ಬೆಟ್ಟದ ಹೂ: ಕಷ್ಟಪಟ್ಟಿದ್ದಕ್ಕೂ ಸಾರ್ಥಕ.. ಮಾಲಿನಿ ಕೈಗೆ ಸಿಕ್ಕಿತು ಹೂವಿ ಮದುವೆಯ ಫೋಟೋ..!

By ಎಸ್ ಸುಮಂತ್

ಮದುವೆಯೆಂಬ ಸತ್ಯ ಮುಚ್ಚಿಡುವುದಕ್ಕೆ ಪಟ್ಟ ಪಾಡು ಅಷ್ಟಿಷ್ಟಲ್ಲ. ಬೇಡ ಬೇಡವೆಂದರೂ ಹೂವಿಯ ಸುತ್ತಲೂ ಮದುವೆಯೆಂಬ ವಿಚಾರ ಸುತ್ತುತ್ತಲೇ ಇತ್ತು. ಮಾಲಿನಿಯಿಂದ ಮುಚ್ಚಿಡುವುದಕ್ಕೆ ಕಷ್ಟಪಟ್ಟರು, ಆ ಸತ್ಯ ಮಾಲಿನಿ ಮಗ್ಗುಲಲ್ಲೇ ಸುಳಿದಾಡುತ್ತಿತ್ತು. ಈಗ ಎಲ್ಲವೂ ಮುಗಿಯಿತು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ, ಮಾಡಿದ ಸಣ್ಣ ಮಿಸ್ಟೇಕ್ ಮತ್ತೆ ಗುಟ್ಟಿನ ಹಿಂದೆ ಬೀಳುವಂತೆ ಮಾಡಿದೆ.

ಚನ್ನವಲ್ಸೆಗೆ ಹೋದಾಗಲೂ ಭಯದಲ್ಲಿಯೇ ಪಯಣ ಮುಗಿಸಿದ್ದರು. ಹೂವಿ ನಂಬುವ ಶಾರದಾಂಬೆಯ ಆಶೀರ್ವಾದದಿಂದಲೇ ಮಾಲಿನಿಗೆ ಏನು ವಿಚಾರ ತಿಳಿಯದಂತೆ ಮತ್ತೆ ರಾಹುಲ್-ಹೂವಿ ಕಲ್ಯಾಣ ನಡೆದಿತ್ತು. ಆ ಕಲ್ಯಾಣದ ಫೋಟೋ ಮನೆಬಾಗಿಲಿಗೆ ಬಂದು ದಿಗಿಲು ತಂದಿಟ್ಟಿತ್ತು. ಎಲ್ಲವೂ ಕಳೆಯಿತು ಎಂದುಕೊಳ್ಳುವಾಗಲೇ ಫೋಟೋ ಚೂರೊಂದು ಕಥೆ ಹೇಳುತ್ತಿದೆ.

ಅನಿ ಪ್ರಶ್ನೆಗೆ ಉತ್ತರ ಕೊಡದೆ ನಡುಗಿದ ರಾಹುಲ್

ಅನಿ ಪ್ರಶ್ನೆಗೆ ಉತ್ತರ ಕೊಡದೆ ನಡುಗಿದ ರಾಹುಲ್

ಮನೆಯಲ್ಲಿ ಯಾರು ನೋಡದ ಫೋಟೋವನ್ನು ರಾಹುಲ್ ಅಣ್ಣನ ಮಗ ಅನಿ ನೋಡಿಬಿಟ್ಟಿದ್ದ. ಆದರೆ ಅವನ ಬಾಯಿ ಮುಚ್ಚಿಸುವುದು ಅಷ್ಟು ಸುಲಭವಾಗಿರಲಿಲ್ಲ. ಅವನು ಕೇಳುವ ಪ್ರಶ್ನೆಗಳಿಗೂ ಉತ್ತರ ಕೊಡುವುದಕ್ಕೆ ಆಗದಷ್ಟು ಸಂಕಟಕ್ಕೆ ಸಿಲುಕಿದ್ದರು. ನೀವೂ ಮಾಲಿನಿ ಚಿಕ್ಕಮ್ಮನ ಜೊತೆಗೆ ಇದ್ದ ರೀತಿಯಲ್ಲಿ ಹೂವಿಯ ಅಕ್ಕ ಜೊತೆಗೂ ಇದ್ದೀರಾ ಯಾಕೆ ಎಂದು ಕೇಳಿದಾಗ ರಾಹುಲ್ ಗಾಬರಿಯಾದ. ಹೂವಿಗೆ ಕೈಕಾಲೇ ಆಡಲಿಲ್ಲ. ಇದರ ನಡುವೆ ದೀಪ್ತಿ, ಅನಿಯನ್ನು ಹೊಗಳಿ ಆ ಸತ್ಯವನ್ನು ಯಾಮಾರಿಸಿದಳು.

