For Quick Alerts
  ALLOW NOTIFICATIONS  
  For Daily Alerts

  ಬೆಟ್ಟದ ಹೂ: ವಾವ್.. ಹೂವಿಯ ಒಂದೇ ಮಾತಿಗೆ ಮಂದ್ರಾ ಧ್ವನಿ ಅಡಗಿ ಹೋಯ್ತು..!

  By ಎಸ್ ಸುಮಂತ್
  |

  ತಾಳ್ಮೆಯಿಂದ ಇರುವವರನ್ನು ಹೆಚ್ಚಾಗಿ ಪರೀಕ್ಷೆ ಮಾಡಬಾರದು. ತಾಳ್ಮೆಯಿಂದ ಇದ್ದಾರೆ ಎಂದರೆ ಅವರು ಅಸಹಾಯಕರು ಎಂದಲ್ಲ. ಬದಲಿಗೆ ಹೆಚ್ಚು ಮಾತನಾಡುವವರಿಗಿಂತ ಅವರಲ್ಲಿ ಶಕ್ತಿ ಜಾಸ್ತಿಯೇ ಇರುತ್ತದೆ. ಇದನ್ನು ಇದೀಗ ಹೂವಿ ಪ್ರೂವ್ ಮಾಡಿದ್ದಾಳೆ. ಮಂದ್ರಾಳಿಗೆ ಗ್ರಹಚಾರ ಬಿಡಿಸಿದ್ದಾಳೆ. ಹೂವಿ ಹೇಳಿದ ಪ್ರತಿಯೊಂದು ಮಾತನ್ನು ಅರ್ಥ ಮಾಡಿಕೊಂಡಿದ್ದರೆ ಮಂದ್ರಾ ನಿಜಕ್ಕೂ ಬದಲಾಗುತ್ತಾಳೆ.

  ಹೂವಿಯನ್ನು ಹೇಗಾದರೂ ಮಾಡಿ ರಾಹುಲ್‌ನಿಂದ ದೂರ ಮಾಡಲೇಬೇಕೆಂದು ಮಾಲಿನಿ ಮತ್ತು ಮಂದ್ರಾ ನಿರ್ಧಾರ ಮಾಡಿದ್ದಾರೆ. ಅದಕ್ಕಾಗಿಯೆ ಹೂವಿಗೆ ಚಿತ್ರಹಿಂಸೆ ಕೊಡುವುದಕ್ಕೆ ಆರಂಭಿಸಿದ್ದಾರೆ. ಆದರೆ ಇದೆಲ್ಲವನ್ನು ಸಹಿಸಿಕೊಳ್ಳುತ್ತಿದ್ದದ್ದು ಚಕ್ರವರ್ತಿ ಗೂಡಿನ ನೆಮ್ಮದಿಗಾಗಿ. ಎಷ್ಟೆ ಬೈದರೂ, ಅವಮಾನ ಮಾಡಿದರೂ ಹೂವಿಗೆ ಚಿಂತೆ ಇಲ್ಲ. ಆದರೆ ಅಮ್ಮು ವಿಚಾರಕ್ಕೆ ಬಂದರೆ ಸುಮ್ಮನೆ ಬಿಡುವುದಿಲ್ಲ.

  ಅರ್ಧಾಂಗಿ: ಅದಿತಿಯನ್ನು ರಕ್ಷಿಸಲು ಬಂದ ರಾಧಿಕಾ ನಾರಾಯಣ್ : ದಿಗಂತ್ ಹುಷಾರಾಗುವುದು ಡೌಟ್..!ಅರ್ಧಾಂಗಿ: ಅದಿತಿಯನ್ನು ರಕ್ಷಿಸಲು ಬಂದ ರಾಧಿಕಾ ನಾರಾಯಣ್ : ದಿಗಂತ್ ಹುಷಾರಾಗುವುದು ಡೌಟ್..!

