ಬೆಟ್ಟದ ಹೂ & ಜೇನುಗೂಡು: ನಡುಕೋಟೆ ಮನೆಯ ಶಾಸ್ತ್ರದಲ್ಲಿ ಹೂವಿ-ಮಾಲಿನಿ ಮುಖಾಮುಖಿ
ನಡುಕೋಟೆ ಮನೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಎಲ್ಲಾ ಶಾಸ್ತ್ರಗಳು ಆರಂಭವಾಗಿದ್ದು, ಇನ್ನೇನು ಶಾಸ್ತ್ರಗಳು ಮುಗಿಯುವ ಹಂತಕ್ಕೆ ಬಂದು ನಿಂತಿದೆ. ಕಳೆದ ಎರಡ್ಮೂರು ವಾರದಿಂದ ವಿಭಿನ್ನ ಶಾಸ್ತ್ರಗಳು ಪ್ರೇಕ್ಷಕರಿಗೆ ಹಿತ ನೀಡುತ್ತಿದೆ. ಮದುವೆ ಎಂದರೆ ಹೀಗೆಲ್ಲಾ ಶಾಸ್ತ್ರಗಳು ಇದ್ದಾವೆ ಎಂಬ ಆಶ್ಚರ್ಯದಿಂದ ನೋಡುವಂತೆ ಮಾಡಿದೆ. ಇದೀಗ ಶಾಸ್ತ್ರಗಳು ಮುಗಿದು, ಮದುವೆ ಹತ್ತಿರವಾಗುತ್ತಿದೆ. ಮದುವೆ ಇನ್ನೆಷ್ಟು ವಿಭಿನ್ನವಾಗಿ ನಡೆಯಬಹುದು ಎಂಬ ಕುತೂಹಲವಿದೆ.
ದಿಯಾ ಮತ್ತು ಶಶಾಂಕ್ ಈಗಾಗಲೇ ಮದುವೆಗಾಗಿ ಎಲ್ಲರನ್ನು ಕರೆಯುತ್ತಿದ್ದಾರೆ. ನ್ಯೂಸ್ ರೀಡರ್ಸ್, ಆಕ್ಟರ್ಸ್ ಸೇರಿದಂತೆ ಎಲ್ಲರಿಗೂ ಆಹ್ವಾನ ನೀಡಿದ್ದಾರೆ. ಇದರ ಜೊತೆಗೆ ಸ್ಟಾರ್ ಸುವರ್ಣ ಕುಟುಂಬದವರು ಮದುವೆಯಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಹಲವು ಶಾಸ್ತ್ರಗಳಲ್ಲಿ ದಕ್ಷಿಣ ಮೂರ್ತಿ, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಹಲವರು ಭಾಗಿಯಾಗಿದ್ದರು. ಇದೀಗ ಮಾಲಿನಿ ಟೆನ್ಶನ್‌ಗೆ ಈ ಮದುವೆ ಶಾಸ್ತ್ರದಲ್ಲಿ ಉತ್ತರ ಸಿಗಲಿದೆ.

ಮದುವೆ ಸಂಭ್ರಮದಲ್ಲಿ ಸ್ಟಾರ್ ಸುವರ್ಣ ಫ್ಯಾಮಿಲಿ
ಸ್ಟಾರ್ ಸುವರ್ಣ ಎಂದರೆ ಒಂದಿಡಿ ಕುಟುಂಬ. ಆ ಕುಟುಂಬದಲ್ಲಿ ಹಲವು ಮನೆಗಳಿವೆ. ಅದರಲ್ಲಿ ಸದ್ಯ ನಡುಕೋಟೆ ಮನೆಯಲ್ಲಿ ಮದುವೆಯ ದಿಬ್ಬಣ ಹೊರಟಿದೆ. ಹೀಗಾಗಿ ಎಲ್ಲಾ ಕುಟುಂಬದವರನ್ನು ಒಗ್ಗೂಡಿಸಿ, ಮದುವೆ ಮಾಡಲಿದ್ದಾರೆ. ಜೇನುಗೂಡಿನಂತಿರುವ ನಡುಕೋಟೆ ಮನೆಗೆ ಚಕ್ರವರ್ತಿ ಮನೆಯ ಸೊಸೆಯಂದಿರ ಆಗಮನವಾಗಿದೆ. ಹೂವಿ ಮತ್ತು ಮಾಲಿನಿ ಮದುವೆಯ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದಾರೆ.

