ಬೆಟ್ಟದ ಹೂ: ಮಾಲಿನಿಯನ್ನು ಮದುವೆಗೆ ಬಾರದಂತೆ ಕೂಡಿ ಹಾಕಿದವರು ಯಾರು..?

By ಎಸ್ ಸುಮಂತ್

ಚನ್ನವಲ್ಸೆಗೆ ಬಂದ ಮೇಲೆ ಮಾಲಿನಿಗೆ ಸಾಕಷ್ಟು ಗೊಂದಲವಂತೂ ಕ್ರಿಯೇಟ್ ಆಗಿದೆ. ಏನು ನಡೆಯುತ್ತಿದೆ ಎಂಬುದೇ ತಿಳಿಯದಷ್ಟು ಚಿಂತಾಕ್ರಾಂತಳಾಗಿದ್ದಾಳೆ. ಯಾರೋ ಬರುತ್ತಾರೆ ಏನನ್ನೋ ಹೇಳುತ್ತಾರೆ. ಅದಕ್ಕೆ ಒಂದಕ್ಕೊಂದು ಅರ್ಥವೂ ಇರುವುದಿಲ್ಲ. ಒಂದಕ್ಕೊಂದು ಸಂಬಂಧವೂ ಇರುವುದಿಲ್ಲ. ಮಾಲಿನಿ ಅದರ ಬಗ್ಗೆ ಅರ್ಥ ಕೇಳಿದರೆ ಸಾಕು, ಹೇ ಈ ಹುಡುಗಿಗೆ ಹುಚ್ಚು ಹಿಡಿದಿದೆ ಎನಿಸುತ್ತದೆ ಎಂದು ಮುಂದೆ ಸಾಗುತ್ತಿದ್ದಾರೆ. ಇದು ಮಾಲಿನಿಗೆ ಮತ್ತಷ್ಟು ತಲೆ ನೋವುಂಟು ಮಾಡಿದೆ.

ಹುಲಿಯನ ಆಸೆಯಂತೆ ರಾಹುಲ್, ಹೂವಿಯನ್ನು ಮತ್ತೆ ಮದುವೆಯಾಗುವುದಕ್ಕೆ ಒಪ್ಪಿಕೊಂಡಾಗಿದೆ. ಆದರೆ ಮಾಲಿನಿ ಅಲ್ಲಿಯೇ ಇದ್ದರೆ ಅದು ಬಹಳಷ್ಟು ಕಷ್ಟ. ಅಲ್ಲಿ ರಣರಂಗವೇ ನಡೆದು ಹೋಗುತ್ತದೆ.

ಹೀಗಾಗಿ ಮಾಲಿನಿಯನ್ನು ಅಲ್ಲಿಂದ ದೂರ ಮಾಡುವುದಕ್ಕೆ ಸಾಕಷ್ಟು ಪ್ರಯತ್ನ ಮಾಡಲಾಯಿತು. ಆ ಪ್ರಯತ್ನದಲ್ಲಿ ದೀಪ್ತಿಗೆ ಒಂದು ಕಡೆ ಸೋಲಾಗಿದೆ. ಆದರೆ ಮಾಲಿನಿ ಮದುವೆ ಸಮಯದಲ್ಲಿ ಅಲ್ಲಿರಲಿಲ್ಲ.

