For Quick Alerts
  ALLOW NOTIFICATIONS  
  For Daily Alerts

  ಬೆಟ್ಟದ ಹೂ: ಹೂವಿಯನ್ನು ಕೊಲ್ಲಲು ಹೋಗಿದ್ದ ಮಾಲಿನಿ ಪ್ರಾಣ ಕಾಪಾಡಿದ್ದು ಯಾರು?

  By ಎಸ್ ಸುಮಂತ್
  |

  ಮಾಲಿನಿಗೆ ರಾಹುಲ್ ಮೇಲೆ ಯಾವುದೇ ಪ್ರೀತಿ ಇಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಅಖಿಲ್ ಗೋಸ್ಕರ ರಾಹುಲ್‌ನನ್ನು ಮದುವೆಯಾಗಿದ್ದಾಳೆ. ಅಖಿಲ್ ಎಲ್ಲಿದ್ದಾನೆ ಎಂಬುದನ್ನು ತಿಳಿಯದೆ ಕಂಗಲಾಗಿದ್ದಾಳೆ. ಅವನ ಜೀವನ ಹಾಳು ಮಾಡಿದ್ದಕ್ಕೆ ರಾಹುಲ್ ಜೀವನವನ್ನು ಹಾಳು ಮಾಡುತ್ತೀನಿ ಎಂದು ಹಠ ತೊಟ್ಟಿದ್ದಾಳೆ.

  ಅದಕ್ಕಾಗಿಯೇ ಸಣ್ಣ ಸಣ್ಣ ವಿಚಾರಕ್ಕೂ ಈಗ ರಾಹುಲ್ ಮನೆಯಲ್ಲಿ ಯುದ್ಧವಾಗುವಂತೆ ಮಾಡುತ್ತಿದ್ದಾಳೆ. ಅದರಲ್ಲೂ ಹೂವಿ ವಿಚಾರದಲ್ಲಿ ಇನ್ನು ಹೆಚ್ಚು ಗಲಾಟೆ ಮಾಡುತ್ತಿದ್ದಾಳೆ. ಅದರ ಭಾಗವಾಗಿ ಹೂವಿಯನ್ನು ಕೊಲ್ಲುವುದಕ್ಕೆ ಹೋಗಿದ್ದಾಳೆ.

  ಮಾಲಿನಿ ಮನಸ್ಸಲ್ಲಿ ಅಖಿಲ್.. ರಾಹುಲ್ ಮನಸ್ಸಲ್ಲಿ ಹೂವಿ.. ಏನಾಗುತ್ತೆ ಚಕ್ರವರ್ತಿ ಸಂಸಾರ..!ಮಾಲಿನಿ ಮನಸ್ಸಲ್ಲಿ ಅಖಿಲ್.. ರಾಹುಲ್ ಮನಸ್ಸಲ್ಲಿ ಹೂವಿ.. ಏನಾಗುತ್ತೆ ಚಕ್ರವರ್ತಿ ಸಂಸಾರ..!

  ಹೂವಿ ತನ್ನ ಪಾಡಿಗೆ ತಾನಿದ್ದರು ಬಿಡದ ಅಮ್ಮ ಮಗಳು, ಅವಳ ಕೋಪಕ್ಕೆ ಗುರಿಯಾಗುತ್ತಿದ್ದಾರೆ. ಹೂವಿಗೆ ಏನೇ ಅಂದರೂ ಸಹಿಸಿಕೊಳ್ಳುತ್ತಾಳೆ. ಆದರೆ ಅಮ್ಮು ಬಗ್ಗೆ ಮಾತನಾಡಿದರೆ ಅವರ ಚಳಿ ಬಿಡಿಸಿಬಿಡುತ್ತಾಳೆ. ಇದು ಗೊತ್ತಿದ್ದರು ಸಹ ಮಾಲಿನಿ ಹಾಗೂ ಮಂದ್ರಾ ಹೂವಿಯ ಅಮ್ಮು ಬಗ್ಗೆ ಮಾತನಾಡಿ ಕೆಣಕುತ್ತಿದ್ದಾರೆ.

