Bettada Hoo: ಹೂವಿ -ರಾಹುಲ್ ಗುಟ್ಟು ರಟ್ಟು: ಕಥೆ ಮುಗಿಯುವುದರೊಳಗೆ ಅಖಿಲ್ ಪಾತ್ರ ಅಂತ್ಯ?
ಒಬ್ಬರಿಂದ ನಮಗೆ ತೊಂದರೆ ಆಗುತ್ತೆ ಎಂದಾಗ, ನಮ್ಮ ಅವನತಿಯನ್ನೇ ಬಯಸುತ್ತಾರೆ ಎಂದಾಗ ಅವರನ್ನು ಎಷ್ಟು ನಯವಾಗಿ ದೂರವಿಡಬೇಕೋ ಅಷ್ಟೇ ಸಂಯಮದಿಂದ ಪ್ಲ್ಯಾನ್ ಮಾಡಬೇಕು. ಆದ್ರೆ ಹೂವಿ ಮತ್ತು ಮಾಲಿನಿ ಎಲ್ಲವೂ ಗೊತ್ತಿದ್ದರು ಎಡವಿದ್ದಾರೆ. ಚಾಂದಿನಿ ಬಣ್ಣ ಬಯಲು ಮಾಡುವುದಕ್ಕೆ ಹೋಗಿ, ಈಗ ತಮ್ಮ ಬಣ್ಣವನ್ನೇ ಮನೆಯವರ ಮುಂದೆ ಬಯಲು ಮಾಡಿಕೊಂಡಿದ್ದಾರೆ.
ಹೂವಿ ಮತ್ತು ರಾಹುಲ್ ಒಂದು ಸಲ ಅಲ್ಲ ಎರಡು ಸಲ ಅಲ್ಲ ಸಾಕಷ್ಟು ಬಾರಿ ಮದುವೆಯಾಗಿದ್ದಾರೆ. ರಾಹುಲ್ ಮನೆಯಲ್ಲಿ ಈ ವಿಚಾರ ಒಬ್ಬೊಬ್ಬರಿಗೆ ಗೊತ್ತಾಗುತ್ತಾ ಹೋಗಿದೆ. ಮೊದಲಿಗೆ ದೀಪ್ತಿ ವಿಚಾರ ಗೊತ್ತಾದ ಮೇಲೆ ಹೂವಿಯನ್ನು ಕಾಪಾಡಿದ್ದಳು. ಬಳಿಕ ಸುಂದರನಿಗೆ ತಿಳಿದಾಗಲೂ ಅವನು ಕಾಪಾಡುತ್ತಾ ಬಂದ. ಆದರೆ, ಚಾಂದಿನಿಗೆ ಅದ್ಯಾವಾಗ ಗೊತ್ತಾಯ್ತೋ ಕಾಡುವುದಕ್ಕೆ ಶುರು ಮಾಡಿದಳು, ಇಕ್ಕಟ್ಟಿಗೆ ಸಿಲುಕಿಸಿದಳು.

ಚಾಂದಿನಿ ಪಾತ್ರಕ್ಕೆ ಅಂತ್ಯ
ಚಕ್ರವರ್ತಿ ಗೂಡಲ್ಲಿ ಎಲ್ಲವೂ ಸರಿಯಿತ್ತು ಎನ್ನುವಾಗಲೇ ಮಾಲಿನಿ ಮತ್ತು ರಾಹುಲ್ ನಡುವೆ ಪ್ರೀತಿ ಬಿಟ್ಟು, ದ್ವೇಷ ಹೆಚ್ಚಾಗುವುದಕ್ಕೆ ಆರಂಭವಾಯ್ತು. ರಾಹುಲ್, ಮಾಲಿನಿ ಬಿಟ್ಟು ಹೂವಿ ಕಡೆಗೆ ವಾಲುವುದಕ್ಕೆ ಶುರು ಮಾಡಿದ. ಅತ್ತ ಮಂದ್ರಾಳಿಗೆ ಹೂವಿ ಮೇಲಿನ ಕೋಪ ಹೆಚ್ಚಾಗುತ್ತಾ ಹೋಯ್ತು. ದ್ವೇಷ ತೀರಿಸಿಕೊಳ್ಳು ಆರಂಭಿಸಿದಳು. ಇಷ್ಟೆಲ್ಲಾ ನಡೆಯುವಾಗಲೇ ಎಂಟ್ರಿ ಕೊಟ್ಟಿದ್ದು ಚಾಂದಿನಿ. ಸ್ಪೆಷಲ್ ಪಾತ್ರದಲ್ಲಿ ಅಂದ್ರೆ, ಮಾಲಿನಿಗೆ ಅಕ್ಕನಾಗಿ ಪ್ರಿಯಾಂಕಾ ಶಿವಣ್ಣ ಎಂಟ್ರಿ ಕೊಟ್ಟಿದ್ದರು. ಇದೀಗ ಚಾಂದಿನಿ ಪಾತ್ರವೂ ಮುಗಿಯುತ್ತಾ ಇದೆ.