ಮಾಲಿನಿ ಇಲ್ಲದೆ ತಾಳಿ ಕಟ್ಟಿದ ರಾಹುಲ್

ಮಾಲಿನಿ ಇಲ್ಲದೆ ತಾಳಿ ಕಟ್ಟಿದ ರಾಹುಲ್

ಹುಲಿಯನಿಗೆ ಮಾತು ಕೊಟ್ಟಿದ್ದ ರಾಹುಲ್ ಏನಾದರೂ ಆಗಿ ಬಿಡಲಿ, ಎಂದಾದರೊಂದು ದಿನ ಸತ್ಯ ಗೊತ್ತಾಗಲೇಬೇಕು ಎಂದುಕೊಂಡು ಧೈರ್ಯ ಮಾಡಿದವ ತಾಳಿ ಕಟ್ಟುವುದಕ್ಕೆ ಮನಸ್ಸು ಮಾಡಿದ. ಮಾಲಿನಿ ಎತ್ತ ಕಡೆಗೆ ನೋಡಿದರು ಕಾಣಿಸುತ್ತಿಲ್ಲ. ಅವಳು ಇಲ್ಲದೆ ಇರುವುದೇ ಉತ್ತಮ ಎಂದುಕೊಂಡವ ಶಾಸ್ತ್ರಗಳಿಗೆಲ್ಲಾ ಅವಸರ ಮಾಡುತ್ತಿದ್ದ. ಹಾಗೂ ಹೀಗೂ ಎರಡು ಜೋಡಿಗಳ ಮದುವೆ ನಡೆದೆ ಹೋಯ್ತು. ಆದರೂ ಮಾಲಿನಿ ಬರಲೇ ಇಲ್ಲ. ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

ಹೂವಿ ಬಗ್ಗೆ ತಿಳಿಯಲು ಹೋಗಿ ಮಾಲಿನಿ ಲಾಕ್

ಹೂವಿ ಬಗ್ಗೆ ತಿಳಿಯಲು ಹೋಗಿ ಮಾಲಿನಿ ಲಾಕ್

ಚನ್ನವಲ್ಸೆಗೆ ಬಂದ ಮೇಲೆ ಅವರಿವರ ಮಾತನ್ನು ತಲೆಗೆ ಹಾಕಿಕೊಂಡ ಮಾಲಿನಿಗೆ ಹೂವಿ ಬಗ್ಗೆ ಸತ್ಯವೊಂದು ಗೊತ್ತಾಗಿದೆ. ಹೂವಿಗೆ ಈ ಮೊದಲೇ ಮದುವೆಯಾಗಿದೆ ಎಂಬುದು ತಿಳಿದುಬಿಟ್ಟಿದೆ. ಅವಳ ಗಂಡ ಯಾರು ಎಂಬುದನ್ನು ಕೇಳಿದರೆ ಮಾತ್ರ ಯಾರು ಹೆಸರು ಹೇಳುತ್ತಿಲ್ಲ. ಈ ಸತ್ಯ ತಿಳಿಯುವ ಬಗ್ಗೆ ಮಾಲಿನಿ ಯೋಚನೆ ಮಾಡುತ್ತಿದ್ದಳು. ಅದೇ ಸಮಯಕ್ಕೆ ಬಂದ ಕಾಲ್ ಮಾಲಿನಿಯನ್ನು ಲಾಕ್ ಮಾಡಿತ್ತು. ಎಷ್ಟೇ ಬಡಿದುಕೊಂಡರೂ ಯಾರೂ ತೆಗೆಯುತ್ತಿರಲಿಲ್ಲ. ಅವರ ಅಮ್ಮ ಮಂದ್ರಾಗೆ ಕಾಲ್ ಮಾಡಿ ಹೇಳಿದರೂ ಅದು ನೆಟ್‌ವರ್ಕ್ ಸಮಸ್ಯೆ ಇದ್ದ ಕಾರಣ ಏನು ಸರಿಯಾಗಿ ಕೇಳಿಸಿಲ್ಲ.

ಮಾಲಿನಿ ಕೂಡಿ ಹಾಕಿದ್ದು ಜಲ್ಲಿ ಅಲ್ಲ!

ಮಾಲಿನಿ ಕೂಡಿ ಹಾಕಿದ್ದು ಜಲ್ಲಿ ಅಲ್ಲ!

