆ ಮಾತ್ರೆ ಕೊಟ್ಟಳೋ, ಇದೀಗ ಅದೇ ಸತ್ಯವನ್ನು ರಾಹುಲ್ ನಿಶಾಂತ್‌ಗೆ ತಿಳಿಸಲು ಹೊರಟಿದ್ದಾನೆ. ಹೂವಿ, ನಿದ್ದೆ ಮಾತ್ರೆ ಬೆರೆಸಿದ್ದ ಜ್ಯೂಸ್ ಅನ್ನು ನಿಶಾಂತ್‌ಗೆ ಕೊಟ್ಟಿದ್ದಾಳೆ. ಇನ್ನೇನು ಅದನ್ನು ಕುಡಿಯಬೇಕು ಎನ್ನುವಷ್ಟರಲ್ಲಿ ರಾಹುಲ್ ತೆಗೆದಿದ್ದಾನೆ. ಅದರಲ್ಲಿ ನಿದ್ದೆ ಮಾತ್ರೆ ಹಾಕಿರುವುದನ್ನು ಹೇಳಿದ್ದು, ಯಾಕೆ ಎಂಬ ಸತ್ಯ ಹೇಳಲು ಕರೆದುಕೊಂಡು ಹೋಗಿದ್ದಾನೆ. ಸತ್ಯ ತಿಳಿದರೆ ನಿಶಾಂತ್ ಮೊದಲು ನಿಲ್ಲುವುದು ಹೂವಿ ಪರವಾಗಿ.

  ಹೂವಿಯನ್ನೇ ನಾಲ್ಕನೇ ಬಾರಿ ಮದುವೆಯಾದ ರಾಹುಲ್

  ಹೂವಿಯನ್ನೇ ನಾಲ್ಕನೇ ಬಾರಿ ಮದುವೆಯಾದ ರಾಹುಲ್

  ರಾಹುಲ್ ಯಾವುದೋ ಅನಿವಾರ್ಯತೆಗೆ ಸಿಲುಕಿ ಹೂವಿಯನ್ನು ಮದುವೆಯಾಗಿದ್ದನು. ಆದರೆ ಈ ಬಾರಿ ಮತ್ತೆ ಮದುವೆಯಾಗಿದ್ದು, ನಾಲ್ಕು ಬಾರಿ ತಾಳಿ ಕಟ್ಟಿದ್ದಾನೆ. ಹೂವಿ ಮೊದಲ ಬಾರಿಗೆ ಚನ್ನವಲ್ಸೆಗೆ ಬಂದಾಗ, ಎರಡನೇ ಬಾರಿ ಮನೆಯವರಿಗೆಲ್ಲಾ ವಿಷಯ ತಿಳಿಯಬಾರದು ಎಂಬ ಕಾರಣಕ್ಕೆ, ದೀಪ್ತಿ ಕೊಟ್ಟ ತಾಳಿ ಮೂರನೇ ಬಾರಿ, ಈಗ ಹುಲಿಯನಿಗೆ ಮಾತು ಕೊಟ್ಟಿದ್ದಕ್ಕಾಗಿ ನಾಲ್ಕನೇ ಸಲ ಮದುವೆಯಾಗಿದ್ದಾನೆ. ಇನ್ನು ಮಾಲಿನಿ ಸತ್ಯ ತಿಳಿಯುವ ತವಕದಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದಾಳೆ.

  ಬಹುದಿನಗಳ ಬಳಿಕ ಸತ್ಯ ದಿವ್ಯಾಳನ್ನು ನೋಡಿ ಮಾಡಿದ್ದೇನು ಗೊತ್ತಾ?ಬಹುದಿನಗಳ ಬಳಿಕ ಸತ್ಯ ದಿವ್ಯಾಳನ್ನು ನೋಡಿ ಮಾಡಿದ್ದೇನು ಗೊತ್ತಾ?

  English summary
  Bettada Hoo Serial October 17th Episode Written Update. Here is the details.
  Monday, October 17, 2022, 19:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X