For Quick Alerts
  ALLOW NOTIFICATIONS  
  For Daily Alerts

  ಬೆಟ್ಟದ ಹೂ: ನಿಜ ಹೇಳೇ ಬಿಟ್ಟ ರಾಹುಲ್: ಹೂವಿ ಮೇಲೆ ಫುಲ್ ಗರಂ..!

  By ಎಸ್ ಸುಮಂತ್
  |

  ಚಕ್ರವರ್ತಿ ಮನೆಯಲ್ಲಿ ಮಾಲಿನಿ ಮಾಡಿದ ರಾದ್ಧಾಂತದಿಂದ ಎಲ್ಲರ ನೆಮ್ಮದಿಗೆ ಕುತ್ತು ಬಂದಿದೆ. ಬಾಯಿಗೆ ಬಂದ ಹಾಗೆ ಮಾತನಾಡಿ ಮನೆ ಬಿಟ್ಟು ಹೋದ ಮಾಲಿನಿಯದ್ದೇ ಯೋಚನೆಯಾಗಿದೆ. ಮಾಲಿನಿಯ ತಂದೆ ಬಂದು ಎಲ್ಲವನ್ನು ಸರಿ ಮಾಡಲು ಯತ್ನಿಸಿದ್ದಾರೆ. ಆದರೆ ಮಾಲಿ‌ನಿ ಮಾತನಾಡಿದ ರೀತಿ ಗೌತಮ್ ಗೂ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಮಧ್ಯೆ ಮನೆಯಲ್ಲಿ ಮುಚ್ಚಿಟ್ಟ ಸತ್ಯ ಎಲ್ಲರೆದುರು ಬಯಲಾಗಿದೆ. ಅದು ಹೂವಿ ಮತ್ತು ರಾಹುಲ್ ಮದುವೆಯಾದ ವಿಚಾರ.

  ಅನಿವಾರ್ಯತೆಯಿಂದ ಮದುವೆಯಾದ ರಾಹುಲ್ ಮತ್ತು ಹೂವಿ ಎಲ್ಲರಿಂದಲೂ ಈ ಸತ್ಯವನ್ನು ಮುಚ್ಚಿಟ್ಟಿದ್ದರು. ಸತ್ಯ ಎಂಬುದು ಒಡಲೊಳಗೆ ಬಚ್ಚಿಟ್ಟ ಬೆಂಕಿಯಂತೆ. ಆ ಬೆಂಕಿಯ ಕಿಡಿ ಎಂದಾದರೊಂದು ದಿನ ಕಾಣಿಸಿಕೊಳ್ಳಲೇಬೇಕು. ಆ ಸತ್ಯ ಇದೀಗ ಮನೆಯವರೆಲ್ಲರ ಎದುರು ಬಯಲಾಗಿದೆ. ಆದ್ರೆ ಯಾರಿಂದಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

  ಸತ್ಯಾಂಶ ಹೇಳಿದ ರಾಹುಲ್

  ಸತ್ಯಾಂಶ ಹೇಳಿದ ರಾಹುಲ್

  ರಾಹುಲ್ ಮನೆಯವರ ಮುಂದೆ ಸತ್ಯ ಹೇಳಲೇಬೆಂದು ಸಾಕಷ್ಟು ಸಲ ಪ್ರಯತ್ನಪಟ್ಟಿದ್ದ. ಆದರೆ ಹೂವಿ ಕೂಡ ಅದಕ್ಕೆ ಆಸ್ಪದ ನೀಡಿರಲಿಲ್ಲ. ಇದೀಗ ಆ ಕಾಲ ಬಂದೇ ಬಿಟ್ಟಿದೆ. ರಾಹುಲ್ ಏನೋ ಆತಂಕದಲ್ಲಿದ್ದದ್ದನ್ನು ಕಂಡ ಮನೆಯವರು ಬಲವಂತ ಮಾಡಿದ್ದಾರೆ. ಏನನ್ನೋ ಮುಚ್ಚಿಟ್ಟಿದ್ದೀಯಾ ಹೇಳು ಎಂದು ಕೇಳಿದ್ದಾರೆ. ರಾಹುಲ್ ನಡವಳಿಕೆಯಿಂದ ಮನೆಯವರೆಲ್ಲರಿಗೂ ಅನುಮಾನ ಮೂಡಿದೆ. ಹೀಗಾಗಿ ಆ ಸತ್ಯ ತಿಳಿದ ಕೂಡಲೇ ಶಾಕ್ ಆಗಿದ್ದಾರೆ.

