'ಬೆಟ್ಟದ ಹೂ' ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್ : ರಾಹುಲ್‌ನನ್ನು ಮಾಲಿನಿ ಮದುವೆಯಾಗಿದ್ದೇಕೆ?

By ಎಸ್ ಸುಮಂತ್

ಮಾಲಿನಿ ಮತ್ತು ರಾಹುಲ್ ಪ್ರೀತಿಸಿ ಮದುವೆಯಾದವರು. ಮದುವೆಯಾದ ಮೇಲೆ ತುಂಬಾನೇ ಅನ್ಯೋನ್ಯವಾಗಿದ್ದರು. ಮಾಲಿನಿ, ರಾಹುಲ್ ಮನೆಯವರನ್ನು ತನ್ನ ಮನೆಯವರಂತೆ ಕಾಣುತ್ತಿದ್ದಳು. ತನ್ನ ತಾಯಿ ಕಡೆಯಿಂದ ಏನಾದರೂ ಅವಮಾನವಾದರೂ ಸಹಿಸುತ್ತಾ ಇರಲಿಲ್ಲ. ಆ ಕ್ಷಣದಲ್ಲೂ ರಾಹುಕ್ ಮನೆಯವರ ಪರವೇ ನಿಲ್ಲುತ್ತಾ ಇದ್ದಳು. ಆದರೆ ಹೂವಿ ವಿಚಾರವಾಗಿ ಮನಸ್ತಾಪ ಮಾಡಿಕೊಂಡ ಮಾಲಿನಿಯ ಕರಾಳ ಮುಖ ಬಯಲಾಗುತ್ತಿದೆ.

ಮಾಲಿನಿಯ ವರ್ತನೆ ನೋಡುತ್ತಿದ್ದರೆ ಆ ಪ್ರೀತಿಯೂ ಸುಳ್ಳು, ನಡವಳಿಕೆಯೂ ಸುಳ್ಳು ಎಂಬುದು ಸ್ಪಷ್ಟವಾಗಿ ತಿಳಿಯುತ್ತಿದೆ. ಆದರೆ ಮನೆಯವರಿಗೆ ಯಾವುದೇ ರೀತಿಯ ಅನುಮಾನ ಬರುತ್ತಿಲ್ಲ. ಕೋಪಕ್ಕೆ ಈ ರೀತಿ ಮಾಡುತ್ತಿದ್ದಾಳೆ ಎಂಬಂತ ಭಾವನೆ ಬರುವಂತೆ ಮಾಡಿದ್ದಾಳೆ. ಆತ್ಮಹತ್ಯೆ ಎಂಬುದು ಮಾಲಿನಿಗೆ ವರವಾಗಿ ಸಿಕ್ಕಿದೆ. ಮುಂದೆ ರಾಹುಲ್‌ನನ್ನು ಬೀದಿಗೆ ತರುವುದೇ ಮಾಲಿನಿಯ ಉದ್ದೇಶ ಎಂಬುದು ಸ್ಪಷ್ಟವಾಗುತ್ತಾ ಇದೆ.

