ಬೆಟ್ಟದ ಹೂವಿನ ಟೀಂ ನೋಡಿ ವಾವ್ ಎಂದ ಪ್ರೇಕ್ಷಕರು.. ಕಾರಣ ಆ ಒಂದು ಫೋಟೊ..!

By ಎಸ್ ಸುಮಂತ್

ಸ್ಟಾರ್ ಸುವರ್ಣದಲ್ಲಿ ಮೂಡಿ ಬರುತ್ತಿರುವ ಬೆಟ್ಟದ ಹೂ ಧಾರಾವಾಹಿ ಈಗ ಎಲ್ಲರ ನೆಚ್ಚಿನ ಧಾರಾವಾಹಿಯಾಗಿದೆ. ದಿನೇ ದಿನೇ ಇಂಟ್ರೆಸ್ಟಿಂಗ್ ಎನಿಸುವಂತ ಟ್ವಿಸ್ಟ್ ನೀಡುತ್ತಿರುವ ಧಾರಾವಾಹಿ. ಸತ್ಯವನ್ನು ಹೇಳುವುದಕ್ಕೆ ಒದ್ದಾಡುತ್ತಿರುವ ರಾಹುಲ್ ಮತ್ತು ಹೂವಿ ಜೀವನ ಮುಂದೇ ಏನಾಗುತ್ತೆ ಎಂಬ ಆತಂಕವಿದೆ. ಎಲ್ಲಾ ಹಕ್ಕನ್ನು ಬಿಟ್ಟು ಹೂವಿ ಮನೆ ಕೆಲಸದವಳಂತೆ ಬದುಕುತ್ತಿದ್ದಾಳೆ. ಆದರೂ ಮಂದ್ರಾ ಅವಳನ್ನು ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ. ಈ ಎಲ್ಲಾ ಸಮಸ್ಯೆಯ ನಡುವೆ ಹೂವಿ ತನ್ನ ಓದನ್ನು ಮುಂದುವರೆಸಬೇಕಾ ಇಲ್ಲ ಚನ್ನವಲ್ಸೆಗೆ ವಾಪಾಸ್ ಹೋಗಬೇಕಾ ಎಂಬ ಗೊಂದಲದಲ್ಲಿದ್ದಾಳೆ.

ಇನ್ನು ಹೂವಿ ಮತ್ತು ಗೌರಾಗೆ ದುಷ್ಮನ್‌ಗಳು ಒಬ್ಬಿಬ್ಬರಲ್ಲ. ಊರಲ್ಲಿ ಕಾಳಿ ಗೌರಾಗೆ ಮತ್ತು ಹೂವಿಗೆ ದುಷ್ಮನ್ ಆಗಿದ್ದರೆ. ಇತ್ತ ನಗರದಲ್ಲಿ ಮಂದ್ರಾ ಮತ್ತು ಮಾಲಿನಿ ಮಾತೆತ್ತಿದ್ದರೆ ಕೆಂಡಕಾರುತ್ತಿದ್ದಾರೆ. ಅವಳನ್ನು ಕೊಲ್ಲುವ ಹಂತಕ್ಕೆ ತಲುಪಿದ್ದಾರೆ. ಇದೆಲ್ಲಾ ಧಾರಾವಾಹಿಯ ವಿಚಾರವಾದರೆ ಸುನೇತ್ರ ಒಂದು ಸ್ಪೆಷಲ್ ಫೋಟೊ ಹಂಚಿಕೊಂಡಿದ್ದು, ಎಲ್ಲರೂ ವಾವ್ ಎನ್ನುತ್ತಿದ್ದಾರೆ.