ಗಾಬರಿಯಲ್ಲಿ ಹೂವಿ - ಮಾಲಿನಿ
ಚಾಂದಿನಿಯ ಮುಖವಾಡ ಕಳಚಿದ್ದು ಹೂವಿ. ಎಲ್ಲದನ್ನು ಬಿಡಿಸಿ ಹೇಳಿದ್ದಳು. ಮೊದಲಿಗೆ ಒಪ್ಪದ ಮಾಲಿನಿ ಬಳಿಕ ಚಾಂದಿನಿಯ ಸತ್ಯವನ್ನು ಕಂಡು ಹಿಡಿದು ತಿರುಗೇಟು ನೀಡಿದ್ದಳು. ಮನೆಯಿಂದ ಹೊರಗೆ ಹೋಗುವುದಕ್ಕೆ ಸೂಚಿಸಿದ್ದಳು. ಈ ಮಧ್ಯೆ ಹೂವಿ ಮತ್ತು ಮಾಲಿನಿ ಹತ್ತಿರವಾದರು. ಆದ್ರೆ ಚಾಂದಿನಿ ಮನೆಯಿಂದ ಹೋಗುವಾಗ ಸುಮ್ಮನೆ ಹೋಗಲಿಲ್ಲ. ಮನೆಯವರನ್ನೆಲ್ಲಾ ಒಂದು ಕಡೆ ಸೇರಿಸಿದಳು. ಒಂದು ಗುಟ್ಟು ರಟ್ಟು ಮಾಡುವುದಿದೆ ಎಂದಳು. ಆಗ ಮಾಲಿನಿ ಕೋಪದಲ್ಲಿಯೇ ಏನು ಬೇಡ, ನೀವೂ ಹೊರಡಿ ಎಂದಿದ್ದಾಳೆ.

ಚಾಂದಿನಿಯಿಂದ ಸತ್ಯ ಬಯಲು..!
ಹಿಂದೆ ಮುಂದೆ ಬೇರೆ ಮಾತನಾಡದೆ ಚಾಂದಿನಿ ನೇರವಾಗಿ ಮನೆಯವರಿಗೆಲ್ಲಾ ಹೂವಿ ಗಂಡ ಯಾರು ಎಂದು ತಿಳಿದುಕೊಳ್ಳುವ ಕುತೂಹಲವಿಲ್ಲವಾ ಎಂದು ಕೇಳಿದ್ದಳು. ತಡೆಯುವುದಕ್ಕೆ ಬಂದ ಮಾಲಿನಿಯನ್ನೇ ಮನೆಯವರು ತಡೆದರು. ಆಗ ಚಾಂದಿನಿ, "ಮಾಲಿನಿ ತಡೆಯುತ್ತಿರುವುದಕ್ಕೆ ಒಂದು ಕಾರಣವಿದೆ. ಯಾಕಂದ್ರೆ ಹೂವಿಗೆ ತಾಳಿ ಕಟ್ಟಿರುವುದೇ ಮಾಲಿನಿ ಗಂಡ ಅಲ್ವಾ" ಎಂದಿದ್ದಾಳೆ. ಇದನ್ನು ಮನೆಯವರಿಗೆ ಯಾರಿಗೂ ನಂಬುವುದಕ್ಕೆ ಆಗಿಲ್ಲ.

ಅಖಿಲ್ ಪಾತ್ರದ ಕ್ಲಾರಿಟಿ ಸಿಗುತ್ತಾ..?
ಮಾಲಿನಿಗೆ ಹಳೆಯದ್ದೊಂದು ಲವ್ ಸ್ಟೋರಿ ಇತ್ತು. ಅದುವೇ ಅಖಿಲ್. ಕಾಲೇಜಿನಲ್ಲಿ ಇಬ್ಬರು ತುಂಬಾನೇ ಪ್ರೀತಿ ಮಾಡ್ತಾ ಇದ್ರು. ಆಗ ತಾನೇ ಜರ್ನಲಿಸಂ ವೃತ್ತಿ ಆರಂಭಿಸಿದ್ದ ರಾಹುಲ್, ಅಖಿಲ್ ಮಾಡಿದ ಎಕ್ಸಾಂ ಪೇಪರ್ ಲೀಕ್ ಕೇಸಲ್ಲಿ ಹಿಡಿದುಕೊಟ್ಟಿದ್ದ. ಅದಾದ ಮೇಲೆ ಅಖಿಲ್ ಎಲ್ಲಿದ್ದಾನೆ ಎಂಬುದು ಗೊತ್ತಿರಲಿಲ್ಲ. ಅವನನ್ನು ನೆನೆದು ನೆನೆದು ಮಾಲಿನಿ ಅಳುತ್ತಿದ್ದಳು. ರಾಹುಲ್ ಫ್ಯಾಮಿಲಿಯನ್ನು ಹಾಳು ಮಾಡಬೇಕೆಂದು ಪ್ಲ್ಯಾನ್ ಮಾಡಿದ್ದಳು. ಈಗ ಧಾರಾವಾಹಿ ಮುಗಿಯುವ ಹಂತಕ್ಕೆ ಬಂದಿದೆ. ಎಲ್ಲಾ ಸತ್ಯಗಳು ಹೊರ ಬೀಳುತ್ತಿವೆ. ಅಖಿಲ್ ಕಥೆಗೂ ಮುಕ್ತಿ ಸಿಗುತ್ತಾ ಎಂಬುದೇ ಪ್ರೇಕ್ಷಕರ ಪ್ರಶ್ನೆ.


Click it and Unblock the Notifications











