For Quick Alerts
  ALLOW NOTIFICATIONS  
  For Daily Alerts

  ಮಾಲಿನಿ ಮನಸ್ಸಲ್ಲಿ ಅಖಿಲ್.. ರಾಹುಲ್ ಮನಸ್ಸಲ್ಲಿ ಹೂವಿ.. ಏನಾಗುತ್ತೆ ಚಕ್ರವರ್ತಿ ಸಂಸಾರ..!

  By ಎಸ್ ಸುಮಂತ್
  |

  'ಬೆಟ್ಟದ ಹೂ' ಧಾರಾವಾಹಿಯಲ್ಲಿ ದಿನದಿಂದ ದಿನಕ್ಕೆ ಟ್ವಿಸ್ಟ್ ಸಿಗುತ್ತಾ ಇದೆ. ಸತ್ಯವನ್ನು ಎಷ್ಟು ದಿನ ಅಂತ ಮನಸ್ಸಿನೊಳಗೆ ಇಟ್ಟುಕೊಳ್ಳುವುದು. ಅದು ಕೆಂಡದಂತೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಯಾವತ್ತಾದರೂ ಒಂದು ದಿನ ಸುಡಲೇ ಬೇಕು ಅಲ್ಲವಾ. ಚಕ್ರವರ್ತಿ ಗೂಡು ಹಾಗೂ ಗೌತಮ್ ಮನೆಯಲ್ಲಿ ಒಂದೊಂದು ಸತ್ಯವೂ ಕೆಂಡಕ್ಕಿಂತ ಹೆಚ್ಚಾಗಿ ಸುಡುವಂತ ವಿಚಾರಗಳೇ ಆಗಿದೆ. ಹೇಳುವುದಕ್ಕೂ ಆಗುತ್ತಿಲ್ಲ. ಮುಚ್ಚಿಟ್ಟುಕೊಳ್ಳುವುದಕ್ಕೂ ಆಗುತ್ತಿಲ್ಲ. ಆದರೆ ಈಗ ಎಲ್ಲರ ಮನಸ್ಸಿ ಭಾರವಾಗಿದೆ. ಅದಕ್ಕೆ ಸತ್ಯವನ್ನು ಹೇಳುವುದಕ್ಕೆ ಹೊರಟಿದ್ದಾರೆ.

  ಗಂಡ ಜೊತೆಯಲ್ಲಿಯೇ ಇದ್ದರು, ಅಧಿಕಾರ ಪಡೆದುಕೊಳ್ಳುವ ಹಾಗಿಲ್ಲ. ತಂದೆ ಮನೆಯಲ್ಲಿಯೇ ಇದ್ದರು ಇವರೇ ನಿಜವಾದ ತಂದೆ ಎಂಬ ಸತ್ಯ ಗೊತ್ತಿಲ್ಲ. ನೀನೆ ನನ್ನ ಮಗಳು ಎಂದು ಹೇಳಿಕೊಳ್ಳುವ ಸ್ಥಿತಿಯಲ್ಲಿ ಗೌತಮ್ ಇಲ್ಲ. ಇವಳೇ ಮೊದಲ ಹೆಂಡತಿ ಅಂತ ರಾಹುಲ್ ಹೇಳುವುದಕ್ಕೆ ಧೈರ್ಯ ಸಾಕಾಗುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು ಎಂದಾದರೆ ಸತ್ಯ ಎಂಬುದು ಎಲ್ಲರಿಗೂ ಗೊತ್ತಾಗಲೇಬೇಕಾಗಿದೆ.

  ಅರ್ಧಾಂಗಿ: ಅದಿತಿಯನ್ನು ರಕ್ಷಿಸಲು ಬಂದ ರಾಧಿಕಾ ನಾರಾಯಣ್ : ದಿಗಂತ್ ಹುಷಾರಾಗುವುದು ಡೌಟ್..!ಅರ್ಧಾಂಗಿ: ಅದಿತಿಯನ್ನು ರಕ್ಷಿಸಲು ಬಂದ ರಾಧಿಕಾ ನಾರಾಯಣ್ : ದಿಗಂತ್ ಹುಷಾರಾಗುವುದು ಡೌಟ್..!