ಮಾಲಿನಿಗೆ ಹೂವಿ ಗಂಡನ ಬಗ್ಗೆ ಮಾಹಿತಿ ಹೇಳುತ್ತೀನಿ. ನಾನು ಹೇಳಿದ ಜಾಗಕ್ಕೆ ಬಂದರೆ ಸತ್ಯ ಗೊತ್ತಾಗುತ್ತೆ ಎಂಬುದನ್ನು ಫೋನ್‌ನಲ್ಲಿ ಹೇಳಲಾಗಿತ್ತು. ಆದರೆ ಆ ಕರೆಯನ್ನು ಜಲ್ಲಿಯೇ ಮಾಡಿರಬೇಕು ಎಂದೇ ಎಲ್ಲರೂ ಭಾವಿಸಿದ್ದರು. ಯಾಕೆಂದರೆ ಅದಾಗಲೇ ಜಲ್ಲಿ, ರಾಹುಲ್‌ನನ್ನು ಬ್ಲಾಕ್ ಮೇಲ್ ಮಾಡಿ ಹಣ ಪೀಕಿದ್ದ. ಆದರೆ ಮದುವೆ ಮನೆಯಲ್ಲಿ ನಿಂತು ವಿಡಿಯೋ ಮಾಡುತ್ತಾ, ಈ ಸಮಯದಲ್ಲಿ ಮಾಲಿನಿ ಇರಬೇಕಿತ್ತು ಎಂದು ಜಲ್ಲಿ ಬಯಸಿದಾಗಲೇ ಇದು ಜಲ್ಲಿಯ ಕೆಲಸವಲ್ಲ ಅಂತ ತಿಳಿಸಿತ್ತು.

ಪರಮೇಶಿಯಿಂದ ಹೂವಿಗೆ ಸಿಕ್ಕ ಗಿಫ್ಟ್ ಏನು..?

ಪರಮೇಶಿಯಿಂದ ಹೂವಿಗೆ ಸಿಕ್ಕ ಗಿಫ್ಟ್ ಏನು..?

ಹುಲಿಯಾ ಹೂವಿಗೆ ಮಾತ್ರ ತಂದೆ ಸ್ಥಾನದಲ್ಲಿ ನಿಂತು ನೋಡಿಕೊಂಡಿಲ್ಲ. ಪರಮೇಶಿಯನ್ನು ದತ್ತು ಪಡೆದು, ಅವನನ್ನು ಸ್ವಂತ ಮಗನಂತೆ ನೋಡಿಕೊಂಡಿದ್ದಾನೆ. ಒಳ್ಳೆ ವಿದ್ಯೆ ಕೊಡಿಸಿದ್ದಾನೆ. ಪರಮೇಶಿಗೆ ಹೂವಿ ಮೇಲೆ ಪ್ರೀತಿ ಇದ್ದರು. ಅದನ್ನು ಪಡೆಯುವುದಕ್ಕೆ ಆಗಲಿಲ್ಲ. ಆದರೆ ಈಗ ಹುಲಿಯಾ ಮತ್ತು ಗೌರ ಮದುವೆಯಾಗಿದೆ. ಈ ಸಂತಸದ ಸಮಯದಲ್ಲಿ ಮಾಲಿನಿ ಇದ್ದರೆ ಹೂವಿ ಮತ್ತು ರಾಹುಲ್ ಹಸೆಮಣೆ ಏರುವುದಕ್ಕೆ ಬಿಡುತ್ತಿರಲಿಲ್ಲ. ಅದೇ ಕಾರಣಕ್ಕೆ ಮಾಲಿನಿಯನ್ನು ಪರಮೇಶಿಯೇ ಕೂಡಿ ಹಾಕಿದ್ದ. ಹೂವಿಗೆ ಇದು ನಾನು ನಿನಗೆ ಕೊಟ್ಟ ಗಿಫ್ಟ್ ಎಂದೇ ಹೇಳಿದ್ದ.

More from Filmibeat

English summary
Bettada Hoo Serial October 18th Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X