For Quick Alerts
  ALLOW NOTIFICATIONS  
  For Daily Alerts

  ಬೆಟ್ಟದ ಹೂ: ಹೂವಿ ಮತ್ತು ರಾಹುಲ್ ಮದುವೆ ವಿಚಾರ ಮನೆಯವರಿಗೆ ಗೊತ್ತಾಗಿದೆ: ಮುಂದೇನು..?

  By ಎಸ್ ಸುಮಂತ್
  |

  ಗುಟ್ಟನ್ನು ಎಷ್ಷು ದಿನ ಅಂತ ಮುಚ್ಚಿಡುವುದಕ್ಕೆ ಸಾಧ್ಯವಾಗುತ್ತದೆ. ಗುಟ್ಟು ಸೆರಗಲ್ಲಿ ಕಟ್ಟಿಕೊಂಡ ಕೆಂಡದಂತೆ. ಒಂದಲ್ಲ ಒಂದಿನ ಸುಟ್ಟು ಆ ಬೆಂಕಿ ಎಲ್ಲರಿಗೂ ಕಾಣಿಸಿಯೇ ಕಾಣುತ್ತೆ. ಇದೀಗ ಹೂವಿ ಬದುಕಲ್ಲಿ ನಡೆದದ್ದು ಅದೇ. ತನ್ನ ಮತ್ತು ರಾಹುಲ್ ಮದುವೆ ವಿಚಾರವನ್ನು ಮುಚ್ಚಿಡುವುದಕ್ಕೆ ಸಾಕಷ್ಟು ಪ್ರಯತ್ನ ಪಟ್ಟಿದ್ದಾಳೆ. ಆದರೆ ಸಿಂಧೂರದಿಂದ ಆ ಗುಟ್ಟು ರಟ್ಟಾಗಿದೆ.

  ಮದುವೆಯಾದ ಹೆಣ್ಣು ಮಕ್ಕಳು ಸಿಂಧೂರ ಇಟ್ಟುಕೊಳ್ಳುವುದು ಸಂಪ್ರದಾಯ. ಹೂವಿಗೆ ಆ ವಿಚಾರದಲ್ಲಿ ಸಾಕಷ್ಟು ಗೌರವವಿದೆ. ಅದರಲ್ಲೂ ಗಂಡನೇ ಕೈಯ್ಯಾರೆ ತಂದುಕೊಟ್ಟಾಗ ಸಿಂಧೂರ ಇಟ್ಟುಕೊಳ್ಳದೆ ಇರಲಾಗಲಿಲ್ಲ. ಪ್ರತಿದಿನ ಸಿಂಧೂರ ಇಟ್ಟುಕೊಳ್ಳುತ್ತಿದ್ದಳು ಹೂವಿ. ಆದರೆ ಅದೇ ಸಿಂಧೂರ ಮನೆಯಲ್ಲಿ ರಾದ್ಧಾಂತವನ್ನು ಮಾಡಿಸಿತು, ಒಬ್ಬರಿಗಾದರೂ ಸತ್ಯ ಗೊತ್ತಾಗುವಂತೆ ಮಾಡಿತು.

  ಪೂರ್ವಿ ಮನಸ್ಸು ಒಡೆದ ಕಂಠಿ: ಸುಮ್ಮನೆ ಬಿಡುತ್ತಾಳಾ ಪೂರ್ವಿಪೂರ್ವಿ ಮನಸ್ಸು ಒಡೆದ ಕಂಠಿ: ಸುಮ್ಮನೆ ಬಿಡುತ್ತಾಳಾ ಪೂರ್ವಿ

