For Quick Alerts
  ALLOW NOTIFICATIONS  
  For Daily Alerts

  ಬೆಟ್ಟದ ಹೂ: ಹೂವಿಯನ್ನು ಕೀಳಾಗಿ ಕಂಡರೆ ಮಾಲಿನಿಗೆ ಮನೆಯಲ್ಲಿ ಜಾಗವಿಲ್ಲ ಎಂದು ರಾಹುಲ್!

  By ಎಸ್ ಸುಮಂತ್
  |

  ಈ ಮುಂಚೆ ಮಾಡಿದ ತಪ್ಪನ್ನು ಮಾಡಲು ಪ್ರಯತ್ನಕ್ಕೆ ಹೋಗುತ್ತಿಲ್ಲ ರಾಹುಲ್. ಬದಲಿಗೆ ಬದಲಾಗಿದ್ದಾನೆ. ಅದರಲ್ಲೂ ಹೂವಿಯ ವಿಚಾರದಲ್ಲಿ ಸಂಪೂರ್ಣವಾಗಿ ಬದಲಾಗಿದ್ದಾನೆ. ಮುದ್ದು ಮಾಡುತ್ತಾನೆ, ಪ್ರೀತಿ ತೋರಿಸುತ್ತಾನೆ, ಕಾಳಜಿ ಮಾಡುತ್ತಾನೆ, ಅವಳಿಗೆ ಏನು ಬೇಕು ಎಂಬುದನ್ನು ಅರ್ಥ ಮಾಡಿಕೊಂಡಿದ್ದಾನೆ. ಅವಳಿಗೆ ಕಾವಲಾಗಿ ನಿಂತಿದ್ದಾನೆ. ಆದರೆ ಈ ನಡುವೆ ಮಾಲಿನಿ ದೊಡ್ಡ ವಿಲನ್ ಆಗಿದ್ದಾಳೆ.

  ರಾಹುಲ್ ಈ ಮೊದಲೆಲ್ಲಾ ಮಾಲಿನಿಯನ್ನು ಅತಿಯಾಗಿ ಪ್ರೀತಿ ಮಾಡುತ್ತಿದ್ದ. ಹೂವಿಯ ಮನಸ್ಸಿಗೆ ನೋವಾಗುತ್ತೆ ಎಂಬುದನ್ನು ತಿಳಿಯದೆ ಮಾಲಿನಿ ಜೊತೆ ಪ್ರೀತಿಯಲ್ಲಿ ಮುಳುಗಿದ್ದ. ಆದರೆ ಈಗ ಎಲ್ಲದೂ ಉಲ್ಟಾ ಆಗಿದೆ. ಹೂವಿಗೆ ಕೊಂಚ ನೋವಾದರೂ ಸಹಿಸಿಕೊಳ್ಳುತ್ತಿಲ್ಲ. ಬದಲಿಗೆ ಮಾಲಿನಿಯನ್ನೇ ಮನೆಯಿಂದ ಹೊರ ಹೋಗುವಂತೆ ತಿಳಿಸಲು ಸಿದ್ಧವಾಗಿದ್ದಾನೆ.

  ಧಾರಾವಾಹಿಯಲ್ಲಿ ಶತ್ರುಗಳು : ರಿಯಲ್ ಲೈಫ್‌ನಲ್ಲಿ ಶಂಭು ಮತ್ತು ಅನಿಕಾ ಕಪಲ್ಸ್ !ಧಾರಾವಾಹಿಯಲ್ಲಿ ಶತ್ರುಗಳು : ರಿಯಲ್ ಲೈಫ್‌ನಲ್ಲಿ ಶಂಭು ಮತ್ತು ಅನಿಕಾ ಕಪಲ್ಸ್ !

