Bettada Hoo: 'ಬೆಟ್ಟದ ಹೂ' ಮಾಲಿನಿ ಅಮ್ಮ ಮಂದ್ರಾ ಮದುವೆ ಆದ್ಮೇಲೆ ಫುಲ್ ಮಿಂಚಿಂಗ್..!

By ಎಸ್ ಸುಮಂತ್

'ಬೆಟ್ಟದ ಹೂ' ಧಾರಾವಾಹಿಯಲ್ಲಿ ಸದ್ಯಕ್ಕೆ ಮಂದ್ರಾ ಕ್ಯಾರೆಕ್ಟರ್ ಬರುತ್ತಿಲ್ಲ. ಸದ್ಯದ ಕಥೆಯಲ್ಲಿ ಚಕ್ರವರ್ತಿ ಗೂಡಿನಲ್ಲಿಯೇ ಕಥೆ ಸಾಗುತ್ತಾ ಇದೆ. ಹೂವಿಯ ಜೀವನ ಹಾಳು ಮಾಡುವುದಕ್ಕೆ, ದ್ವೇಷ ತೀರಿಸಿಕೊಳ್ಳುವುದಕ್ಕೆ ಬಂದಂತ ಚಾಂದಿನಿಯನ್ನು ಅಣ್ಣನ ಮಗಳಾಗಿ ಮಂದ್ರಾ ಪರಿಚಯ ಮಾಡಿಕೊಟ್ಟರು. ಆದ್ರೆ ಈಗ ಬರೀ ದ್ವೇಷವನ್ನೇ ಕಾರುತ್ತಿದ್ದಾಳೆ ಚಾಂದಿನಿ.

ಸದ್ಯ ಮಂದ್ರಾ ಕ್ಯಾರೆಕ್ಟರ್ ಆಗಾಗ ಫೋನ್ ನಲ್ಲಿಯೇ ಕಳೆದು ಹೋಗುತ್ತಿದೆ. ಆದರೆ ಮಂದ್ರಾ ಈಗ ಏನು ಮಾಡುತ್ತಿದ್ದಾರೆ ಅಂತ ಅವರ ಸೋಶಿಯಲ್ ಮೀಡಿಯಾಗೆ ಹೋಗಿ ನೋಡಿದ್ರೆ ನಿಮ್ಗೆಲ್ಲಾ ಗೊತ್ತಾಗುತ್ತೆ. ಮಂದ್ರಾ ಅಲಿಯಾಸ್ ಸ್ವಾತಿ ಫುಲ್ ಮಸ್ತಿ ಮಾಡ್ತಾ ಇದ್ದಾರೆ.

ಸ್ವಾತಿಯ ಹೊಸ ಫೋಟೋ

ಸ್ವಾತಿಯ ಹೊಸ ಫೋಟೋ

ಸ್ವಾತಿ ಅವರಿಗೆ ಇತ್ತೀಚೆಗಷ್ಟೇ ಮದುವೆಯಾಗಿದೆ. ಮೈಸೂರಿನ ಸೊಸೆ ಆಗಿದ್ದಾರೆ. ಮದುವೆಯ ಬಳಿಕ ಅವರ ಪತಿಯ ಜೊತೆಗೆ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದರು. ಮೈಸೂರಿನಲ್ಲಿದ್ದ ಫೋಟೋಗಳನ್ನು ಹಾಕಿದ್ದರು. ಇದೀಗ ಮದುವೆ ಶಾಸ್ತ್ರದ ಒಂದೊಂದೆ ಫೋಟೋಗಳನ್ನು ರಿವೀಲ್ ಮಾಡುತ್ತಾ ಬರುತ್ತಿದ್ದಾರೆ. ಇವತ್ತು ಮೆಹಂದಿ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸ್ವಾತಿ ಡ್ರೆಸ್‌ನಲ್ಲಿ ಕಲಾಕೃತಿ

ಸ್ವಾತಿ ಡ್ರೆಸ್‌ನಲ್ಲಿ ಕಲಾಕೃತಿ

ಇತ್ತೀಚೆಗೆ ಮೆಹಂದಿ ಶಾಸ್ತ್ರ, ಬಳೆ ಶಾಸ್ತ್ರ, ಅರಿಶಿನ ಶಾಸ್ತ್ರವನ್ನು ಧಾರಾವಾಹಿಗಳಲ್ಲಿ ಅದ್ದೂರಿಯಾಗಿ ತೋರಿಸಿ, ಅದರ ಊಹೆ ಕಲ್ಪನೆಗೂ ಮೀರಿರುವಂತದ್ದಾಗಿದೆ. ಆದ್ರೆ ಸ್ವಾತಿ ಫೋಟೋ ಹಂಚಿಕೊಂಡಿರುವುದರಲ್ಲಿ ಸರಳವಾಗಿ ನಡೆದಿದೆ ಎನ್ನಬಹುದು. ಶಾಸ್ತ್ರ ಸರಳವಾಗಿದ್ದರು, ಎಲ್ಲರ ಕಣ್ಣು ಬಿದ್ದಿರುವುದು ಸ್ವಾತಿ ಅವರು ಹಾಕಿರುವಂತ ಡ್ರೆಸ್ ಮೇಲೆ. ಕಲಾಕೃತಿ ಇರುವಂತ ಡ್ರೆಸ್ ಹಾಕಿಕೊಂಡು ಮೆಹೆಂದು ಶಾಸ್ತ್ರ ಮಾಡಿಕಿಂಡಿದ್ದಾರೆ. ಸ್ವಾತಿ ಅವರು ಆ ಡ್ರೆಸ್‌ನಲ್ಲಿ ತುಂಬಾ ಬ್ಯೂಟಿಫುಲ್ ಆಗಿ ಕಾಣುತ್ತಿದ್ದಾರೆ.

