For Quick Alerts
  ALLOW NOTIFICATIONS  
  For Daily Alerts

  Bettada Hoo Serial:ರಾಹುಲ್‌ಗೆ ಹೂವಿ ಇಟ್ಟಿರೋ ಹೆಸರು ಕೇಳಿದ್ರೆ ಖಂಡಿತ ನೀವೂ ನಗ್ತೀರಾ..!

  By ಎಸ್ ಸುಮಂತ್
  |

  'ಬೆಟ್ಟದ ಹೂ' ಧಾರಾವಾಹಿಯಲ್ಲಿ ಈಗ ಹೂವಿಯ ಜೀವನ ಬೇರೆ ರೀತಿಯಾಗಿಯೇ ಬದಲಾಗಿದೆ. ಗಂಡನಿಂದ ಡಿವೋರ್ಸ್‌ಗೆ ಅಪ್ಲೈ ಮಾಡಿದರೂ ಸಹ, ಗಂಡನಿಂದ ದೂರವಾಗುವುದಕ್ಕೆ ವಿಧಿ ಬಿಟ್ಟು ಕೊಡಲೇ ಇಲ್ಲ. ಈಗಲೂ ಗಂಡ ಹೆಂಡತಿ ಜೊತೆಯಾಗಿಯೇ ಇದ್ದಾರೆ. ಗಂಡನ ಒಳಿತಿಗಾಗಿಯೆ ಯಾವಾಗಲೂ ಹೂವಿ ದೇವರನ್ನು ಪ್ರಾರ್ಥಿಸುತ್ತಾ ಇರುತ್ತಾಳೆ.

  ಈಗ ಚಕ್ರವರ್ತಿ ಗೂಡಿನಲ್ಲಿ ಚಾಂದಿನಿಯ ಆಟ ಕೂಡ ಶುರುವಾಗಿದೆ. ಮಾಲಿನಿ ಜೊತೆಗೆ ಚಾಂದಿನಿ ಕೂಡ ಕೈಜೋಡಿಸಿದ್ದು, ಹೂವಿಯ ಮೇಲೆ ಹಲವು ರೀತಿಯ ಗೂಬೆ ಕೂರಿಸುವುದಕ್ಕೆ ಟ್ರೈ ಮಾಡುತ್ತಿದ್ದಾಳೆ. ಚಕ್ರವರ್ತಿ ಗೂಡಿನಲ್ಲಿ ನೆಮ್ಮದಿಯನ್ನು ಹಾಳು ಮಾಡುವುದಕ್ಕೆ ಕಾಯುತ್ತಿದ್ದಾಳೆ.

  Srirastu Subhamastu:ಅಭಿಮಾನಿಗಳ ಆಸೆ ಈಡೇರುತ್ತಾ? ಪೂರ್ಣಿ ಮಗು ಬದುಕುತ್ತಾ..?

