ಬೆಟ್ಟದ ಹೂ: ಸತ್ಯ ತಿಳಿಯುವ ಹಠಕ್ಕೆ ಬಿದ್ದ ಮಾಲಿನಿ : ಸಂಕಷ್ಟದಲ್ಲಿ ಸಿಲುಕಿದ ಹೂವಿ..!
ಮಾಲಿನಿಗೆ ಹಾಗೂ ಮಂದ್ರಾಗೆ ಹೂವಿ ವಿಚಾರದಲ್ಲಿ ಯಾವುದೋ ಘನಘೋರವಾದ ಸತ್ಯ ಅಡಗಿದೆ ಎಂಬುದಂತು ಅರಿವಾಗಿದೆ. ಇದೇ ಕಾರಣಕ್ಕಾಗಿಯೇ ಮಾಲಿನಿ, ರಾಹುಲ್ ಬಳಿ ಸತ್ಯ ಹೇಳುವಂತೆ ಕೆಣಕುತ್ತಲೇ ಇದ್ದಾಳೆ. ಅತ್ತ ಮಂದ್ರಾ ಕೂಡ ಗೌತಮ್ ಬೆನ್ನತ್ತಿದ್ದ ಬೇತಾಳದಂತೆ ಆಗಾಗ ಸತ್ಯದ ಬಾಗಿಲು ಬಡಿದು ಸುಮ್ಮನಾಗುತ್ತಾಳೆ.
ಇದೀಗ ಮಾಲಿನಿ ಕೊನೆ ಹಂತಕ್ಕೆ ತಲುಪಿದ್ದು, ಸತ್ಯ ಹಾದಿ ಹಿಡಿದು ಹೊರಟಿದ್ದಾಳೆ. ಆದರೆ ಈ ಸತ್ಯ ತಿಳಿಯುವ ಹಾದಿಯಲ್ಲಿ ಹೂವಿ ದೊಡ್ಡ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.
ಮಂದ್ರಾಳ ಟಾರ್ಚರ್ ತಡೆದುಕೊಳ್ಳಲು ಆಗದೆ ಹೂವಿ ಮನೆ ಬಿಟ್ಟು ಹೊರಟಿದ್ದಾಳೆ. ಮನೆಯವರೆಲ್ಲಾ ಗಾಬರಿಯಾಗಿದ್ದಾರೆ. ಹೂವಿ ಸಿಕ್ಕಿದರೆ ಸಾಕು ಎಂಬ ಆತಂಕದಲ್ಲಿದ್ದಾರೆ ಮನೆಯವರು. ಮನೆಯವರೆಲ್ಲಾ ಸೇರಿ ಒಂದೊಂದು ಕಡೆ ಹುಡುಕಾಟ ಶುರು ಮಾಡಿದ್ದಾರೆ. ಅಷ್ಟೆ ಯಾಕೆ ಮಾಲಿನಿ ಕೂಡ ಹುಡುಕಿ ಕರೆದುಕೊಂಡು ಬರಲು ಹೊರಟಿದ್ದಾಳೆ.

ಹೂವಿ ಕಾಣದೆ ರಾಹುಲ್ ಟೆನ್ಶನ್
ಹೂವಿ ಮನೆ ಬಿಟ್ಟು ಹೋಗಿದ್ದಾಳೆ ಎಂಬುದು ಗೊತ್ತಾದ ಮೇಲೆ ರಾಹುಲ್ ಆತಂಕ ಯಾರ ಬಳಿಯೂ ಹೇಳಿಕೊಳ್ಳುವುದಕ್ಕೆ ಆಗುತ್ತಿಲ್ಲ. ರಸ್ತೆ ರಸ್ತೆಯಲ್ಲೆಲ್ಲಾ ಕಾರು ನಿಲ್ಲಿಸಿ ಹೂವಿ ಫೋಟೊ ತೋರಿಸಿ, ಇವಳನ್ನು ನೋಡಿದ್ದೀರಾ ಎಂದು ಕೇಳುತ್ತಿದ್ದ. ಬೇರೆ ಬೇರೆ ಬಸ್ ಸ್ಟಾಪ್‌ಗಳಿಗೂ ಹೋಗಿ ಬಂದಿದ್ದ. ಹೂವಿ ಕಾಣದೆ ಕಂಗಾಲಾಗಿ ಹೋಗಿದ್ದ. ಹೂವಿ ನನ್ನ ಬಿಟ್ಟು ಹೋಗಿ ಬಿಟ್ಟಳಲ್ಲ ಎಂಬ ನೋವು ರಾಹುಲ್ ಮನಸ್ಸಿನಲ್ಲಿ ಕಾಡುತ್ತಿತ್ತು. ಆ ಟೆನ್ಶನ್, ಬೇಸರ ನಿಶಾಂತ್‌ಗೆ ಅನುಮಾನ ಮೂಡಿಸಿತ್ತು.