ಹೂವಿ ಹೊರಗೆ ಮಾಲಿನಿ ಒಳಗೆ

ಹೂವಿ ಹೊರಗೆ ಮಾಲಿನಿ ಒಳಗೆ

ಮಾಲಿನಿಗೆ ಎಡವಿ ಬಿದ್ದಿದ್ದೆ ವರವಾಗಿ ಹೋಯಿತು. ಹೂವಿ ಮೇಲೆ ಕೆಂಡಕಾರುತ್ತಾ, ನಡೆದು ಬರುವಾಗ ಜಾರಿ ಬಿದ್ದಿದ್ದಳು. ಅಲ್ಲಿಯೇ ಇದ್ದ ಗಾಜು ಮಾಲಿನಿಯ ಕೈಗೆ ಚುಚ್ಚಿಕೊಂಡಿತ್ತು. ಇದನ್ನು ಕಂಡು ಎಲ್ಲರೂ ಆತ್ಮಹತ್ಯೆ ಅಂತಾನೇ ಎಂದುಕೊಂಡಿದ್ದರು. ಹೀಗಾಗಿ ಮಾಲಿನಿ ಮತ್ತೆ ಚಕ್ರವರ್ತಿ ಗೂಡು ಸೇರುವುದಕ್ಕೆ ಸುಲಭದ ಹಾದಿಯಾಯ್ತು. ಆದರೆ ಮನೆಗೆ ಬರುವುದಕ್ಕೂ ಮುನ್ನ ಹೂವಿ ಅಲ್ಲಿ ಇರಬಾರದು ಎಂಬುದೇ ಕಂಡೀಷನ್ ಆಗಿತ್ತು. ಗೌತಮ್ ಇದ್ದವರು ಹೂವಿಯನ್ನು ನಮ್ಮ ಮನೆಗೆ ಕರೆದುಕೊಂಡು ಹೋಗುತ್ತೀನಿ. ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೀನಿ ಅಂತ ಭರವಸೆ ಕೊಟ್ಟು ಆ ಕಡೆಗೆ ಕರೆದುಕೊಂಡು ಹೋದರು. ಈ ಕಡೆ ಮಾಲಿನಿ ಚಕ್ರವರ್ತಿ ಮನೆಗೆ ಬಂದಳು.

ಹೂವಿ ಗೈರು ಕಾಡುತ್ತಿದೆ

ಹೂವಿ ಗೈರು ಕಾಡುತ್ತಿದೆ

ರಾಹುಲ್ ಮನೆಯಲ್ಲಿ ಹೂವಿ ಯಾವತ್ತಿಗೂ ಮನೆ ಕೆಲಸದವಳಾಗಿ ಇರಲಿಲ್ಲ. ಬದಲಿಗೆ ಎಲ್ಲರ ಮೆಚ್ಚಿನ ಮಗಳಾಗಿದ್ದಳು. ರಾಹುಲ್ ಮತ್ತು ಹೂವಿ ನಡುವಿನ ಮದುವೆ ವಿಚಾರ ತಿಳಿದ ಮೇಲೂ ಎಲ್ಲರೂ ಅವಳನ್ನು ಕ್ಷಮಿಸಿದ್ದರು. ಮತ್ತೆ ಮೊದಲಿನಂತೆಯೇ ಪ್ರೀತಿಯನ್ನು ಮಾಡಿದ್ದರು. ಆದರೆ ಇದೀಗ ಹೂವಿ, ರಾಹುಲ್ ಮತ್ತು ಮಾಲಿನಿ ಜೀವನಕ್ಕಾಗಿ ತನ್ನ ಸಂತೋಷನ್ನೇ ತ್ಯಾಗ ಮಾಡಿದ್ದಾಳೆ. ಮನೆ ಬಿಟ್ಟು ಗೌತಮ್ ಮನೆಗೆ ಹೋಗಿದ್ದಾಳೆ. ಅಲ್ಲಿ ಹೂವಿ ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅತ್ತ ರಾಹುಲ್ ಮನಸ್ಸು ತಡೆಯದೆ ಸುಂದರನಿಂದ ಕರೆ ಮಾಡಿಸಿ. ವಾಯ್ಸ್ ಕೇಳಿಯೇ ಸಮಾಧಾನ ಮಾಡಿಕೊಂಡಿದ್ದಾನೆ. ಮನೆಯವರು ತಿಂಡಿ ಸಮಯದಲ್ಲೂ ಹೂವಿಯನ್ನು ನೆನೆದಿದ್ದಾರೆ.