  ಮಂದ್ರಾಳಿಂದ ಹೂವಿ ಪ್ರಾಣಕ್ಕೆ ಕುತ್ತು

  ಮಂದ್ರಾಳಿಂದ ಹೂವಿ ಪ್ರಾಣಕ್ಕೆ ಕುತ್ತು

  ಮಾಲಿನಿ ಜೀವನ ಚೆನ್ನಾಗಿರಬೇಕು ಎಂಬ ಕಾರಣಕ್ಕೆ ಹೂವಿ ತನ್ನೆಲ್ಲ ಅಧಿಕಾರವನ್ನು ತ್ಯಾಗ ಮಾಡಿದ್ದಾಳೆ. ಅಷ್ಟೇ ಯಾಕೆ ಅವರಿಬ್ಬರು ಚೆನ್ನಾಗಿರಲಿ ಎಂಬ ಕಾರಣಕ್ಕೆ ಮಂದ್ರಾ ಮನೆಯಲ್ಲಿ ಮರ್ಯಾದೆ, ಪ್ರೀತಿ ಏನು ಸಿಗುವುದಿಲ್ಲ ಎಂದು ಗೊತ್ತಿದ್ದರು ಬಂದಿದ್ದಾಳೆ. ಆದರೆ ಮಂದ್ರಾ ಪ್ರತಿಯೊಂದು ವಿಚಾರದಲ್ಲಿಯೂ ಹೂವಿಯನ್ನು ಅವಮಾನಿಸುತ್ತಾ ಬಂದಿದ್ದಾಳೆ. ಹೂವಿಯ ಮನ್ಸು ಕೂಡ ತಾಳ್ಮೆ ಕಳೆದುಕೊಂಡು, ಮಂದ್ರಾಳ ದುರಹಂಕಾರಕ್ಕೆ ಉತ್ತರ ಕೊಟ್ಟಿದೆ. ಇದಕ್ಕೆ ಕೋಪಗೊಂಡ ಮಂದ್ರಾ ಹೂವಿಯನ್ನು ಕೊಲ್ಲುವ ಹಂತಕ್ಕೆ ತಲುಪಿದ್ದಾಳೆ. ಹೂವಿಯ ತಲೆಗೆ ಬಲವಾಗಿ ಹೊಡೆದಿದ್ದಾಳೆ.

  ಮಾಲಿನಿಗೆ ಅರ್ಥವಾಗುತ್ತಾ ಹೂವಿ ಮಾತಿನ ಅರ್ಥ?

  ಮಾಲಿನಿಗೆ ಅರ್ಥವಾಗುತ್ತಾ ಹೂವಿ ಮಾತಿನ ಅರ್ಥ?

  ಹೂವಿಗೆ ಹೊಡೆದರೂ ಯಾವುದೇ ಪಶ್ಚಾತ್ತಾಪ ಮಾಡಿಕೊಳ್ಳದ ಮಂದ್ರಾ, ಈ ವಿಚಾರವನ್ನು ಮಾಲಿನಿ ಬಳಿ ಹೇಳಿದ್ದಾಳೆ. ಅವಳು ಸತ್ತು ಹೋದರೂ ಡೋಂಟ್ ಕೇರ್. ಅದನ್ನು ಸಂಭಾಳಿಸುವ ಧೈರ್ಯ ನನ್ನಲ್ಲಿದೆ ಎಂದಿದ್ದಾಳೆ. ಏನಾಯಿತು ಎಂದು ಮಾಲಿನಿ ಕೇಳಿದಾಗ, ಏನೇನೊ ಹುಚ್ಚುಚ್ಚಾಗಿ ಮಾತನಾಡುತ್ತಿದ್ದಳು. ಅವಳು ಹಕ್ಕು ಬಿಟ್ಟುಕೊಟ್ಟಿದ್ದಾಳಂತೆ. ಮನೆ ಕೆಲಸದವಳಾಗಿದ್ದಕ್ಕೆ ನೀನು ಸೊಸೆಯಾಗಿರುವುದಂತೆ ಎಂದೆಲ್ಲಾ ಮಾತನಾಡಿದಳು ಎಂದಾಗ ಮಾಲಿನಿಗೆ ಆ ಬಗ್ಗೆ ಬೇರೆ ಏನೋ ಅನುಮಾನ ಕಾಡಿದೆ. ಅದರ ಹಿಂದಿನ ಸತ್ಯವನ್ನು ಬೇಗ ತಿಳಿದುಕೊಳ್ಳಬೇಕು ಎಂದಿದ್ದಾಳೆ.