ರಾಹುಲ್ ಕೈಗೆ ಸಿಕ್ಕಿದ ಹೂವಿ
ಬಸ್ ನಿಲ್ದಾಣಕ್ಕೆ ಬಂದ ಹೂವಿ ಚನ್ನವಲ್ಸೆಯ ಬಸ್ ಹತ್ತಲು ಕೇಳಿದ್ದಳು. ಹೊರಟು ನಿಂತಿದ್ದ ಬಸ್ ಹತ್ತುವುದಕ್ಕೆ ಹೋಗುತ್ತಿದ್ದಾಗ ರಾಹುಲ್, ನಿಶಾಂತ್, ಗೌತಮ್ ಇದ್ದ ಕಾರು ಅಡ್ಡ ಬಂದಿತ್ತು. ರಾಹುಲ್ ಕಾರಿನಿಂದ ಇಳಿದಾಗ ಒಬ್ಬರಿಗೊಬ್ಬರು ಮಾತಿಲ್ಲ ಬರೀ ಮೌನ. ಹೂವಿ ಅಂತು ಕಣ್ಣೆತ್ತಿ ನೋಡುವ ಧೈರ್ಯವನ್ನು ಮಾಡಲಿಲ್ಲ. ಗೌತಮ್ ಮನವಿ ಮಾಡಿಕೊಂಡರು. ನಿಶಾಂತ್ ಹೇಳಿದರು ಹೂವಿ ಕೇಳಲಿಲ್ಲ. ನನಗೆ ನನ್ನ ಅಮ್ಮು ನೆನಪಾಗುತ್ತಿದ್ದಾರೆ. ನನಗೆ ಹೋಗುವುದಕ್ಕೆ ಬಿಡಿ. ಇನ್ಯಾವತ್ತೂ ಬೆಂಗಳೂರಿಗೆ ಬರಲ್ಲ ಎಂದೇ ಹೇಳಿದ್ದಳು.

ಮಾಲಿನಿ ಚಂದದ ಮಾತು ಕೇಳಿ ಶಾಕ್
ಇಷ್ಟೆಲ್ಲಾ ಮಾತುಕತೆ ನಡೆಯುವಾಗ ಅಲ್ಲಿಗೆ ದಿಢೀರನೇ ಮಾಲಿನಿ ಬಂದಳು. ದೀಪ್ತಿ ಕೂಡ ಜೊತೆಯಾದಳು. ಮಾಲಿನಿ, ಹೂವಿಯನ್ನು ನಿನ್ನ ಮನೆಯವರೆಲ್ಲಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಡ್ಯಾಡ್ ಮನೆಗಲ್ಲ ರಾಹುಲ್ ಮನೆಗೆ ಹೋಗೋಣಾ. ಅಲ್ಲಿ ದೊಡ್ಡಪ್ಪ ನಿನಗೋಸ್ಕರ ಕಾಯುತ್ತಿದ್ದಾರೆ ಎಂದು ಬದಲಾದವಳಂತೆ ಬಲವಂತ ಮಾಡಿದಳು. ಇದನ್ನು ಕಂಡ ಎಲ್ಲರೂ ಒಂದು ಕ್ಷಣ ಗಾಬರಿಯಾದರು.

ಸತ್ಯ ತಿಳಿಯಲು ದೊಡ್ಡ ಫ್ಲ್ಯಾನ್ ಮಾಡಿದ ಮಾಲಿನಿ
ಎಲ್ಲರೂ ಮನೆಗೆ ಬಾ ಎಂದಾಗಲೂ ಬರುವುದಕ್ಕೆ ಒಪ್ಪದೆ ಅಮ್ಮು ನೋಡಬೇಕು ಹೋಗುತ್ತೀನಿ ಎಂದು ಹೇಳುತ್ತಿದ್ದ ಹೂವಿಯ ಮಾತನ್ನೇ ಮಾಲಿನಿ ಬಂಡವಾಳ ಮಾಡಿಕೊಂಡಿದ್ದಾಳೆ. ಸರಿ ನಾವೂ ಎಲ್ಲಾ ಚನ್ನವಲ್ಸೆಗೆ ಹೋಗೋಣಾ ನಡೆಯಿರಿ. ಅವಳನ್ನು ಬಿಟ್ಟು, ಅವರ ಅಮ್ಮನನ್ನು ನೋಡಿಕೊಂಡು ಬಂದಂಗೆ ಆಗುತ್ತೆ ಎಂದಳು. ಇದಕ್ಕೆ ನಿಶಾಂತ್ ಕೂಡ ಒಪ್ಪಿದ, ಗೌತಮ್ ಕೂಡ ಒಪ್ಪಿದರು. ಆದರೆ ಗೌತಮ್‌ಗೆ ಹೂವಿಯ ಮದುವೆಯ ವಿಚಾರ ಗೊತ್ತಿಲ್ಲ. ಮಾಲಿನಿ ಸತ್ಯ ತಿಳಿಯುವ ಹಠದಿಂದ ಈ ಫ್ಲ್ಯಾನ್ ಮಾಡಿದ್ದಾಳೆ. ದೀಪ್ತಿ ಕೂಡ ತಪ್ಪಿಸುವುದಕ್ಕೆ ಆಗಲೇ ಇಲ್ಲ. ಹೂವಿ ಕೂಡ ಏನೇನೋ ಫ್ಲ್ಯಾನ್ ಮಾಡಿದಳು ಸಾಧ್ಯವಾಗಲಿಲ್ಲ. ಫೈನಲಿ ಎಲ್ಲರೂ ಕಾರು ಹತ್ತಿದರು. ಮನದೊಳಗೆ ಟೆನ್ಶನ್ ಎಲ್ಲರನ್ನು ಕಾಡುತ್ತಿತ್ತು.


Click it and Unblock the Notifications











