Bettada Hoo : ಮಾಲಿನಿಯ ಅಕ್ಕ ಅಂತ ಬಂದಿರುವ ಚಾಂದಿನಿ ಯಾರು..? : ಅವಳ ಟಾರ್ಗೆಟ್ ಯಾರು..?

By ಎಸ್ ಸುಮಂತ್

ರೋಗಿ ಬಯಸಿದ್ದು ಹಾಲು ಅನ್ನ.. ವೈದ್ಯರು ಹೇಳಿದ್ದು ಹಾಲು ಅನ್ನ ಎಂಬಂತೆ ಆಗಿ ಹೋಯ್ತು ಮಾಲಿನಿಯ ಸ್ಥಿತಿ. ಮಾಲಿನಿಗೆ ರಾಹುಲ್ ಮನೆಯಲ್ಲಿ ನೆಮ್ಮದಿಯಾಗಿ ಇರುವುದಕ್ಕೆ ಆಗುತ್ತಿರಲಿಲ್ಲ. ಜೊತೆಗೆ ಹೂವಿ ಮತ್ತು ರಾಹುಲ್ ಮದುವೆಯಾಗಿದ್ದ ಸತ್ಯವೂ ಅವಳಿಗೆ ತಿಳಿದಿತ್ತು. ಮನೆಯವರೆಲ್ಲಾ ಹೂವಿಯನ್ನೇ ಅತಿಯಾಗಿ ಪ್ರೀತಿಸುತ್ತಿದ್ದರು.

ಈ ಎಲ್ಲಾ ಟೆನ್ಶನ್ ನಲ್ಲಿದ್ದಳು ಮಾಲಿನಿ. ಹೇಗಾದರೂ ಮಾಡಿ ಹೂವಿಯನ್ನು ಮಟ್ಟ ಹಾಕಬೇಕೆಂದು ಬಯಸುತ್ತಿದ್ದಳು. ಆಗ ಜೊತೆಯಾಗಿದ್ದೆ ಈ ಚಾಂದಿನಿ. ಅದರಲ್ಲೂ ಮಂದ್ರಾ ಮೂಲಕವೇ ಪರಿಚಿತಳಾದಳು. ಆದರೆ ಚಾಂದಿನಿ ನಿಜವಾದ ಅಕ್ಕ ಅಲ್ಲ ಎಂಬ ಸತ್ಯ ಹೂವಿಗೆ ಗೊತ್ತಾಗಿದೆ.

ಚಾಂದಿನಿಯನ್ನು ನಂಬಿರುವ ಮಾಲಿನಿ

ಚಾಂದಿನಿಯನ್ನು ನಂಬಿರುವ ಮಾಲಿನಿ

ಮಾಲಿನಿಯ ತಂದೆಗೆ ಆಕ್ಸಿಡೆಂಟ್ ಆದಾಗ ಆಸ್ಪತ್ರೆಗೆ ಮಾಲಿನಿ ಭೇಟಿ ನೀಡಿದ್ದಳು. ಆಗ ಅಲ್ಲಿಯೇ ಮತ್ತೊಂದು ವಾರ್ಡ್ ನಲ್ಲಿ ಮಂದ್ರಾ ಅಣ್ಣ ಕೂಡ ಅಡ್ಮಿಟ್ ಆಗಿದ್ದರು. ಅನಿರೀಕ್ಷಿತವಾಗಿ ಎಲ್ಲರ ಭೇಟಿಯಾಗಿತ್ತು. ದಿನ ಕಳೆದಂತೆ ಚಾಂದಿನಿ, ಮಾಲಿನಿ ಜೊತೆಗೆ ಆತ್ಮೀಯವಾಗಿ ಬಿಟ್ಟಳು. ಮಾಲಿನಿ ತನಗಿಂತ ಚಾಂದಿನಿಯನ್ನು ನಂಬುವುದಕ್ಕೆ ಆರಂಭಿಸಿದಳು.