  ಮಂದ್ರಾಳ ಮುಂದೆ ಅಮ್ಮು ಬಗ್ಗೆ ಗುಣಗಾನ

  ಮಂದ್ರಾಳ ಮುಂದೆ ಅಮ್ಮು ಬಗ್ಗೆ ಗುಣಗಾನ

  ಮಂದ್ರಾಳ ನಡವಳಿಕೆ ಅತಿಯಾಗಿದೆ. ಹೂವಿಯನ್ನು ಚಾನ್ಸ್ ಸಿಕ್ಕಿದಾಗೆಲ್ಲ ನಿಂದಿಸುತ್ತಾಳೆ. ಹೂವಿ ತನಗೆಷ್ಟೇ ನಿಂದಿಸಿದರು ಸಹಿಸಿಕೊಳ್ಳುತ್ತಾಳೆ. ಆದರೆ ಅಮ್ಮು ಅಂತ ಬಂದಾಗ ರೌದ್ರವತಾರ ತಾಳಿ ನಿಂತಿದ್ದಾಳೆ. ನನ್ನ ಅಮ್ಮು ಬಗ್ಗೆ ಮಾತನಾಡುವುದಕ್ಕೆ ನಿಮಗೆ ಯಾವ ಯೋಗ್ಯತೆಯೂ ಇಲ್ಲ. ಅಪ್ಪ ಬಿಟ್ಟು ಹೋದರು ಯಾವತ್ತಿಗೂ ಅಪ್ಪನ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ. ನನ್ನ ಅಮ್ಮು ಹೂವಿನಷ್ಟೇ ಮೃದು, ಬೆಟ್ಟದಷ್ಟೇ ಗಟ್ಟಿ ಎಂದು ಹೊಗಳಿದ್ದಾಳೆ. ಅಮ್ಮು ಬಗ್ಗೆ ಇನ್ನು ಒಂದು ಮಾತನಾಡಬಾರದು ಎಂದು ಎಚ್ಚರಿಕೆಯನ್ನು ನೀಡಿದ್ದಾಳೆ.

  Bigg Boss Kannada 9: ರಾಕೇಶ್‌ಗಿಂತ ರೂಪೇಶ್ ಶೆಟ್ಟಿನೇ ಬೆಟರ್: ಕಾವ್ಯಶ್ರೀ ಶಾಕಿಂಗ್ ಹೇಳಿಕೆ!Bigg Boss Kannada 9: ರಾಕೇಶ್‌ಗಿಂತ ರೂಪೇಶ್ ಶೆಟ್ಟಿನೇ ಬೆಟರ್: ಕಾವ್ಯಶ್ರೀ ಶಾಕಿಂಗ್ ಹೇಳಿಕೆ!

  ಹೂವಿಯ ತಂದೆ ಬಗ್ಗೆ ಬಾಯ್ಬಿಟ್ಟ ಗೌತಮ್

  ಹೂವಿಯ ತಂದೆ ಬಗ್ಗೆ ಬಾಯ್ಬಿಟ್ಟ ಗೌತಮ್

  ಗೌತಮ್‌ಗೆ ತಾನು ಮಾಡಿದ ತಪ್ಪಿನ ಅರಿವಾಗಿದೆ. ಅದೇ ಕಾರಣಕ್ಕಾಗಿಯೇ ಈಗಾಗಲೇ ಗೌರ ಬಳಿ ಕ್ಷಮೆ ಕೇಳಿದ್ದಾನೆ. ಆದರೆ ಹೂವಿಗೆ ಮಂದ್ರಾಳಿಂದ ಪ್ರತಿದಿನ ಅವಮಾನವಾಗುತ್ತಿರುವುದನ್ನು ಗೌತಮ್ ಸಹಿಸಿಕೊಳ್ಳುತ್ತಿಲ್ಲ. ಮಂದ್ರಾಗೆ ಮುಂಚಿನ ರೀತಿ ಹೆದರುತ್ತಲೂ ಇಲ್ಲ. ಮಂದ್ರಾಳಿಂದ ರಕ್ಷಿಸುವುದಕ್ಕೆ ಯತ್ನಿಸುತ್ತಿರುವ ಗೌತಮ್, ನಿಮ್ಮ ಅಪ್ಪ ಚನ್ನವಲ್ಸೆಗೆ ಹೋಗಿದ್ದರಂತೆ. ನಿಮ್ಮ ಅಮ್ಮನ ಬಳಿ ಕ್ಷಮೆಯನ್ನು ಕೇಳಿದ್ದಾರಂತೆ. ನಿನಗೂ, ಅಮ್ಮನಿಗೂ ಸಹಾಯ ಮಾಡುತ್ತೀನಿ ಅಂತ ಕೂಡ ಹೇಳಿದರೂ ನಿಮ್ಮ ಅಮ್ಮ ಒಪ್ಪಲಿಲ್ಲವಂತೆ ಹೂವಿ ಎಂದಿದ್ದಾನೆ. ಆದರೆ ಹೂವಿ ಹಾಗಾದ್ರೆ ನಮ್ಮ ಅಪ್ಪಯ್ಯ ನಿಮಗೆ ಗೊತ್ತಿದೆಯಾ ಅಂತ ಕೇಳಿದಾಗ ಬೇಸರದಲ್ಲಿಯೇ ಇಲ್ಲ ಎಂದು ಹೇಳಿ ಮುನ್ನಡೆದಿದ್ದಾನೆ.

