ಬೆಟ್ಟದ ಹೂ: ಹೂವಿಯ ಸಾಧನೆಗೆ ರಾಹುಲ್ ಮನೆಯವರು ಫುಲ್ ಖುಷಿ..!

By ಎಸ್ ಸುಮಂತ್

ಹೂವಿ ಮತ್ತು ರಾಹುಲ್ ಮದುವೆಯಾಗಿದ್ದಾರೆ ಎಂಬ ವಿಚಾರವನ್ನು ಕೇಳಿದ ಮನೆಯವರು ಕೆಂಡಾಮಂಡಲರಾಗಿದ್ದರು. ಒಂದು ಕಡೆ ಮಾಲಿನಿ ಮನೆಯವರೆಲ್ಲಾ ಮರ್ಯಾದೆ ಕಳೆದು ಹೋಗಿದ್ದಳು. ಇದೇ ದುಃಖದಲ್ಲಿರುವಾಗ ಅರಗಿಸಿಕೊಳ್ಳುವುದಕ್ಕೆ ಆಗದಂತೆ ಕಹಿ ಸತ್ಯ ಮನೆಯವರ ಮುಂದೆ ಬಯಲಾಗಿತ್ತು. ಮಾಲಿನಿ, ರಾಹುಲ್‌ನ ಮೊದಲ ಹೆಂಡತಿಯಲ್ಲ, ಹೂವಿ ಆ ಸ್ಥಾನದಲ್ಲಿರಬೇಕಾಗಿತ್ತು ಎಂಬುದನ್ನು ಸ್ವತಃ ರಾಹುಲ್ ಬಾಯಿ ಬಿಟ್ಟಿ ಹೇಳಿದ್ದ. ಆದರೆ, ಆ ಸತ್ಯ ಕೇಳಿಸಿಕೊಂಡ ಮನೆಯವರು ಹೂವಿಯದ್ದೇ ಏನೋ ತಪ್ಪು ಎಂಬಂತೆ ಬಿಂಬಿಸಿ, ಜಗಳವನ್ನು ಆಡಿದ್ದರು.

ಆದರೆ ಹೂವಿಯ ಮನಸ್ಸನ್ನು ಎಂತಹದ್ದು ಎಂಬುದು ಎಲ್ಲರಿಗೂ ಗೊತ್ತಿತ್ತು. ಆದರೆ ಮನೆಗೆ ಸೊಸೆಯಾಗಲು ಬಂದಿದ್ದಾಳೆ ಎಂದರೆ ಅದನ್ನು ಅರಗಿಸಿಕೊಳ್ಳಲು ಯಾರಿಂದಲೂ ಆಗಲಿಲ್ಲ. ಹೂವಿ ಎಲ್ಲರನ್ನು ಆ ಕ್ಷಣ ಬದಲಾಯಿಸಿ ಬಿಟ್ಟಳು. ಕೆಂಡದಂತೆ ಇದ್ದ ಮನಸ್ಸುಗಳು ಈಗ ಮೃದುವಾಗಿವೆ. ಮತ್ತೆ ಎಲ್ಲರೂ ಒಗ್ಗಟ್ಟಾಗಿದ್ದಾರೆ.

ಮಾಲಿನಿಗೆ ಇನ್ನು ಕೋಪ ಕಡಿಮೆಯಾಗಿಲ್ಲ

ಮಾಲಿನಿಗೆ ಇನ್ನು ಕೋಪ ಕಡಿಮೆಯಾಗಿಲ್ಲ

ಮನೆಯವರೆಲ್ಲ ಒಪ್ಪಿದರೆ ನಾನು ಮತ್ತು ರಾಹುಲ್ ಬೇರೆಯಾಗಿ ಸಂಸಾರ ಮಾಡುತ್ತೀವಿ ಎಂದು ಮಾಲಿನಿ ಹಠ ತೊಟ್ಟಿದ್ದಳು. ಆದರೆ ಮನೆಯವರಿಂದ ಇದಕ್ಕೆ ವಿರೋಧ ವ್ಯಕ್ತವಾದಾಗ ಮಾಲಿನಿ ಕೋಪ ಮಾಡಿಕೊಂಡು ಮನೆ ಬಿಟ್ಟು ಹೋದವಳು ಇನ್ನು ಬಂದಿಲ್ಲ. ಇತ್ತ ರಾಹುಲ್ ಕರೆ ಮಾಡಿ ಸಮಸ್ಯೆಯನ್ನು ವಿವರಿಸುವುದಕ್ಕೆ ಪ್ರಯತ್ನಪಟ್ಟರು ಅದನ್ನು ಕೇಳುವ ತಾಳ್ಮೆ ಇಲ್ಲ. ಈಗ ಹೂವಿಯ ಫೋಟೋ ಪೇಪರ್‌ನಲ್ಲಿ ಬಂದಿರುವುದನ್ನು ಕಂಡು ಇನ್ನಷ್ಟು ಕೋಪಗೊಂಡಿದ್ದಾಳೆ. ಹೀಗಾಗಿ ಅಷ್ಟು ಸುಲಭವಾಗಿ ಚಕ್ರವರ್ತಿ ಗೂಡು ಸೇರುವುದು ಅನುಮಾನ.