ಮನೆಯಲ್ಲಿದ್ದುಕೊಂಡೆ ಸ್ಕೆಚ್

ಮನೆಯಲ್ಲಿದ್ದುಕೊಂಡೆ ಸ್ಕೆಚ್

ಪ್ಲ್ಯಾನ್ ಮಾಡಿಕೊಂಡೆ ಬಂದ ಚಾಂದಿನಿ, ಮಾಲಿನಿಯನ್ನು ಸಖತ್ತಾಗಿಯೇ ಕಟ್ಟು ಹಾಕಿದ್ದಾಳೆ. ಮಾಲಿನಿಗೆ ಸಮಾಧಾನ ಮಾಡುವ ಮನಸ್ಸೊಂದು ಬೇಕಾಗಿತ್ತು. ಚಾಂದಿನಿ ಕೂಡ ತಾನು ನಿನ್ನ ಅಕ್ಕ, ನಿನ್ನ ಒಳಿತನ್ನೇ ಬಯಸುವವಳು, ನಿನ್ನ ಸಮಸ್ಯೆ ಏನು ಅಂತ ನನಗೆ ಗೊತ್ತು ಎಂದುಕೊಂಡೆ ಮಾಲಿನಿಗೆ ಕ್ಲೋಸ್ ಆದಳು. ಮನೆಗೆ ಬಂದು ಸೇರಿಕೊಂಡಳು. ಮಾಲಿನಿಗೆ ಹತ್ತಿರವಾಗುವುದಕ್ಕೆ ಹೂವಿಯನ್ನು ಟಾರ್ಗೆಟ್ ಮಾಡಲು ಶುರು ಮಾಡಿದಳು. ಮಾಲಿನಿ ಕೂಡ ತುಂಬಾ ನಂಬಿ ತನ್ನೆಲ್ಲಾ ಸತ್ಯವನ್ನು ಅವಳ ಬಳಿ ಹೇಳುವುದಕ್ಕೆ ಆರಂಭಿಸಿದ್ದಾಳೆ. ಹೂವಿಯನ್ನು ಮನೆಯಿಂದ ಹೊರ ಹಾಕುವುದಕ್ಕೆ ಮಾಡಿದ ಪ್ಲ್ಯಾನ್, ಅವಳನ್ನು ಮುಗಿಸಲು ಮಾಡಿದ ಪ್ಲ್ಯಾನ್ ಎಲ್ಲವೂ ಉಲ್ಟಾ ಆಗಿದೆ. ಆದರೂ ಮಾಲಿನಿಗೆ ಯಾವುದೇ ಅನುಮಾನ ಬರದಂತೆ ನಡೆದುಕೊಳ್ಳುತ್ತಿದ್ದಾಳೆ. ಮಾಲಿನಿ ಕೂಡ ರಾಹುಲ್ ಮನೆಯವರನ್ನು ಟಾರ್ಗೆಟ್ ಮಾಡಿಕೊಂಡಿದ್ದು, ಅವರಿಗೆ ಬುದ್ದಿ ಕಲಿಸುವುದಕ್ಕೆ ಮುಂದಾಗಿದ್ದಾಳೆ. ಚಾಂದಿನಿ ಅದಕ್ಕೆ ಕೈ ಜೋಡಿಸಿದ್ದಾಳೆ.

