ಅಳಿಯನ ಸತ್ಯ ಮಾವನಿಗೆ, ಮಾವನ ಸತ್ಯ ಅಳಿಯನಿಗೆ ಗೊತ್ತಾಯ್ತು: ಮುಂದಿನ ಕಥೆಯೇನು?
'ಬೆಟ್ಟದ ಹೂ' ಧಾರಾವಾಹಿಯಲ್ಲಿ ಈಗಾಗಲೇ ಹೂವಿ ಯಾರ ಮಗಳು, ಯಾಕೆ ಈ ರೀತಿ ಬದುಕುತ್ತಿದ್ದಾಳೆ ಎಂಬುದು ಎಲ್ಲರಿಗೂ ತಿಳಿದೆ ಇದೆ. ಆ ಕಡೆ ಅವ್ವನ ಕಡೆಯಿಂದ ಅಪ್ಪ ಯಾರು ಅಂತ ಹೇಳೋದಕ್ಕೆ ಆಗಿಲ್ಲ. ಈ ಕಡೆ ಕಣ್ಣ ಮುಂದೆಯೇ ಮಗಳು ಇದ್ದರೂ ಅಪ್ಪನ ಪ್ರೀತಿ ತೋರುವುದಕ್ಕೆ ಆಗುತ್ತಿಲ್ಲ. ಅಂತ ಸಂಕಟದಲ್ಲಿ ಇಬ್ಬರು ಇದ್ದಾರೆ. ಆದರೂ ಗೌತಮ್ ಹೂವಿಗೆ ಸಣ್ಣ ಮಟ್ಟದಲ್ಲಿ ನ್ಯಾಯ ಒದಗಿಸುತ್ತಿದ್ದಾನೆ. ಆದರೆ ಇದೀಗ ಎಲ್ಲರ ಮುಂದೆ ಹೂವಿ ತಂದೆಯ ಹೆಸರು ಬಟಾಬಯಲಾಗಿದೆ.
ಹೂವಿ ತಂದೆ ಪ್ರೀತಿಯನ್ನು ಕಾಣದ ಹುಡುಗಿ. ಆಗಾಗ ಆ ಬಗ್ಗೆ ಬೇಸರ ಕೂಡ ವ್ಯಕ್ತಪಡಿಸುತ್ತಾಳೆ. ನಂಗು ಅಪ್ಪನ ಪ್ರೀತಿ ಬೇಕು ಅಂತ ಅನ್ನಿಸುತ್ತೆ. ಆದರೆ ಆ ಅದೃಷ್ಟ ಇಲ್ಲ ಎಂದು ಸುಮ್ಮನಾಗಿದ್ದಾಳೆ. ಮುಂದೆ ಇರುವ, ಬೇಸರಾದಾಗ ಚಾಕಲೇಟ್ ತಂದುಕೊಡುವ ಗೌತಮ್ ತನ್ನ ಅಪ್ಪ ಎಂದು ಹೂವಿಗೆ ತಿಳಿದಿಲ್ಲ. ಮಾಲಿನಿ ಸ್ವಂತ ಅಕ್ಕ ಎಂಬುದು ಗೊತ್ತಿಲ್ಲ. ಇದೆಲ್ಲವೂ ತಿಳಿದರೆ ಹೂವಿಗೆ ಗೌತಮ್ ಮೇಲಿನ ಭಾವನೆ ಯಾವ ರೀತಿ ತಿರುಗುತ್ತೆ ಎಂಬುದೇ ಪ್ರಶ್ನೆ.

ಇಷ್ಟು ವರ್ಷ ಗೌರ ಮುಚ್ಚಿಟ್ಟ ಸತ್ಯ ಬಯಲು
ಗೌರ ಇಷ್ಟು ವರ್ಷ ಬೆಂಕಿಯನ್ನೇ ಮನದಲ್ಲಿ ಕಟ್ಟಿಕೊಂಡು ಬದುಕುತ್ತಿದ್ದಾಳೆ. ಅಧಿಕೃತ ಸಂಬಂಧವಿಲ್ಲದೆ ಹೂವಿಯನ್ನ ಹೆತ್ತಿದ್ದಾಳೆ ಎಂಬ ಆರೋಪ ಗೌರನನ್ನು ಯಾವಾಗಲೂ ನೋಯಿಸುತ್ತಿತ್ತು. ಪೇಟೆಯಿಂದ ಚನ್ನವಲ್ಸೆಗೆ ಬಂದಿದ್ದ ಗೌತಮ್ ಮತ್ತು ಗೌರ ನಡುವೆ ಪ್ರೀತಿ ಬೆಳೆದಿತ್ತು. ಆ ಪ್ರೀತಿಗೆ ಹೂವಿಯ ಜನನವಾಗಿತ್ತು. ಆದರೆ ಆ ಸಮಯದಲ್ಲಿ ಗೌತಮ್, ಗೌರನ ಪರ ನಿಲ್ಲುವುದಕ್ಕೆ ಆಗಲಿಲ್ಲ. ಗೌರ ಒಬ್ಬಂಟಿಯಾದಳು. ಹೂವಿಯನ್ನೇ ಧೈರ್ಯದಿಂದಲೇ ಸಾಕಿದಳು. ಸಾಕಷ್ಟು ಅವಮಾನಗಳನ್ನು ಹೆದರಿಸಿದಳು. ಗಂಡ ಎಂಬ ಹೆಸರನ್ನ ಮನದಲ್ಲಿಯೇ ಇಟ್ಟುಕೊಂಡು ಕೊರಗುತ್ತಿದ್ದಳು ಗೌರ.

