Don't Miss!
- News
ಕಾಂಗ್ರೆಸ್ ಸೇರ್ತಾರಾ ಸುದೀಪ್?; ನಟ ಸುದೀಪ್ ಕಾಂಗ್ರೆಸ್ ಗೆ ಬಂದರೆ ಸ್ವಾಗತ: ಸತೀಶ್ ಜಾರಕಿಹೊಳಿ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
ಅದೇನು ಕಷ್ಟದ ಸಿಕ್ಸರ್ ಅಲ್ಲ: ಹ್ಯಾರಿಸ್ ರೌಫ್ಗೆ ವಿರಾಟ್ ಕೊಹ್ಲಿ ಹೊಡೆದ ಸಿಕ್ಸರ್ ಬಗ್ಗೆ ಮಾಜಿ ಕ್ರಿಕೆಟಿಗನ ಪ್ರತಿಕ್ರಿಯೆ
- Technology
ಒಪ್ಪೋ ರೆನೋ 8T 5G ಫಸ್ಟ್ ಲುಕ್: ಪವರ್ಫುಲ್ ಫೀಚರ್ಸ್ ಜೊತೆಗೆ ಹೊಸ ಲುಕ್!
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Bettada Hoo:ಹೂವಿ ಮದುವೆ ಸತ್ಯ ತಿಳೀತು : ಗಂಡನನ್ನು ಬಚ್ಚಿಡೋದು ಹೇಗೆ ?
ಪರಿಸ್ಥಿತಿಗೆ ಕೈಗೊಂಬೆಯಾಗಿ ಹೂವಿ ಮತ್ತು ರಾಹುಲ್ ಮದುವೆಯಾಗಿದ್ದರು. ಚನ್ನವಲ್ಸೆಯಿಂದ ಹಳ್ಳಿ ಹುಡುಗಿಯನ್ನು ಕರೆದುಕೊಂಡು ಬಂದಾಗ ರಾಹುಲ್‌ಗೆ ಯಾವುದೇ ರೀತಿಯ ಭಾವನೆ ಇರಲಿಲ್ಲ. ಬರೀ ಕೋಪ, ದ್ವೇಷವಷ್ಟೇ ಇತ್ತು. ಆದರೆ ದಿನ ಉರುಳಿದಂತೆ ಹೂವಿಯ ಹೂವಿನಂತಹ ಮನಸ್ಸು ಅರ್ಥವಾಗುವುದಕ್ಕೆ ಶುರುವಾಯಿತು. ಒಂದಲ್ಲ, ಎರಡಲ್ಲ ನಾಲ್ಕೈದು ಬಾರಿ ಇಬ್ಬರು ಮದುವೆಯಾಗಿದ್ದಾರೆ.
ಸತ್ಯ ಎಂಬುದು ಸೆರಗಲ್ಲಿ ಮುಚ್ಚಿಟ್ಟ ಕೆಂಡದಂತೆ. ಹೂವಿ ಮತ್ತು ರಾಹುಲ್ ಎಷ್ಟೇ ಮುಚ್ಚಿಡುವುದಕ್ಕೆ ಹೋದರು ಅದು ಸಾಧ್ಯವಾಗಲಿಲ್ಲ. ದೀಪ್ತಿ ಮತ್ತು ತಮ್ಮನಿಗೆ ತಿಳಿದೇ ಹೋಗಿತ್ತು. ಮಾಲಿನಿಗೂ ಸತ್ಯ ಗೊತ್ತಾಗಿದೆ. ಆದರೂ ಗೊತ್ತಿಲ್ಲದವಳಂತೆ ನಟಿಸುತ್ತಿದ್ದಾಳೆ. ಈಗ ಮನೆಯವರ ಎದುರು ಎಲ್ಲಾ ಸತ್ಯ ಬಟಾ ಬಯಲಾಗಿದೆ.
Katheyondu
shuruvagide:ಯುವರಾಜನ
ಪಕ್ಕ
ಮದುಮಗಳಾಗಿ
ಕೂರುತ್ತಾಳಾ
ಕೃತಿ..?