  ಮಾಲಿನಿ & ಹೂವಿ ನಡುವೆ ಸಿಂಧೂರ ಜಗ್ಗಾಟ

  ಮಾಲಿನಿ & ಹೂವಿ ನಡುವೆ ಸಿಂಧೂರ ಜಗ್ಗಾಟ

  ಹೂವಿ ಮದುವೆಯಾಗಿರುವುದನ್ನು ಮನೆಯವರೆಲ್ಲರಿಂದಲೂ ಮುಚ್ಚಿಟ್ಟಿದ್ದಾಳೆ. ಆದರೆ ಸಿಂಧೂರ ಇಟ್ಟುಕೊಂಡು ಆಗಾಗ ಸಿಕ್ಕಿ ಬೀಳುತ್ತಿದ್ದಾಳೆ. ಹೂವಿ ಸಿಂಧೂರ ಇಡುವುದು ಮಾಲಿನಿಗೆ ಸುತಾರಾಂ ಇಷ್ಟವಿಲ್ಲ. ಎಷ್ಟೋ ಸಲ ಅದರ ಹಿಂದಿನ ಸತ್ಯವನ್ನು ತಿಳಿದುಕೊಳ್ಳುವುದಕ್ಕೆ ಯತ್ನಿಸಿದ್ದಾಳೆ. ಆದರೆ ಆ ಸತ್ಯ ತಿಳಿಯಲೇ ಇಲ್ಲ. ಇತ್ತಿಚೆಗೆ ಕಾಲೇಜಿಗೆ ಬಿಡಲು ಮಾಲಿನಿಯೇ, ಹೂವಿಯನ್ನು ಕರೆದುಕೊಂಡು ಹೋಗಿದ್ದಳು. ಆಗಲು ಅಕಸ್ಮಾತ್ತಾಗಿ ಹೂವಿಯ ಹಣೆಯಲ್ಲಿದ್ದ ಸಿಂಧೂರದ ದರ್ಶನವಾಯ್ತು. ಮತ್ತೆ ಮಾಲಿನಿ ಕೆಂಡಾಮಂಡಲಳಾಗಿದ್ದಾಳೆ. ಹೂವಿಯ ಹಣೆಯಲ್ಲಿ ಕುಂಕುಮ ಅಳಿಸುವ ತನಕ ಬಿಡಲೇ ಇಲ್ಲ.

  ಮನೆ ಬಿಟ್ಟು ಕಳುಹಿಸಲು ನಿರ್ಧಾರ

  ಮನೆ ಬಿಟ್ಟು ಕಳುಹಿಸಲು ನಿರ್ಧಾರ

  ಈಗಾಗಲೇ ಹೂವಿ ವಿಚಾರದಲ್ಲಿ ಮಾಲಿನಿ ತುಂಬಾನೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾಳೆ. ಈ ಬಗ್ಗೆ ರಾಹುಲ್ ಸಾಕಷ್ಟು ಬಾರಿ ಸಮಾಧಾನವಾಗಿ ಕೂಡ ಹೇಳಿದ್ದಾನೆ. ಅದು ಅವರ ವೈಯಕ್ತಿಕ ವಿಚಾರ ಕೇಳುವುದಕ್ಕೆ ನೀನು ಯಾರು? ಅದನ್ನು ಕೇಳುವುದಕ್ಕೆ ದೊಡ್ಡವರು ಅಂತ ಅಪ್ಪ-ದೊಡ್ಡಪ್ಪ ಇದ್ದಾರೆ ಎಂದು ವಾರ್ನಿಂಗ್ ಕೂಡ ಕೊಟ್ಟಿದ್ದಾನೆ. ಆದರೂ ಮಾಲಿನಿ ತನ್ನ ಹಠ ಬಿಟ್ಟಿಲ್ಲ. ಕಾಲೇಜಿನಲ್ಲಿ ನಡೆದ ವಿಚಾರ ಹೇಗೋ ರಾಹುಲ್‌ಗೆ ಗೊತ್ತಾಗಿದೆ. ಇದಕ್ಕೆ ಕೋಪಗೊಂಡಿರುವ ರಾಹುಲ್, ಇವತ್ತು ಮನೆಯಿಂದ ಹೊರಗೆ ಹಾಕುತ್ತೀನಿ ಎಂದು ಕೋಪಿಸಿಕೊಂಡು ಹೊರಟಿದ್ದಾನೆ.