ಹೂವಿ ಪ್ರೋಗ್ರಾಂಗೆ ತಂದೆಯ ಆಗಮನ

ಹೂವಿ ಪ್ರೋಗ್ರಾಂಗೆ ತಂದೆಯ ಆಗಮನ

ಗೌತಮ್‌ಗೆ ಈಗಾಗಲೇ ಹೂವಿ ತನ್ನ ಮಗಳು ಎಂಬ ಸತ್ಯ ಗೊತ್ತಾಗಿದೆ. ಹೀಗಾಗಿ ಸಾಧ್ಯವಾದಷ್ಟು ಅವಳಿಗೆ ತಂದೆ ಪ್ರೀತಿ ಕೊಡುವುದಕ್ಕೆ ಯತ್ನಿಸುತ್ತಾ ಇರುತ್ತಾನೆ. ಈಗ ಹೂವಿ ರ್ಯಾಂಕ್ ಪಡೆದಿರುವುದಕ್ಕೆ ದೊಡ್ಡ ಕಾರ್ಯಕ್ರಮವನ್ನು ಸರ್ಕಾರದಿಂದ ಇಟ್ಟುಕೊಂಡಿದ್ದಾರೆ. ಆ ಕಾರ್ಯಕ್ರಮ ಗೊತ್ತಾದ ಬಳಿಕ ಗೌತಮ್ ನಾನು ಹೋಗಬೇಕು ಎಂದು ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಾನೆ. ಆದರೆ ಅಜ್ಜಿ ನಾನು ಕೂಡ ಬರುತ್ತೀನಿ ಅಂತ ಹೊರಟು ನಿಂತಿದ್ದಾರೆ. ಇಬ್ಬರು ಹೊರಟಿದ್ದನ್ನು ಕದ್ದು ನೋಡಿದ ಮಾಲಿನಿ ಕೋಪಗೊಂಡಿದ್ದಾಳೆ.

ಮಾಲಿನಿಯಿಂದ ಮೊಂಡುತನ ಪ್ರದರ್ಶನ

ಮಾಲಿನಿಯಿಂದ ಮೊಂಡುತನ ಪ್ರದರ್ಶನ

ಹೂವಿ ಯಾವತ್ತಿಗೂ ಮಾಲಿನಿಯ ಜಾಗವನ್ನು ಆಕ್ರಮಿಸಿಕೊಳ್ಳಬೇಕು ಎಂದು ಬಯಸಿದವಳಲ್ಲ. ಯಾವಾಗಲೂ ಅವರಿಬ್ಬರ ಸಂಬಂಧ ಸರಿಯಾಗಿರಬೇಕು ಎಂದೇ ಬಯಸಿದವಳು. ಇದೇ ಖುಷಿಯಲ್ಲಿ, ಅಕ್ಕ ಎಂಬ ಭಾವದಲ್ಲಿಯೇ ಮಾಲಿನಿಗೆ ಆಮಂತ್ರಣ ನೀಡಿದ್ದಾಳೆ. ಆದರೆ ಮಾಲಿನಿ, ಹೂವಿಗೆ ಬೇಸರ ಮಾಡಿ ಫೋನ್ ಕಟ್ ಮಾಡಿದ್ದಾಳೆ. ಹೂವಿಯ ಮುಗ್ಧತೆಯನ್ನು ಮಾಲಿನಿ ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನವನ್ನೇ ಪಡಲಿಲ್ಲ.

ಹೂವಿ ಬಗ್ಗೆ ಹೆಮ್ಮೆ ಪಟ್ಟ ಗಂಡನ ಮನೆಯವರು

ಹೂವಿ ಬಗ್ಗೆ ಹೆಮ್ಮೆ ಪಟ್ಟ ಗಂಡನ ಮನೆಯವರು

ಹೂವಿ ಹಳ್ಳಿ ಹುಡುಗಿ. ಆದರೆ ಮನಸ್ಸಲ್ಲಿ ಕೊಂಚವೂ ಕಲ್ಮಶವಿಲ್ಲ. ಅದಕ್ಕೆ ಮನೆಯವರು ಅವಳನ್ನು ಅಷ್ಟು ಪ್ರೀತಿ ಮಾಡುವುದು. ಈಗ ರ್ಯಾಂಕ್ ವಿಚಾರದಲ್ಲಿ ಸನ್ಮಾನ ಮಾಡಿಸಿಕೊಂಡಿದ್ದಾಳೆ. ಆ ವೇಳೆ ಭಾಷಣ ಮಾಡಿದ ಹೂವಿ, ಹಳ್ಳಿ ಹುಡುಗಿ ಅಂತ ಅಂದುಕೊಳ್ಳಬೇಡಿ. ಹಳ್ಳಿ ಮಕ್ಕಳಿಗೆ ಸ್ವಲ್ಪ ಸಹಾಯ ಮಾಡಿ. ಅವರು ಬೆಳೆಯುವುದಕ್ಕೆ ಸಹಾಯ ಆಗುತ್ತೆ ಎಂದಿದ್ದಾಳೆ. ಅವಳಿಗೆ ನಡೆದ ಸನ್ಮಾನ. ಅವಳ ಮಾತೆಲ್ಲವೂ ರಾಹುಲ್ ಮನೆಯವರ ಖುಷಿಗೆ ಕಾರಣವಾಗಿದೆ. ರಾಹುಲ್ ಅಂತು ನಿಂತುಕೊಂಡು ಪ್ರೌಡ್ ಫೀಲ್ ಮಾಡುತ್ತಾ ಇದ್ದ.

More from Filmibeat

English summary
Bettada Hoo Serial September 13th Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X