ದೇವಸ್ಥಾನದಲ್ಲಿ ಹೂವಿ ವಿಶೇಷ ಪೂಜೆ
ಗಂಡನ ಮನೆಯವರಿಗೆ, ಗಂಡನಿಗೆ ಒಳ್ಳೆಯದ್ದಾಗಬೇಕು ಎಂದರೆ ಗೌರಿ ವ್ರತವನ್ನು ಮಾಡಬೇಕು ಎಂದು ರಾಹುಲ್ ದೊಡ್ಡಪ್ಪ ತಿಳಿಸಿದ್ದರು. ಯಾರನ್ನು ಮುಟ್ಟಿಸಿಕೊಳ್ಳದ, ಮಡಿ ಮೈಲಿಗೆಯಿಂದ ಈ ವ್ರತ ಮಾಡುವುದಕ್ಕೆ ಮಾಲಿನಿಗೆ ಹೇಳಿದ್ದರು. ಆದರೆ ಮಾಲಿನಿ ಮಾಡಲಿಲ್ಲ. ಹೂವಿ ತಾನೇ ಮುತುವರ್ಜಿ ವಹಿಸಿಕೊಂಡು ವ್ರತ ಮಾಡಿದಳು. ಈಗ ಕಡೆಯ ದಿನ ಮುತ್ತೈದೆಯರಿಗೆ ಬಾಗಿನ ಕೊಟ್ಟು, ದೇವತೆಗೆ ವಿಶೇಷ ಪೂಜೆ ಮಾಡಿಸಬೇಕಿತ್ತು. ಅದಕ್ಕೆಂದೆ ದೇವಸ್ಥಾನಕ್ಕೂ ಬಂದಿದ್ದಾಳೆ. ಅಂದುಕೊಂಡಂತೆ ಬಾಗಿನವನ್ನು ಕೊಟ್ಟು ಪೂಜೆಯನ್ನು ಮುಗಿಸಿದ್ದಾಳೆ.
Priya
Kesare:'ಅಶ್ವಿನಿ
ನಕ್ಷತ್ರ'
ಖ್ಯಾತಿ
ನಟಿ
ಪ್ರಿಯಾ
ಕೆಸರೆ
ನಟನೆಯಿಂದ
ದೂರ
ಉಳಿದಿದ್ದೇಕೆ?
ಕಾರಣ
ಇದೇನೆ!

ಚಾಂದಿನಿ ಪ್ಲ್ಯಾನ್ ಸಕ್ಸಸ್ ಆಯ್ತು
ಚಾಂದಿನಿ ಎಂಟ್ರಿ ಆಗಿದ್ದೆ ಹೂವಿಯ ಒಳ್ಳೆತನವನ್ನು ಹಾಳು ಮಾಡಿ, ಅವಳಿಗೆ ಸದಾ ಕೆಟ್ಟದ್ದನ್ನೇ ಮಾಡುವುದಕ್ಕೆ. ಸಾಕಷ್ಟು ಸಲ ಕೆಟ್ಟದ್ದನ್ನು ಮಾಡಿ, ಅದು ಉಲ್ಟಾ ಹೊಡೆಯುವಂತೆಯೂ ಆಗಿದೆ. ಹೂವಿ ಸಿಕ್ಕಿ ಹಾಕಿಸುವ ಪ್ಲ್ಯಾನ್ ನಲ್ಲಿ ಚಾಂದಿನಿಯೇ ಸಿಕ್ಕಿ ಬಿದ್ದಿದ್ದಾಳೆ. ಆದರೆ ಈಗ ದೊಡ್ಡ ಮಟ್ಟದಲ್ಲಿಯೇ ಅಖಾಡ ಸೃಷ್ಟಿ ಮಾಡಿದ್ದಾಳೆ. ಹೂವಿ ಮನೆಯವರಿಂದೆಲ್ಲಾ ಯಾವ ವಿಚಾರವನ್ನು ಮುಚ್ಚಿಟ್ಟಿದ್ದಳೋ ಅದೇ ಸತ್ಯವನ್ನು ಎಲ್ಲರೆದುರು ತೆರೆದಿಡುವುದಕ್ಕೆ ಚಕ್ರವ್ಯೂಹವನ್ನೇ ರೂಪಿಸಿದ್ದಾಳೆ. ಆ ಚಕ್ರವ್ಯೂಹದಲ್ಲಿ ಈ ಬಾರಿ ಹೂವಿ ಬಹಳ ಸುಲಭವಾಗಿ ಬಿದ್ದಿದ್ದಾಳೆ.