ಬೆಟ್ಟದ ಹೂ ಸುಂದರ ಮುಖಗಳು

ಬೆಟ್ಟದ ಹೂ ಸುಂದರ ಮುಖಗಳು

ಧಾರಾವಾಹಿಯಲ್ಲಿ ದುಷ್ಟನ್ ಆದವರು ರಿಯಲ್ ಲೈಫ್‌ನಲ್ಲೂ ಅದೇ ರೀತಿ ಇರಬೇಕು ಎಂದೇನಿಲ್ಲ. ಅದಕ್ಕೆ ವಿರುದ್ಧ ದಿಕ್ಕಿನಲ್ಲಿಯೇ ಇರುತ್ತಾರೆ. ಅನ್ಯೋನ್ಯವಾಗಿ ಇರುತ್ತಾರೆ. ಅದಕ್ಕೆ ಉದಾಹರಣೆ ಅವರ ಸೋಶಿಯಲ್ ಮೀಡಿಯಾ ನೋಡಿದರೇನೇ ಗೊತ್ತಾಗುತ್ತೆ. ಇದೀಗ ಇಡೀ ಟೀಂನ ಫೋಟೊವೊಂದು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಧಾರಾವಾಹಿಯ ರೂಪಕ್ಕೂ ಈ ಫೋಟೊದಲ್ಲಿರುವ ಲುಕ್‌ಗೂ ಬಹಳ ವ್ಯತ್ಯಾಸ ಇರುವ ಕಾರಣ ಎಲ್ಲರೂ ರಿಯಾಲಿಟಿ ಶೋ ನೋಡಿ ಖುಷಿ ಪಟ್ಟಿದ್ದಾರೆ.

ಹೂವಿ ಲುಕ್ಕಿಗೆ ಫಿದಾ

ಹೂವಿ ಲುಕ್ಕಿಗೆ ಫಿದಾ

ಬೆಟ್ಟದ ಹೂ ಧಾರಾವಾಹಿಯಲ್ಲಿ ಹೂವಿ ಹಳ್ಳಿಯಿಂದ ಬಂದ ಹುಡುಗಿಯಾಗಿದ್ದಾಳೆ. ಅದಕ್ಕೆ ತಕ್ಕಂತ ಡ್ರೆಸ್‌ನಷ್ಟೆ ಮಾಡುತ್ತಾಳೆ. ಬೇರೆ ಡ್ರೆಸ್‌ನಲ್ಲಿ ಹೇಗೆ ಕಾಣುತ್ತಾಳೆ ಎಂಬ ಅಂದಾಜಿಗಿಂತ ಸೀರೆ ಮತ್ತು ಚೂಡಿದಾರ್‌ನಲ್ಲಿಯೇ ಅದ್ಭುತವಾಗಿ ಕಾಣುತ್ತಾಳೆ. ಆದರೆ ಈಗ ಹಂಚಿಕೊಂಡಿರುವ ಫೋಟೊದಲ್ಲಿ ಹಸಿರು ಟೀ ಶರ್ಟ್ ತೊಟ್ಟು ಸಖತ್ ಅಂದವಾಗಿ ಕಾಣಿಸುತ್ತಿದ್ದಾಳೆ. ಇದಕ್ಕೆ ಹೂವಿ ಫ್ಯಾನ್ಸ್ ಹಾರ್ಟ್ ನೀಡಿದ್ದಾರೆ. ಹೂವಿಯ ನ್ಯೂ ಲುಕ್‌ಗೆ ಸೂಪರ್ ಎಂದಿದ್ದಾರೆ.

ಕಾಳಿ ಸೋಶಿಯಲ್ ಮೀಡಿಯಾದಲ್ಲಿ ಕಂಡ ಫೋಟೊ

ಕಾಳಿ ಸೋಶಿಯಲ್ ಮೀಡಿಯಾದಲ್ಲಿ ಕಂಡ ಫೋಟೊ

ಗೌರ ತನ್ನ ಪ್ರೀತಿಯಿಂದಾಗಿ ಬೇರೆ ಮದುವೆಯನ್ನು ಮಾಡಿಕೊಳ್ಳದೆ ಹೂವಿಯನ್ನು ಚೆನ್ನಾಗಿ ಸಾಕಿದಳು. ಗೌತಮ್ ನೆನಪಿನಲ್ಲಿಯೇ ಬದುಕು ಕಳೆದಳು. ಆದರೆ ಇದನ್ನು ಕಾಳಿ ಸಹಿಸಲಿಲ್ಲ. ಪದೇ ಪದೇ ಗೌರನಿಗೆ ಅವಮಾನ ಮಾಡುತ್ತಾ ಇರುತ್ತಾಳೆ. ಇನ್ನು ಹೂವಿಯನ್ನು ಕಂಡರೆ ಕೆಂಡಕಾರುವ ಕಾಳಿ ಇದೀಗ ಎಲ್ಲರ ಫೋಟೊವನ್ನು ಹಂಚಿಕೊಂಡಿದ್ದಾಳೆ. ಇದು ಕಾಳಿ ಪಾತ್ರಕ್ಕಷ್ಟೆ ಸೀಮಿತ. ಆದರೆ ಆ ಪಾತ್ರ ಮಾಡಿರುವ ಸುನೇತ್ರಾ ಪಂಡಿತ್ ತೆರೆ ಹಿಂದೆ ಅದಕ್ಕೆ ಮಿಗಿಲಾಗಿ ಎಲ್ಲರನ್ನೂ ಪ್ರೀತಿಸುತ್ತಾರೆ.

