ಹೂವಿಗೆ ಮತ್ತೊಂದು ಸಂಕಷ್ಟ : ಮಾಲಿನಿ ಕೈನಲ್ಲಿದೆ ಹೂವಿ-ರಾಹುಲ್ ಮದುವೆ ಫೋಟೊಗಳು!

By ಎಸ್ ಸುಮಂತ್

ಒಂದು ಸಮಸ್ಯೆಯಿಂದ ಪಾರಾದರೆ ಹೂವಿಗೆ ಮತ್ತೊಂದು ಸಂಕಷ್ಟ ಎದುರಾಗುತ್ತಲೇ ಇದೆ. ಮದುವೆ ಎಂಬ ಬಚ್ಚಿಟ್ಟ ಸತ್ಯವನ್ನು ಹೇಳದೆ ಹೊರತು ಪದೇ ಪದೆ ಸಮಸ್ಯೆಗಳು ಒಂದಲ್ಲ ಒಂದು ರೂಪದಲ್ಲಿ ಹೂವಿಯನ್ನು ಸೇರುತ್ತವೆ. ಈಗ ಹುಲಿಯಾ ಕಳುಹಿಸಿದ ಕವರ್ ರೂಪದಲ್ಲಿ ಹೂವಿ ಸಮಸ್ಯೆಯನ್ನು ಎದುರಿಸಬೇಕಾಗಿದೆ. ಅದು ಮಾಲಿನಿಯ ಕೈ ಸೇರಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಹೂವಿಯ ಸಾಂಸಾರಿಕ ಜೀವನದಲ್ಲಿ ಸಂಕಷ್ಟವಿರುವುದು ಗೌರನಿಗೆ, ಪರಮೇಶಿಗೆ ಗೊತ್ತಿದೆ. ಆದರೆ ಹುಲಿಯನಿಗೆ ಈ ವಿಚಾರ ತಿಳಿದಿಲ್ಲ. ತಿಳಿಯುವ ಸಮಯ ಎದುರಿಗಿದ್ದಾಗಲೂ ಅದನ್ನು ಹೇಗೋ ಬಚಾವ್ ಮಾಡಿದ್ದಾರೆ. ಯಾವ ಸತ್ಯವನ್ನು ತಿಳಿಯದ ಹುಲಿಯಾ, ಇದೀಗ ಅಳಿಯ ಮತ್ತು ಮಗಳ ಫೋಟೊವನ್ನು ಬೀಗರ ಮನೆಗೆ ಕೊರಿಯರ್ ಮಾಡಿದ್ದಾನೆ.

ನಿಶಾಂತ್ ಕೊಟ್ಟ ಉತ್ತರಕ್ಕೆ ಹೂವಿ ನಿಟ್ಟುಸಿರು

ನಿಶಾಂತ್ ಕೊಟ್ಟ ಉತ್ತರಕ್ಕೆ ಹೂವಿ ನಿಟ್ಟುಸಿರು

ನಿಶಾಂತ್‌ಗೆ ಸತ್ಯ ಗೊತ್ತಾದಾಗಿನಿಂದ ನಾನು ಎಲ್ಲವನ್ನೂ ಹೇಳಿ ಬಿಡುತ್ತೀನಿ ಎಂದು ಕುಳಿತಿದ್ದ. ಆದರೆ ಹೂವಿ ಮತ್ತು ರಾಹುಲ್ ಸಮಸ್ಯೆಯನ್ನು ಅರ್ಥ ಮಾಡಿಕೊಂಡ ನಿಶಾಂತ್ ಮನೆಯವರೆಲ್ಲ ಬಂದು ಕೇಳಿದಾಗ ತಾನೂ ಅಮೆರಿಕಾಗೆ ಹೋಗುತ್ತಿರುವ ಬಗ್ಗೆ ಹೇಳಿದ್ದಾನೆ. ನಿಶಾಂತ್ ಈ ಮಾತು ಕೇಳಿ ಹೂವಿ ಮತ್ತು ರಾಹುಲ್ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಮಾಲಿನಿಗೆ ಇದನ್ನು ನಂಬಲು ಸಾಧ್ಯವಾಗಿಲ್ಲ.