ಹುಲಿಯನ ಮುಂದೆ ಬಂದೇ ಬಿಟ್ಟ ಗೌತಮ್
ಗೌರನ ಎಲ್ಲಾ ಕಷ್ಟಗಳಿಗೂ ಹುಲಿಯಾ ಜೊತೆಯಾಗಿ ನಿಂತಿದ್ದಾನೆ. ಗೌರನ ತಾಯಿಯೇ ನಿಷ್ಠುರವಾಗಿ ಮಾತನಾಡಿದರೂ, ಆಕೆಯ ಬೆಂಬಲಕ್ಕೆ ನಿಂತಿರುವುದು ಹುಲಿಯಾ. ಗೌರನಿಗೆ ಗಂಡ ಯಾರು ಅಂತ ಗೊತ್ತಿದ್ದರು ಹೇಳುವುದಕ್ಕೆ ಆಗುತ್ತಿಲ್ಲ. ಅತ್ತ ಹೂವಿಗೆ ತಂದೆಯ ಬಗ್ಗೆ ತಿಳಿಯುವ ಆಸೆ ಇದ್ದರು, ಅಮ್ಮು ಮನಸ್ಸಿಗೆ ನೋವು ಮಾಡಲು ಅವರು ಇಷ್ಟವಿಲ್ಲದೆ ಸುಮ್ಮನಾಗಿದ್ದಾಳೆ. ಆದರೆ ಹುಲಿಯನಿಗೆ ಎಲ್ಲಾ ಸತ್ಯ ಗೊತ್ತಿತ್ತು ಎಂದುಕೊಂಡಿದ್ದು ಸುಳ್ಳಾಗಿದೆ. ಹುಲಿಯನಿಗೂ ಯಾವ ಸತ್ಯ ಗೊತ್ತಿಲ್ಲ. ಪೇಟೆಯಿಂದ ಬಂದ ಗೌತಮ್ ಗೆ ಗನ್ ನಲ್ಲಿ ಗುರಿ ಇಟ್ಟಾಗ, ಅಲ್ಲಿಗೆ ಬಂದ ಗೌರ ತಡೆದಿದ್ದಾಳೆ. ಸತ್ಯ ಹೇಳಿದಾಗ ಹುಲಿಯಾ ಶಾಕ್ ಆಗಿದ್ದಾನೆ.

ಹೂವಿಯ ತಂದೆಯ ಸತ್ಯ ರಾಹುಲ್ ಮುಂದೆ ಬಯಲು
ಗೌತಮ್ ಅಳಿಯ ರಾಹುಲ್. ಮಾಲಿನಿಯನ್ನು ಪ್ರೀತಿ ಮಾಡಿ ರಾಹುಲ್ ಮದುವೆಯಾಗಿದ್ದಾನೆ. ಗೌತಮ್ ಕಂಡರೆ ರಾಹುಲ್‌ಗೆ ಇನ್ನಿಲ್ಲದ ಗೌರವ. ಆದರೆ ಈಗ ತಿಳಿಯಬಾರದ ಸತ್ಯ ರಾಹುಲ್ ಮುಂದೆಯೇ ಬಯಲಾಗಿದೆ. ಹೂವಿಯ ತಂದೆ ಇವರು ಎಂದು ಗೌರ, ಹುಲಿಯನ ಮುಂದೆ ಹೇಳುವಾಗಲೇ ಆ ಜಾಗಕ್ಕೆ ರಾಹುಲ್ ಬಂದಿದ್ದಾನೆ. ಮಾವನ ಸತ್ಯವನ್ನು ರಾಹುಲ್ ಅದೇಗೆ ಸ್ವೀಕರಿಸುತ್ತಾನೆ ಎಂಬುದೇ ಈಗ ಗೊಂದಲ.
ರಾಹುಲ್ ಗೌತಮ್ ಒಂದಾಗ್ತಾರಾ?
ಗೌತಮ್ ಕೂಡ ಚನ್ನವಲ್ಸೆಯಲ್ಲಿಯೇ ಪ್ರೀತಿಯಲ್ಲಿ ಬಿದ್ದಿದ್ದಾನೆ, ಮಗಳು ಕೂಡ ಇದ್ದಾಳೆ. ಇತ್ತು ಗೌತಮ್ ಅಳಿಯ ರಾಹುಲ್ ಕೂಡ ಚನ್ನವಲ್ಸೆಯಲ್ಲಿಯೇ ಈಗೀಗ ಪ್ರೀತಿಯಲ್ಲಿ ಬಿದ್ದಿದ್ದಾನೆ. ಮಾವನ ಮಗಳನ್ನೇ ಮದುವೆಯಾಗಿದ್ದಾನೆ. ಈಗ ಅಳಿಯನ ಸತ್ಯ ಮಾವನ ಮುಂದೆ, ಮಾವನ ಸತ್ಯ ಅಳಿಯನ ಮುಂದೆ ಬಯಲಾಗುವ ಸಂದರ್ಭ ಬಂದಿದೆ. ಇಬ್ಬರು ಅರ್ಥ ಮಾಡಿಕೊಂಡು, ಮನೆಯವರಿಗೂ ನೋವಾಗದಂತೆ ಸಂಬಂಧಗಳನ್ನು ಕಾಪಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.


Click it and Unblock the Notifications











