ಬೆಟ್ಟದ ಹೂ: ಮನೆ ಬಿಟ್ಟು ಹೋದ ಹೂವಿಯನ್ನು ಕರೆತರಲು ಹೊರಟಿದ್ದೇಕೆ ಮಾಲಿನಿ?

By ಎಸ್ ಸುಮಂತ್

ಹೂವಿ ವಿಚಾರಕ್ಕೆ ಮನೆ ಬಿಟ್ಟು ಹೋಗಿದ್ದ ಮಾಲಿನಿ ಮತ್ತೆ ಬಂದದ್ದು, ಆತ್ಮಹತ್ಯೆಯ ನಾಟಕವಾದ ಮೇಲೆ. ಅದು ಹೂವಿ ಮನೆಯಲ್ಲಿ ಇರಬಾರದು ಎಂಬ ಕಂಡೀಷನ್ ಮೇಲೆ. ಇದೇ ಸಂದರ್ಭದಲ್ಲಿ ಗೌತಮ್ ಮತ್ತು ಮಂದ್ರಾ, ಹೂವಿಯನ್ನು ತಮ್ಮ ಮನೆಗೆ ಕಳುಹಿಸಿ ಎಂದು ಕೇಳಿದ್ದರು. ಗೌತಮ್ ಕೂಡ ತುಂಬಾ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದರು. ಹೂವಿ ಕೂಡ ರಾಹುಲ್ ಸರ್ ಸಂಸಾರ ಸರಿಯಾಗುತ್ತೆ ಎನ್ನುವುದಾದರೇ ನಾನು ಹೋಗುತ್ತೀನಿ ಎಂದು ಹೇಳಿ ಹೊರಟಿದ್ದಳು.

ಮಂದ್ರಾಳನ್ನು ನಂಬದೇ ಹೋದರೂ, ಗೌತಮ್‌ನನ್ನು ನಂಬಿ ಹೂವಿಯನ್ನು ಆ ಮನೆಗೆ ಕಳುಹಿಸಿದ್ದರು. ಆದರೆ ಈಗ ಮನೆಯವರೆಲ್ಲ ಯೋಚನೆ ಮಾಡದಷ್ಟು ದೊಡ್ಡ ತಪ್ಪು ನಡೆದಿದೆ.ಮಂದ್ರಾಳಾ ಟಾರ್ಚರ್ ಒಂದು ಕಡೆ. ರಾಹುಲ್‌ನನ್ನು ಮರೆಯುವುದಕ್ಕೆ ಆಗದೆ ಒದ್ದಾಟ ಮತ್ತೊಂದು ಕಡೆ. ನನ್ನಿಂದ ಯಾರ ಜೀವನವೂ ಹಾಳಾಗಬಾರದು ಎಂಬ ಕಾರಣಕ್ಕೆ ಹೂವಿ ಬೆಂಗಳೂರನ್ನೇ ಬಿಟ್ಟು ಹೊರಟಿದ್ದಾಳೆ.

ಮೊದ ಮೊದಲಿಗೆ ಈ ವಿಚಾರ ಕೇಳಿಸಿಕೊಂಡ ಮಾಲಿನಿ ಮನಸ್ಸಲ್ಲಿಯೇ ಖುಷಿ ಪಡುತ್ತಿದ್ದಳು. ಆದರೆ ಬಳಿಕ ಎಲ್ಲರೂ ಆಶ್ಚರ್ಯ ಪಡುವಂತೆ ಹೂವಿಯನ್ನು ನಾನೇ ಹುಡುಕಿಕೊಂಡು ಬರುತ್ತೀನಿ ಎಂದು ಹೊರಟಿದ್ದಾಳೆ.

ಚನ್ನವಲ್ಸೆಗೆ ಹೊರಟೆ ಬಿಡುತ್ತಾಳಾ ?

ಚನ್ನವಲ್ಸೆಗೆ ಹೊರಟೆ ಬಿಡುತ್ತಾಳಾ ?

ರಾಹುಲ್ ಮನೆಗೆ ಹೋದರೆ ಅಲ್ಲಿಯೂ ಹೂವಿಗೆ ಮೊದಲು ಸಿಗುತ್ತಿದ್ದ ಪ್ರೀತಿ ಸಿಗುತ್ತಿಲ್ಲ. ಮಾಲಿನಿಗೆ ಹೆದರಿಕೊಂಡೆ ಮಾತನಾಡುವುದಕ್ಕೆ ಶುರು ಮಾಡಿದ್ದಾರೆ. ಇನ್ನು ಇತ್ತ ಮಂದ್ರಾ ಮಾತಿಗೆ ಮುಂಚೆ ಕೈ ಮಾಡುತ್ತಾಳೆ. ಅಷ್ಟೆ ಯಾಕೆ ಕೊಲೆಯನ್ನೇ ಮಾಡುವುದಕ್ಕೆ ಹೊರಟಿದ್ದಳು. ಇದೆಲ್ಲಾ ಸಾಲದು ಎಂಬಂತೆ ದೇವಸ್ಥಾನದಲ್ಲಿ ಆಕಸ್ಮಿಕವಾಗಿ ಸಿಕ್ಕ ಮಾಲಿನಿ ಕೂಡ ಕೊಲೆ ಮಾಡುವುದಕ್ಕೆ ಹೊರಟಿದ್ದಳು. ಇದೆಲ್ಲವನ್ನು ನೋಡಿ ಸಹಿಸಿಕೊಳ್ಳುವುದು ಬೇಡ ಎಂದು ಬೆಂಗಳೂರನ್ನೇ ಬಿಟ್ಟು ಚನ್ನವಲ್ಸೆಯ ಹಾದಿ ಹಿಡಿದಿದ್ದಾಳೆ. ಯಾರಿಗೂ ಹೇಳದೆ ರಾತ್ರೋ ರಾತ್ರಿ ಮನೆ ಬಿಟ್ಟು ಹೊರಟಿದ್ದಾಳೆ.

