Bettada Hoo: ಅಂತಿಮ ಘಟ್ಟದಲ್ಲಿ ಹೂವಿ – ರಾಹುಲ್ ಮದುವೆ ಗುಟ್ಟು ರಟ್ಟು !
ಹೂವಿ ಮತ್ತು ರಾಹುಲ್ ಆರಂಭದಲ್ಲಿ ಇಷ್ಟಪಟ್ಟು ಮದುವೆಯಾದವರಲ್ಲ. ಬದಲಿಗೆ ಯಾವುದೋ ಸನ್ನಿವೇಶಕ್ಕೆ ಸಿಲುಕಿ ಮದುವೆಯಾಗಿದ್ದರು. ಆದರೆ ದಿನ ಕಳೆದಂತೆ ಹೂವಿಯನ್ನು ಬಿಟ್ಟು ಕೊಡಲಾರದಷ್ಟು ರಾಹುಲ್ ಪ್ರೀತಿಸುವುದಕ್ಕೆ ಶುರು ಮಾಡಿದ. ಮಾಲಿನಿ ಇದ್ದ ಮನಸ್ಸಿನ ಜಾಗದಲ್ಲಿ ಹೂವಿ ಕೂರುವುದಕ್ಕೆ ಶುರು ಮಾಡಿದಳು.
ರಾಹುಲ್ ಮತ್ತು ಮಾಲಿನಿ ಚೆನ್ನಾಗಿರಬೇಕೆಂದು ಬಯಸಿದ್ದ ಹೂವಿ, ತನ್ನ ಪ್ರೀತಿಯನ್ನು ತ್ಯಾಗ ಮಾಡುವುದಕ್ಕೆ ಶುರು ಮಾಡಿದಳು. ರಾಹುಲ್‌ಗೆ ಡಿವೋರ್ಸ್ ಕೊಡುವ ನಿರ್ಧಾರಕ್ಕೆ ಬಂದಳು. ಆದರೆ ಈಗ ಕೊನೆ ಗಳಿಗೆಯಲ್ಲಿ ಯಾರಿಗೆ..? ಯಾವ ..? ಸತ್ಯ ತಿಳಿಯಬಾರದೋ ಅದೇ ಸತ್ಯ ತಿಳಿದು ಹೋಗಿದೆ.

ಹೂವಿಗೆ ಗೊತ್ತಾದ ಸತ್ಯವೇನು..?
ಮಾಲಿನಿಗೆ ಅಕ್ಕ ಅಂತ ಹೇಳಿಕೊಂಡು ಬಂದಿರುವ ಚಾಂದಿನಿ ಮಾಲಿನಿಗೆ ಅಕ್ಕನೇ ಅಲ್ಲ ಎಂಬ ಸತ್ಯ ಗೊತ್ತಾಗಿದೆ. ನಿಜವಾದ ಅಕ್ಕ ತಂಗಿಯರು ಎಂದರೆ ಅದು ಶೈಲು ಹಾಗೂ ಚಾಂದಿನಿ ಎಂಬ ಸತ್ಯವೂ ಬಯಲಾಗಿದೆ. ಈ ಎಲ್ಲಾ ನಿಜಾಂಶ ತಿಳಿದ ಮೇಲೆ ಹೂವಿಗೆ ಮಾಲಿನಿಯ ಬಗ್ಗೆ ಕಾಳಜಿ ಶುರುವಾಗಿದೆ. ಮಾಲಿನಿ ಅಕ್ಕ ಚಾಂದಿನಿಯನ್ನು ನಂಬಿ ಜೀವನ ಹಾಳು ಮಾಡಿಕೊಳ್ಳುತ್ತಾರೆ ಎಂಬ ಭಯಕ್ಕೆ ಎಲ್ಲದನ್ನು ಹೇಳಿದ್ದಾಳೆ.

ಮಾಲಿನಿ ಗದರಿಕೆಗೆ ಹೂವಿ ನಡುಕ..!
ರಾಹುಲ್ ತನ್ನ ಗಂಡ ಎಂಬುದು ಮಾಲಿನಿಗೆ ಗೊತ್ತು ಎಂಬ ವಿಚಾರ ಹೂವಿಗೆ ಗೊತ್ತಿಲ್ಲ. ಅದೇ ಧೈರ್ಯದಲ್ಲಿಯೇ ಇದ್ದಾಳೆ. ಮನೆಯವರೆಲ್ಲರ ಮುಂದೆ ತನ್ನ ತಾಳಿ ವಿಚಾರ ಬಂದಾಗಲೂ ಏನೋ ಒಂದು ಹೇಳಿ ಅಲ್ಲಿಂದ ತಪ್ಪಿಸಿಕೊಂಡಳು. ಹೀಗಾಗಿ ಮಾಲಿನಿಗೆ ಈ ವಿಚಾರ ಗೊತ್ತಿದೆ ಎಂಬ ಕಲ್ಪನೆಯೂ ಅವಳಲ್ಲಿ ಇಲ್ಲ. ಚಾಂದಿನಿ ನಿಮಗೆ ನಂಬಿಕೆ, ವಿಶ್ವಾಸ ದ್ರೋಹ ಮಾಡುತ್ತಿದ್ದಾಳೆ. ದಯವಿಟ್ಟು ಅವಳನ್ನು ನಂಬಬೇಡಿ ಎಂದೇ ಹೇಳುತ್ತಿದ್ದಾಳೆ. ಮಾಲಿನಿ ಎಲ್ಲವನ್ನು ಕೇಳಿಸಿಕೊಳ್ಳುತ್ತಿದ್ದಳು. ಆದರೆ ಹೂವಿಯ ಮಾತಿಗೆ ಸೊಪ್ಪು ಹಾಕುವುದಕ್ಕಿಂತ ಕೋಪವನ್ನೇ ತೋರಿಸಿದ್ದಳು.