  ದೇವಸ್ಥಾನದಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಹೂವಿ

  ದೇವಸ್ಥಾನದಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಹೂವಿ

  ತಾನು ಮೊದಲ ಹೆಂಡತಿಯಾಗಿದ್ದರು, ಮಾಲಿನಿ ಮತ್ತು ರಾಹುಲ್ ಚೆನ್ನಾಗಿಯೇ ಇರಬೇಕೆಂದು ಹೂವಿ ಬಯಸುತ್ತಾಳೆ. ಅದೇ ಕಾರಣದಿಂದಾನೇ ಇಂದು ದೇವಸ್ಥಾನಕ್ಕೆ ಬಂದು, ವಿಶೇಷ ಪೂಜೆ ಮಾಡಿಸಿ, ಹೆಜ್ಜೆ ನಮಸ್ಕಾರ ಹಾಕಿದ್ದಾಳೆ. ಆದರೆ ಮಂದ್ರಾ ತಲೆಯೊಡೆದಿದ್ದ ಕಾರಣ ತಲೆ ಸುತ್ತು ಬಂದು ಬಿದ್ದೆ ಬಿಟ್ಟಿದ್ದಾಳೆ. ಆ ಕಡೆಯೇ ಹೋಗುತ್ತಿದ್ದ ರಾಹುಲ್‌ಗೆ ಹೂವಿ ಬಿದ್ದಿರುವುದು ಕಂಡಿದೆ. ಯಾರೋ ಎಂದುಕೊಂಡು ಹೋದ ರಾಹುಲ್‌ಗೆ ಹೂವಿ ಕಂಡು ಶಾಕ್ ಆಗಿದೆ. ಬಳಿಕ ಅವಳನ್ನು ಎತ್ತುಕೊಂಡು ಹೋಗಿ ಕಾಪಾಡಿದ್ದಾನೆ.

  ಬೆಟ್ಟದ ಹೂ: ವಾವ್.. ಹೂವಿಯ ಒಂದೇ ಮಾತಿಗೆ ಮಂದ್ರಾ ಧ್ವನಿ ಅಡಗಿ ಹೋಯ್ತು..!ಬೆಟ್ಟದ ಹೂ: ವಾವ್.. ಹೂವಿಯ ಒಂದೇ ಮಾತಿಗೆ ಮಂದ್ರಾ ಧ್ವನಿ ಅಡಗಿ ಹೋಯ್ತು..!

  ರೊಚ್ಚಿಗೆದ್ದ ಮಾಲಿನಿಗೆ ಹೂವಿ ತಿರುಗೇಟು

  ರೊಚ್ಚಿಗೆದ್ದ ಮಾಲಿನಿಗೆ ಹೂವಿ ತಿರುಗೇಟು

  ರಾಹುಲ್, ಹೂವಿಯನ್ನು ಎತ್ತಿಕೊಂಡು ಹೋಗಿ, ತೊಡೆಯ ಮೇಲೆ ಮಲಗಿಸಿಕೊಂಡು, ಏನಾಯಿತು ಎಂದು ಆರೋಗ್ಯ ವಿಚಾರಿಸುತ್ತಿದ್ದ. ಆದರೆ ಅಷ್ಟರೊಳಗೆ ಅಲ್ಲಿಗೆ ಬಂದ ಮಾಲಿನಿ ರಂಪ ರಾದ್ಧಾಂತ ಮಾಡಿದ್ದಳು. ರಾಹುಲ್ ಮತ್ತು ಹೂವಿ ನಡುವಿನ ಕ್ಯಾರೆಕ್ಟರ್ ಬಗ್ಗೆ ಕೆಟ್ಟದಾಗಿ ಮಾತನಾಡಿದಳು. ಹೂವಿಯ ಅಮ್ಮು ಬಗ್ಗೆ ಕೂಡ ಕೆಟ್ಟದಾಗಿ ಮಾತನಾಡಿದ್ದಳು. ಇದನ್ನು ಸಹಿಸದ ಹೂವಿ, ನಿಮಗೆ ಕಡೆಯದಾಗಿ ಹೇಳುತ್ತಾ ಇದ್ದೀನಿ. ನನ್ನ ಅಮ್ಮು ಬಗ್ಗೆ ಮಾತನಾಡಬೇಡಿ ಅಕ್ಕೋರಾ. ನನ್ನ ದಾರಿ ಸರಿಯಾಗಿಯೇ ಇದೆ. ಮೊದಲು ನಿಮ್ಮ ದಾರಿ ಸರಿ ಮಾಡಿಕೊಳ್ಳಿ ಎಂದು ಹೇಳಿ ಹಿಂದೆ ತಿರುಗದೆ ನಡೆದಳು.