ಸತ್ಯ ತಿಳಿಯಲು ಒದ್ದಾಡುತ್ತಿರುವ ಮಾಲಿನಿ & ಮಂದ್ರಾ

ಸತ್ಯ ತಿಳಿಯಲು ಒದ್ದಾಡುತ್ತಿರುವ ಮಾಲಿನಿ & ಮಂದ್ರಾ

ಹೂವಿ ವಿಚಾರದಲ್ಲಿ ರಾಹುಲ್ ಹಾಗೂ ಗೌತಮ್ ಇಬ್ಬರೂ ರಹಸ್ಯವನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಗೌತಮ್ ತನ್ನ ಮಗಳೆಂದು ಹೇಳಿಕೊಳ್ಳಲು ಆಗುತ್ತಿಲ್ಲ. ರಾಹುಲ್ ತನ್ನ ಹೆಂಡತಿ ಎಂದು ಹೇಳಿಕೊಳ್ಳಲು ಆಗುತ್ತಿಲ್ಲ. ಕೋಪ ಹೆಚ್ಚಾದಾಗ ಸತ್ಯ ಹೇಳಿಯೇ ಬಿಡಬೇಕು ಎಂದುಕೊಳ್ಳುತ್ತಾರೆ. ಆದರೆ ಆ ಕ್ಷಣದಲ್ಲಿ ಮತ್ತೆನೋ ಪ್ರಮಾದವಾಗಿ ಸುಮ್ಮನೆ ಆಗಿ ಬಿಡುತ್ತಾರೆ. ಆದರೆ ಅತ್ತ ಮಾಲಿನಿ, ಇತ್ತ ಮಂದ್ರಾ ಇಬ್ಬರು ಸತ್ಯ ತಿಳಿದುಕೊಳ್ಳುವುದಕ್ಕೆ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ.

ಮಂದ್ರಾಳಿಗೆ ಹೂವಿ ಕರೆದು ತರಲು ವಾರ್ನಿಂಗ್

ಮಂದ್ರಾಳಿಗೆ ಹೂವಿ ಕರೆದು ತರಲು ವಾರ್ನಿಂಗ್

ಹೂವಿ ಮನೆ ಬಿಟ್ಟು ಹೋದ ವಿಚಾರಕ್ಕೆ ಗೌತಮ್ ಕೂಡ ಮಂದ್ರಾಳಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾನೆ. ಅಲ್ಲಿಂದ ಹೊರಟ ಮಂದ್ರಾ ನೇರವಾಗಿ ಹೋಗಿದ್ದು, ಮಾಲಿನಿ ಮನೆಗೆ. ಅಲ್ಲಿ ಅದಾಗಲೇ ಎಲ್ಲರ ಮನಸ್ಸು ಸ್ತಬ್ದವಾಗಿತ್ತು. ಅಲ್ಲಿಗೆ ಬಂದ ಮಂದ್ರಾಳನ್ನು ರಾಹುಲ್ ದೊಡ್ಡಪ್ಪ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತೀನಿ ಅಂತ ಹೇಳಿ ಕರೆದುಕೊಂಡು ಹೋದಿರಲ್ಲ, ಈಗ ಏನಾಯ್ತು ಎಂದಿದ್ದಾರೆ. ಏನಾದರೂ ಆಗಲಿ, ಹೂವಿ ಈ ಮನೆಗೆ ವಾಪಾಸ್ ಬರಲೇಬೇಕೆಂದು ತಾಕೀತು ಮಾಡಿದ್ದಾರೆ.

ಮಾಲಿನಿಯೇ ಹೊರಟಳು ಹೂವಿ ಕರೆತರಲು

ಮಾಲಿನಿಯೇ ಹೊರಟಳು ಹೂವಿ ಕರೆತರಲು

ಹೂವಿ ಬಂದರೆ ಇದೆ ಮನೆಯಲ್ಲಿ ಇರುತ್ತಾಳೆ ಎಂದು ದೊಡ್ಡಪ್ಪ ತೀರ್ಮಾನ ಮಾಡಿ ಆಗಿದೆ. ಇದೆಲ್ಲವನ್ನು ಗಮನಿಸಿದ ಮಾಲಿನಿ, ಹೂವಿಯನ್ನು ತಾನೇ ಹುಡುಕಿಕೊಂಡು ಬರಲು ಹೊರಟಿದ್ದಾಳೆ. ಅದಕ್ಕೆ ಕಾರಣ ರಾಹುಲ್ ಯಾವುದೋ ಸತ್ಯವನ್ನು ಹೇಳಬೇಕು ಎಂದುಕೊಂಡಿದ್ದ. ಆ ಸತ್ಯವನ್ನು ಹೂವಿ ನಿಲ್ಲಿಸಿದ್ದಳು. ಆ ಸತ್ಯ ತಿಳಿಯಲು ಹೂವಿ ಇರಲೇಬೇಕು ಎಂಬುದು ಮಾಲಿನಿಗೆ ಅರ್ಥವಾಗಿದೆ. ಅದೇ ಕಾರಣದಿಂದ ಹುಡುಕಲು ಹೊರಟಿದ್ದಾಳೆ.

More from Filmibeat

English summary
Bettada Hoo Serial October 6th Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X