  ಮಾಲಿನಿ ನಡವಳಿಕೆಗೆ ಮನೆಯವರ ಬೇಸರ

  ಮಾಲಿನಿ ನಡವಳಿಕೆಗೆ ಮನೆಯವರ ಬೇಸರ

  ಮಾಲಿನಿ ಇಷ್ಟು ದಿನ ಮನೆಯವರಲ್ಲಿ ತಾನೂ ಒಬ್ಬಳು ಎಂಬಂತೆಯೇ ಇದ್ದಳು. ಎಲ್ಲರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು. ಅತ್ತೆಯಂದಿರ ಜೊತೆ ತಾನೂ ಅಡುಗೆ ಮನೆಯಲ್ಲಿ ಕಾಲ ಕಳೆಯುತ್ತಿದ್ದಳು. ಆದರೆ ಈಗ ಸಂಪೂರ್ಣವಾಗಿ ಬದಲಾಗಿದ್ದಾಳೆ. ಅದರಲ್ಲೂ ಮನೆಯವರ ಸಮಸ್ಯೆಯನ್ನೇ ವೀಕ್ನೆಸ್ ಆಗಿ ಮಾತನಾಡಿದ್ದಾಳೆ. ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ವರ್ತಿಸಿದ್ದಾಳೆ. ದೊಡ್ಡವರು ಚಿಕ್ಕವರು ಎಂಬ ಗೌರವವನ್ನೇ ನೀಡದೆ ಎಲ್ಲರ ಮನ ನೋಯಿಸಿದ್ದಾಳೆ.

  ಆರ್ಯವರ್ಧನ್ ಕಾಣೆಯಾಗಿದ್ದಾನೆ ಎಂದು ಗಾಬರಿಯಾಗಿರುವ ಅನು!ಆರ್ಯವರ್ಧನ್ ಕಾಣೆಯಾಗಿದ್ದಾನೆ ಎಂದು ಗಾಬರಿಯಾಗಿರುವ ಅನು!

  ಮಿಡಲ್ ಕ್ಲಾಸ್ ಪೀಪಲ್ ಎಂದ ಮಾಲಿನಿ

  ಮಿಡಲ್ ಕ್ಲಾಸ್ ಪೀಪಲ್ ಎಂದ ಮಾಲಿನಿ

  ಮಾಲಿನಿ ರಾಹುಲ್‌ನನ್ನು ಪ್ರೀತಿಸಿ ಮದುವೆಯಾದವಳು. ಮದುವೆಯಾಗುವಾಗ ಮಿಡಲ್ ಕ್ಲಾಸ್ ಎಂಬುದು ಗೊತ್ತೆ ಇತ್ತು. ಆದರೂ ಅದು ಮ್ಯಾಟರ್ ಆಗಲೇ ಇಲ್ಲ. ಆದರೆ ಈಗ ಮನೆಯವರೆಲ್ಲರಿಗೂ ಬಾಯಿಗೆ ಬಂದ ಹಂಗೆ ಮಾತನಾಡಿದ್ದಾಳೆ. ಬುದ್ದಿ ಹೇಳಲು ಬಂದ ದೊಡ್ಡ ಮಾವನಿಗೆ ಮಕ್ಕಳಿಗೆ ಸರಿಯಾದ ಬುದ್ದಿ ಕಲಿಸಿಲ್ಲ ಎಂದಿದ್ದಾಳೆ. ಮನೆ ಮಗಳಿಗೆ ಮೊದಲು ನಿನ್ನ ಗಂಡನ ಬಳಿ ನೀನು ಸರಿಯಾಗಿ ಸಂಸಾರ ಮಾಡೋದನ್ನು ಕಲಿ ಎಂದಿದ್ದಾಳೆ. ಎರಡನೇ ಸೊಸೆಗೆ ಕೇಕ್ ಮಾಡುವವರೆಲ್ಲಾ ಬುದ್ದಿ ಹೇಳೋದಕ್ಕೆ ಬಂದಿದ್ದಾರೆ ಎಂದು ಅವಮಾನ ಮಾಡಿದ್ದಾಳೆ. ಯಾರು ಏನೇ ಹೇಳಿದರು ಕೇಳದೆ ಮಿಡಲ್ ಕ್ಲಾಸ್ ಪೀಪಲ್ ಅಂತ ಮರ್ಯಾದೆ ತೆಗೆದು, ನಾನು ಈ ಮನೆಯಲ್ಲಿ ಇರಲ್ಲ ಅಂತ ಹೊರಟು ನಿಂತಿದ್ದಾಳೆ.