  ಹೂವಿ ಪ್ರಾಣ ತೆಗೆಯಲು ಹೋದ ಮಾಲಿನಿ

  ಹೂವಿ ಪ್ರಾಣ ತೆಗೆಯಲು ಹೋದ ಮಾಲಿನಿ

  ಹೂವಿಯ ಈ ಖಡಕ್ ಮಾತು ಮಾಲಿನಿ ಕೋಪವನ್ನು ಮತ್ತಷ್ಟು ಹೆಚ್ಚು ಮಾಡಿತ್ತು. ನನಗೆ ಧಿಕ್ಕರಿಸಿ ಹೋಗುತ್ತೀಯಾ, ನನ್ನನ್ನೇ ಸರಿ ಇಲ್ಲ ಎಂದು ಹೇಳಿ ಹೋಗುತ್ತೀಯಾ, ನಿನ್ನನ್ನು ಕೊಂದು ಬಿಡುತ್ತೇನೆ ಎಂದು ಅಲ್ಲಿಯೇ ಪಕ್ಕದಲ್ಲಿದ್ದ ತ್ರಿಶೂಲ ತೆಗೆದುಕೊಂಡು ಚುಚ್ಚಲು ಹೋದಳು. ಆದರೆ ಕಾಲು ಎಡವಿ ತ್ರಿಶೂಲ, ಮಾಲಿನಿಯ ಮುಂಭಾಗ ಹಾಗೇ ನೆಟ್ಟಿತು. ಅದರ ಮೇಲೆ ಇನ್ನೇನು ಮಾಲಿನಿ ಬೀಳಬೇಕಿತ್ತು, ಅಷ್ಟರೊಳಗೆ ಹೂವಿ ಬಂದು ಮಾಲಿನಿಯನ್ನು ಕಾಪಾಡಿದಳು. ಆದರೂ ಮಾಲಿನಿಗೆ ಧನ್ಯ ಭಾವನೆಯಲ್ಲಿ ನೋಡಲೇ ಇಲ್ಲ.

  ಮಾಲಿನಿ ಮಾತು ಧಿಕ್ಕರಿಸಿ ಹೊರಟ ರಾಹುಲ್

  ಮಾಲಿನಿ ಮಾತು ಧಿಕ್ಕರಿಸಿ ಹೊರಟ ರಾಹುಲ್

  ಇನ್ನು ಅಜ್ಜಿ ಮಾಲಿನಿ ಮತ್ತು ರಾಹುಲ್ ಜಗಳವಾಡುತ್ತಿದ್ದನ್ನು ನೋಡಿದರು. ಅದೇನೋ ಸತ್ಯ ಮಾತಿನ ಬಗ್ಗೆ ಮಾತನಾಡುತ್ತಿದ್ದರು ಎಂದು ಹೂವಿ ಜೊತೆ ಹೇಳಿದಾಗ, ಹೂವಿಗೆ ಅನುಮಾನ ಮೂಡಿತು. ಅಲ್ಲಿಂದ ಓಡಿ ಹೋದ ಹೂವಿ ಸತ್ಯ ಹೇಳದಂತೆ ತಡೆದಳು. ಅಷ್ಟರಲ್ಲಿ ಮತ್ತೆ ತಲೆ ಸುತ್ತಿ ಬಿದ್ದಳು. ಹೂವಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದಂತೆ ಮಾಲಿನಿ ತಡೆದರೂ, ರಾಹುಲ್ ಅವಳನ್ನು ಧಿಕ್ಕರಿಸಿ ಹೋಗಿದ್ದಾನೆ.

  English summary
  Bettada Hoo Serial October 3rd Episode Written Update. Here is the details.
  Monday, October 3, 2022, 17:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X