ಮಾಲಿನಿ ಮಾತಿಗೆ ತಲೆತಗ್ಗಿಸಿದ ಹೂವಿ..!
ಹೂವಿಗೆ ಚಾಂದಿನಿ ಕೆಟ್ಟವಳು ಎಂದು ಗೊತ್ತಾದಾಗಿನಿಂದ ಸಾಕಷ್ಟು ಸಲ ಮಾಲಿನಿಗೆ ಈ ವಿಚಾರ ಹೇಳಲು ಪ್ರಯತ್ನಪಟ್ಟಿದ್ದಾಳೆ. ಅದಕ್ಕೆ ಚಾಂದಿನಿ ಅಡ್ಡಗಾಲು ಹಾಕಿದ್ದಾಳೆ. ಹೂವಿಯನ್ನು ಬ್ಲಾಕ್ ಮೇಲೆ ಮಾಡಿಕೊಂಡೆ ಬಂದಿದ್ದಾಳೆ. ಮನೆಯವರಿಗೆ ನನ್ನ ವಿಚಾರ ಹೇಳಿದ್ರೆ, ನಿನ್ನ ಮತ್ತು ರಾಹುಲ್ ಮದುವೆಯಾಗಿರುವ ವಿಚಾರವನ್ನು ಹೇಳುತ್ತೇನೆ ಎಂದು ಚಾಂದಿನಿ ಹೆದರಿಸಿದ್ದಳು. ಆದರೆ ಇದೀಗ ಮಾಲಿನಿ ಮುಂದೆ ಧೈರ್ಯ ಮಾಡಿ ಎಲ್ಲಾ ಸತ್ಯವನ್ನು ಹೇಳಿದ್ದಾಳೆ. ಅದಕ್ಕೆ ಮಾಲಿನಿ, "ಯಾಕೆ ನೀನು ನಂಗೆ ಮೋಸ ಮಾಡಿಲ್ವಾ. ನೀನು ನಂಗೆ ನಂಬಿಕೆ ದ್ರೋಹ ಮಾಡಿಲ್ವಾ ಎಂದು ಕೇಳಿದಾಗ ಹೂವಿಗೆ ಆತಂಕ ಶುರುವಾಗಿದೆ.

ಹೂವಿಗೆ ತಿಳಿದೆ ಹೋಯ್ತು ಸತ್ಯ..!
ಇಷ್ಟು ದಿನ ಹೂವಿ ಕಷ್ಟಪಟ್ಟಿದ್ದೆ ಮಾಲಿನಿಗೆ ವಿಚಾರ ತಿಳಿಯಬಾರದು ಎಂದು. ಆದರೆ ಹೂವಿ ಪಟ್ಟ ಕಷ್ಟವೆಲ್ಲಾ ನೀರಲ್ಲಿ ಹುಣಸೆ ಹುಳಿ ತೊಳೆದಂತೆ ಆಗಿ ಹೋಗಿದೆ. ಮಾಲಿನಿಗೆ ಎಲ್ಲಾ ಸತ್ಯ ಗೊತ್ತಿದ್ದರು, ಗೊತ್ತಿಲ್ಲದವಳಂತೆಯೇ ನಟಿಸಿದ್ದಾಳೆ. ಇನ್ನು ಕೆಲವೇ ದಿನದಲ್ಲಿ 'ಬೆಟ್ಟದ ಹೂ' ಧಾರಾವಾಹಿ ಕೂಡ ಮುಗಿಯುವ ಸೂಚನೆ ಸಿಕ್ಕಿದೆ. ಈಗ ಮಾಲಿನಿ ಸತ್ಯ ಒಪ್ಪಿಕೊಂಡಿದ್ದಾಳೆ, ಹೂವಿ ಮತ್ತು ರಾಹುಲ್ ಗುಟ್ಟು ರಟ್ಟಾಗಿದೆ. ನೀನು, ನನಗೆ ಮೋಸ ಮಾಡಿಲ್ಲವಾ..? ನೀನು ರಾಹುಲ್ ಮದುವೆಯಾಗಿರುವ ವಿಚಾರ ನನಗೆ ತಿಳಿದಿದೆ ಎಂದಿದ್ದಾಳೆ. ಇದನ್ನು ಕೇಳಿದ ಹೂವಿಗೆ ದಿಗಿಲು ಬಡಿದ ರೀತಿ ಆಗಿದೆ.


Click it and Unblock the Notifications











