ಬೆಟ್ಟದ ಹೂ: ಹೂವಿ-ರಾಹುಲ್ ಪಟ್ಟ ಶ್ರಮ ವ್ಯರ್ಥ: ಅಣ್ಣನ ಮಗನಿಂದಾನೇ ಸತ್ಯ ಬಯಲಾಗುತ್ತಾ..?
ನಾಲ್ಕು ಫೋಟೊದಲ್ಲಿ ಇಡೀ ಮನೆಯ ನೆಮ್ಮದಿ ಅಡಗಿದೆ. ಹೂವಿ-ರಾಹುಲ್ ಬದುಕು ಅಡಗಿದೆ. ಎರಡು ಹುಲಿಯಪ್ಪನದ್ದು ಇನ್ನೆರಡು ರಾಹುಲ್ ಮತ್ತು ಹೂವಿಯದ್ದು. ಆದರೆ ಬಹಳ ಕಷ್ಟ ಪಟ್ಟ ಮೇಲೂ ಸಿಕ್ಕಿದ್ದು, ಮೂರೇ ಫೋಟೊ. ಮತ್ತೊಂದು ಎಲ್ಲಿ ಹೋಯ್ತು ಎಂಬ ಟೆನ್ಶನ್ ಶುರುವಾಗಿದೆ. ಇದಕ್ಕಾಗಿ ಮನೆಯವರೆಲ್ಲರಿಂದಾನೂ ಹುಡುಕಾಟವೂ ಆರಂಭವಾಗಿದೆ. ಆದರೆ ಎಲ್ಲಿಯೂ ಕಾಣುತ್ತಿಲ್ಲ.
ಚನ್ನವಲ್ಸೆಯಲ್ಲಿ ಅಂದು ಹುಲಿಯಾ ಮತ್ತು ಗೌರನ ಮದುವೆ ದಿನ ಎಲ್ಲರ ಮೊಗದಲ್ಲೂ ಸಂತಸವಿತ್ತು. ಹೂವಿಗೆ ನಗುವುದಕ್ಕೂ ಆಗದೆ, ಅಳುವುದಕ್ಕೂ ಆಗದೆ ಮೇಲ್ನೋಟಕ್ಕೆ ಖುಷಿಯಾಗಿದ್ದಳು. ಆದರೆ ಆ ಸಂತಸದ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆ ಫೋಟೊಗಳನ್ನು ಖುಷಿಗಾಗಿ ಹುಲಿಯಪ್ಪ ರಾಹುಲ್ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

ಹೂವಿ-ರಾಹುಲ್ ಕಂಡು ಬೆರಗಾದ ನಿತಿನ್
ಹೂವಿ ಹೆಸರಲ್ಲಿ ಬಂದ ಕೊರಿಯರ್ ಎಂದುಕೊಂಡು ರಾಹುಲ್ ಅಮ್ಮ ಎತ್ತಿ ಇಟ್ಟಿದ್ದರು. ಆದರೆ ರಾಹುಲ್ ಅಣ್ಣನ ಮಗ ಸ್ಕೂಲಿನಿಂದ ಬಂದ ಮೇಲೆ ಆ ಫೋಟೊಗಳಿರುವ ಕೊರಿಯರ್ ತೆಗೆದುಕೊಂಡು ಆಟವಾಡುವ ವಸ್ತುವನ್ನಾಗಿಸಿಕೊಂಡಿದ್ದ. ಆದರೆ ಅದೇ ಗ್ಯಾಪ್‌ನಲ್ಲಿ ಹೂವಿ ಮತ್ತು ರಾಹುಲ್ ಫೋಟೊಗಳನ್ನು ನೋಡಿದ್ದ. ಅದು ಗೊಂದಲಕ್ಕೆ ಕಾರಣವಾಗಿತ್ತು. ಆ ವಿಚಾರವನ್ನು ಅಮ್ಮ, ಚಿಕ್ಕಪ್ಪ, ಅಜ್ಜಿ ಬಳಿ ಚರ್ಚೆ ಮಾಡುವುದಕ್ಕೆ ಹೋದಾಗಲೂ ಅವರು ಅಷ್ಟಾಗಿ ಕೇಳಿಸಿಕೊಳ್ಳಲಿಲ್ಲ. ಅವನು ಸುಮ್ಮನೆ ಆದ.