  ಮಾಲಿನಿ ರಂಪಾಟಕ್ಕೆ ಮನೆಯವರು ಸುಸ್ತು

  ಮಾಲಿನಿ ರಂಪಾಟಕ್ಕೆ ಮನೆಯವರು ಸುಸ್ತು

  ಹೂವಿ ವಿಚಾರದಲ್ಲಿ ಮಾಲಿನಿ ಮಾತನ್ನೇ ಮನೆಯವರು ಫಾಲೋ ಮಾಡುತ್ತಿದ್ದಾರೆ. ಹೂವಿ ವಿಚಾರ ಸ್ವಲ್ಪ ಜಾಸ್ತಿ. ಆದರೆ ಮಾಲಿನಿ ಚಕ್ರವರ್ತಿ ಗೂಡನ್ನು ಹಾಳು ಮಾಡಬೇಕು ಎಂದುಕೊಂಡಿರುವ ಕಾರಣ ಎಲ್ಲಾ ವಿಚಾರದಲ್ಲಿಯೂ ಜಗಳ ತೆಗೆಯುತ್ತಿದ್ದಾಳೆ. ಮನೆಗೆ ಬಂದ ಹೂವಿಯನ್ನು ಕೋಪದಿಂದಾನೇ ನೋಡುತ್ತಿದ್ದಾಳೆ. ಮಾಲಿನಿಗೆ ಹೆದರಿ ದೊಡ್ಡಮ್ಮ, ಚಿಕ್ಕಮ್ಮ ಕೂಡ ಹೂವಿಯನ್ನು ಸರಿಯಾಗಿ ಮಾತನಾಡುತ್ತಿಲ್ಲ. ಅಷ್ಟೇ ಯಾಕೆ ಹೂವಿಗೆ ಅವಮಾನವಾದರೂ ರಾಹುಲ್ ಕೂಡ ಅಸಹಾಯಕನಂತೆ ವರ್ತಿಸುತ್ತಿದ್ದಾನೆ.

  ಮಂದ್ರಾಗೆ ಶಾಕ್ ಕೊಟ್ಟ ಹೂವಿ

  ಮಂದ್ರಾಗೆ ಶಾಕ್ ಕೊಟ್ಟ ಹೂವಿ

  ಹೂವಿ ರಾಹುಲ್ ಮನೆಗೆ ಹೋಗಿ ಬಂದಿದ್ದಕ್ಕೆ ಮತ್ತೆ ಮಂದ್ರಾ ಕೋಪ ಮಾಡಿಕೊಂಡು ಚೆನ್ನಾಗಿ ಹೊಡೆದಿದ್ದಾಳೆ. ಆದರೆ ಕಡೆಯಲ್ಲಿ ನೀನು ನಿನ್ನ ಅಮ್ಮನ ಹಾದಿ ಹಿಡಿಯುತ್ತೀಯಾ ಅಂದಿದ್ದೆ ತಡ, ಹೂವಿ ರೊಚ್ಚಿಗೆದ್ದಿದ್ದಾಳೆ. ನನ್ನ ಅಮ್ಮು ಬಗ್ಗೆ ಮಾತನಾಡಬೇಡ್ರಾ ಅಂತ ಎಚ್ಚರಿಕೆ ಕೊಡುತ್ತಾ ಇದ್ದೀನಿ. ನನ್ನ ಅಮ್ಮು ಹಾದಿ ಹಿಡಿದಿರುವುದಕ್ಕೇ ನಿಮ್ಮ ಮಗಳ ಜೀವನ ಚೆನ್ನಾಗಿರುವುದು. ನಿಮ್ಮ ಮಗಳ ಜೀವನ ಹಾಳು ಮಾಡಬೇಕು ಅಂದ್ರೆ ನನಗೆ ಕಷ್ಟದ ಕೆಲಸವೇನು ಅಲ್ಲ. ಆದರೆ ನನ್ನ ಅಮ್ಮು ಅದನ್ನು ಹೇಳಿಕೊಟ್ಟಿಲ್ಲ. ನಾನು ಅಲ್ಲಿ ಕೆಲಸದವಳಾಗಿರುವುದಕ್ಕೆ ನಿಮ್ಮ ಮಗಳು ಸೊಸೆಯಾಗಿದ್ದಾಳೆ. ನನ್ನ ಅಧಿಕಾರವನ್ನು ಬಿಟ್ಟುಕೊಟ್ಟಿರುವುದಕ್ಕೆ ನಿಮ್ಮ ಮಗಳು ಅಲ್ಲಿದ್ದಾಳೆ ಎಂಬ ಕಹಿ ಸತ್ಯವನ್ನು ಹೇಳಿದ್ದಾಳೆ. ಆದರೆ ಆ ಕಹಿ ಸತ್ಯವನ್ನು ಮಂದ್ರಾ ಅರ್ಥ ಮಾಡಿಕೊಳ್ಳುವುದಾದರೂ ಹೇಗೆ ಅಂತ.

  English summary
  Bettada Hoo Serial September 30th Episode Written Update. Here is the details
  Friday, September 30, 2022, 22:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X