  ಕೋಪ ಕಡಿಮೆ ಮಾಡುತ್ತಾಳಾ ಹೂವಿ?

  ಕೋಪ ಕಡಿಮೆ ಮಾಡುತ್ತಾಳಾ ಹೂವಿ?

  ರಾಹುಲ್, ಹೂವಿ ಬಳಿ ಇದನ್ನು ಪ್ರಶ್ನೆ ಮಾಡಿದ್ದು, ಕೋಪ ಮಾಡಿಕೊಂಡಿದ್ದಾನೆ. ಎಷ್ಟು ಸಲ ಹೇಳಿದರು ಅವಳು ಬುದ್ದಿಯನ್ನೇ ಕಲಿಯುವುದಿಲ್ಲ ಎಂದು ಗರಂ ಆಗಿದ್ದಾನೆ. ಮನೆಯಿಂದ ಬಿಟ್ಟು ಹೋಗಲಿ, ಎಂದು ಆಕ್ರೋಶದ ಧ್ವನಿಯಲ್ಲಿ ಹೇಳಿದ್ದಾನೆ. ಇದಕ್ಕೆ ಅಲ್ಲಿಯೇ ಇದ್ದ ಹೂವಿ, ರಾಹುಲ್‌ಗೆ ಸಮಾಧಾನ ಮಾಡಲು ಯತ್ನಿಸಿದ್ದಾಳೆ. ನೀವೂ ಮಾಲಿನಿ ಅಕ್ಕನನ್ನು ಹೊರಗೆ ಕಳುಹಿಸಿದರೆ, ಅದಕ್ಕೂ ಮೊದಲು ನಾನೇ ಹೊಸಲು ದಾಟಿರುತ್ತೇನೆ ಎಂದಿದ್ದಾಳೆ. ರಾಹುಲ್‌ಗೆ ಈ ಮಾತು ನೋವು ತರಬಹುದು. ಹೂವಿಯನ್ನು ಕಂಡರೆ ಅಷ್ಟು ಪ್ರೀತಿಸುವ ರಾಹುಲ್ ಕೋಪ ಮಾಡಿಕೊಳ್ಳಬಹುದು.

  ಸತ್ಯ ಹೇಳಲು ಹೊರಟ ರಾಹುಲ್

  ಸತ್ಯ ಹೇಳಲು ಹೊರಟ ರಾಹುಲ್

  ಮಾಲಿನಿಗೆ ಅದೇನೋ ಅನುಮಾನ ಬಂದಂತೆ ಕಾಣುತ್ತಿದೆ. ಹೀಗಾಗಿಯೇ ಹೂವಿಯ ಮೇಲೆ ಕೆಂಡಕಾರುತ್ತಿದ್ದಾಳೆ. ಇದು ರಾಹುಲ್‌ಗೆ ಗೊತ್ತಾಗುತ್ತಿದೆ. ಇದಕ್ಕೆಲ್ಲ ಕಾರಣ ನಾನೇ. ಸತ್ಯವನ್ನು ಎಲ್ಲರ ಬಳಿ ಹೇಳಿದರೆ ಸರಿಯಾಗುತ್ತದೆ ಎಂದು ಸತ್ಯ ಹೇಳಲು ಹೊರಟಿದ್ದಾನೆ. ಮನೆಯಲ್ಲಿ ಸತ್ಯ ಗೊತ್ತಾದರೆ ಅದರ ನೆಕ್ಸ್ಟ್ ಮೂಮೆಂಟ್ ಏನಾಗಬಹುದು ಎಂಬ ಅಂದಾಜು ಹೂವಿಗೆ ಗೊತ್ತಿದೆ. ಹೀಗಾಗಿ ಅದಕ್ಕೆ ಹೂವಿ ಆಸ್ಪದ ನೀಡುವವಳಲ್ಲ. ಸತ್ಯ ಹೇಳಲು ಹೊರಟ ರಾಹುಲ್‌ನನ್ನು ತಡೆಯುತ್ತಾಳೆ.

  English summary
  Bettada Hoo Serial September 5th Episode Written Update. Here is the details about Rahul Angry with Malini

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X