ರಾಹುಲ್ ಕೂಡ ಫೋಟೊ ನೋಡದೆ ಹೊರಟೇ ಬಿಟ್ಟ
ಚಿಕ್ಕಪ್ಪ ರಾಹುಲ್ ಬಂದಾಕ್ಷಣಾ ನಿನ್ನ ಫೋಟೊ ನೋಡಿದೆ ಅಂತ ನಿತಿನ್ ಅಷ್ಟು ಸಲ ಹೇಳಿದರೂ, ರಾಹುಲ್ ಆತನ ಮಾತನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಅಪ್ಪ ಕರೆದರು ಅಂತ ಹೊರಟು ಬಿಟ್ಟ. ಬಳಿಕ ಹೂವಿ ಹಾಗೂ ದೀಪ್ತಿ ಆತಂಕಗೊಂಡಿದ್ದಾಗ, ರಾಹುಲ್‌ಗೂ ವಿಚಾರ ತಿಳಿದಿದೆ. ತಕ್ಷಣ ನೆನೆಪಿಸಿಕೊಂಡ ರಾಹುಲ್, ಅಣ್ಣನ ಮಗನ ಕೈನಲ್ಲಿ ಫೋಟೊ ಇದ್ದದ್ದು ಕಂಡು ಓಡಿ ಬಂದಿದ್ದಾರೆ. ಅಷ್ಟರಲ್ಲಿ ರಾಹುಲ್ ಅಮ್ಮನಿಗೆ ಆ ಫೋಟೊಗಳನ್ನು ತೋರಿಸಲು ಮುಂದಾಗಿದ್ದಾಗ, ದೀಪ್ತಿ ಅದನ್ನು ಕಿತ್ತುಕೊಂಡಿದ್ದಾಳೆ.

ಮಾಲಿನಿಯನ್ನು ಯಾಮಾರಿಸಿದ ದೀಪ್ತಿ
ಮಾಲಿನಿ, ಹೂವಿಯ ಸತ್ಯವನ್ನು ತಿಳಿಯಲೇಬೇಕೆಂದುಕೊಂಡು ಅವಳ ಶಾರದಾಂಬೆಯ ವಿಗ್ರಹದ ಹಿಂದೆ ಆಡಿಯೋ ರೆಕಾರ್ಡರ್ ಇಟ್ಟಿದ್ದಾಳೆ. ಅದರಲ್ಲಿ ಹೂವಿ ಫೋಟೊಗಳ ಬಗ್ಗೆ ಮಾತನಾಡಿದ್ದಾಳೆ. ಆ ಫೋಟೊ ಸಿಕ್ಕಿದರೆ ಮನೆಯವರ ನೆಮ್ಮದಿ ಹಾಳಾಗುತ್ತೆ. ಆ ಫೋಟೊಗಳಿರುವ ಸುಳಿವನ್ನು ಕೊಡು ತಾಯಿ ಎಂದು ಕೇಳಿಕೊಂಡಿದ್ದಾಳೆ. ಇದನ್ನು ತಿಳಿದ ಮಾಲಿನಿ ಆ ಫೋಟೊಗಳ ಬಗ್ಗೆ ಕುತೂಹಲ ಬರಿಸಿಕೊಂಡಿದ್ದಾಳೆ. ಅದೇ ಸಮಯಕ್ಕೆ ದೀಪ್ತಿ ಕೊರಿಯರ್ ಕವರ್ ಅನ್ನು ಮುಚ್ಚಿಟ್ಟುಕೊಂಡು ಬರುತ್ತಿದ್ದನ್ನು ಗಮನಿಸಿ, ಕಿತ್ತುಕೊಂಡು ನೋಡಿದ್ದಾಳೆ. ಅದೃಷ್ಟಕ್ಕೆ ದೀಪ್ತಿ ಮೊದಲೇ ಹೂವಿ ಹಾಗೂ ರಾಹುಲ್ ಇರುವ ಫೋಟೊವನ್ನು ಎತ್ತಿಟ್ಟುಕೊಂಡಿದ್ದಳು. ಅದರಲ್ಲಿ ಹುಲಿಯಪ್ಪ ಹಾಗೂ ಗೌರನ ಫೋಟೊ ಮಾತ್ರ ಇತ್ತು.

ಮಾಲಿನಿಗೆ ಸತ್ಯ ತಿಳಿಯುತ್ತಾ..?
ಮದುವೆ ಎಂಬ ಸತ್ಯವನ್ನು ಎಷ್ಟು ಬಾರಿ ಮುಚ್ಚಿಡುವುದಕ್ಕೆ ಪ್ರಯತ್ನ ಪಟ್ಟರು ಆ ಸತ್ಯ ಮತ್ತೆ ಮತ್ತೆ ಇಬ್ಬರನ್ನು ಸುಡುತ್ತಿದೆ. ಈಗ ಮತ್ತೆ ಸತ್ಯ ಬಯಲಾಗುವ ಕಾಲ ಹತ್ತಿರ ಬಂದಿದೆ. ಹುಲಿಯಪ್ಪ ಕಳುಹಿಸಿದ್ದ ಫೋಟೊದಲ್ಲಿ ಒಂದು ಮುಖ್ಯವಾದ ಫೋಟೊ ಯಾರಿಗೂ ಸಿಗಬಾರದು ಎಂದುಕೊಂಡಿದ್ದರೋ ಅವರ ಬೆಡ್ ಮೇಲೆಯೇ ಮಲಗಿದೆ. ಮಾಲಿನಿ ಈ ಫೋಟೊ ನೋಡುವ ಮುನ್ನ ರಾಹುಲ್ ಕಣ್ಣಿಗೆ ಬಿದ್ದರೆ ಇಬ್ಬರು ಬಚಾವ್ ಆಗದಿದ್ದಲ್ಲಿ ಸತ್ಯದ ಪರದೆ ಸರಿದು, ಮನೆಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಲಿದೆ.


Click it and Unblock the Notifications