ರಾಹುಲ್ ಕಣ್ಣಿಗೆ ಬಿದ್ದಿದ್ದಕ್ಕೆ ಬಚಾವ್

ರಾಹುಲ್ ಕಣ್ಣಿಗೆ ಬಿದ್ದಿದ್ದಕ್ಕೆ ಬಚಾವ್

ಹುಲಿಯಪ್ಪ ಮದುವೆಯ ನಾಲ್ಕು ಫೋಟೋಗಳನ್ನು ಕಳುಹಿಸಿದ್ದರು. ಅದರಲ್ಲಿ ಹೂವಿ & ರಾಹುಲ್ ದು ಎರಡು ಫೋಟೋ ಇತ್ತು. ಒಂದು ಫೋಟೋ ದೀಪ್ತಿ ಹರಿದು ಹಾಕಿದ್ದಾಯ್ತು, ಮತ್ತೊಂದು ಎಲ್ಲಿ ಎಂದು ಹುಡುಕಾಡಿ, ಆ ಫೋಟೋ ಇಲ್ಲವೇನೋ ಎಂದು ಸಮಾಧಾನ ಮಾಡಿಕೊಂಡಿದ್ದಾಗಿತ್ತು. ಆದರೆ ಆ ಫೋಟೋ ಮಾಲಿನಿ ಪಕ್ಕದಲ್ಲಿಯೇ ಇತ್ತು ಎಂಬುದು ರಾಹುಲ್ ಗೆ ತಿಳಿಯಿತು. ಮಾಲಿನಿ ಕೆಳಗೆ ಮಲಗಿಕೊಳ್ಳಲೆಂದು ಬೆಡ್ ಶೀಟ್ ಎತ್ತುವಾಗ ಆ ಫೋಟೋ ರಾಹುಲ್ ಕಾಲ ಕೆಳಗೆ ಬಂದು ಬಿತ್ತು. ಅದನ್ನು ಯಾಮಾರಿಸುವುದಕ್ಕಾಗಿ ಸಾಕಷ್ಟು ಪ್ರಯತ್ನ ಪಟ್ಟು ಫೈನಲಿ ರಾಹುಲ್ ಸಕ್ಸಸ್ ಆದ.

ಹೂವಿ ಮನಸ್ಸಲ್ಲೂ ಆಸೆಗಳಿವೆ

ಹೂವಿ ಮನಸ್ಸಲ್ಲೂ ಆಸೆಗಳಿವೆ

ಚಕ್ರವರ್ತಿ ಕುಟುಂಬಕ್ಕೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂದು ಹೂವಿ ಬಯಸುತ್ತಾಳೆ. ರಾಹುಲ್ ಮತ್ತು ಮಾಲಿನಿ ಜೀವನ ಚೆನ್ನಾಗಿರಲಿ ಎಂದೇ ಆಸೆ ಪಡುತ್ತಾಳೆ. ಅದಕ್ಕೆಂದೇ ತನ್ನ ಜೀವನವನ್ನು ತ್ಯಾಗ ಮಾಡಲು ಹೊರಟಿದ್ದಾಳೆ. ಡಿವೋರ್ಸ್ ಒಂದೇ ದಾರಿ ಎಂದುಕೊಂಡಿರುವ ಹೂವಿ ಬಳಿ ದೀಪ್ತಿ ಅವಳ ಭಾವನೆಯನ್ನು ಕೆಣಕಿದ್ದಾಳೆ. ನೀನು ರಾಹುಲ್‌ನನ್ನು ಪ್ರೀತಿ ಮಾಡುತ್ತಿಲ್ಲವಾ ಎಂದು ಪ್ರಶ್ನಿಸಿದ್ದಾಳೆ. ಇದಕ್ಕೆ ಹೂವಿ ಮೌನಿಯಾಗಿದ್ದಾಳೆ. ಆ ಮೌನವೇ ರಾಹುಲ್ ಮೇಲಿರುವ ಪ್ರೀತಿಯನ್ನು ಸಾರಿ ಹೇಳುತ್ತಿದೆ.

ಮಾಲಿನಿ ಕೈಗೆ ಕಡೆಗೂ ಸಿಕ್ಕಿತು ಪ್ರೂಫ್

ಮಾಲಿನಿ ಕೈಗೆ ಕಡೆಗೂ ಸಿಕ್ಕಿತು ಪ್ರೂಫ್

ಮನೆಯವರಿಗೆ ಹೂವಿ ಮತ್ತು ರಾಹುಲ್ ಮದುವೆ ಸತ್ಯ ಗೊತ್ತಾಗಬಾರದು ಎಂದು ನಾಲ್ಕು ಜನ ಸೇರಿ ಸಾಕಷ್ಟು ಶ್ರಮ ಹಾಕಿದ್ದಾರೆ. ಹಾಗೋ ಹೀಗೋ ಸುನಾಮಿಯಂತೆ ಬಂದ ಅಪಾಯದಿಂದ ತಪ್ಪಿಸಿಕೊಂಡಿದ್ದರು. ಆದರೂ ನಿಶಾಂತ್ ಮಾಡಿದ ಸಣ್ಣ ಯಡವಟ್ಟು ಮಾಲಿನಿಗೆ ಮತ್ತೆ ಸತ್ಯ ಹುಡುಕುವ ದಾರಿ ಮಾಡಿಕೊಟ್ಟಿದೆ. ಹೂವಿಯ ಮದುವೆಯ ಫೋಟೋ ಸುಟ್ಟು ಹಾಕಿರುವುದು ನಿಶಾಂತ್ ರೂಮಿನ ಡಸ್ಟ್ ಬಿನ್ ನಲ್ಲಿ ಸಿಕ್ಕಿದೆ. ಅದರಲ್ಲಿ ಹೂವಿಗೆ ತಾಳಿ ಬಿದ್ದಿರುವ ಪ್ರೂಫ್ ಮಾತ್ರ ಇದೆ. ಆದರೆ ಗಂಡ ಯಾರು ಎಂಬ ಸುಳಿವು ಇಲ್ಲ. ಇದನ್ನು ಕಂಡು ಹಿಡಿಯುವುದಕ್ಕೆ ಮಾಲಿನಿ ಈಗ ಮತ್ತೆ ಶುರು ಮಾಡುತ್ತಾಳೆ.

More from Filmibeat

English summary
Bettada Hoo Serial October 28th Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X