ಹೂವಿಯನ್ನು ನೋಡಲು ಗೌತಮ್ ಕಾತುರ

ಹೂವಿಯನ್ನು ನೋಡಲು ಗೌತಮ್ ಕಾತುರ

ಗೌತಮ್‌ಗೆ ಸಾಕಷ್ಟು ಗಿಲ್ಟ್ ಫೀಲ್ ಆಗಿದೆ. ಹೂವಿ ತೀರಾ ಹತ್ತಿರದಲ್ಲಿಯೇ ಇದ್ದರು ಅವಳಿಗೆ ಸತ್ಯ ಹೇಳಿಲ್ಲ. ಅವಳಿಗೆ ತಂದೆಯಾಗಿ ಏನನ್ನು ಮಾಡಿಲ್ಲ ಎಂಬ ಗಿಲ್ಟ್. ಈಗ ಮಗಳನ್ನು ನೋಡಿಕೊಂಡು ಬರಬೇಕು. ಅವಳನ್ನು ಮಾತನಾಡಿಸಿಕೊಂಡು ಬರಬೇಕು ಎಂದು ಡಿಸೈಡ್ ಮಾಡಿದ್ದನು. ಅದರಂತೆ ಮಂದ್ರಾ ಬಳಿ ತಾನೂ ಮಾಲಿನಿ ನೋಡುವುದಕ್ಕೆ ಹೋಗುತ್ತೀನಿ ಎಂದು ಹೇಳಿದಾಗ ನಾನು ಬರುತ್ತೀನಿ ಎಂದಿದ್ದಾಳೆ. ಇದನ್ನು ಮೊದಲೇ ನಿರೀಕ್ಷಿಸಿದ್ದ ಗೌತಮ್ ಸಾಕಷ್ಟು ಸಬೂಬು ಹೇಳಿದ್ದಾನೆ. ಆದರೂ ಮಂದ್ರಾ ಕೇಳಿಲ್ಲ. ಮೊದಲು ಮಂದ್ರಾಳೇ ಹೊರಟು ನಿಂತಿದ್ದಾಳೆ. ವಿಧಿಯಿಲ್ಲ ಅಂತ ಜೊತೆಯಲ್ಲಿ ಹೊರಟ ಗೌತಮ್‌ಗೆ ಮಾಲಿನಿ ಬಾಗಿಲಲ್ಲಿಯೇ ಎದುರಾಗಿದ್ದಾಳೆ. ಇದು ಮಂದ್ರಾಗೆ ಖುಷಿ ಕೊಟ್ಟರೆ, ಗೌತಮ್ ಆಸೆಯನ್ನು ನಿರಾಸೆ ಮಾಡಿದೆ.

ಹುಲಿಯನಿಗೆ ಸತ್ಯ ಹೇಳಲಿಲ್ಲ ಹೂವಿ

ಹುಲಿಯನಿಗೆ ಸತ್ಯ ಹೇಳಲಿಲ್ಲ ಹೂವಿ

ಹುಲಿಯನಿಗೆ ಈ ಯಾವ ಸತ್ಯವೂ ತಿಳಿದಿಲ್ಲ. ಹೀಗಾಗಿ ಮಗಳು ಮತ್ತು ಅಳಿಯನ ಫೋಟೊಗಳನ್ನು ನೋಡಿ ಖುಷಿ ಪಡಲಿ ಎಂದು ಮದುವೆ ಫೋಟೊಗಳನ್ನು ಕೊರಿಯರ್ ಮಾಡಿದ್ದಾನೆ. ಅದನ್ನು ದೀಪ್ತಿ ಫೋನಿಗೆ ಕರೆ ಮಾಡಿ, ಹೂವಿಯ ಬಳಿ ಹೇಳಿದ್ದಾನೆ. ಅರೆ ಕ್ಷಣ ಹೂವಿಗೆ ಏನು ಹೇಳಬೇಕು, ಏನು ಮಾತನಾಡಬೇಕು ಎಂದು ತಿಳಿಯದೆ, ನಗು ನಗುತ್ತಲೇ ಉತ್ತರಿಸಿ ಫೋನ್ ಕಟ್ ಮಾಡಿದ್ದಾಳೆ. ನಂತರ ದೀಪ್ತಿ ಬಳಿ ಬಂದು ತನ್ನ ಟೆನ್ಶನ್ ಹೇಳಿಕೊಂಡಿದ್ದಾಳೆ.

ಫೋಟೊ ಮೂಲಕ ಹೊರ ಬರುತ್ತಾ ಸತ್ಯ?

ಫೋಟೊ ಮೂಲಕ ಹೊರ ಬರುತ್ತಾ ಸತ್ಯ?

ಮಾಲಿನಿಗೆ ಸಿಕ್ಕಾಪಟ್ಟೆ ಅನುಮಾನವಿದೆ. ಹೂವಿಗೆ ಮದುವೆ ಆಗಿರುವುದು ಕನ್ಫರ್ಮ್. ಆದರೆ ಯಾರು ಎಂಬ ಸತ್ಯ ತಿಳಿಯಬೇಕಿದೆ. ಈ ದಾರಿಯಲ್ಲಿ ಹೂವಿಗೆ ನಿಶಾಂತ್, ರಾಹುಲ್, ದೀಪ್ತಿ ಬೆಂಬಲಕ್ಕೆ ನಿಂತಿದ್ದಾರೆ. ಇದನ್ನೆಲ್ಲಾ ಮಾಲಿನಿ ತನ್ನ ಆಪ್ತರ ಬಳಿ ಹೇಳಿಕೊಂಡು ವಾಪಾಸ್ ಮನೆಗೆ ಬಂದಿದ್ದಾಳೆ. ಆಗ ಈ ಫೋಟೊಗಳಿರುವ ಕವರ್ ಅನ್ನು ದೀಪ್ತಿ, ಹೂವಿ, ರಾಹುಲ್ ಟೆನ್ಶನ್ ನಿಂದ ತೆಗೆದುಕೊಂಡು ಹೋಗುತ್ತಿದ್ದನ್ನು ಗಮನಿಸಿದ್ದಾಳೆ. ದೀಪ್ತಿ ಕೈನಿಂದ ಕವರ್ ಕಿತ್ತುಕೊಂಡು ಆ ಒಳಗಿನ ಫೋಟೊಗಳನ್ನು ನೋಡಿದ್ದಾಳೆ. ಹುಲಿಯಾ ಮತ್ತು ಗೌರನ ಫೋಟೊಗಳೇ ಹೆಚ್ಚಾಗಿರುವ ಕಾರಣ ಮಾಲಿನಿಗೆ ಪ್ರೂಫ್ ಸಿಗುವುದು ಕಷ್ಟವಿದೆ.

More from Filmibeat

English summary
Bettada Hoo Serial October 25th Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X