  ಗಂಡನಿಗಾಗಿ ವ್ರತ ಮಾಡಿದ ಹೂವಿ

  ಗಂಡನಿಗಾಗಿ ವ್ರತ ಮಾಡಿದ ಹೂವಿ

  ಹೂವಿ ಓದಿಕೊಂಡು, ಗಂಡನ ಮನೆಗೂ ಒಳಿತನ್ನೇ ಬಯಸುತ್ತಿದ್ದಾಳೆ. ಮಾಲಿನಿ ಹಾಗೂ ರಾಹುಲ್‌ನನ್ನು ಒಂದು ಮಾಡುವುದಕ್ಕೆ ಸಾಕಷ್ಟು ಶ್ರಮ ಕೂಡ ಹಾಕುತ್ತಿದ್ದಾಳೆ. ಮಾಲಿನಿ ತನ್ನ ನಾಟಕವನ್ನು ಮುಂದುವರೆಸಿದ್ದಾಳೆ. ಮನೆಯವರೆದುರು ಚೆನ್ನಾಗಿರುವುದಾಗಿ ನಟಿಸಿಯೇ, ಕೆಡಕನ್ನು ಬಯಸುತ್ತಿದ್ದಾಳೆ. ರಾಹುಲ್ ಸೇರಿದಂತೆ ಮನೆಯವರೆಲ್ಲರ ಜೀವನ ಹಾಳು ಮಾಡಲೆಂದೇ ಕಾಯುತ್ತಿದ್ದಾಳೆ. ಆದ್ರೆ ಈ ಕಡೆ ಹೂವಿ ಗಂಡ ಹಾಗೂ ಗಂಡನ ಮನೆಯವರಿಗೆ ಒಳಿತಾಗಲೀ ಎಂದೇ ದೇವರಲ್ಲಿ ಪ್ರಾರ್ಥಿಸಿಕೊಂಡು, ಸ್ಪೆಷಲ್ ವ್ರತವನ್ನು ಮಾಡಿದ್ದಾಳೆ.

  ಮನೆಯವರಿಂದ ತಾಳಿ ಬಚ್ಚಿಟ್ಟ ಹೂವಿ

  ಮನೆಯವರಿಂದ ತಾಳಿ ಬಚ್ಚಿಟ್ಟ ಹೂವಿ

  ಹೂವಿಗೆ ಮದುವೆಯಾಗಿದೆ ಎಂಬುದು ಮಾಲಿನಿಗೆ ಈಗಾಗಲೇ ತಿಳಿದಿದೆ. ಆದರೆ ಗಂಡ ಯಾರು ಎಂಬುದನ್ನು ಹುಡುಕುವ ಕೆಲಸಕ್ಕೂ ಕೈ ಹಾಕಿ ಸುಮ್ಮನೆ ಆಗಿದ್ದಾಳೆ. ಈಗ ಹೂವಿ ತನ್ನ ಗಂಡ ಹಾಗೂ ಗಂಡನ ಮನೆಯವರಿಗಾಗಿ ಮಾಡಿದ ವ್ರತದಲ್ಲಿ ತಾಳಿ ಧರಿಸಲೇಬೇಕಾಗಿತ್ತು. ಆದರೆ ಮನೆಯವರಿಗೆ ಅದು ತಿಳಿಯದಂತೆಯೂ ಕಾಪಾಡಿಕೊಳ್ಳಬೇಕಾಗಿತ್ತು. ಹೀಗಾಗಿ ಸೀರೆಯುಟ್ಟು, ತಾಳಿ ತೊಟ್ಟ ಹೂವಿ ಬೇರೆಯದ್ದೆ ಪ್ಲ್ಯಾನ್ ಮಾಡಿದ್ದಳು. ಸ್ವೆಟರ್ ಹಾಕಿಕೊಂಡು ತಾಳಿಯ ಸೀಕ್ರೆಟ್ ಅನ್ನು ಕಾಪಾಡಿಕೊಂಡಿದ್ದಳು. ಮನೆಯವರೆಲ್ಲರಿಗೂ ಹೂವಿಯ ಅವತಾರ ನೋಡಿ ಭಯವಾಗಿತ್ತು. ಹೂವಿಗೆ ಆರೋಗ್ಯ ಸರಿ ಇಲ್ವಾ ಎಂಬಂತಹ ವಾತಾವರಣವನ್ನು ಸೃಷ್ಟಿ ಮಾಡಿದ್ದಳು. ಮನೆಯವರೆಲ್ಲರ ಕಣ್ಣು ತಪ್ಪಿಸಿ, ಸ್ವೆಟರ್ ಹಾಕಿಕೊಂಡೇ ಕಾಲೇಜಿಗೂ ಹೊರಟು ನಿಂತಿದ್ದಳು.