 ಚನ್ನವಲ್ಸೆಗೆ ಹೋದಾಗ ತೆಗೆದ ಫೋಟೊ

ಚನ್ನವಲ್ಸೆಗೆ ಹೋದಾಗ ತೆಗೆದ ಫೋಟೊ

ಬೆಂಗಳೂರಿನಿಂದ ಸತ್ಯ ತಿಳಿಯಬೇಕೆಂದು ಮಾಲಿನಿ ಎಲ್ಲರನ್ನೂ ಕರೆದುಕೊಂಡು ಚನ್ನವಲ್ಸೆಗೆ ಹೊರಟಿದ್ದಾಳೆ. ಸತ್ಯ ತಿಳಿಯಬಾರದು ಎಂದು ಹೂವಿ ಮತ್ತು ರಾಹುಲ್ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಇದರ ನಡುವೆ ಫೈನಲಿ ಎಲ್ಲರೂ ಚನ್ನವಲ್ಸೆಗೆ ರೀಚ್ ಆಗಿದ್ದಾರೆ. ಚನ್ನವಲ್ಸೆಯ ಶೂಟಿಂಗ್ ನಡುವೆ ಯಲ್ಲಾಪುರದ ಯಾವುದೋ ಸ್ಥಳಕ್ಕೆ ಹೋಗಿದ್ದಾರೆ ಅನ್ನಿಸುತ್ತೆ. ಅಲ್ಲಿ ಬೆಳ್ಳಂ ಬೆಳಗ್ಗೆ ತೆಗೆದ ಫೋಟೊ ಇದಾಗಿದೆ. ಆದರೆ ಇಡೀ ಟೀಂ ಫೋಟೊದಲ್ಲಿ ತುಂಬಾ ಚೆನ್ನಾಗಿ ಕಾಣುತ್ತಿದ್ದಾರೆ. ಅದರಲ್ಲೂ ಹೂವಿ, ಗೌರ, ರಾಹುಲ್, ಕಾಳಿ, ಮಾಲಿನಿ ಎಲ್ಲರನ್ನು ಫೋಟೊದಲ್ಲಿ ಕಾಣಬಹುದು.

More from Filmibeat

English summary
ಧಾರಾವಾಹಿಯಲ್ಲಿ ದುಷ್ಟನ್ ಆದವರು ರಿಯಲ್ ಲೈಫ್‌ನಲ್ಲೂ ಅದೇ ರೀತಿ ಇರಬೇಕು ಎಂದೇನಿಲ್ಲ. ಅದಕ್ಕೆ ವಿರುದ್ಧ ದಿಕ್ಕಿನಲ್ಲಿಯೇ ಇರುತ್ತಾರೆ. ಅನ್ಯೋನ್ಯವಾಗಿ ಇರುತ್ತಾರೆ. ಅದಕ್ಕೆ ಉದಾಹರಣೆ ಅವರ ಸೋಶಿಯಲ್ ಮೀಡಿಯಾ ನೋಡಿದರೇನೇ ಗೊತ್ತಾಗುತ್ತೆ. ಇದೀಗ ಇಡೀ ಟೀಂನ ಫೋಟೊವೊಂದು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಧಾರಾವಾಹಿಯ ರೂಪಕ್ಕೂ ಈ ಫೋಟೊದಲ್ಲಿರುವ ಲುಕ್‌ಗೂ ಬಹಳ ವ್ಯತ್ಯಾಸ ಇರುವ ಕಾರಣ ಎಲ್ಲರೂ ರಿಯಾಲಿಟಿ ಶೋ ನೋಡಿ ಖುಷಿ ಪಟ್ಟಿದ್ದಾರೆ.Bettada Hoo Serial Team Special Photo Shared By Sunetra Pandit, Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X