ಸ್ವಾತಿ ಮದುವೆ ಶಾಸ್ತ್ರಕ್ಕೆ ಜನ ಏನಂದ್ರು..?

ಸ್ವಾತಿ ಮದುವೆ ಶಾಸ್ತ್ರಕ್ಕೆ ಜನ ಏನಂದ್ರು..?

ಸ್ವಾತಿ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. ಆಗಾಗ ಹೊಸ ಹೊಸ ಫೋಟೋ ಹಂಚಿಕೊಳ್ಳುವುದರ ಮೂಲಕ, ಹೊಸ ಹೊಸ ರೀಲ್ಸ್, ಟ್ರೇಡಿಂಗ್ ರೀಲ್ಸ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾವನ್ನು ಬ್ಯುಸಿಯಾಗಿಟ್ಟುಕೊಳ್ಳುತ್ತಾರೆ. ಮದುವೆಯಾದ ಮೇಲೂ ಶಾಸ್ತ್ರ, ಸಂಪ್ರದಾಯದ ಪ್ರಕಾರ ಮದುವೆಯಾಗಿರುವ ಕಾರಣ, ಆ ವಿಡಿಯೋ, ಫೋಟೋಗಳನ್ನು ಹಂಚಿದ್ದಾರೆ. ಅದರಂತೆ ಗಂಡನ ಮನೆಗೆ ಮೊದಲ ಬಾರಿಗೆ ಹೋದಾಗ ಸೇರು ಒದ್ದು, ಒಳಗೆ ಹೋಗುವ ಸಂಪ್ರದಾಯವಿದೆ. ಆ ವಿಡಿಯೋವನ್ನು ಸ್ವಾತಿ ಹಂಚಿಕೊಂಡಿದ್ದಾರೆ. ಅದನ್ನ ಕೆಲವೊಂದಿಷ್ಟು ಮಂದಿ ನೆಗೆಟಿವ್ ಕಮೆಂಟ್ ಹಾಕಿದ್ದಾರೆ. "ಮದುವೆ ಅಂತಿಯ ಕಾಲಿಗೆ ಗೆಜ್ಜೆ ಎಲ್ಲಿ..?, ಸೇರು ಒದೆಯಿರಿ ಆದರೆ ತಿನ್ನುವ ಅನ್ನವನ್ನು ಹಾಗೆ ತುಳಿದು ಬರಬೇಡಿ" ಎಂದು ಹಲವರು ಸಲಹೆ ನೀಡಿದ್ದಾರೆ.

ಮಂದ್ರಾ ಇದ್ರೇನೆ ಕಳೆ

ಮಂದ್ರಾ ಇದ್ರೇನೆ ಕಳೆ

'ಬೆಟ್ಟದ ಹೂ' ಧಾರಾವಾಹಿಯಲ್ಲಿ ಯಾವಾಗಲೂ ಸಿಡಿಸಿಡಿ ಎನ್ನುತ್ತಾ ಇರುತ್ತಿದ್ದ ಕ್ಯಾರೆಕ್ಟರ್ ಮಂದ್ರಾದು. ಗೌತಮ್‌ಗೆ ಆಕ್ಸಿಡೆಂಟ್ ಆದಾಗಿನಿಂದ ಪಾತ್ರ ಸ್ವಲ್ಪ ದೂರವಿದೆ. ತೆರೆಮೇಲೆ ಏನೇ ದುಷ್ಮನ್ ಆದ್ರೂ ಸಹ ತೆರೆ ಹಿಂದೆ ಎಲ್ಲರೂ ಎಲ್ಲರೊಟ್ಟಿಗೆ ಫುಲ್ ಹ್ಯಾಪಿಯಾಗಿ ಇರ್ತಾ ಇದ್ರು. ಗ್ಯಾಪ್ ನಲ್ಲಿ ರೀಲ್ಸ್ ಮಾಡ್ತಾ ಎಂಜಾಯ್ ಮಾಡ್ತಾ ಇದ್ರು. ಖಡಕ್ ವಿಲನ್ ಆಗಿ ಕಂಡರು ಮಂದ್ರಾ ಮನಸ್ಸು ಮಗುವಿನಂತದ್ದು ಎಂಬುದು ಅವರ ಸೋಷಿಯಲ್ ಮೀಡಿಯಾಗೆ ಹೋದಾಗಲೇ ಗೊತ್ತಾಗ್ತಾ ಇತ್ತು.

More from Filmibeat

English summary
Bettada Hoo Serial Written Update On Actress Mandra Interesting story. Here is the details about Mandra New Photo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X