  ರಾಹುಲ್ ಕರೆದರೆ ನೋ ಎಂದ ಹೂವಿ

  ರಾಹುಲ್ ಕರೆದರೆ ನೋ ಎಂದ ಹೂವಿ

  ಹೂವಿ, ಮಾಲಿನಿಗೆ ನೋವಾಗಬಾರದು ಎಂದು ರಾಹುಲ್‌ನನ್ನು ತುಂಬಾನೇ ಅವೈಡ್ ಮಾಡುತ್ತಾಳೆ. ಯಾಕಂದ್ರೆ ರಾಹುಲ್ ಜೊತೆಗೆ ಹೋದಾಗ ಮಾಲಿನಿ ಸಾಕಷ್ಟು ಬಾರಿ ಹರ್ಟ್ ಆಗುವಂತೆ ಮಾತನಾಡಿದ್ದಳು. ಹೀಗಾಗಿ ಹೂವಿ, ರಾಹುಲ್‌ನಿಂದ ಅಂದಿನಿಂದಲೂ ಅಂತರ ಕಾಯ್ದುಕೊಳ್ಳುತ್ತಿದ್ದಾಳೆ. ಇವತ್ತು ಕಾಲೇಜಿಗೆ ಹೊರಟು ನಿಂತಾಗಲೂ, ರಾಹುಲ್ ಅಡ್ಡ ಬಂದರು. ಆಗಲು ಹೂವಿ ರಾಹುಲ್ ಜೊತೆಗೆ ಹೋಗುವುದಕ್ಕೆ ಒಪ್ಪಲೇ ಇಲ್ಲ. ಅರ್ಜೆಂಟ್ ನಲ್ಲಿ ಹೋಗುತ್ತಿದ್ದೀಯಾ ತಾಬೇ, ನಾನೇ ಬಿಡುತ್ತೀನಿ ಎಂದರೂ ಹೂವಿ ಕೇಳಿಸಿಕೊಳ್ಳಲೇ ಇಲ್ಲ.

  ಹೂವಿ ರಾಹುಲ್ ಗಿಟ್ಟಿರುವ ಹೆಸರು ಏನು ಗೊತ್ತಾ..?

  ಹೂವಿ ರಾಹುಲ್ ಗಿಟ್ಟಿರುವ ಹೆಸರು ಏನು ಗೊತ್ತಾ..?

  ಹೂವಿ ಅರ್ಜೆಂಟ್ ಅರ್ಜೆಂಟಾಗಿ ಹೊರಟಿದ್ದನ್ನು ಕಂಡು ರಾಹುಲ್ ಡ್ರಾಪ್ ಮಾಡುವುದಕ್ಕೆ ಅಂತ ಬರುತ್ತಾನೆ. ಆದರೆ ಹೂವಿ ರಾಹುಲ್ ಮಾತನ್ನು ಕೇಳುವುದಿಲ್ಲ. ನಾನು ನಿಮ್ಮ ಜೊತೆಗೆ ಬರಲು ಸಾಧ್ಯವಿಲ್ಲ ಎಂದೇ ಹಠ ಮಾಡುತ್ತಾಳೆ. ಆಗ ರಾಹುಲ್ ಹಾಗಾದ್ರೆ ನನ್ನನ್ನ ಬೆಕ್ಕು ಎಂಬಂತೆ ಟ್ರೀಟ್ ಮಾಡ್ತೀಯಾ ಎಂದು ಕೇಳಿದ್ದಾನೆ. ಆಗ ಹೂವಿ "ನೀವೂ ಬೆಕ್ಕಲ್ಲ ಹುಲಿ.. ರಾಹುಲಿ" ಎಂದಿದ್ದಾಳೆ. ಬಳಿಕ ರಾಹುಲ್ ಮನಸ್ಸಾರೆ ನಕ್ಕಿದ್ದಾನೆ.

  English summary
  Bettada Hoo Serial Written Update On January 5th Episode. Here is the details.
  Thursday, January 5, 2023, 22:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X