ನಡುಕೋಟೆ ಮನೆಯಲ್ಲಿ ಹೂವಿ ಪ್ರತ್ಯಕ್ಷ
ಬೇರೆ ಹುಡುಗನನ್ನು ಮದುವೆಯಾಗಿ, ನೀನು ಚೆನ್ನಾಗಿರಬೇಕು ಎಂದು ಅದ್ಯಾವಾಗ ರಾಹುಲ್ ಹೇಳಿದನೋ ಏನೋ, ಅಂದೇ ಹೂವಿ ಮನಸ್ಸನ್ನು ಗಟ್ಟಿ ಮಾಡಿಕೊಂಡು ಮನೆಯವರಿಗೂ ಹೇಳದೆ ಕೇಳದೆ ಚನ್ನವಲ್ಸೆಗೆ ಹೊರಟು ಬಿಟ್ಟಳು. ಹೂವಿಯ ಸುಳಿವನ್ನೇ ಕಾಣದೆ ಮನೆಯವರು ಕಂಗಾಲಾಗಿದ್ದರು. ಈ ಮಧ್ಯೆ ರಾಹುಲ್ ಕೂಡ ನಾನು ಚೆನ್ನೈಗೆ ಹೋಗ್ತೇನೆ ಎಂದು ಚನ್ನವಲ್ಸೆಗೆ ಹೋಗಿದ್ದಾನೆ. ಗಂಡನ ಫೋನ್ ಇಲ್ಲ, ಮಾಹಿತಿ ಇಲ್ಲದ ಮಾಲಿನಿ ಸೀದಾ ತನ್ನ ಲಗೇಜ್ ತೆಗೆದುಕೊಂಡು ತಾಯಿಯ ಮನೆಗೆ ಹೊರಟಿದ್ದಾಳೆ. ಆದರೆ ಈ ಮಧ್ಯೆ ಹೂವಿ ನಡುಕೋಟೆ ಮನೆಯಲ್ಲಿ ಪ್ರತ್ಯಕ್ಷವಾಗಿದ್ದಾಳೆ. ಅಲ್ಲಿಯೇ ಮಾಲಿನಿ ಕೂಡ ಎಂಟ್ರಿಯಾಗಿದ್ದಾಳೆ.

ಹೂವಿಯ ತಾಳಿ ಕಾಣುತ್ತಾ
ಮುತ್ತೈದೆಯರೆಲ್ಲ ಸೇರಿ ಮಾಡುವ ಶಾಸ್ತ್ರ ಕುಟ್ಟೋ ಶಾಸ್ತ್ರ. ಆ ಶಾಸ್ತ್ರಕ್ಕೆ ಹೂವಿ ಕೂಡ ಭಾಗಿಯಾಗಿದ್ದಾಳೆ. ಅರಿಶಿನವನ್ನು ಕುಟ್ಟಿಯೇ ಗಂಡು ಮತ್ತು ಹೆಣ್ಣಿಗೆ ಅಚ್ಚಲಾಗುತ್ತದೆ. ಹೀಗೆ ಕುಟ್ಟುತ್ತಿರುವಾಗ, ಮಾಲಿನಿಯ ಎಂಟ್ರಿಯಾಗಿದೆ. ಮಾಲಿನಿಯನ್ನು ಕಂಡೊಡನೆ ಹೂವಿ ವೇದಿಕೆ ಮೇಲಿಂದ ಕೆಳಗಿಳಿದು ಬಂದಿದ್ದಾಳೆ. ಇನ್ನೆಲ್ಲಿ ಮಾಲಿನಿ ನನ್ನನ್ನು ನೋಡುತ್ತಾರೋ ಎಂಬ ಭಯ ಹೂವಿಯನ್ನು ಕಾಡುತ್ತಿದೆ. ಅಲ್ಲಿದ್ದವರಿಗೂ ಇನ್ನೇನೂ ಮುತ್ತೈದೆ ಮಾಲಿನಿ ಅಕ್ಕೋರು ಬಂದಿದ್ದಾರೆ ಅವರ ಬಳಿಯೇ ಈ ಶಾಸ್ತ್ರ ಮಾಡಿಸಿ ಎಂದು ಹೇಳಿ ಹೊರಟಿದ್ದಾಳೆ.
ತಾಳಿ ಮರೆಮಾಚಿದ್ದನ್ನು ಕಂಡ ದಿಯಾ
ಅರಿಶಿನ ಕುಟ್ಟುವಾಗ ಹೂವಿಯ ಮಾಂಗಲ್ಯ ಕಾಣುವಂತೆಯೇ ಇತ್ತು. ಆದರೆ ಮಾಲಿನಿ ಬರುತ್ತಿದ್ದಂತೆ ಹೂವಿ ತಾಳಿಯನ್ನು ಮರೆಮಾಚಿದಳು. ಇದನ್ನು ದಿಯಾ ಕಂಡಿದ್ದಾಳೆ. ಮೊದಲೇ ದಿಯಾಗೆ ಈ ಮುಚ್ಚುಮರೆಯಲ್ಲ ಗೊತ್ತಾಗುವುದಿಲ್ಲ. ನೇರವಾಗಿ ಹೇಳಿ ಬಿಡುತ್ತಾಳೆ. ಅಂದು ಮನೆ ಬಿಟ್ಟು ಹೋದ ಹೂವಿ, ಇಂದು ಮಾಲಿನಿ ಕಣ್ಣಿಗೆ ಬಿದ್ದಿದ್ದಾಳೆ. ಮಾಲಿನಿ ಕರೆದರೂ ಮುಖವನ್ನು ತೋರಿಸುತ್ತಿಲ್ಲ ಇನ್ನೆಲ್ಲಿ ತಾಳಿ ಕಂಡು ಬಿಡುತ್ತೋ ಎಂಬ ಭಯಕ್ಕೆ. ಆದರೆ ದಿಯಾ ಬಾಯಿ ತಪ್ಪಿ ತಾಳಿ ಬಗ್ಗೆ ಮಾತನಾಡಿದರೆ ಮಾಲಿನಿ ವಿಚಾರವನ್ನು ಕೆದಕದೇ ಬಿಡುವುದಿಲ್ಲ. ಏನೋ ಒಂದು ಸುಳ್ಳು ಹೇಳಿ ಮಾಲಿನಿ ಮತ್ತು ಹೂವಿ ಇಬ್ಬರು ಸೇರಿ ಶಾಸ್ತ್ರ ಮುಗಿಸುತ್ತಾರೆ.


Click it and Unblock the Notifications