ಎಲ್ಲರೆದುರು ಬಿತ್ತು ಹೂವಿಯ ಕೊರಳಲ್ಲಿನ ತಾಳಿ
ಹೂವಿ ಬಾಗಿನ ಕೊಡುತ್ತಿದ್ದ ದೇವಸ್ಥಾನಕ್ಕೆ ಮನೆಯವರು ಬಂದಿದ್ದಾರೆ. ಬಾಗಿನ ಕೊಡುವಾಗ ತಾಳಿಯನ್ನು ಸ್ವೆಟರ್‌ನಲ್ಲಿ ಮುಚ್ಚಿಟ್ಟುಕೊಂಡಿದ್ದಳು. ಆಗ ಮುತ್ತೈದೆಯೊಬ್ಬರು ತಾಳಿಯನ್ನು ಮುಚ್ಚಿಟ್ಟು ಕೊಡಬೇಡ ಎಂದಾಗ, ಹೂವಿ ಆ ತಾಳಿಯನ್ನು ಮೇಲಕ್ಕೆ ಹಾಕಿಕೊಂಡಿದ್ದಾಳೆ. ಅದೇ ಸಮಯಕ್ಕೆ ಮನೆಯವರು ಅಲ್ಲಿಗೆ ಎಂಟ್ರಿಯಾಗಿದ್ದಾರೆ. ಹೂವಿ ಕೊಡುತ್ತಿದ್ದ ಬಾಗಿನ ಕಂಡು ದಿಗ್ಭ್ರಾಂತರಾಗಿದ್ದಾರೆ. ಹೂವಿ ಯಾಕೆ ಬಾಹಿನ ಕೊಡುತ್ತಿದ್ದಾಳೆ ಎಂದು ನಾಲ್ಕು ಜನ ಕೇಳಿಕೊಳ್ಳುತ್ತಿದ್ದಾರೆ.

ಗಂಡನ ಬಗ್ಗೆ ಮೂಡಿದ ಸಂಶಯ
ಅಂತು ಮಾಲಿನಿ ಮತ್ತು ಚಾಂದಿನಿ ಅಂದುಕೊಂಡಂತೆ ಹೂವಿಯ ಸತ್ಯವನ್ನು ಮನೆಯವರ ಮುಂದೆ ಬಯಲು ಮಾಡಿ ಆಯ್ತು. ಈಗ ಮನೆಯವರಿಗೂ ಗಂಟಲಿನ ತನಕ ಬೇಸರ, ಕೋಪ ಎರಡು ಇದೆ. ರಾಹುಲ್ ತಾಯಿ, "ಮದುವೆ ಆಗಿರುವುದೇ ಸತ್ಯವಾದರೆ, ಹೂವಿಯ ಗಂಡ ಯಾರು" ಎಂದು ಪ್ರಶ್ನಿಸುತ್ತಾ ಇದ್ದಾರೆ. ಅಲ್ಲಿಯೇ ಪ್ರಶ್ನೆ ಮಾಡಲು ಹೊರಟ ಪ್ರಣತಿಯನ್ನು ಅತ್ತೆ, ಮಾವ ತಡೆದಿದ್ದಾರೆ. ಮನೆಯಲ್ಲಿ ಮಾತಾಡೋಣಾ ಎಂದು ಕರೆದುಕೊಂಡು ಹೊರಟಿದ್ದಾರೆ. ಇತ್ತ ಚಾಂದಿನಿ ಅದಾಗಲೇ ಮಾಲಿನಿಯನ್ನು ಮನೆಗೆ ಕರೆದಿದ್ದಾಳೆ. ಎಲ್ಲರ ಮುಂದೆ ಸತ್ಯ ಬಯಲಾಗುವ ಸಮಯ ಅಂತ. ಆದ್ರೆ ಹೂವಿಯ ಸಂಕಷ್ಟ ನೋಡಿ ರಾಹುಲ್ ಒಪ್ಪಿಕೊಳ್ಳುತ್ತಾನಾ ಅಥವಾ ಮಾಲಿನಿಯೇ ಬಾಯಿ ಬಿಡುತ್ತಾಳಾ ಎಂಬುದೇ ಕುತೂಹಲ ಘಟ್ಟದಲ್ಲಿದೆ.