  ಯಾರಿಗಾಗಿ ಇಬ್ಬರ ಹೋರಾಟ?

  ಯಾರಿಗಾಗಿ ಇಬ್ಬರ ಹೋರಾಟ?

  ಮಂದ್ರಾ ಮನೆಯಲ್ಲಿ ಹೂವಿ ತಲೆಗೆ ಪೆಟ್ಟಾಗಿದೆ. ಆದರೆ ಈ ಕಡೆ ರಾಹುಲ್ ಯೋಚನೆ ಮಾಡುತ್ತಾ ಬರುವಾಗ ಮೆಟ್ಟಿಲಿನಿಂದ ಬಿದ್ದಿದ್ದಾನೆ. ಮನೆಯವರಿಗೆ ಗಾಬರಿಯಾಗಿ ಇಬ್ಬರು ದೇವಸ್ಥಾನಕ್ಕೆ ಹೋಗಿ ಬನ್ನಿ ಎಂದಿದ್ದಾರೆ. ಮಾಲಿನಿ ಕೂಡ ದೇವಸ್ಥಾನಕ್ಕೆ ಹೋಗಲು ಒಪ್ಪಿದ್ದಾಳೆ. ದೇವಸ್ಥಾನಕ್ಕೆ ಹೋದವರ ಮನಸ್ಸಲ್ಲಿ ಏನಿದೆ ಎಂಬುದು ಅರಿವಾಗಿದೆ. ಅರ್ಚನೆ ಮಾಡಿಸುವಾಗ ಮಾಲಿನಿ ತನ್ನ ತವರು ಮನೆಯವರೆಲ್ಲ ಹೆಸರನ್ನು ಹೇಳಿದ್ದಾಳೆ. ಕಡೆಗೆ ಮನದಲ್ಲಿ ಅಖಿಲ್ ಹೆಸರನ್ನು ಹೇಳಿಕೊಂಡು, ಅವನು ಎಲ್ಲಿಯೇ ಇದ್ದರು ಚೆನ್ನಾಗಿ ಇರಲಿ. ದೊಡ್ಡ ಮಟ್ಟಕ್ಕೆ ಬೆಳೆಯಲಿ. ಆದಷ್ಟು ಬೇಗ ಸಿಗಲಿ ಎಂದು ಪ್ರಾರ್ಥಿಸಿಕೊಂಡಿದ್ದಾಳೆ. ಅದರಂತೆ ರಾಹುಲ್ ಕೂಡ ಮನೆಯವರೆಲ್ಲರ ಹೆಸರೇಳಿ, ಮನಸ್ಸಲ್ಲಿಯೇ ರಾಹುಲ್ ಹೆಸರು ನೆನೆದಿದ್ದಾನೆ.

  ಯಾರಿಗೂ ಹೆದರುತ್ತಿಲ್ಲ ಹೂವಿ

  ಯಾರಿಗೂ ಹೆದರುತ್ತಿಲ್ಲ ಹೂವಿ

  ಹೂವಿ ಈಗ ಸ್ಟ್ರಾಂಗ್ ಆಗುತ್ತಿದ್ದಾಳೆ. ತನ್ನ ಅಮ್ಮು ಏನೆಲ್ಲಾ ಸಂಕಟ ಪಟ್ಟಳು ಆದರೂ ಅವಳು ತುಂಬಾ ಗಟ್ಟಿಗಿತ್ತಿಯಾಗಿದ್ದಾಳೆ. ನಾನು ಮಾತ್ರ ಯಾಕೆ ಈ ರೀತಿ ಎಲ್ಲಾದಕ್ಕೂ ಹೆದರಿಕೊಳ್ಳಬೇಕು ಎಂದು ನಿರ್ಧಾರ ಮಾಡಿದವಳು. ಈಗ ಅಮ್ಮ ಮತ್ತು ಮಗಳು ಇಬ್ಬರಿಗೂ ಹೆದರುತ್ತಿಲ್ಲ. ಇಬ್ಬರಿಗೂ ಸರಿಯಾಗಿಯೇ ಕೌಂಟರ್ ಕೊಡುವುದಕ್ಕೆ ರೆಡಿಯಾಗಿದ್ದಾಳೆ.

  English summary
  Bettada Hoo Serial October 1st Episode Written Update. Here is the details.
  Saturday, October 1, 2022, 18:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X