  ಹೂವಿಗೆ ಸಮಾಧಾನ ಮಾಡ್ತಿದ್ದಾನೆ ರಾಹುಲ್

  ಹೂವಿಗೆ ಸಮಾಧಾನ ಮಾಡ್ತಿದ್ದಾನೆ ರಾಹುಲ್

  ಮಾಲಿನಿ ಮನೆ ಬಿಟ್ಟು ಹೋಗಿದ್ದು ನನ್ನಿಂದಾನೆ ಎಂದು ಹೂವಿ ತುಂಬಾ ಬೇಸರ ಮಾಡಿಕೊಂಡಿದ್ದಾಳೆ. ರಾಹುಲ್‌ಗೆ ಹೇಗಾದರೂ ಮಾಡಿ ಮಾಲಿನಿಯನ್ನು ತಡೆಯಲು ಹೇಳಿದ್ದಳು. ಆದರೆ ರಾಹುಲ್ ನನಗೆ ವಾಂತಿ ಬರುತ್ತೆ ಅವಳನ್ನು ನೋಡುತ್ತಿದ್ದರೆ ಎಂದು ಹೇಳಿ ಹೊರಟು ಬಿಟ್ಟಿದ್ದ. ಈಗ ಮನೆಯ ವಾತಾವರಣ ಸ್ವಲ್ಪ ತಿಳಿಯಾದ ಮೇಲೆ ರಾಹುಲ್ ಬಳಿ ಮಾತನಾಡುತ್ತಿದ್ದಾಳೆ. ಆಗ ರಾಹುಲ್, ಅವತ್ತು ನನ್ನ ನಿನ್ನ ಮದುವೆ ಬಲವಂತದಿಂದ ಆಯ್ತಲ್ಲ. ಆಗ ಯಾರಾದರೂ ನಮ್ಮ ಭಾವನೆ ಬಗ್ಗೆ ಕೇಳಿದರಾ ಎಂದಿದ್ದಾನೆ. ಆದರೆ ಹಿಂದೆ ನಿಂತಿದ್ದ ದೀಪ್ತಿಯ ಕಿವಿಗೆ ವಿಚಾರ ಬಿದ್ದಿದೆ.

  ಹೂವಿಯನ್ನು ಕಾಪಾಡುತ್ತಾಳಾ ದೀಪ್ತಿ?

  ಹೂವಿಯನ್ನು ಕಾಪಾಡುತ್ತಾಳಾ ದೀಪ್ತಿ?

  ರಾಹುಲ್ ಮತ್ತು ಹೂವಿ ತಮ್ಮ ಮದುವೆಯ ದಿನಗಳನ್ನು ಮಾತನಾಡುತ್ತಿದ್ದಾಗ ದೀಪ್ತಿ ಕಿವಿಗೆ ವಿಚಾರ ಬಿದ್ದಿದೆ. ಒಂದು ಕ್ಷಣ ಅದನ್ನು ಕೇಳಿಸಿಕೊಂಡು ಶಾಕ್ ಆಗಿದ್ದಾಳೆ. ಬಳಿಕ ಹೂವಿಯನ್ನು ತನ್ನ ರೂಮಿಗೆ ಕರೆದುಕೊಂಡು ಬಂದು ಎಲ್ಲವನ್ನು ಕೇಳುತ್ತಾಳೆ. ಮೊದ ಮೊದಲಿಗೆ ಮತ್ತೆ ಸುಳ್ಳನ್ನೆ ಹೇಳಲು ಹೂವಿ ಯತ್ನಿಸುತ್ತಾಳೆ. ಆದರೆ ದೀಪ್ತಿ ಎಲ್ಲವನ್ನು ಕೇಳಿಸಿಕೊಂಡಿದ್ದ ಕಾರಣ, ಹೇಳುವಂತೆ ಮಾಡಿದ್ದಾಳೆ. ಆಗ ಹೂವಿ ಸತ್ಯ ಒಪ್ಪಿಕೊಂಡಿದ್ದಾಳೆ. ಈಗಾಗಲೇ ನಮ್ಮ ಮದುವೆ ಆಗಿ ಹೋಗಿದೆ ಎಂದು ಮತ್ತೆ ಸಿಂಧೂರ ತೋರಿಸುತ್ತಾಳೆ.

  English summary
  Bettada Hoo Serial September 6th Episode Written Update. Here is the details about deepti finding rahul and hoovi marriage matter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X