ಹೂವಿ ವಿಚಾರಕ್ಕೆ ಮಂದಾರ ಜಗಳ

ಹೂವಿ ವಿಚಾರಕ್ಕೆ ಮಂದಾರ ಜಗಳ

ಹೂವಿ, ಗೌತಮ್ ಮನೆಗೆ ಹೋಗಿದ್ದು ರಾಹುಲ್ ಚೆನ್ನಾಗಿರಲಿ ಎಂಬ ಕಾರಣಕ್ಕೆ. ಆದ್ರೆ ಎಲ್ಲವೂ ಹೊಸ ಜಾಗ. ಹೀಗಾಗಿ ಕಾಲೇಜಿಗೆ ಹೋಗುವುದು ಹೇಗೆ ಎಂಬ ಚಿಂತೆಯಲ್ಲಿದ್ದಳು. ಅಲ್ಲಿಗೆ ಬಂದ ಗೌತಮ್ ನಾನು ಬಿಟ್ಟು ಕೊಡುತ್ತೇನೆ ಎಂದು ಬಂದಾಗ ಮಂದಾರ ಅದಕ್ಕೆ ಸಂಪೂರ್ಣ ವಿರೋಧ ಮಾಡಿದಳು. ಜೋರು ಗಲಾಟೆಯೇ ನಡೆಯಿತು. ಕಡೆಗೆ ಗೌತಮ್ ತಮ್ಮ ನಿರ್ಧಾರವನ್ನು ಹೇಳಿದ. ಯಾರು ಏನೇ ಹೇಳಿದರೂ ಹೂವಿಯನ್ನು ನಾನೇ ಡೈಲಿ ಕಾಲೇಜಿಗೆ ಬಿಡುತ್ತೇನೆ ಎಂದು ಕರೆದುಕೊಂಡು ಹೊರಟ.

ಮಂದಾರ ಹೇಳಿದ ಅಖಿಲ ಯಾರು?

ಮಂದಾರ ಹೇಳಿದ ಅಖಿಲ ಯಾರು?

ಇಷ್ಟು ದಿನ ಮಾಲಿನಿಯ ಪ್ರೀತಿ ನಿಶ್ಕಲ್ಮಶ ಎಂದುಕೊಳ್ಳಲಾಗುತ್ತಿತ್ತು. ಆದರೆ ಮಾಲಿನಿಯ ಯೋಚನೆಯೇ ಬೇರೆಯಾಗಿದೆ. ಕಾಲೇಜು ದಿನದಲ್ಲಿ ಎಕ್ಸಾಂ ಪೇಪರ್ ಲೀಕ್ ಮಾಡಿದ್ದಕ್ಕೆ ಅಖಿಲ್‌ಗೆ ಶಿಕ್ಷೆಯಾಗಿತ್ತು.ಇದೀಗ ಮಾಲಿನಿ ಅದೇ ಅಖಿಲ್‌ನನ್ನು ನೆನೆಯುತ್ತಿದ್ದಾಳೆ. ಮನಸ್ಥಿತಿ ಸರಿಯಾಗುವ ತನಕ ಒಂದೇ ಬೆಡ್ ಮೇಲೆ ಮಲಗುವುದು ಬೇಡ ಎಂದು ಮಾಲಿನಿ ಹೇಳಿದಾಗ ರಾಹುಲ್ ಕೆಳಗಡೆ ಮಲಗಿದ್ದಾನೆ. ಆಗ ಮಾಲಿನಿಯ ಮನಸ್ಸಲ್ಲಿ ನಿನ್ನನ್ನು ಇನ್ನು ಬೀದಿಗೆ ತರುತ್ತೇನೆ. ಪಾಪ ಅಖಿಲ್ ಜೀವನ ಈಗ ಹೇಗಿದೆಯೋ ಎಂದು ಮನಸ್ಸಲ್ಲಿ ಜಪಿಸುತ್ತಿದ್ದಾಳೆ. ಮಾಲಿನಿ ಮತ್ತು ಅಖಿಲ್ ಪ್ರೇಮಿಗಳಾಗಿದ್ದರಾ ಎಂಬ ಅನುಮಾನ ನೋಡುಗರಿಗೆ ಮೂಡದೆ ಇರುವುದಿಲ್ಲ.

More from Filmibeat

English summary
Bettada Hoo Serial September 23rd Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X