ಚಾಂದಿನಿ ಮುಖ ಬಯಲಾಯಿತು

ಚಾಂದಿನಿ ಮುಖ ಬಯಲಾಯಿತು

ಚಾಂದಿನಿ ತಾನೂ ಮಾಲಿನಿ ಅಕ್ಕ ಅಂತ ಹೇಳಿಕೊಂಡು ಬಂದಿರುವುದು ಸುಳ್ಳು ಎಂಬುದನ್ನು ಹೂವಿ ಕಂಡು ಹಿಡಿದಿದ್ದಾಳೆ. ಸತ್ಯ ತಿಳಿದ ಮೇಲೆ ಮಾಲಿನಿಯ ಬಳಿ ಎಲ್ಲವನ್ನು ತಿಳಿಸಿದ್ದಾಳೆ. "ಅವರು ನಿಮ್ಮ ಅಕ್ಕ ಅಲ್ಲ. ಅವರು ನಿಮ್ಮ ಬಳಿ ಸುಳ್ಳು ಹೇಳುತ್ತಿದ್ದಾರೆ. ಇನ್ನು ಆ ಶೈಲಜಾ ಅವರ ಪಿಎ ಅಲ್ಲ ಅವರ ತಂಗಿ" ಎಂದು ಸತ್ಯವನ್ನು ತಿಳಿಸಿದ್ದಾಳೆ. ಆದರೆ ಮಾಲಿನಿ ಇದ್ಯಾವುದನ್ನು ಒಪ್ಪುವುದಕ್ಕೆ ಸಿದ್ಧಳಿಲ್ಲ. ಬದಲಾಗಿ ಚಾಂದಿನಿ ಬಗ್ಗೆ ಮಾತನಾಡುವುದಕ್ಕಿಂತ ಮುನ್ನ ಯೋಚನೆ ಮಾಡು ಅಂತ ವಾರ್ನಿಂಗ್ ಮಾಡಿದ್ದಾಳೆ. ಅದಕ್ಕೂ ಮೀರಿ ಎಲ್ಲಾ ಸತ್ಯವನ್ನು ಹೇಳಿದಾಗ ಯೋಚಿಸಲು ಮುಂದಾಗಿದ್ದಾಳೆ.

ಚಾಂದಿನಿ ಪಾತ್ರ ಮಂದ್ರಾ ಹುಟ್ಟು ಹಾಕಿದ್ಲಾ..?

ಚಾಂದಿನಿ ಪಾತ್ರ ಮಂದ್ರಾ ಹುಟ್ಟು ಹಾಕಿದ್ಲಾ..?

ಮಗಳ ಜೀವನದಲ್ಲಿ ನೆಮ್ಮದಿ ಇಲ್ಲ, ಹೂವಿ ಅವಳಿಂದ ದೂರವಾದರೆ ಎಲ್ಲವೂ ಸರಿಯಾಗುತ್ತೆ ಎಂಬ ಭ್ರಮೆಯಲ್ಲಿ ಇದ್ದಳು ಮಂದ್ರಾ. ಹೂವಿಯನ್ನು ಕೊಲ್ಲುವುದಕ್ಕೆ, ಆ ಮನೆಯಿಂದ ದೂರ ಮಾಡುವುದಕ್ಕೆ ಮಂದ್ರಾ ಕೂಡ ಪ್ರಯತ್ನ ನಡೆಸಿದ್ದಳು. ಆದ್ರೆ ಅದ್ಯಾವುದು ಸಕ್ಸಸ್ ಆಗಿರಲಿಲ್ಲ. ಅದಕ್ಕೋಸ್ಕರ ಚಾಂದಿನಿಯನ್ನು ಸೃಷ್ಟಿ ಮಾಡಿದಳಾ ಎಂಬ ಅನುಮಾನ ಕಾಡುತ್ತಿದೆ. ಯಾಕಂದ್ರೆ ಮಂದ್ರಾಳೆ ಚಾಂದಿನಿಯನ್ನು ನಿನ್ನ ಅಕ್ಕ ಎಂದು ಮಾಲಿನಿಗೆ ಪರಿಚಯ ಮಾಡಿಕೊಟ್ಟಿದ್ದಾಳೆ. ಇದು ನೋಡುಗರ ಅನುಮಾನಕ್ಕೆ ಕಾರಣವಾಗಿದೆ.

More from Filmibeat

English summary
Bettada Hoo Serial Written Update On February 3rd episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X