  ಹೂವಿ ಮದುವೆ ಬಗ್ಗೆ ತಿಳಿಸಿದ ರಾಹುಲ್

  ಹೂವಿ ಮದುವೆ ಬಗ್ಗೆ ತಿಳಿಸಿದ ರಾಹುಲ್

  ಮನೆಯವರೆಂದರೆ ರಾಹುಲ್ ಗೆ ಗೌರವ. ಮನೆಯ ಹಿರಿಯರು ಕೇಳುತ್ತಿದ್ದಾರೆ ಎಂದರೆ ಅದೆಂಥ ಸತ್ಯವೇ ಆಗಿರಲಿ ಹೇಳಿಬಿಡುತ್ತಾನೆ. ಈಗ ಆಗಿದ್ದು ಅದೇ ಘಟನೆ. ರಾಹುಲ್ ಅಂದು ನಡೆದದ್ದು ಎಲ್ಲವನ್ನು ಹೇಳಿದ್ದಾನೆ. ನಂದು ಹೂವಿಯದ್ದು ಯಾವುದೇ ತಪ್ಪು ಇರಲಿಲ್ಲ. ಆದರೆ ಊರಿನವರೆಲ್ಲಾ ಸೇರಿ ಬಲವಂತವಾಗಿ ಮದುವೆ ಮಾಡಿಬಿಟ್ಟರು. ಮಾಲಿನಿಯನ್ನೇ ನಾನು ಪ್ರೀತಿಸಿದ್ದು. ಆದರೆ ಅವಳು ನನ್ನನ್ನು ಅನುಮಾ‌ನ ಪಟ್ಟಳು. ಆಗ ನನ್ನ ಪ್ರೀತಿಗೆ ಸಾಥ್ ಕೊಟ್ಟಿದ್ದು ಹೂವಿ ಎಂದಿದ್ದಾನೆ. ಇದನ್ನು ಕೇಳಿದ ಮನೆಯವರು ಕೆಂಡಾಮಂಡಲಾರಾಗಿದ್ದಾರೆ.

  ಸೊಸೆಯಾಗಲು ಸಾಧ್ಯವಿಲ್ಲವೆಂದ ರಾಹುಲ್ ತಾಯಿ

  ಸೊಸೆಯಾಗಲು ಸಾಧ್ಯವಿಲ್ಲವೆಂದ ರಾಹುಲ್ ತಾಯಿ

  ಹೂವಿ ಎಂದರೆ ಮನೆಯವರಿಗೆಲ್ಲಾ ಪ್ರಾಣ. ಅದು ಮನೆಕೆಲಸದವಳೇ ಆಗಿದ್ದರೆ ಮಾತ್ರ. ಆದ್ರೆ ಹೂವಿ ಸೊಸೆಯ ಸ್ಥಾನದಲ್ಲಿ ಕುಳಿತುಕೊಳ್ಳುತ್ತಾಳೆ ಎಂದರೆ ಯಾರಿಗೂ ಅದನ್ನು ರಿಸೀವ್ ಮಾಡಿಕೊಳ್ಳುವ ಶಕ್ತಿ ಇಲ್ಲ‌ ಇದೇ ಕಾರಣಕ್ಕೆ ಮನೆ ಮಂದಿಯೆಲ್ಲಾ ಈಗ ಹೂವಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದೇ ಫ್ಲ್ಯಾನ್ ಮಾಡಿಕೊಂಡ ನೀನು ಈ ಮನೆಗೆ ಬಂದಿರೋದಾ ಅಂತ ಸೊಸೆ ಎಂದರೆ. ನಿನ್ನನ್ನು ಮಗಳಂತೆ ನೋಡಿಕೊಂಡಿದ್ದಕ್ಕೆ ಇದೇನಾ ನೀನು ಕೊಟ್ಟ ಉಡುಗೊರೆ ಅಂತ ರಾಹುಲ್ ತಾಯಿ ನಿಂದಿಸುತ್ತಿದ್ದಾಳೆ.

  ಹೂವಿ ಪರ ನಿಲ್ಲುತ್ತಾನಾ ರಾಹುಲ್?

  ಹೂವಿ ಪರ ನಿಲ್ಲುತ್ತಾನಾ ರಾಹುಲ್?

  ಹೂವಿ ಅಂದಿನಿಂದಲೂ ಯಾವತ್ತು ಸ್ವಾರ್ಥದ ರೀತಿ ಯೋಚನೆ ಮಾಡಲೇ ಇಲ್ಲ. ಆ ರೀತಿ ಸ್ವಾರ್ಥದಲ್ಲಿ ಯೋಚನೆ ಮಾಡಿದ್ದರೆ ಮಾಲಿನಿ ಮದುವೆಯೇ ಆಗುತ್ತಿರಲಿಲ್ಲ. ಆದರೂ ತಾಳ್ಮೆಯಿಂದ ಎಲ್ಲವನ್ನು ನೋಡಿ ಸಹಿಸಿಕೊಂಡಿದ್ದಾಳೆ. ಆದರೆ ಸತ್ಯ ಗೊತ್ತಾದ ಬಳಿಕ ಮನೆಯವರೆಲ್ಲಾ ಅವಳನ್ನೇ ನಿಂದಿಸುತ್ತಿದ್ದಾರೆ. ರಾಹುಲ್ ಮಧ್ಯೆ ಮಾತನಾಡಿ ಇದರಲ್ಲಿ ಅವಳದ್ದೇನು ತಪ್ಪಿಲ್ಲ ಎಂದು ಎಷ್ಟು ಸಾರಿ ಹೇಳಿದರು ಮನೆಯವರು ಕೇಳುತ್ತಿಲ್ಲ. ಮನಸ್ಸಿಗೆ ಆದ ನೋವನ್ನು ಮಾತಿನ ಮೂಲಕ ತೋರಿಸುತ್ತಿದ್ದಾರೆ. ಈಗ ದೀಪ್ತಿ ಮುಂದೆ ಬಂದು ಹೂವಿಯ ಪರ ನಿಲ್ಲುತ್ತಾಳಾ ನೋಡಬೇಕು. ರಾಹುಲ್ ಹೂವಿಯನ್ನು ಬಿಟ್ಟುಕೊಡುವ ಮಾತೇ ಇಲ್ಲ.

  English summary
  Bettada Hoo Serial September 9th Episode Written Update. Here is the details about rahul and hoovi marriage matter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X